Breaking News

Daily Archives: ಮೇ 30, 2024

ರೈಲಿನಿಂದ ಜಿಗಿಯಲು ಯತ್ನಿಸಿದ ವೃದ್ಧ

ಮೈಸೂರು: ಮಕ್ಕಳ ನಡವಳಿಕೆಯಿಂದ ನೊಂದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೂಡಲಗೆರೆಯ ಈರಪ್ಪ ಶಂಕರಪ್ಪ ನಯನಾಪುರ ಅವರು ಮನೆ ಬಿಟ್ಟು ಮೈಸೂರಿಗೆ ಬರುತ್ತಿದ್ದ ಚಲಿಸುತ್ತಿದ್ದ ರೈಲಿನಲ್ಲಿ ಧುಮುಕಲು ಯತ್ನಿಸಿದ್ದಾರೆ. ಇತರೆ ಪ್ರಯಾಣಿಕರು ಅವರನ್ನು ರಕ್ಷಣೆ ಮಾಡಿ ರೈಲ್ವೆ ನಿಲ್ದಾಣಕ್ಕೆ ಕರೆತಂದರು. ಮಾನವ ಹಕ್ಕು ಹೋರಾಟಗಾರ ಪ್ರಸನ್ನ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬಸವರಾಜು ಅರವಿಂದ ನಗರದ ಜೆಎಸ್‌ಎಸ್‌ …

Read More »

ಪೆನ್‌ಡ್ರೈವ್‌ ಹಂಚಿಕೆ ಪ್ರಕರಣ: ಆರೋಪಿಗಳಾದ ಚೇತನ್‌, ಲಿಖಿತ್‌ಗೆ ಜಾಮೀನು

ಹಾಸನ: ಅಶ್ಲೀಲ ವಿಡಿಯೊಗಳಿದ್ದ ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೌಡಗೆ ಗುರುವಾರ ಮೂರನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಆರನೇ ಮತ್ತು ಏಳನೇ ಆರೋಪಿಯಾಗಿರುವ ಯಲಗುಂದ ಚೇತನ್ ಹಾಗೂ ಲಿಖಿತ್‌ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಮೇ 12 ರಂದು ಬಂಧಿಸಿದ್ದರು. ಬಂಧನದ ಹದಿನೆಂಟು ದಿನಗಳ ಬಳಿಕ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಸದ್ಯ ಹಾಸನದ ಸಂತೇಪೇಟೆಯ ಜಿಲ್ಲಾ ಕಾರಾಗೃಹದಲ್ಲಿರುವ ಚೇತನ್ …

Read More »

ಮುಂಬೈ ಹೊಟೇಲ್ ಉದ್ಯಮಿ ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ಮುಂಬೈ: 2001ರಲ್ಲಿ ಮುಂಬೈನ ಹೊಟೇಲ್ ಉದ್ಯಮಿ ಜಯಾ ಶೆಟ್ಟಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಮುಂಬೈ ವಿಶೇಷ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(MCOCA) ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್ ಅವರು, ಜಯಾ ಶೆಟ್ಟಿ ಕೊಲೆ ಪ್ರಕರಣದಲ್ಲಿ ರಾಜನ್‌ ಅಪರಾಧಿ ಎಂದು ಘೋಷಿಸಿದರು. ಜಯಾ ಶೆಟ್ಟಿ ಅವರು ಸೆಂಟ್ರಲ್ ಮುಂಬೈನ ಗಮದೇವಿಯಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ನಡೆಸುತ್ತಿದ್ದರು. …

Read More »

ಲೋಕಸಭಾ ಚುನಾವಣೆ ಮತಏಣಿಕೆ: ರಾಜ್ಯಾಧ್ಯಂತ ಜೂ.04 ರಿಂದ 05 ರಂದು 144 ಸೆಕ್ಷನ್ ಅಡಿ ‘ನಿಷೇದಾಜ್ಞೆ’ ಜಾರಿ

ಬೆಂಗಳೂರು: ಎರಡು ಹಂತಗಳಲ್ಲಿ ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಹಿನ್ನೆಲೆಯಲ್ಲಿ ಮತ ಎಣಿಕೆಯು ಜೂನ್.4ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಲು ಜೂನ್.04 ರ ಬೆಳಗ್ಗೆ 6 ರಿಂದ ಜೂನ್.05 ರ ಬೆಳಗ್ಗೆ 6.00 ಗಂಟೆಯವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, …

Read More »

ಮಹಿಳೆಯರಿಂದ ಭರ್ಜರಿ ‘ಶಕ್ತಿ’ ಪ್ರದರ್ಶನ: GST ಸಂಗ್ರಹ ಹೆಚ್ಚಳ

ಬೆಂಗಳೂರು: ಶಕ್ತಿ ಯೋಜನೆಯಿಂದ ಜಿಎಸ್​ಟಿ ಸಂಗ್ರಹ ಮತ್ತು ಮಹಿಳೆಯರ ಪಾಲುದಾರಿಕೆ ಶೇ 25.1ನಿಂದ 30.2ಗೆ ಹೆಚ್ಚಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಕ್ತಿ ಉಚಿತ ಯೋಜನೆ ಎಂದು ಮೂಗು ಮುರಿಯುವವರ ಗಮನಕ್ಕೆ! ಶಕ್ತಿ ಯೋಜನೆಯಿಂದ ಜಿಎಸ್​​ಟಿ ಸಂಗ್ರಹ ಹೆಚ್ಚಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಶೇ 25.1ನಿಂದ 30.2ರಷ್ಟು ಮಹಿಳೆಯ ಪಾಲುದಾರಿಕೆ ಹೊಂದಿದೆ. https://x.com/RLR_BTM/status/1795828541709492559?ref_src=twsrc%5Etfw%7Ctwcamp%5Etweetembed%7Ctwterm%5E1795828541709492559%7Ctwgr%5Efd4d0d2428a12bdbfbe853e306ea05eb814d8f7b%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fshakti-yojana-adds-to-karnatakas-gst-as-more-women-join-work-force-ramalingareddy-ggs-840902.html ಇದು ಬಿಟ್ಟಿ ಭಾಗ್ಯವಲ್ಲ ಸಮಾಜದಲ್ಲಿ ಸರ್ಕಾರ ಹೂಡಿರುವ …

Read More »

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನಕ್ಕೆ 2,000 ಪೊಲೀಸರ ಸರ್ಪಗಾವಲು: ಪ್ರವಾಸಿಗರಿಗೆ, ದೋಣಿಗಳಿಗೆ ನೋ ಎಂಟ್ರಿ!

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನಕ್ಕೆ 2,000 ಪೊಲೀಸರ ಸರ್ಪಗಾವಲು: ಪ್ರವಾಸಿಗರಿಗೆ, ದೋಣಿಗಳಿಗೆ ನೋ ಎಂಟ್ರಿ! ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸುಮಾರು ಎರಡೂವರೆ ತಿಂಗಳ ಕಾಲ ದೇಶಾದ್ಯಂತ ಸುಮಾರು 200 ಚುನಾವಣಾ ರ್‍ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಕೊನೆಯ ಹಂತದ ಚುನಾವಣೆಗೂ ಮುನ್ನ ಕನ್ಯಾಕುಮಾರಿಯ (Kanyakumari) ಪ್ರಸಿದ್ಧ ವಿವೇಕಾನಂದ (Vivekananda) ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ.   ಇದಕ್ಕಾಗಿ …

Read More »

ಬಾವಿಗೆ ಬಿದ್ದು ಮೇಲೆ ಬರಲಾಗದೆ ಜೀವ ಭಯದಿಂದ ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

ಯರಗಟ್ಟಿ : ಬಾವಿಗೆ ಬಿದ್ದು ಮೇಲೆ ಬರಲಾಗದೆ ಜೀವ ಭಯದಿಂದ ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯನ್ನು ರೈತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಯರಗಟ್ಟಿ ಪಟ್ಟಣದ ಸತ್ತಿಗೇರಿ ಗ್ರಾಮದಲ್ಲಿ ನಡೆದಿದೆ. ಆಹಾರ ಅರಸುತ್ತಾ ಸಂಚಾರದಲ್ಲಿದ್ದ ನವಿಲು ಶನಿವಾರ ರಾತ್ರಿಯ ವೇಳೆಗೆ ಸಮೀಪದ ಸತ್ತಿಗೇರಿ ಗ್ರಾಮದ ಭೀಮಪ್ಪ ಮಿಲ್ಲಾನಟ್ಟಿ ಎಂಬವರ ಜಮೀನಿನ ಬಾವಿಗೆ ಬಿದ್ದಿತ್ತು. ಸೋಮವಾರ ಬೆಳಗ್ಗೆ 5 ಕ್ಕೆ ಬಾವಿಯಿಂದ ನೀರು ಎತ್ತಲು ಮನೆಯವರು ಬಂದಾಗ ಒದ್ದಾಡುತ್ತಿದ್ದ ನವಿಲನ್ನು ಗಮನಿಸಿ …

Read More »

ಯೋಧ ನಿಧನ ; ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ

ಖಾನಾಪುರ : ತಾಲೂಕಿನ ಕಕ್ಕೇರಿ ಗ್ರಾಮದ ಯೋಧ ಮಂಜುನಾಥ ಅಂಬಡಗಟ್ಟಿ ( 35 ) ಮಂಗಳವಾರ ನಿಧನರಾಗಿದ್ದು, ಇಂದು ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತರಲಾಗಿದೆ. ಭಾರತೀಯ ಸೇನೆಯ ಇಂಜಿನಿಯರ್ ರೆಜಿಮೆಂಟ್ ನಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಕಳೆದ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ದೆಹಲಿಯ ಮಿಲಿಟರಿ ಬಿ‌.ಎಸ್  ದಾಖಲಾಗಿದ್ದ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದ್ದಾರೆ. ಮೃತರ ಪಾರ್ಥಿವ …

Read More »

ಭ್ರಷ್ಟಾಚಾರ ಆರೋಪ‌ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ..?

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ‌ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಸಂಜೆ ಸಿಎಂ ತಮ್ಮ ಗೃಹ ಕಚೇರಿಗೆ ಸಚಿವ ನಾಗೇಂದ್ರ ಅವರ ಭೇಟಿಗೆ ಕರೆದುರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಚಿವ ನಾಗೇಂದ್ರ ಅವರಿಗೆ ಸಿಎಂ ಸಿದ್ದರಾಮಯ್ಯ ಬುಲಾವ್ ನೀಡಿದ್ದು, ಇಂದು ಅಥವಾ ನಾಳೆ ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಇನ್ನೂ ಭ್ರಷ್ಟಾಚಾರ ಕುರಿತು ಈಗಾಗಲೇ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ.     ವಾಲ್ಮೀಕಿ …

Read More »

ನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ ಎಂದು ವದಂತಿ

ಬೆಂಗಳೂರು: ಸ್ಯಾಂಡಲ್ ವುಡ್ ನಟರ ಸಾವಿನ ವದಂತಿ ಹಬ್ಬುವುದು ಇದೇ ಮೊದಲಲ್ಲ. ಇದೀಗ ನಟ ಪ್ರಜ್ವಲ್ ದೇವರಾಜ್ ಅವರ ಬಗ್ಗೆ ಇಂತಹದ್ದೊಂದು ವದಂತಿ ಹರಿಯಬಿಡಲಾಗಿದ್ದು, ಕುಟುಂಬಸ್ಥರು ಬೇಸರಗೊಂಡಿದ್ದಾರೆ. ಸ್ಯಾಂಡಲ್ ವುಡ್ ನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ ಎಂದು ಯಾರೋ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಿದ್ದರು. ಇದರಿಂದ ಅಭಿಮಾನಿಗಳು ಆತಂಕಕ್ಕೀಡಾದರು. ಕೆಲವೇ ಕ್ಷಣಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೇ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಆರೋಗ್ಯವಾಗಿರುವ ನಟನ ಬಗ್ಗೆ ಇಂತಹದ್ದೊಂದು ಸುದ್ದಿ, ಫೋಟೋ …

Read More »