Breaking News

Daily Archives: ಮೇ 17, 2024

ತೆರಬಂಡಿ ಸ್ಪರ್ಧೆಯ ಹೋರಿ ದಾಖಲೆಯ 10.10 ಲಕ್ಷಕ್ಕೆ ಖರೀದಿಸಿದ ರೈತ

ಮಹಾಲಿಂಗಪುರ: ರೈತ ದೇಶದ ಬೆನ್ನೆಲುಬಾದರೆ, ರೈತನ ಬೆನ್ನಲುಬು ಎತ್ತು. ಆದರೆ ಇತ್ತಿಚಿಗೆ ಯಾಂತ್ರಿಕ ಉಪಕರಣಗಳು ಹೆಚ್ಚಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಎತ್ತುಗಳನ್ನು ಬಳಸುವುದು ಕಡಿಮೆಯಾಗಿದೆ. ಗ್ರಾಮೀಣ ಭಾಗದ ರೈತರು ಎತ್ತು ಮತ್ತು ಹೋರಿಗಳನ್ನು ಇಂದಿಗೂ ಸಾಕುತ್ತಿದ್ದಾರೆ. ಪಟ್ಟಣದ ಪುರಸಭೆಯ ಹಿರಿಯ ಸದಸ್ಯರು, ಪ್ರಗತಿಪರ ರೈತ ಯಲ್ಲನಗೌಡ ಪಾಟೀಲ ಅವರು ಇಂದಿಗೂ ತಮ್ಮ ಮನೆಯಲ್ಲಿ ಎತ್ತು ಮತ್ತು ಹೋರಿಗಳನ್ನು ಸಾಕುತ್ತಾ, ಗ್ರಾಮೀಣ ಭಾಗದಲ್ಲಿ ನಡೆಯುವ ಪ್ರತಿಯೊಂದು ಜಾತ್ರೆ ಉತ್ಸವಗಳಲ್ಲಿ ನಡೆಯುವ ತೆರಬಂಡಿ, ಕಲ್ಲು …

Read More »

ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

ವಿಜಯಪುರ: ಚರಂಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಬಿದ್ದು ಮೂವರು ಮಕ್ಕಳ ದುರಂತ ಘಟನೆ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ತಂಡ ನಗರಕ್ಕೆ ಭೇಟಿ ನೀಡಿದೆ. ಶುಕ್ರವಾರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸುಂಬೆ, ಶೇಖರಗೌಡ ರಾಮತ್ನಾಳ ಅವರ ತಂಡ ವಿಜಯಪುರ ನಗರಕ್ಕೆ ಭೇಟಿ ನೀಡಿದ್ದು,‌ ಮೇ 13 ರಂದು ದುರಂತದಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಪೋಷಕರನ್ನು ಭೇಟಿ ಮಾಡಿ …

Read More »

ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಬೆಂಗಳೂರು: ಸೌತ್‌ ಸಿನಿಮಾ ರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸದ್ಯ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಒಂದು ಕಾಲದಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಕೊಟ್ಟ ಕರಾವಳಿ ಚೆಲುವೆ ಮಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದು, ಆ ಮೂಲಕ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್‌ ಮಾಡುವ ತಯಾರಿಯಲ್ಲಿದ್ದಾರೆ. ಚಿತ್ರರಂಗದಲ್ಲಿ ಅನುಷ್ಕಾ ಎಷ್ಟರಮಟ್ಟಿಗೆ ಸುದ್ದಿಯಾಗಿದ್ದರೋ, ಅವರ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ʼಬಾಹುಬಲಿʼ ಬೆಡಗಿಗೆ ವಯಸ್ಸು 42 ದಾಟಿದರೂ ಇನ್ನು ಮದುವೆ …

Read More »

ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಉತ್ತರ ಪ್ರದೇಶ ಮಾದರಿಯಲ್ಲಿ ಗೂಂಡಾ ರಾಜ್ಯವಾಗುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು. ನಗರದ ವೀರಾಪುರ ಓಣಿ ಕರಿಯಮ್ಮನ ಗುಡಿ ಬಳಿ ಹತ್ಯೆಯಾದ ಅಂಜಲಿ ಅಂಬಿಗೇರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಉತ್ತರ ಪ್ರದೇಶ ಮೊದಲು ಗೂಂಡಾ ರಾಜ್ಯವಾಗಿತ್ತು. ಅಲ್ಲಿ ಯೋಗಿ ಆದಿತ್ಯನಾಥ ಸಿಎಂ ಆದ …

Read More »

ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ

ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಯಾವುದದೇ ಜಾತ್ರೆ, ಉತ್ಸವ, ಹಬ್ಬ, ಹರಿದಿನಗಳಿರಲಿ ಅಲ್ಲಿ ಕಡ್ಡಾಯವಾಗಿ ಕುಸ್ತಿ ಇರಲೇಬೇಕು. ಕುಸ್ತಿ ಇಲ್ಲಿಯ ಜನರಿಗೆ ಒಂದು ಮನರಂಜನೆಯಾದರೆ ಪೈಲ್ವಾನರಿಗೆ ತಮ್ಮ ಕಲೆ ಪ್ರದರ್ಶನ ಮಾಡಲು ಒಂದು ವೇದಿಕೆ ದೊರೆತಂತಾಗುತ್ತದೆ. ಗ್ರಾಮೀಣರಲ್ಲಿ ನಮ್ಮ ಮನೆಯಲ್ಲಿ ಒಬ್ಬ ಕುಸ್ತಿಪಟು ಇದ್ದಾನೆ ಎಂಬುದನ್ನು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿ. ರಬಕವಿ …

Read More »

ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

ಕೊಪ್ಪಳ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೇಂದ್ರ ಸರ್ಕಾರವು ಅಸಹಕಾರ ತೋರುತ್ತಿದೆ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ವಿಚಾರದಲ್ಲಿ ಸರ್ಕಾರ ಈಗಾಗಲೇ ತನಿಖೆ ಆರಂಭಿಸಿದೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು ವಿದೇಶದಿಂದ ಕರೆತಂದು ಬಂಧಿಸಲು ಕೇಂದ್ರ ಸಹಕಾರ ಕೊಡಬೇಕಿದೆ. ಅವರಿಂದಲೇ ನಮಗೆ ಸಹಕಾರ ಸಿಗುತ್ತಿಲ್ಲ ಎಂದರು. ರಾಜ್ಯ ಕಾಂಗ್ರೆಸ್ ಸರಕಾರ ಪತನವಾಗಲಿದೆ …

Read More »

ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಚೆನ್ನೈ: ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ. ತಮಿಳುನಾಡಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ತಾಪಮಾನವು ಒಂದೆರಡು ಡಿಗ್ರಿಗಳಷ್ಟು ಕಡಿಮೆಯಾಗಿದೆ. ಕನ್ಯಾಕುಮಾರಿ ಜಿಲ್ಲೆಯ ಮೈಲಾಡಿಯಲ್ಲಿ 7 ಸೆಂ.ಮೀ ಮಳೆಯಾಗಿದ್ದರೆ, ತಿರುಚೆಂದೂರು, ವಾಲ್ಪಾರೈ ಮತ್ತು ನನ್ನಿಲಂನಲ್ಲಿ ತಲಾ 6 ಸೆಂ.ಮೀ, ಕಡಲೂರು ಮತ್ತು ಕೊಯಮತ್ತೂರಿನಲ್ಲಿ ತಲಾ 5 ಸೆಂ.ಮೀ ಮತ್ತು ಚೆಂಗಲ್ಪಟ್ಟು ನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕುರ್ಟಾಲಂನಲ್ಲಿ 16 ವರ್ಷದ ಬಾಲಕ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಏಕಾಏಕಿ ಭಾರೀ …

Read More »

ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್‌ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜೂಜು (ಇಸ್ಪೀಟ್) ಆಡಿಸಲು 2 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಪಿಎಸ್‌ಐ ಮತ್ತು ಕಾನ್ ಸ್ಟೆಬಲ್ ಬಿದ್ದಿದ್ದಾರೆ. ತಡಸ ಪೊಲೀಸ್ ಠಾಣೆಯ ಪಿಎಸ್‌ಐ ಶರಣಬಸಪ್ಪ ಕಾಂದೆ ಮತ್ತು ಕಾನ್ ಸ್ಟೆಬಲ್ ಸುರೇಶ ಮಾನೋಜಿ ಬಂಧಿತರು. ಜೂಜು ಆಡಿಸುವ ಸಂಬಂಧ ಪ್ರಭಾಕರ ಈರಪ್ಪ ಬೆಟ್ಟದೂರ ಅವರಿಗೆ 5 ಲಕ್ಷ ಲಂಚದ ಬೇಡಿಕೆ ಇಟ್ಟು, ಮಧ್ಯವರ್ತಿ ಕಿರಣ …

Read More »

ಪ್ರಿಯಾಂಕಾ ಗೆಲುವು ಖಚಿತ: ಸತೀಶ ಜಾರಕಿಹೊಳಿ

ಹುಕ್ಕೇರಿ: ‘ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಗೆದ್ದ ನಂತರ ನಮ್ಮ ಜವಾಬ್ದಾರಿಯೂ ಹೆಚ್ಚಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ 30 ವರ್ಷಗಳಿಂದ ನಾವು ಜನರ ಸಂಪರ್ಕದಲ್ಲಿ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಪ್ರಿಯಂಕಾ ಜಾರಕಿಹೊಳಿ ಗೆದ್ದ ಮೇಲೆ …

Read More »

ಬೆಳಗಾವಿ ಜಿಲ್ಲೆಯ 200 ಕೆರೆಗಳಲ್ಲಿ ಹನಿ ನೀರೂ ಇಲ್ಲ

ಬೆಳಗಾವಿ: ‘ನಮ್ಮೂರಾಗಿನ ಎರಡ ಕೆರ್‍ಯಾಗ ನಮ್ಮ ದನಗೋಳಿಗೆ ನೀರ ಕುಡಸತಿದ್ವಿರಿ. ಆದ್ರ ಹೋದ ವರ್ಷ ಮಳಿರಾಯ ಕೈಕೊಟ್ಟ. ಹಂಗಾಗಿ ಒಂದ ಕೆರ್‍ಯಾಗ ಸ್ವಲ್ಪ ನೀರ ಉಳಿದೇತ್ರಿ. ಒಂದ ಪೂರ್ತಿ ಬತ್ತಿಹೋಗೇತ್ರಿ. ಈಗ ದನಗೋಳಿಗೆ ಕುಡ್ಯಾಕ ನೀರ ಹುಡುಕೋದ ನಮಗ್‌ ಕೆಲ್ಸ ಆಗೇತ್ರಿ. ಕೆರಿ ಮಗ್ಗಲದಾಗ ಇರೋ ಹೊಲದಾಗಿನ ಬೆಳಿಗೋಳ ಒಣಗಾತಾವ್ರಿ…’ ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿಯಲ್ಲಿ ಹಿರೇಬಾಗೇವಾಡಿ-ಸವದತ್ತಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಇರುವ ಕೆರೆದಂಡೆ ಮೇಲೆ ಕುಳಿತಿದ್ದ ಕೃಷಿಕ ವೆಂಕನಗೌಡ ಪಾಟೀಲ ‘ಪ್ರಜಾವಾಣಿ’ …

Read More »