Breaking News

Daily Archives: ಮೇ 30, 2024

ಅಪ್ಪ ಮಕ್ಕಳ ಕೈಯಿಂದ ಬಿಜೆಪಿ ಪಕ್ಷ ಮುಕ್ತ ಮಾಡಬೇಕು. :ಈಶ್ವರಪ್ಪ

ಚಿಕ್ಕಮಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷ ಅಪ್ಪ ಮಕ್ಕಳ ಕೈಯಲ್ಲಿದೆ. ಸಾಮೂಹಿಕ ನಾಯಕತ್ವ ಪಕ್ಷದಲ್ಲಿ ಬರಬೇಕು. ಪಕ್ಷ ಶುದ್ದೀಕರಣ ಆಗಬೇಕು ಎನ್ನುವುದು ನನ್ನ ಹೋರಾಟದ ಉದ್ದೇಶ ಎಂದು ಕೆ.ಎಸ್. ಈಶ್ವರಪ್ಪ ಬಿಎಸ್ ವೈ ಹಾಗೂ ಮಕ್ಕಳ ವಿರುದ್ಧ ಗುಡುಗಿದರು. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವ ಇತ್ತು. ಈಗ ಪಕ್ಷ ಅಪ್ಪ ಮಕ್ಕಳ ಕೈಯಲ್ಲಿ ಸಿಕ್ಕಿದೆ. ಅಪ್ಪ ಮಕ್ಕಳ ಕೈಯಿಂದ ಪಕ್ಷ ಮುಕ್ತ ಮಾಡಬೇಕು ಎಂಬ ಆಪೇಕ್ಷೆ ಕಾರ್ಯಕರ್ತರು …

Read More »

ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ಗಳ ಮನೆಗೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ ಖಾಕಿ

ಧಾರವಾಡ : ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುರುಕಾಗಿರುವ ನಗರದ ಪೊಲೀಸರು, ಇದೀಗ ಸಮಾಜಘಾತುಕ ಶಕ್ತಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಆರಂಭಿಸಿದ್ದಾರೆ. ನಗರದಲ್ಲಿನ ರೌಡಿ ಶೀಟರ್‌ಗಳ ಮನೆಗಳಿಗೆ ಬೆಳ್ಳಂಬೆಳಗ್ಗೆ ತೆರಳಿ ಜಾಲಾಡಿರುವ ಪೊಲೀಸರು ಯಾವುದೇ ಸಂದರ್ಭದಲ್ಲಿ ಬಾಲ ಬಿಚ್ಚದಂತೆ ತಾಕೀತು ಮಾಡಿದ್ದಾರೆ. ಎಸಿಪಿ ಬಿ.ಬಸವರಾಜ ಅವರ ಮಾರ್ಗದರ್ಶನದಲ್ಲಿ ನಗರದ ೩೨ ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ಶಹರ ಪೊಲೀಸ್ ಠಾಣೆಯ ಇನಸ್ಪೆಕ್ಟರ್ ವಿಶ್ವನಾಥ …

Read More »

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ವಿಎ

ಶಿವಮೊಗ್ಗ : 6 ಸಾವಿರ ರೂ. ಲಂಚ ಪಡೆಯುವಾಗ ಗ್ರಾಮ ಲೆಕ್ಕಿಗರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಗಾಡಿಕೊಪ್ಪ ವೃತ್ತ ಕಸಬಾ 1 ಕಚೇರಿಯ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ನನ್ನ ಕಚೇರಿಯಲ್ಲೇ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಸಂಕೇತ್ ಎಂಬುವವರ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಸುರೇಶ್ ಜಮೀನು ನೋಂದಣಿ ಗಾಗಿ ಹಣದ ಬೇಡಿಕೆ ಇಟ್ಟಿದ್ದು, ಹಣದ ಬೇಡಿಕೆಗೆ ಬೇಸತ್ತು ಸಂಕೇತ್ ಲೋಕಾಯುಕ್ತ …

Read More »

ರಾಜೀನಾಮೆ ಪಡೆಯಬೇಕು,ಈಶ್ವರಪ್ಪ ಕೇಸ್‌ನಲ್ಲಿ ಹೀಗಿರಲಿಲ್ಲ: ಬೊಮ್ಮಾಯಿ

ರಾಜೀನಾಮೆ ಪಡೆಯಬೇಕು,ಈಶ್ವರಪ್ಪ ಕೇಸ್‌ನಲ್ಲಿ ಹೀಗಿರಲಿಲ್ಲ: ಬೊಮ್ಮಾಯಿ ಕೊಪ್ಪಳ: ವಾಲ್ಮೀಕಿ ನಿಗಮದ ಅಧಿಕಾರಿ ಸಾವಿನ ಪ್ರಕರಣದಲ್ಲಿ ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಸಿಎಂ ಅವರು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯ ಮಾಡಿದರು. ಕೊಪ್ಪಳ ಗವಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡೆತ್‌ನೋಟ್‌ನಲ್ಲಿ ಎಲ್ಲವೂ ಉಲ್ಲೇಖವಾಗಿದೆ. ಬ್ಯಾಂಕ್‌ಗೆ ಹಣ ವರ್ಗಾವಣೆಯಾಗಿದೆ. ಮೌಖಿಕ ಆದೇಶ ಮಾಡಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಆದರೆ ಈಶ್ವರಪ್ಪ ಕೇಸ್‌ನಲ್ಲಿ ಇಂಥಹ ಡೆತ್‌ನೋಟ್ ಇರಲಿಲ್ಲ. …

Read More »

ಹಣ ವರ್ಗಾವಣೆ ವಿಚಾರದಲ್ಲಿ ವಿಜಯೇಂದ್ರ ನಿಪುಣ: ಮಧುಬಂಗಾರಪ್ಪ

ಶಿವಮೊಗ್ಗ: ನಮ್ಮ ಶಾಸಕರನ್ನು ಕೊಂಡೊಯ್ದು ಬಾಂಬೆಯಲ್ಲಿ ಇಟ್ಟುಕೊಂಡಿದ್ದ ವಿಜಯೇಂದ್ರ ಅವರಿಗೆ ಹಣ ವರ್ಗಾವಣೆಯಲ್ಲಿ ವಿಶೇಷವಾದ ನೈಪುಣ್ಯತೆ ಇದೆ. ಹೀಗಾಗಿ ವಾಲ್ಮೀಕಿ ನಿಗಮದ ಹಣ ಹೊರರಾಜ್ಯಕ್ಕೆ ವರ್ಗಾವಣೆಯಾಗಿದೆ. ಚುನಾವಣೆಗೆ ಬಳಕೆಯಾಗಿದೆ ಎನ್ನುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.   ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಜಯೇಂದ್ರ ನಮ್ಮ ಸರ್ಕಾರ ಮತ್ತು ಪಕ್ಷದ ಬಗ್ಗೆ ಮಾತನಾಡುವ ಬದಲು ತಮ್ಮದೇ ಪಕ್ಷದ ಯತ್ನಾಳ್‌ ಮತ್ತು ಈಶ್ವರಪ್ಪ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಚಂದ್ರಶೇಖರನ್‌ ಪ್ರಕರಣದಲ್ಲಿ …

Read More »

ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಬಿತ್ತನೆ ಬೀಜದರ ಕಡಿಮೆ ದರ ಇದೆ :ಚಲುವರಾಯಸ್ವಾಮಿ

ಮಂಡ್ಯ: ಪ್ರತಿ ವರ್ಷವೂ ಬಿತ್ತನೆ ಬೀಜ ದರ ಹೆಚ್ಚಳವಾಗುತ್ತದೆ. ಆದರೆ, ನಾವು ಯಾವುದೇ ಲಾಭದ ಉದ್ದೇಶದಿಂದ ದರ ಹೆಚ್ಚಳ ಮಾಡಿಲ್ಲ. ಬಿತ್ತನೆ ಬೀಜವನ್ನು ರೈತರಿಂದಲೇ ಖರೀದಿಸುವುದಾಗಿದೆ. ಅದನ್ನು ರೈತರಿಗೆ ಮಾರಾಟ ಮಾಡಲಾಗುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಕಡಿಮೆ ದರ ಇದೆ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ಯಾವುದೇ ಆತಂಕ ಇಲ್ಲ. ಪ್ರತಿ ವರ್ಷ ಜೂನ್‌ನಿಂದ ಹರಿಸಲಾಗುತ್ತಿತ್ತು. ಅದರಂತೆ …

Read More »

ಜಾತ್ರೆಯಲ್ಲಿ ಅನ್ನ ಪ್ರಸಾದ ಸೇವಿಸಿದ 44 ಮಂದಿ ಭಕ್ತರು ತೀವ್ರ ಅಸ್ವಸ್ಥ

ಚಿಕ್ಕೋಡಿ: ಜಾತ್ರೆಯಲ್ಲಿ ವಿಷಾಹಾರ ಸೇವಿಸಿ 44 ಮಂದಿ ಅಸ್ವಸ್ಥವಾಗಿರುವ ಘಟನೆ ಕೇರೂರ ಗ್ರಾಮದಲ್ಲಿ ನಡೆದಿದೆ. ಕೇರೂರ ಗ್ರಾಮದ ಬೇಕ್ಕೆರಿ ತೋಟದಲ್ಲಿ ಇರುವ ಶ್ರೀ ಬಾಳು ಮಾಮಾ ದೇವಸ್ಥಾನದಲ್ಲಿ ಬುಧವಾರ ಜಾತ್ರೆಯನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಮಧ್ಯಾಹ್ನ ಅನೇಕ ಭಕ್ತರು ಮಹಾಪ್ರಸಾದ ಸೇವಿಸಿದ್ದರು. ಮಧ್ಯಾಹ್ನ ಉಳಿದಿದ್ದ ಅನ್ನವನ್ನೇ ರಾತ್ರಿ ಸೇವಿಸಿದ್ದ ಭಕ್ತರು ವಾಂತಿ,ಭೇದಿಯಿಂದ ಬಳಲುತ್ತಿದ್ದರು. ಮುಂಜಾನೆಯಿಂದ ಅಸ್ವಸ್ಥವಾಗಿರುವುದರಿಂದ ಚಿಕ್ಕೊಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ 31 ಜನ,ಕೇರೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ಜನ,ಯಕ್ಸಂಬಾ …

Read More »

ಪ್ರಜ್ವಲ್ ರೇವಣ್ಣನ ಮುಟ್ಟೋದು ಅಷ್ಟು ಸುಲಭವಲ್ಲ! ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದಾ?

ಬೆಂಗಳೂರು: ಪೆನ್​ ಡ್ರೈವ್​ಗೆ ಸಂಬಂಧಿಸಿದಂತೆ ಸಾಲು ಸಾಲು ಆರೋಪಗಳನ್ನು ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ ರೇವಣ್ಣ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಬರೋದು ಪಕ್ಕಾ ಆಗಿದೆ. ಜರ್ಮನಿಯಿಂದ ಪ್ರಜ್ವಲ್​​ನ ಹೊತ್ತ ವಿಮಾನ ಬೆಂಗಳೂರಿನತ್ತ ಧಾವಿಸುತ್ತಿದೆ. ಪ್ರಜ್ವಲ್ ಬಂದ ಕೂಡಲೇ ಬಂಧನಕ್ಕೆ ಎಸ್ ಐಟಿ ಸಜ್ಜಾಗಿದೆ. ಈಗಾಗಲೇ ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಪಡೆಯಲಾಗಿದೆ. ಏರ್​ಪೋರ್ಟ್​ನಲ್ಲೇ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಸ್ಥಳೀಯ ಪೊಲೀಸರ ಸಹಾಕಾರದೊಂದಿಗೆ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಂಪೇಗೌಡ ಏರ್ ಪೋರ್ಟ್ …

Read More »

ಹಾವು ಕಚ್ಚಿ ರೈತ ಮಹಿಳೆ ಮೃತ್ಯು

ಭರಮಸಾಗರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಸಮೀಪದ ಓಬಳಾಪುರ ಗ್ರಾಮದ ವಿಜಯಲಕ್ಷ್ಮೀ (55) ಮೃತ ಮಹಿಳೆ. ಬುಧವಾರ ತಮ್ಮದೇ ಹೊಲದಲ್ಲಿ ಪಾರ್ಥೇನಿಯಂ ಗಿಡ ಕೀಳುವ ವೇಳೆ ಬಲಗೈಗೆ ಹಾವು ಕಚ್ಚಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆ ಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಮುಂಜಾನೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. ಮೃತರು ಪತಿ, …

Read More »

ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಕಳವು

ಕುಶಾಲನಗರ: ತಾಲೂಕಿನ ‌ಮಾದಾಪಟ್ಟಣ ಗ್ರಾಮದ ನಿವಾಸಿ ಪೊಲೀಸ್ ಕಾನ್‌ಸ್ಟೆಬಲ್ ಸುನಿಲ್ ಕುಮಾರ್ ಎಂಬುವರ ಮನೆ ಹಿಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಲ್ಮೇರಾ ಒಡೆದು ₹15 ಸಾವಿರ ನಗದು ಹಾಗೂ 40 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ. ಇದೇ ಮನೆಯ ಹಿಂಭಾಗದಲ್ಲಿರುವ ಮನೆಯಲ್ಲಿಯೂ ಕಳವಿಗೆ ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ವಿಧಿವಿಜ್ಞಾನ, ಹಾಗೂ ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆದರೆ ಕಳ್ಳರ ಸುಳಿವು ಮಾತ್ರ …

Read More »