Breaking News

Monthly Archives: ಫೆಬ್ರವರಿ 2024

ಬರ ಪೀಡಿತ ಪ್ರತಿ ತಾಲೂಕುಗಳಲ್ಲಿ ಮೇವು ಬ್ಯಾಂಕ್

ಧಾರವಾಡ, ಫೆಬ್ರವರಿ 19; ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜನರು ಮಾತ್ರವಲ್ಲ ಜಾನುವಾರುಗಳು ಸಹ ಸಂಕಷ್ಟಕ್ಕೆ ಸಿಲುಕಿವೆ. ಧಾರವಾಡ ಜಿಲ್ಲೆಯಲ್ಲಿ ಬರಪೀಡಿತ ತಾಲೂಕಿಗೊಂದು ಮೇವು ಬ್ಯಾಂಕ್ ಆರಂಭ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಸೋಮವಾರ ಮಾದನಭಾವಿ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿದರು. ಜಿಲ್ಲೆಯಲ್ಲಿ 1,38,492 ಟನ್ ಮೇವು ದಾಸ್ತಾನು ಲಭ್ಯವಿದೆ. ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಜನರ ಬೇಡಿಕೆಗೆ ಅನುಗುಣವಾಗಿ …

Read More »

ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ‘ಸೆಲ್ಫಿ ಪಾಯಿಂಟ್

ಬೆಂಗಳೂರು, ಫೆಬ್ರವರಿ 19: ಬೆಂಗಳೂರು ನಗರಾದ್ಯಂತ 73.75 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಖುಷಿ ಹೆಚ್ಚಿಸುವ ಕೆಲಸ ಮಾಡಿದೆ. ಅದೇನೆಂದರೆ ಮೆಟ್ರೋ ನಿಲ್ದಾಣ, ರೈಲು ಸೇರಿದಂತೆ ವಿವಿಧೆಡೆ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯಾಣಿಕರಿಗೆಂದೇ ‘ಸೆಲ್ಫಿ ಪಾಯಿಂಟ್‌’ (Metro Selfie Points) ಅನ್ನು ನಿರ್ಮಿಸಿದೆ. ಬೆಂಗಳೂರು …

Read More »

ಗೃಹಲಕ್ಷ್ಮಿ ಹಣ ಬರುತ್ತೆ ಎಂದು ಜೀವ ಬಿಟ್ಟ ಮಗ: ತಾಯಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಳಗಾವಿ ಜಿಲ್ಲೆಯ ಸವದತ್ತಿಯ ಮರಕುಂಬಿ ಗ್ರಾಮದಲ್ಲಿ ಅನಾರೋಗ್ಯದಿಂದ ವಿಶ್ವನಾಥ ಗುರಕ್ಕನವರ (34) ಸಾವನ್ನಪ್ಪಿದ್ದು, ಸಾಯುವ ಮುನ್ನ ತಾಯಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಚಿಂತೆ ಮಾಡಬೇಡ ಎಂದು ಹೇಳಿದ್ದ. ಮಗನ ಚಿತೆಗೆ ಅಗ್ನಿ ಸ್ಪರ್ಶ ಮಾಡುವಾಗ ಮಗ ಹೇಳಿದ್ದ ಮಾತುಗಳನ್ನು ತಾಯಿ ನೀಲವ್ವ ನೆನಪು ಮಾಡಿಕೊಂಡಿದ್ದರು.ಮಗನ ಸಾವಿನ ನೋವಿನ ನಡುವೆಯೂ ತಾಯಿ ನೀಲವ್ವ ಆಡಿದ್ದ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ …

Read More »

ದಿ.ಜಯಲಲಿತ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ: ಒಡವೆ ಹಿಂದುರುಗಿಸಲು ಕೋರ್ಟ್ ದಿನಾಂಕ ಫಿಕ್ಸ್

ಬೆಂಗಳೂರು: ದಿವಂಗತ ಜಯಲಲಿತಾ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಕರ್ನಾಟಕಕ ಜಪ್ತಿ ಮಾಡಿದ್ದಂತ ಒಡವೆಗಳನ್ನು ತಮಿಳುನಾಡಿಗೆ ಹಿಂದಿರುಗಿಸಲು ಕೋರ್ಟ್ ದಿನಾಂಕ ಫಿಕ್ಸ್ ಮಾಡಿದೆ. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದಂತ ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದಂತ ಮೋಹನ್ ಅವರು, ದಿವಂಗತ ಜಯಲಲಿತಾ ಅವರ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ವಶಪಡಿಸಿಕೊಂಡಿರುವಂತ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸಲು ದಿನಾಂಕ ನಿಗದಿ ಪಡಿಸಲಾಗಿದೆ. ಮಾರ್ಚ್.6 ಮತ್ತು …

Read More »

ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ

ಗೋಕಾಕ- ಇಲ್ಲಿಯ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ “ಅ” ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಬಾಗಿ, ಗೊಡಚಿನಮಲ್ಕಿಯ ಮಹಾಂತೇಶ ಬಾಳಪ್ಪ ಅವರಗೋಳ, ಅರಭಾವಿಯ ಮುತ್ತೆಪ್ಪ ಸಣ್ಣಧರೆಪ್ಪ ಜಲ್ಲಿ, ತುಕ್ಕಾನಟ್ಟಿಯ ಸಿದ್ದಪ್ಪ ಶಿವಮೂರ್ತಿ ಹಮ್ಮನವರ, ಸುಭಾಸ ಗಿರೆಪ್ಪ ಢವಳೇಶ್ವರ, …

Read More »

ಶತಮಾನಗಳೇ ಕಳೆದರೂ ಗುಪ್ತಲಿಂಗ ಬೆಟ್ಟದಲ್ಲಿ ನೀರಿನ ಝರಿ ಬತ್ತಿಲ್ಲ

ಗುಹೆಯಲ್ಲಿರುವ ಶಿವಲಿಂಗದ ಮೂಲಕವೂ ನೀರು ಹರಿದು ಬರುವುದು ಇಲ್ಲಿನ ವಿಶೇಷವಾಗಿದೆ. ಇಲ್ಲಿನ ನೀರಿನ ಝರಿ ದಿನದ 24 ಗಂಟೆಯೂ ನೀರು ಧುಮ್ಮಿಕ್ಕುತ್ತದೆ. ಇಲ್ಲಿ ಬೆಟ್ಟದ ಅಂಚಿನಿಂದ ಬರುವ ನೀರು ನಂದಿ ಬಾಯಿಯಿಂದ ಕಿರು ಕಲ್ಯಾಣಿಗೆ ಬಂದು ಬೀಳುತ್ತದೆ. ನೀರಿನ ಹರಿವು ಸದಾ ಒಂದೇ ಸಮನಾಗಿರುತ್ತದೆ.ಬೇಸಿಗೆ ಬಂದರೆ ಸಾಕು ಆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತದೆ. ಬಾವಿ, ಬೋರ್ ವೆಲ್ ನಲ್ಲಿಯೂ ನೀರು ಖಾಲಿಯಾಗಿ ಜನ ಪ್ರಾಣಿ ಪಕ್ಷಿಗಳು ನೀರಿಗಾಗಿ …

Read More »

ತೋಂಟದಾರ್ಯ ಮಠ v/s ಶಿರಹಟ್ಟಿ ಫಕೀರೇಶ್ವರ ಮಠ; ಸಿದ್ದಲಿಂಗ ಸ್ವಾಮೀಜಿ ಜಯಂತಿಯಂದು ಕರಾಳ ದಿನ ಆಚರಿಸುವ ಎಚ್ಚರಿಕೆ ಕೊಟ್ಟ ಫಕೀರ ದಿಂಗಾಲೇಶ್ವರ ಶ್ರೀ

ಗದಗ, : ಗದಗ ಜಿಲ್ಲೆಯ ಎರಡು ಪ್ರಮುಖ ಮಠಗಳ ನಡುವೆ ಸಂಘರ್ಷ ಉಂಟಾಗಿದೆ. ಗದಗ ತೋಂಟದಾರ್ಯ ಮಠ (Tontadarya Matha) ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ (Shirahatti Fakkireshwar Mutt) ನಡುವೆ ಸಂಘರ್ಷ ಉಂಟಾಗಿದ್ದು ಒಂದು ಮಠದ ಆಚರಣೆ ವಿರುದ್ಧ ಮತ್ತೊಂದು ಮಠ ವಿರೋಧ ವ್ಯಕ್ತಪಡಿಸಿದೆ. ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿಯನ್ನ ಭಾವೈಕ್ಯತಾ ದಿನವನ್ನಾಗಿ ಆಚರಿಸುತ್ತಿರುವುದಕ್ಕೆ ಶುರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಗದಗದಲ್ಲಿ ಸುದ್ಧಿಗೋಷ್ಠಿಯಲ್ಲಿ …

Read More »

ಚಿತಾಗಾರ 10 ದಿನಗಳ ಕಾಲ ಬಂದ್​

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ಫೆಬ್ರವರಿ 20 ರಿಂದ ಫೆಬ್ರವರಿ 29ರ ವರೆಗೆ 10 ದಿನಗಳ ಕಾಲ ಬಂದ್​ ಇರಲಿದೆ.ಬೆಂಗಳೂರು, ಫೆಬ್ರವರಿ 19: ತುರ್ತು ನಿರ್ವಹಣೆ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ( Rajrajeshwari Nagar ) ವಲಯ ವ್ಯಾಪ್ತಿಯಲ್ಲಿರುವ ಸುಮನಹಳ್ಳಿ ವಿದ್ಯುತ್​ ಚಿತಾಗಾರ (Sumanahalli Electric Chitagar) ಮಂಗಳವಾರ “ಫೆಬ್ರವರಿ 20 ರಿಂದ ಫೆಬ್ರವರಿ 29ರ ವರೆಗೆ” 10 ದಿನಗಳ ಕಾಲ ಬಂದ್​ ಇರಲಿದೆ. ಸುಮನಹಳ್ಳಿ ಚಿತಾಗಾರ …

Read More »

ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಗೊತ್ತಿದೆ: ಡಿಕೆ

ಬೆಂಗಳೂರು, ಫೆ.19:ರಾಜ್ಯಸಭೆ ಚುನಾವಣೆಗೆ(Rajya Sabha Election) ಬಿಜೆಪಿ, ಜೆಡಿಎಸ್ ಮೈತ್ರಿ 5ನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ (Congress) ಪಾಳೆಯಕ್ಕೆ ತಲೆಬಿಸಿ ಉಂಟುಮಾಡಿದೆ. ಅಡ್ಡ ಮತದಾನದ ಭೀತಿಯೂ ಎದುರಾಗಿದೆ. ಆ ಮೂಲಕ ಕಳೆದ ಎರಡೂ ರಾಜ್ಯಸಭಾ ಸೋಲಿನ ಸೇಡನ್ನು ಈ ಚುನಾವಣೆಯಲ್ಲಿ ತೀರಿಸಿಕೊಳ್ಳಲು ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮುಂದಾಗಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್ (DK Shivakumar), ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಗೊತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. …

Read More »

ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟ ಅಧಿಕಾರಿ ಕೊನೆಗೂ ಅಮಾನತು,

ಶಿವಮೊಗ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಬಡ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಸೌಲಭ್ಯಗಳನ್ನು ಉಪನಿರ್ದೇಶಕ ಗೋಪಿನಾಥ್ ಇಬ್ಬರು ಮಹಿಳೆಯರೊಂದಿಗೆ ಸೇರಿಕೊಂಡು ಭಾರೀ ಭ್ರಷ್ಟಾಚಾರವೆಸಗಿದ್ದಾನೆ. ಸದ್ಯಕ್ಕೆ ಒಂದೆರಡು ಪ್ರಕರಣಗಳಲ್ಲಿ ಮಾತ್ರವೇ ಲಕ್ಷಾಂತರ ರೂಪಾಯಿ ಅವ್ಯವಹಾರ ಬಯಲು ಆಗಿದೆ. ಇನ್ನೂ ಸಮಗ್ರ ತನಿಖೆ ಆದ್ರೆ ಗೋಪಿನಾಥನ ಕರ್ಮಕಾಂಡ ಮತ್ತಷ್ಟು ಬಯಲಿಗೆ ಬೀಳುವುದು ಗ್ಯಾರಂಟಿ.ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಕಳೆದ ಕೆಲವು ವರ್ಷಗಳಿಂದ ಮಾಡಿರುವ ಗೋಲ್ ಮಾಲ್ ಕೊನೆಗೂ ಬಯಲಾಗಿದೆ. ಬಿಸಿಎಂ …

Read More »