Breaking News

Monthly Archives: ಫೆಬ್ರವರಿ 2024

ನಕಲಿ ಛಾಪಾ ಕಾಗದ ಬಳಸಿ ಭೂ ಕಬಳಿಕೆ

ಬೆಳಗಾವಿ, ಫೆಬ್ರವರಿ 21: ಕರೀಮ್ ಲಾಲ್ ತೆಲಗಿ ನಕಲಿ ಛಾಪಾ ಕಾಗದ ಹಗರಣ ಬಳಿಕ, ಬೆಳಗಾವಿಯಲ್ಲಿ (Belagavi) ಮತ್ತೊಂದು ನಕಲಿ ಬಾಂಡ್ (Fake Bond) ತಯಾರಿಸಿ ವಂಚಿಸುವ ಗ್ಯಾಂಗ್ ಆಕ್ಟೀವ್ ಆಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ​ನಕಲಿ ಛಾಪಾ ಕಾಗದದ ಮೂಲಕ ದಾಖಲೆಗಳನ್ನು ಸೃಷ್ಟಿ ಅಕ್ರಮವಾಗಿ ಭೂಮಿಯನ್ನು ಕಬಳಿಕೆ ಮಾಡಿಕೊಂಡ ದಂಧೆ ಬೆಳಗಾವಿಯಲ್ಲಿ ವರದಿಯಾಗಿದೆ. ಯರಗಟ್ಟಿ (Yaragatti) ತಾಲೂಕಿನ‌ ಮಾಡಮಗೇರಿ ಗ್ರಾಮ ‌ಪಂ‌ಚಾಯಿತಿ ವ್ಯಾಪ್ತಿಯಲ್ಲಿ ಅಮರೇಶ ಹೊಸಮನಿ ಎಂಬುವರಿಗೆ ಸೇರಿದ ಒಟ್ಟು …

Read More »

ಟಿವಿ9 ಮರಾಠಿ ವಾಹಿನಿಯ ಮುಖ್ಯಸ್ಥ ಅಂತಾ ಹೇಳಿಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಅಡ್ಡಾಡುತ್ತಿದ್ದ ರಮಜಾನ್ ಸುಭಾನ್ ಮುಜಾವರ್ ಎಂಬ ವ್ಯಕ್ತಿಯ ವಿರುದ್ಧ ಎಫ್​ಐಆರ್​​ ದಾಖಲಾ

ಬೆಳಗಾವಿ, ಫೆಬ್ರವರಿ 20: ತಾನು ಟಿವಿ9 ಮರಾಠಿ ವಾಹಿನಿಯ ಮುಖ್ಯಸ್ಥ ಅಂತಾ ಹೇಳಿಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಅಡ್ಡಾಡುತ್ತಿದ್ದ ರಮಜಾನ್ ಸುಭಾನ್ ಮುಜಾವರ್ ಎಂಬ ವ್ಯಕ್ತಿಯ ವಿರುದ್ಧ ಎಫ್​ಐಆರ್​​ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.   ಅಥಣಿ ತಾಲೂಕಿನಲ್ಲಿ ಕೆಲ ದಿನಗಳಿಂದ ಮಹಾರಾಷ್ಟ್ರ ಪಶ್ಚಿಮ ಭಾಗದ ಮರಾಠಿ ವಾಹಿನಿ ಮುಖ್ಯಸ್ಥ ಅಂತಾ ರಮಜಾನ್ ಹೇಳಿಕೊಂಡು ಓಡಾಡುತ್ತಿದ್ದ. ಇದನ್ನ ನಮ್ಮ ಬೆಳಗಾವಿ ಪ್ರತಿನಿಧಿ ಹಿರಿಯ ವರದಿಗಾರ ಸಹದೇವ ಮಾನೆ ಗಂಭೀರವಾಗಿ ಪರಿಗಣಿಸಿದ್ದರು. …

Read More »

ತಗಡು’, ‘ಗುಮ್ಮಿಸ್ಕೋತೀಯ’ ಹೇಳಿಕೆ: ದರ್ಶನ್ ವಿರುದ್ಧ ದೂರು

ತೂಗುದೀಪ (Darshan) ಹಾಗೂಉಮಾಪತಿ ಶ್ರೀನಿವಾಸ್(Umapathy Srinivas) ನಡುವೆ ಫೈಟ್ ತುಸು ಜೋರಾಗಿಯೇ ಸಾಗುತ್ತಿದೆ. ‘ಕಾಟೇರ’ ಸಿನಿಮಾದ 50 ದಿನದ ಕಾರ್ಯಕ್ರಮದಲ್ಲಿ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ತುಸು ಖಡಕ್ ಆಗಿ ಕಿಡಿ ಕಾರಿದ್ದರು. ‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದು ಎಂದು ಉಮಾಪತಿ ಶ್ರೀಣಿವಾಸ್ ಹೇಳಿಕೊಂಡಿದ್ದರು. ಇದು ದರ್ಶನ್ ಸಿಟ್ಟಿಗೆ ಕಾರಣವಾಗಿತ್ತು, ನಿನ್ನೆ (ಫೆಬ್ರವರಿ 20) ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ‘ತಗಡು’, ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೊಳ್ತೀಯ’ …

Read More »

ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಮನನೊಂದು ವಿಷ ಕುಡಿದ ಯುವಕ!

ಶಿವಮೊಗ್ಗ: ಕೆಲಸಕ್ಕೆ (Job) ಹೋಗು ಎಂದಿದ್ದಕ್ಕೆ ಮನನೊಂದ ಯುವಕನೊಬ್ಬ (Youth) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ನಡೆದಿದೆ. ಸಾಗರ್ (21) ಆತ್ಮಹತ್ಯೆಗೆ ಶರಣಾದ ಯುವಕ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನ ಹಳೆ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮನೆಯವರು ಸಾಗರ್‌ ಬಳಿ ಕೆಲಸಕ್ಕೆ ಹೋಗು ಎಂದು ಹೇಳಿದ್ದಾರೆ. ಇದರಿಂದಾಗಿ ಮನನೊಂದ ಯುವಕ ಫೆ.19ರಂದು ಜ್ಯೂಸ್‌ಗೆ ಇಲಿ ಪಾಷಾಣ ಬೆರೆಸಿಕೊಂಡು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿದ …

Read More »

ಕುಡುಕನನ್ನು ಥಳಿಸಿ ನಾಯಿಗೂಡಿನಲ್ಲಿ ಕೂಡಿಹಾಕಿದ ಬಾರ್ ಸಿಬ್ಬಂದಿ!

ವಿಜಯಪುರ: ನಾಯಿ ಕದಿಯಲು ಬಂದಿದ್ದಾನೆ ಎಂದು ಭಾವಿಸಿ ಪಾನಮತ್ತ ವ್ಯಕ್ತಿಯನ್ನು ಅದೇ ನಾಯಿಯ ಗೂಡಿನಲ್ಲಿ ಕೂಡಿ ಹಾಕಿದ್ದು ಮಾತ್ರವಲ್ಲದೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವರದಿಗಳ ಪ್ರಕಾರ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ್‌ ಬಾರ್‌ನ ಸಿಬ್ಬಂದಿ ಪಾನಮತ್ತ ವ್ಯಕ್ತಿ ಸೋಮು ಬಾರ್‌ನ ಸಾಕುನಾಯಿಯನ್ನು ಕದಿಯಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿ, ಆತನನ್ನು ಅದೇ ನಾಯಿಯ ಗೂಡಿನಲ್ಲಿ ಕೂಡಿ ಹಾಕಿದ್ದಾನೆ. ಮಾತ್ರವಲ್ಲದೇ ಆತನಿಗೆ ಅಮಾನುಷವಾಗಿ ಥಳಿಸಿದ್ದು, ಹಲವು ಗಂಟೆಗಳ ಕಾಲ …

Read More »

ಸಚಿವ ಸತೀಶ್ ಜಾರಕಿಹೊಳಿ ಅವರ ಆದೇಶ ಮೇರೆಗೆ ಜನ, ಜಾನುವಾರುಗಳಿಗೆ ಅನುಕೂಲಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಕುಡಿಯುವ ನೀರು ಬಿಡುಗಡೆ.

ಸಚಿವ ಸತೀಶ್ ಜಾರಕಿಹೊಳಿ ಅವರ ಆದೇಶ ಮೇರೆಗೆ ಜನ, ಜಾನುವಾರುಗಳಿಗೆ ಅನುಕೂಲಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಕುಡಿಯುವ ನೀರು ಬಿಡುಗಡೆ. ಗೋಕಾಕ : ಪ್ರಸ್ತುತ ಬರ ಹಾಗೂ ತೀವ್ರ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು, ಆದರಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳೊಂದಿಗೆ ಕರೆ ಮಾಡಿ ಮಾತನಾಡಿ ಜನ, ಜಾನುವಾರುಗಳಿಗೆ ಅನುಕೂಲಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಕುಡಿಯುವ ನೀರು …

Read More »

ಸಾರ್ವಜನಿಕ ಕ್ಷೇತ್ರದಲ್ಲಿರುವುದರಿಂದ ಕುಟುಂಬಕ್ಕೆ ಸಮಯ ಕೊಟ್ಟಿದ್ದು, ಬಹಳ ಕಡಿಮೆ:C.M.

ಬೆಂಗಳೂರು: ಸಾರ್ವಜನಿಕ ಕ್ಷೇತ್ರದಲ್ಲಿರುವುದರಿಂದ ಕುಟುಂಬಕ್ಕೆ ಸಮಯ ಕೊಟ್ಟಿದ್ದು, ಬಹಳ ಕಡಿಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು. ಕರ್ನಾಟಕ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಎಂ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕ ವಿಚಾರ ಹಾಗೂ ಕುಟುಂಬದ ಕುರಿತು ಪ್ರಶ್ನಿಸುತ್ತಾರೆ.   ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ಸಮಯ ಸಿಗಲ್ಲ. ಇದರಿಂದ ಕುಟುಂಬಕ್ಕೆ ಸಮಯ ಕೊಟ್ಟಿದ್ದು, ಬಹಳ ಕಡಿಮೆ. …

Read More »

ಮತ್ತೆ ಶುರುವಾಯ್ತು ರೈತರ ದೆಹಲಿ ಚಲೋ ಯಾತ್ರೆ- ಪಂಜಾಬ್‌ ಗಡಿಯಲ್ಲಿ 14 ಸಾವಿರ ಮಂದಿ ಜಮಾವಣೆ!

ನವದೆಹಲಿ : ಕೇಂದ್ರ ಬಿಜೆಪಿ (BJP) ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪಾದಯಾತ್ರೆ (Farmers protest) ಬುಧವಾರದಿಂದ ತೀವ್ರಸ್ವರೂಪ ಪಡೆಯುವ ಸಾಧ್ಯತೆಯಿದೆ. ಪಂಜಾಬ್‌ – ಹರಿಯಾಣಾ ಗಡಿಯಲ್ಲಿ (Punjab-Haryana border) 14,000 ಕ್ಕೂ ಹೆಚ್ಚು ಮಂದಿ ರೈತರು ಇಂದು ಒಗ್ಗೂಡುತ್ತಿದ್ದಾರೆ. ಜೊತೆಗೆ 1200 ಟ್ರಾಕ್ಟರ್ ಟ್ರಾಲಿಗಳು, 300 ಕಾರ್‌ ಗಳು ಹಾಗೂ 10 ಮಿನಿ ಬಸ್‌ ಗಳೂ ಸಹ ಇಂದು ದೆಹಲಿ ಚಲೋ(Delhi Chalo) ಯಾತ್ರೆಗೆ ಸಜ್ಜಾಗಿವೆ. …

Read More »

ನಗರದ ಶಹರ ಪೋಲಿಸ್ ಠಾಣೆ ಆವರಣದಲ್ಲಿ ಪಿಎಸ್ಐ ಕೆ ವಾಲಿಕಾರ ಅವರು ಶಾಂತಿ ಸಭೆ

ಶಾಂತಿ ಸಭೆ ; ಗೋಕಾಕದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ : PSI ಕೆ ವಾಲಿಕಾರ ಗೋಕಾಕ : ನಗರದ ಶಹರ ಪೋಲಿಸ್ ಠಾಣೆ ಆವರಣದಲ್ಲಿ ಪಿಎಸ್ಐ ಕೆ ವಾಲಿಕಾರ ಅವರು ಶಾಂತಿ ಸಭೆ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಪ್ರಚೋದನಕಾರಿ ಅಥವಾ ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕುವುದು, ಲೈಕ್ ಮಾಡುವುದು ಮತ್ತು ಶೇರ್ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು …

Read More »

ಪ್ರವಾಸಿ ತಾಣ ಕೆಮ್ಮಣ್ಣು ಗುಂಡಿ ಗುಡ್ಡದಲ್ಲಿ ಕಾಡ್ಗಿಚ್ಚು

ಚಿಕ್ಕಮಗಳೂರು, ಫೆಬ್ರವರಿ 20: ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪಶ್ಚಿಮಘಟ್ಟ ಭಾಗ ಹಾಗೂ ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚು ಬೀಳಲು ಆರಂಭವಾಗಿದೆ. ತರೀಕೆರೆ ತಾಲೂಕಿನ ಕೆಮ್ಮಣ್ಣು ಗುಂಡಿಯ (Kemmannu Gundi) ಗುಡ್ಡದಲ್ಲಿ ನಿನ್ನೆ (ಸೋಮವಾರ ಫೆ.19)ರ ರಾತ್ರಿ ಬೆಂಕಿ ಹೊತ್ತಿ ಉರಿದಿದೆ. ಕಾಡ್ಗಿಚ್ಚಿಗೆ ಶೋಲಾರಣ್ಯ ಗುಡ್ಡದಲ್ಲಿ ನೂರಾರು ಎಕರೆ ಪ್ರದೇಶ ನಾಶವಾಗಿದೆ. ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. …

Read More »