Breaking News

Daily Archives: ಮಾರ್ಚ್ 23, 2024

ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ

ಬೆಂಗಳೂರು: ನವರಸ ನಾಯಕ, ರಾಜ್ಯಸಭಾ ಸದಸ್ಯ ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ ಎಂದು ಹೇಳಬಹುದಾಗಿದೆ. ಮಾರ್ಚ್​ 17ರಂದು ಆಪ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ 61ನೇ ಜನುಮದಿನವನ್ನು ಆಚರಿಸಿಕೊಂಡ ನಟ ಜಗ್ಗೇಶ್​ಗೆ ಇದೀಗ ವಿವಾಹ ವಾರ್ಷಿಕೋತ್ಸವದ ದಿನವನ್ನೂ ಸಂಭ್ರಮಿಸಿದ್ದಾರೆ.ಪತ್ನಿ ಪರಿಮಳ ಜತೆಗಿನ 40 ವರ್ಷದ ಪ್ರಯಾಣವನ್ನು ನೆನೆಪು ಮಾಡಿಕೊಂಡಿದ್ದಾರೆ. 1982ರ ಕಾಲಘಟ್ಟಕ್ಕೆ ಮತ್ತೆ ಜಾರಿದ್ದಾರೆ.   ಕನ್ನಡ ಚಿತ್ರರಂಗದ ತಾರಾ ಜೋಡಿಗಳಲ್ಲಿ ಹಲವರು ಲವ್ ಮಾಡಿ ಮದುವೆ ಆಗಿದ್ದಾರೆ. ನಟ …

Read More »

ದಾಖಲೆ ಮಟ್ಟಕ್ಕೆ ಮಾರಾಟವಾದ ಬೆಳಗಾವಿ ರೈತ ಬೆಳೆದ ಅರಿಶಿಣ

ಬೆಳಗಾವಿ, ಮಾರ್ಚ್ 22: ಈ ಬಾರಿ ರಾಜ್ಯದಲ್ಲಿ ಎದುರಾದ ಬರಗಾಲ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಬೆಳೆಗೆ ನೀರಿಲ್ಲ, ಏನೇ ಮಾಡಿದರು ಉತ್ತಮ ಗುಣಮಟ್ಟದ ಬೆಳೆ ಸಿಗುತ್ತಿಲ್ಲ, ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಈ ಎಲ್ಲಾ ಕಾರಣಗಳಿಂದ ರೈತರು ಹೈರಾಣಾಗಿ ಹೋಗಿದ್ದಾರೆ.ಆದರೆ ಈ ಎಲ್ಲಾ ಗೋಳಾಟಗಳ ನಡುವೆ ಇಲ್ಲೊಬ್ಬ ರೈತ ತಾವು ಬೆಳೆದ ಬೆಳೆಗೆ ನಿರೀಕ್ಷೆಗೂ ಮೀರಿದ ಲಾಭ ಗಳಿಸಿ ನೆಮ್ಮದಿಯ ನಗು ಬೀರಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ …

Read More »

ಬಿಸಿಲ ತಾಪಕ್ಕೆ ಹೈರಾಣಾದ ಜನ

ಸೊರಬ: ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಜನರು ಬಿಸಿಲಿಗೆ ಹೈರಾಣಾಗಿದ್ದಾರೆ. ಯುಗಾದಿಗೂ ಮುನ್ನವೇ ಸೂರ್ಯನ ಪ್ರಖರತೆ ಹೆಚ್ಚುತ್ತಿದೆ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ತಾಲ್ಲೂಕಿನ ‌ಬಹುತೇಕ ಕೆರೆಕಟ್ಟೆಗಳ ಒಡಲು ಬರಿದಾಗಿವೆ.ಕೆಲವೊಂದು ಕೆರೆಗಳಲ್ಲಿ ‌ನೀರು ಬತ್ತುವ ಹಂತ ತಲುಪಿವೆ. ರೈತರು ದನ‌ ಹಾಗೂ ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಹೊಡೆದುಕೊಂಡು ಹೋದರೆ ಕೆಸರುಯುಕ್ತ ನೀರನ್ನು ಕುಡಿಯಲು ದನಕರುಗಳು ಹಿಂದೇಟು ಹಾಕುತ್ತಿವೆ. ರೈತರ ಹೊಲ, ಗದ್ದೆಗಳಲ್ಲಿನ ಕೊಳವೆಬಾವಿಗಳಲ್ಲಿ ಗಣನೀಯವಾಗಿ …

Read More »