Breaking News

Daily Archives: ಮೇ 3, 2024

ಮಾಜಿ ಮಿನಿಸ್ಟರ್ ರೇವಣ್ಣ ವಿರುದ್ಧ ದಾಖಲಾಯ್ತು ಕಿಡ್ನ್ಯಾಪ್ ಕೇಸ್ !

ಹಾಸನ (Hassan) ಜಿಲ್ಲೆಯ ರಾಜಕಾರಣದಲ್ಲಿ ತಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ ಎನ್ನುವಂತಿದ್ದ ದೇವೇಗೌಡರ (Devegowda) ಕುಟುಂಬಕ್ಕೆ ಸಿಡಿಲು ಬಡಿದಿದೆ. ಹೆಚ್.ಡಿ ರೇವಣ್ಣ (HD Revanna) ಪುತ್ರ ಪ್ರಜ್ವಲ್ ರೇವಣ್ಣ (Prajwal revanna) ಅವರದ್ದು ಎನ್ನಲಾದ ವಿಡಿಯೋಗಳು ವೈರಲ್ (viral) ಆದ ಬಳಿಕ ಎಸ್‌ಐಟಿ ತನಿಖೆ ಶುರುವಾಗಿದೆ. ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ (court) ತೀರ್ಪು ನೀಡುವ ಸಾಧ್ಯತೆ …

Read More »

ಒಂದು ಮತ; ಐದು ವರ್ಷ ಪುಕ್ಕಟೆ ಕೆಲಸ- ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ

ವಿಜಯಪುರ: ರಾಜ್ಯ ರಾಜಕೀಯದಲ್ಲಿ ‘ಅಜಾತ ಶತ್ರು’ ಎಂದೇ ಗುರುತಿಸಿಕೊಂಡಿರುವ ದಲಿತ ನಾಯಕ, ಬಿಜೆಪಿ ಲೋಕಸಭೆ ಅಭ್ಯರ್ಥಿ ರಮೇಶ ಜಿಗಜಿಣಗಿ ಏಳನೇ ಬಾರಿಗೆ ಸಂಸತ್‌ ಭವನ ಪ್ರವೇಶಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ರಾಜ್ಯ ಮಾತ್ರವಲ್ಲದೇ, ರಾಷ್ಟ್ರ ರಾಜಕಾರಣದಲ್ಲೂ ಛಾಪು ಮೂಡಿಸಿರುವ ರಮೇಶ ಜಿಗಜಿಣಗಿ ಅವರು ಈ ಬಾರಿ ಗೆಲುವು ದಾಖಲಿಸಿದರೆ ಬಹುತೇಕ ಹೊಸ ಇತಿಹಾಸ ನಿರ್ಮಾಣವಾಗಲಿದೆ.ತಮ್ಮ ಸರಳ, ಸಜ್ಜನಿಕೆ, ಮೃದುಭಾಷೆ, ಹಮ್ಮು,ಬಿಮ್ಮು, ಗತ್ತು, ಗೈರತ್ತು ಇಲ್ಲದ ನಡೆಯಿಂದಲೇ ಜನರನ್ನು ಸೆಳೆಯುವ ಹಾಗೂ …

Read More »

ರಾಯಚೂರಿನಲ್ಲಿ ತಾಪಮಾನ ಹೆಚ್ಚಲು ಕಾಂಗ್ರೆಸ್‌ ಅಭ್ಯರ್ಥಿ ಕಾರಣ: ಅಮರೇಶ್ವರ್ ನಾಯಕ್

ರಾಯಚೂರು: ರಾಯಚೂರಿನಲ್ಲಿ ತಾಪಮಾನ ಹೆಚ್ಚಳವಾಗಿರುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ (G. Kumar Nayak) ಪಾತ್ರವಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ (Raja Amareshwar Nayak) ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್,‌ ಪವರ್ ಗ್ರಿಡ್‌ನಿಂದ ನಮಗೆ ಶಾಖ ಹೆಚ್ಚಾಗಿದೆ.ಜಿಲ್ಲೆಗೆ ವೈಟಿಪಿಎಸ್ ತಂದವರು ಈಗಿನ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ್ ನಾಯಕ್. ಇದು ಜಿ. ಕುಮಾರ್ ನಾಯಕ್ ಜನರಿಗೆ ಕೊಟ್ಟಂತ ಕಾಣಿಕೆ. ಕುಮಾರ್ ನಾಯಕ್ …

Read More »

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೆಂಗಳೂರು, ಮೇ. 03 : ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಏಪ್ರಿಲ್ 23 ರಂದು ಗಂಭೀರವಾದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಅವರ ಎಸ್‌ಯುವಿ ಮೂರು ಬಾರಿ ಪಲ್ಟಿ ಹೊಡೆದಿದೆ ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷರೂ ಆಗಿದ್ದ …

Read More »

ಸಾಲಗಾರನ ಪತ್ನಿಯ ಒತ್ತೆ ಇಟ್ಟುಕೊಂಡ ಬ್ಯಾಂಕ್

ಸೇಲಂ: ಸಾಲ ಕಟ್ಟದವನ ಪತ್ನಿಯನ್ನು ಬ್ಯಾಂಕ್ ಒತ್ತೆ ಇರಿಸಿಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಸಂಜೆ ಆರು ಗಂಟೆಯ ನಂತರ ಸಾಲದ ಹಣ ಮರುಪಾವತಿಗೆ ಹಣಕಾಸು ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎನ್ನುವ ನಿಯಮಗಳ ಹೊರತಾಗಿಯೂ ಖಾಸಗಿ ಬ್ಯಾಂಕ್ ಸಿಬ್ಬಂದಿ ಸಾಲ ಮಾಡಿದ್ದ ಪತಿ ಕಂತಿನ ಹಣ ಪಾವತಿಸಿಲ್ಲವೆಂದು ಆತನ ಪತ್ನಿಯನ್ನು ಒತ್ತೆ ಇಟ್ಟುಕೊಂಡಿದ್ದಾರೆ. ಸೇಲಂ ಜಿಲ್ಲೆಯ ವಳಪ್ಪಾಡಿಯ IDFC ಬ್ಯಾಂಕ್ ನಲ್ಲಿ ಸಿಬ್ಬಂದಿ ಈ ರೀತಿ ಮಾಡಿದ್ದಾರೆ. ಪ್ರಶಾಂತ್ ಎಂಬಾತ …

Read More »

ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

ಬೆಂಗಳೂರು: ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಪೀಡಿಸಿದಲ್ಲದೆ, ಅದನ್ನು ನಿರಾಕರಿಸಿದಕ್ಕೆ ಆಕೆಯ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಹಳ್ಳಿ ನಿವಾಸಿ ಅಬಾರ್ಜ್‌ (24) ಬಂಧಿತ ಆರೋಪಿ. ಕೆ.ಜಿ.ಹಳ್ಳಿಯಲ್ಲಿ ಸಣ್ಣ- ಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿ ಹಾಗೂ ದೂರುದಾರ ವಿವಾಹಿತ ಮಹಿಳೆ ದೂರದ ಸಂಬಂಧಿಗಳಾಗಿದ್ದಾರೆಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಟೈಲರಿಂಗ್‌ ಕೆಲಸ ಮಾಡುತ್ತಿರುವ ಪತಿ ಹಾಗೂ ಮೂವರು ಮಕ್ಕಳ ಜತೆ ಸಾರಾಯಿಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಆರೋಪಿ, …

Read More »

ಬಾರ್ ನಲ್ಲಿ ಕುಳಿತು ಜೈಶ್ರೀರಾಮ್ ಎಂದು ಕೂಗಿದವನ ಮೇಲೆ ಹಲ್ಲೆ

ಕೊಪ್ಪಳ: ಜೈಶ್ರೀರಾಮ್ ಎಂದು ಕೂಗಿದ ಯುವಕನ ವಿರುದ್ಧ ಹಲ್ಲೆ ನಡೆದು ತೀವ್ರ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಬೆಂಗಳೂರಿನಲ್ಲಿ ಮೊನ್ನೆ ರಾಮ ನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೂಡ ಅಂಥದ್ದೇ ಘಟನೆ ವರದಿಯಾಗಿದೆ.

Read More »

ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿ: ಕಂಬಕ್ಕೆ ತಾಯಿ ಕಟ್ಟಿಹಾಕಿ ಥಳಿತ, ಪ್ರಕರಣ ದಾಖಲು!

ಹಾವೇರಿ: ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿಯಾದನೆಂಬ ಕಾರಣಕ್ಕೇ ಆತನ ತಾಯಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಧಾರುಣ ಘಟನೆ ಹಾವೇರಿಯ ರಾಣೆಬೆನ್ನೂರಿನಲ್ಲಿ ಶುಕ್ರವಾರ ವರದಿಯಾಗಿದೆ. ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಹಾವೇರಿ ಜಿಲ್ಲೆಯಿಂದಲೂ ಅಂತಹದ್ದೇ ಅಮಾನುಷ ಘಟನೆ ರಾಣೆಬೆನ್ನೂರಿನಲ್ಲಿ ವರದಿಯಾಗಿದೆ. ರಾಣೆಬೆನ್ನೂರು ತಾಲೂಕಿನ ಅರೇ ಮಲ್ಲಾಪುರ ಗ್ರಾಮದಲ್ಲಿ ಪ್ರೀತಿಸಿದ ಅನ್ಯ ಜಾತಿಯ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ಯುವಕನ ತಾಯಿ‌ಯನ್ನ ವಿದ್ಯುತ್ …

Read More »

ಅಶ್ಲೀಲ ವಿಡಿಯೋ ಪ್ರಕರಣ : ಭವಾನಿ ರೇವಣ್ಣ ಸಂಬಂಧಿಗೆ 14 ದಿನ ನ್ಯಾಯಾಂಗ ಬಂಧನ

ಮೈಸೂರು : ರಾಜ್ಯದಲ್ಲಿ ಅಲ್ಲಿದೆ ಇಡೀ ದೇಶದಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಬಾರಿ ಸಂಚಲನ ಮೂಡಿಸಿದೆ. ಇದೀಗ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಸಂಬಂಧಿಯಾದ ಸತೀಶ್ ಬಾಬು ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದ್ದು, ಅದರಂತೆ ಸತೀಶ್ ಬಾಬುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋದಲ್ಲಿರುವ ಮಹಿಳೆಯ ಮಗ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಎಚ್ ಡಿ ರೇವಣ್ಣ ಹಾಗೂ …

Read More »

ಚುನಾವಣೆಗೂ ಮುನ್ನ ಬಿಜೆಪಿ ಸಂಸದ ಉಮೇಶ್ ಜಾಧವ್ ಗೆ ‘ಕೈ’ ಶಾಕ್

ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಗೆ ಸಿದ್ಧತೆಗಳು ನಡೆದಿದ್ದು, ಮೇ 7 ರಂದು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಪೈಕಿ ಕಲಬುರಗಿ ಲೋಕಸಭಾ ಕ್ಷೇತ್ರವೂ ಒಂದು. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಉಮೇಶ್ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಕಣಕ್ಕಿಳಿದಿದ್ದಾರೆ .ಸಹಜವಾಗಿಯೇ ಇದು ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದ್ದು, ಮತದಾನಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರಿಗೆ …

Read More »