Breaking News

Daily Archives: ಮೇ 31, 2024

8000 ರೂ. ಜಮೆ ವದಂತಿ: 10 ದಿನಗಳಲ್ಲಿ 10 ಸಾವಿರ ಅಂಚೆ ಐಪಿಪಿಬಿ ಖಾತೆ!

ಬೆಂಗಳೂರು: ಜನರಲ್‌ ಪೋಸ್ಟ್‌ ಆಫೀಸ್‌ ಬೆಂಗಳೂರಿನ ಕಚೇರಿಯಲ್ಲಿ ಗುರುವಾರ ಒಂದೇ ದಿನ 1,250 ಹೊಸ ಐಪಿಪಿಬಿ ಖಾತೆಯ ತೆರೆಯಲಾಗಿದೆ. ಅಂಚೆ ಇಲಾಖೆಯು ಪ್ರತಿ ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಖಾತೆಗೆ 8,000 ರೂ. ಜಮೆಯಾಗಲಿದೆ ಎನ್ನುವುದು ಕೇವಲ ವದಂತಿ ಎನ್ನುವ ಕುರಿತು ಸ್ಪಷ್ಟನೆ ನೀಡಲಾಗಿದೆ. ಆದರೂ ಜನರು ಮಾತ್ರ ಐಪಿಪಿಬಿ ಖಾತೆ ತೆರೆಯಲು ಮುಗಿ ಬೀಳುವುದು ಕಡಿಮೆಯಾಗಿಲ್ಲ. ಕಳೆದ 10 ದಿನಗಳಿಂದ ಸುಮಾರು 10 ಸಾವಿರ ಐಪಿಪಿಬಿ ಖಾತೆ ತೆರೆಯಲಾಗಿದೆ. …

Read More »

ಪುಸ್ತಕ ಮಳಿಗೆಯೊಂದರಲ್ಲಿ ಕಳ್ಳತನ

ದಾಂಡೇಲಿ: ನಗರದ ಲೆನಿನ್ ರಸ್ತೆಯಲ್ಲಿರುವ ಬುಕ್ ಸ್ಟಾಲ್ ವೊಂದರಲ್ಲಿ ಮೇ.31ರ ಶುಕ್ರವಾರ ನಸುಕಿನ ವೇಳೆ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಪುಸ್ತಕ ಮಳಿಗೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು 2 ಸಾವಿರ ರೂ. ನಗದು ಮತ್ತು ಅಗತ್ಯ ದಾಖಲೆ ಪತ್ರಗಳಿದ್ದ ತಿಜೋರಿ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಹೊತ್ತೊಯ್ದಿದ್ದಾರೆ. ಘಟನೆಯ ಕುರಿತಂತೆ ಪುಸ್ತಕ ಮಳಿಗೆಯ ಮಾಲಕ ಅಲ್ಲಂಪ್ರಭು ಪಾಟೀಲ್ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ …

Read More »

ಹೆಸರು ಬದಲಿಸಿಕೊಂಡ ಶಶಿಕುಮಾರ್‌ ಪುತ್ರ ಅಕ್ಷಿತ್‌

ನಾಯಕ-ನಾಯಕಿಯರು ತಮ್ಮ ಮೂಲ ಹೆಸರು ಬದಲಿಸಿಕೊಂಡು ಆಗಾಗ ಅದೃಷ್ಟ ಪರೀಕ್ಷೆಗಿಳಿಯುತ್ತಾರೆ. ಈಗ ನಟ ಶಶಿಕುಮಾರ್‌ ಪುತ್ರ ಕೂಡಾ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಅಕ್ಷಿತ್‌ ಎಂಬ ಹೆಸರನ್ನು ಆದಿತ್ಯ ಎಂದು ಬದಲಿಸಿಕೊಂಡಿದ್ದಾರೆ. ಈ ಹೆಸರಿನೊಂದಿಗೆ ಈಗ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಅದು “ಕಾದಾಡಿ’ ಮೂಲಕ. ಇದು ಅದಿತ್ಯ ನಟನೆಯ ಹೊಸ ಸಿನಿಮಾ . ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಸತೀಶ್‌ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಂಸ್‌ …

Read More »

ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು. ನಿರಂಜನ ಹಿರೇಮಠ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಆಗಿದ್ದು ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಸಿಐಡಿ ಡಿಜಿಪಿ ಅವರಿಗೆ ಮಾಹಿತಿ ಕೊಟ್ಟಿದ್ದೇನೆ ಎಂದು ನೇಹಾ ತಂದೆ ಹಾಗೂ ಹು-ಧಾ. ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಹೇಳಿದರು. ಸಿಐಡಿ ಡಿಜಿಪಿ ಎಂ.ಎ. ಸಲೀಂ ಅವರು ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳ ಕೊಲೆಯಲ್ಲಿಯೇ ಇದು ಅಂತ್ಯ ಆಗಬೇಕು. ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು …

Read More »

ಠಾಣೆ ಧ್ವಂಸ, ಆದಿಲ್ ಸಾವಿನ ಪ್ರಕರಣಗಳ ಹೆಚ್ಚಿನ ತನಿಖೆ: ಡಾ| ಜಿ. ಪರಮೇಶ್ವರ್

ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ ಹಾಗೂ ಆದಿಲ್ ಸಾವಿನ ಕುರಿತಾದ ಎರಡು ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು. ಗುರುವಾರ ಸಂಜೆ ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ಚನ್ನಗಿರಿಯಲ್ಲಿ ಕಳೆದ ಶುಕ್ರವಾರ ನಡೆದಂತಹ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಬಂದಿರುವುದಾಗಿ ತಿಳಿಸಿದರು. ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಿರುವ ಒಂದು ಪ್ರಕರಣವಾದರೆ, ಮಟ್ಕಾ ಆಡುಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ …

Read More »

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಬದಲು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ. ತಾವು ಬರೆದ ಪತ್ರದ ಪ್ರತಿಯನ್ನು “ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ಯತ್ನಾಳ್‌, ಎಲ್ಲ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ತನ್ನ ಪ್ರಭಾವದ ಮೂಲಕ ಮುಚ್ಚಿ ಹಾಕುವುದು ರಾಜ್ಯ ಸರ್ಕಾರಕ್ಕೆ ಹವ್ಯಾಸವಾಗಿ ಬಿಟ್ಟಿದೆ. ಈ ಪ್ರಕರಣದಲ್ಲಿ …

Read More »

ಇತ್ತ ಪ್ರಜ್ವಲ್‌ ಬೆಂಗಳೂರಿಗೆ, ಅತ್ತ ಎಚ್‌ಡಿಕೆ ಕುಟುಂಬ ರೆಸಾರ್ಟ್‌ಗೆ

ಬೆಂಗಳೂರು: ಇತ್ತ ಸಂಸದ ಪ್ರಜ್ವಲ್‌ ರೇವಣ್ಣ ಬೆಂಗಳೂರಿನತ್ತ ಆಗಮಿಸಿದರೆ, ಅತ್ತ ಮಾಜಿ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಕಬಿನಿ ಹಿನ್ನೀರಿನ ಲ್ಲಿರುವ ರೆಸಾರ್ಟ್‌ಗೆ ತೆರಳಿದ್ದಾರೆ. ಗುರುವಾರ ಮಧ್ಯಾಹ್ನ ಕುಟುಂಬ ಸಮೇತ ಜೆ.ಪಿ. ನಗರ ನಿವಾಸದಿಂದ ಹೊರಟ ಕುಮಾರಸ್ವಾಮಿ, ಲೋಕ ಸಭೆ ಚುನಾವಣೆ ಫ‌ಲಿತಾಂಶ ಪ್ರಕಟಗೊಳ್ಳುವ ಮುನ್ನ ಮರಳಲಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. ಪ್ರಜ್ವಲ್‌ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ಉಪ್ಪು ತಿಂದವರು ನೀರು …

Read More »

ಕಸಾಯಿಖಾನೆಗೆ ಸಾಗಿಸುತ್ತಿದ್ದ 40ಕ್ಕೂ ಅಧಿಕ ಹಸುಗಳ ರಕ್ಷಣೆ

ಹುಣಸೂರು: ಕಸಾಯಿಖಾನೆಗೆ ಸಾಗಿಸಲು ಜಾನುವಾರುಗಳನ್ನು ಕೂಡಿ ಹಾಕಿದ್ದ ಗೋಡೌನ್ ಮೇಲೆ ಮದ್ಯರಾತ್ರಿಯಲ್ಲಿ ಸಿನಿಮೀಯ ಮಾದರಿ ದಾಳಿ ನಡೆಸಿರುವ ಹುಣಸೂರು ಪೊಲೀಸರು ಒಂದು ಹಾಲಿನ ವ್ಯಾನ್ ಸೇರಿದಂತೆ ಮೂರು ಗೂಡ್ಸ್ ವಾಹನಗಳಲ್ಲಿ ತುಂಬಿದ್ದ 40 ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಣಸೂರು ತಾಲೂಕಿನ ರತ್ನಪುರಿಯ ಅಲ್ತಾಫ್, ಶಾಬುದ್ದೀನ್ ಎಂಬವರಿಗೆ ಸೇರಿದ ಮನೆ ಪಕ್ಕದ ಗೋಡೌನ್‌ನಲ್ಲಿ ಜಾನುವಾರುಗಳು ಪತ್ತೆಯಾಗಿದ್ದು, ಜಾನುವಾರುಗಳನ್ನು ತುಂಬಿದ್ದ ಮೂರು ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ರತ್ನಪುರಿಯ ಅಲ್ತಾಫ್, …

Read More »

ಪಾದಯಾತ್ರಿಕರ ಮೇಲೆ ಹರಿದ ಲಾರಿ

ಕೊಪ್ಪಳ: ತಾಲೂಕಿನ ಹುಲಿಗೆಮ್ಮ ದೇವಿ ಜಾತ್ರೆ ಪ್ರಯುಕ್ತ ಪಾದಯಾತ್ರೆ ಹೊರಟಿದ್ದ ಯಾತ್ರಿಕನ ಮೇಲೆ ಶುಕ್ರವಾರ ಬೆಳಗ್ಗೆ ಲಾರಿಯೊಂದು ಹರಿದ ಪರಿಣಾಮ ಯಾತ್ರಿಕ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಕೆರಹಳ್ಳಿ ಮೇಲ್ಸೇತುವೆ ಬಳಿ ನಡೆದಿದೆ.   ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ನಿವಾಸಿ ಯಮನೂರಪ್ಪ ಸಣ್ಣಮನಿ (34) ಮೃತ ವ್ಯಕ್ತಿ. ಗಾಯಾಳು ಮಹಾಂತೇಶ ಎನ್ನುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಲಿಗೆಮ್ಮ ದೇವಿ …

Read More »

ಕಣ್ಮರೆಯಾಗುತ್ತಿರುವ ಉತ್ತರಕರ್ನಾಟಕ ಅಡುಗೆಗಳು

ಕಾಲಕ್ರಮೇಣ ಬದಲಾವಣೆ ಸಹಜ ಕ್ರಿಯೆ. ಆದರೆ ಸಾಂಪ್ರದಾಯಿಕ ಮತ್ತು ಪಾರಂಪರಿಕ ಅಡುಗೆ ತೊಡುಗೆ ವಿಷಯದಲ್ಲಿ ಬದಲಾವಣೆ ಇತ್ತೀಚಿನ ದಿನಗಳಲ್ಲಿ ತುಸು ಜಾಸ್ತಿ ಆಗುತ್ತಿದೆ ಅಂದರೆ ಎಲ್ಲರೂ ತಲೆದೂಗಬೇಕು. ಕರ್ನಾಟಕದ ವಿಷಯದಲ್ಲಿ ಪ್ರತಿ ಜಿಲ್ಲೆಗಳಿಗೂ ಅದರದ್ದೆ ಆದ ವಿಶೇಷತೆ ಇದೆ. ಅದು ಭಾಷೆ ಆಗಲಿ ಊಟ ಆಗಲಿ ಸಾಂಸ್ಕತಿಕ ವಿಚಾರವಾಗಲಿ ಕರ್ನಾಟಕ ಹೆಸರುವಾಸಿ. ಅದರಲ್ಲೂ ಉತ್ತರ ಕರ್ನಾಟಕ ತನ್ನ ಭಾಷೆಗಾಗಿ, ಅಡುಗೆಗಾಗಿ ಹೆಸರುವಾಸಿ. ದಕ್ಷಿಣ ಕರ್ನಾಟಕದ ಪ್ರತಿಯೊಬ್ಬರು ಉತ್ತರ ಕರ್ನಾಟಕದ ಹೆಸರು …

Read More »