ಬೆಂಗಳೂರು : ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು …
Read More »Yearly Archives: 2023
ತಾಯಿ, ಮಗು ಸಾವು ಪ್ರಕರಣ: ಸಚಿವ ಜಾರ್ಜ್ ರಾಜೀನಾಮೆಗೆ ಆರ್ ಅಶೋಕ್ ಆಗ್ರಹ
ಬೆಂಗಳೂರು : ನಗರದಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬೂಬುಗಳನ್ನು ಹೇಳುವುದನ್ನು ಬಿಟ್ಟು ನೈತಿಕ ಹೊಣೆ ಹೊತ್ತು ಇಂಧನ ಸಚಿವ ಕೆ ಜೆ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಈ ಕುರಿತು ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವೈರ್ಗಳಿಗೆ ಇಲಿ ಕಚ್ಚಿ ಘಟನೆ ಸಂಭವಿಸಿದೆ ಎಂಬ ನೆಪ ಹೇಳಿಕೊಂಡು ತಿಪ್ಪೆ ಸಾರಿಸುವ ಮಟ್ಟಕ್ಕೆ ಸಚಿವರು ಇಳಿದಿರುವುದು …
Read More »ಹಣಕಾಸಿನ ವಿಚಾರ: ವಿಜಯಪುರದಲ್ಲಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದ 12 ಜನ ಆರೋಪಿಗಳ ಬಂಧನ
ವಿಜಯಪುರ: ಹಣಕಾಸಿನ ವಿಚಾರದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗನ್ನು ಗೋಲಗುಂಬಜ್ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ”ಹಣಕಾಸಿನ ವ್ಯವಹಾರ ಹಿನ್ನೆಲೆ ಫೈರಿಂಗ್ ಮಾಡಿದ್ದ ರೌಡಿಶೀಟರ್ ಹೈದರ್ ಅಲಿ ನದಾಫ್ ಸೇರಿದಂತೆ 12 ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ನವೆಂಬರ್ 10ರಂದು ನಗರದ ಒಡ್ಡರ ಓಣಿಯಲ್ಲಿ ಸೋಹೆಲ್ ಕಕ್ಕಳಮೇಲಿ ಎಂಬವರ …
Read More »ಭಗವದ್ವೀತೆಯಿಂದ ಸಿಗುವ ಚಿತ್ ಸ್ವಾಸ್ಥ್ಯದ ಮೂಲಕ ಜಗತ್ತಿನ ಜಟಿಲ ಸಮಸ್ಯೆ ನಿವಾರಣೆ ಸಾಧ್ಯ’ :ಸ್ವರ್ಣವಲ್ಲಿ ಶ್ರೀ
ಬೆಳಗಾವಿ: ‘ಭಗವದ್ವೀತೆಯಿಂದ ಸಿಗುವ ಚಿತ್ ಸ್ವಾಸ್ಥ್ಯದ ಮೂಲಕ ಜಗತ್ತಿನ ಜಟಿಲ ಸಮಸ್ಯೆ ನಿವಾರಣೆ ಸಾಧ್ಯ’ ಎಂದು ಶಿರಸಿ ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು. ಇಲ್ಲಿನ ಸಂತ ಮೀರಾ ಶಾಲೆಯಲ್ಲಿ ಮಂಗಳವಾರ ರಾಜ್ಯಮಟ್ಟದ ಭವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾನಾಡಿದ ಅವರು,’ಸ್ವಚ್ಛ ಮನಸ್ಸಿನ ತಳಹದಿ ಮೇಲೆ ವ್ಯಕ್ತಿತ್ವ ವಿಕಸನ, ನೈತಿಕ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯ ಎಂಬ ನಾಲ್ಕು ಕಂಬಗಳನ್ನು ನೆಟ್ಟು ಭಾರತ ಎಂಬ ಮಹಲ್ …
Read More »ಬೈಲಹೊಂಗಲ | ಕಬ್ಬಿನ ಜಮೀನಿಗೆ ಬೆಂಕಿ; ₹12 ಲಕ್ಷ ಹಾನಿ
ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದಲ್ಲಿ ರೈತರೊಬ್ಬರ ಕಬ್ಬಿನ ಜಮೀನಿಗೆ ವಿದ್ಯುತ್ ತಗುಲಿ ಮಂಗಳವಾರ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾಗಿದೆ. ಗ್ರಾಮದ ರೈತ ಬಾಳಪ್ಪ ತುಕ್ಕನ್ನವರ ಅವರಿಗೆ ಸೇರಿದ ಸುಮಾರು ಆರು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬು ಕಟಾವಿಗೆ ಬಂದಿತ್ತು. ಕಬ್ಬಿನ ಬೆಳೆಗೆ ತಾಗಿಕೊಂಡು ವಿದ್ಯುತ್ ಪ್ರಸರಣದ ತಂತಿಗಳು ಜೋತು ಬಿದ್ದಿದ್ದವು. ಜೋತು ಬಿದ್ದ ವಿದ್ಯುತ್ ತಂತಿಗಳನ್ನು ತೆರುವುಗೊಳಿಸುವಂತೆ ರೈತರು ಸಂಬಂಧಿಸಿದ ಹೆಸ್ಕಾಂ ಇಲಾಖೆಗೆ ಸಾಕಷ್ಟು ಮನವಿ ಮಾಡಿದ್ದರು. …
Read More »ಮಗಳನ್ನು ಪ್ರೀತಿಸುವಂತೆ (Love) ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯ ಉಸಿರನ್ನ ಯುವತಿಯ ತಂದೆ ನಿಲ್ಲಿಸಿದ್ದಾರೆ.
ಬೆಂಗಳೂರು: ಮಗಳನ್ನು ಪ್ರೀತಿಸುವಂತೆ (Love) ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯ ಉಸಿರನ್ನ ಯುವತಿಯ ತಂದೆ ನಿಲ್ಲಿಸಿದ್ದಾರೆ. ಡೇವಿಡ್ ಕೊಲೆಯಾದ ಯುವಕ. ಮಂಜುನಾಥ್ ಎಂಬವರ ಮಗಳನ್ನು ಡೇವಿಡ್ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದೇ ವಿಚಾರವಾಗಿ ಒಂದೂವರೆ ವರ್ಷದ ಹಿಂದೆ ರಾಜಿ ಪಂಚಾಯ್ತಿಯೂ ನಡೆದಿತ್ತು. ಮಗಳ ತಂಟೆಗೆ ಬರದಂತೆ ಡೇವಿಡ್ಗೆ ಎಚ್ಚರಿಕೆ ನೀಡಲಾಗಿತ್ತು. ಆದ್ರೂ ಡೇವಿಡ್ ತನ್ನ ಚಾಳಿಯನ್ನು ನಿಲ್ಲಿಸಿರಲಿಲ್ಲ. ಮದುವೆ ಮಾಡಿಕೊಡಿ ಇಲ್ಲವಾದ್ರೆ ಖಾಸಗಿ ಫೋಟೋಗಳನ್ನು (Private Photo) ರಿವೀಲ್ ಮಾಡುತ್ತೀನಿ ಎಂದು ಬೆದರಿಕೆ …
Read More »ಮುಂಬೈ ಉಗ್ರರ ದಾಳಿಗೆ 15 ವರ್ಷ! ಎಲ್ಇಟಿಯನ್ನ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಇಸ್ರೇಲ್
ನವದೆಹಲಿ: ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ 26/11 (Mumbai 26/11 attack) ದಾಳಿ ನಡೆದು ಇಂದಿಗೆ 15 ವರ್ಷಗಳು ಕಳೆದಿವೆ. ಈ ಕರಾಳ ದಿನದ ಸಂದರ್ಭದಲ್ಲಿ ಇಸ್ರೇಲ್ ಸರ್ಕಾರ (Isreal Government) ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ಸ್ನೇಹಿ ರಾಷ್ಟ್ರಗಳಲ್ಲಿ ಒಂದಾಗಿರುವ ಇಸ್ರೇಲ್ ಅಧಿಕೃತವಾಗಿ ಲಷ್ಕರ್-ಎ-ತೈಬಾ (Lashkar-e-Taiba) ಸಂಘಟನೆಯನ್ನ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಮಂಗಳವಾರ ಹೇಳಿಕೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ. ಈಗಾಗಲೇ ಎಲ್ಇಟಿಯನ್ನ …
Read More »ಸಂಜು ವೆಡ್ಸ್ ಗೀತಾ-2 ಏಪ್ರಿಲ್ 1 ರಂದು ರಿಲೀಸ್;
ಸ್ಯಾಂಡಲ್‌ವುಡ್ ಸಂಜು ವೆಡ್ಸ್ ಗೀತಾ ಎರಡನೇ (Sanju Weds Geetha-2) ಭಾಗದ ಶೂಟಿಂಗ್ ಭರದಿಂದ ಸಾಗಿದೆ. ಕನಕಪುರ ರಸ್ತೆಯ ಫಾಮ್ ಹೌಸ್‌ನಲ್ಲಿ ಸಿನಿಮಾ ಶೂಟಿಂಗ್ (Cinema Shooting) ಬಲು ಜೋರಾಗಿಯೇ ನಡೆಯುತ್ತಿದೆ. ಸಿನಿಮಾದ ಮಹತ್ವದ ದೃಶ್ಯವನ್ನ ಇಲ್ಲಿ ತೆಗೆಯಲಾಗುತ್ತಿದೆ. ಇದರೊಟ್ಟಿಗೆ ಸಿನಿಮಾದ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ. ಸಿನಿಮಾ ಶೂಟಿಂಗ್ ಹಂತದಲ್ಲಿಯೇ ರಿಲೀಸ್ ದಿನವನ್ನ ಪ್ಲಾನ್ (Release Plan) ಮಾಡಲಾಗಿದೆ. ಇದರ ಬಗ್ಗೆ ನಿರ್ದೇಶಕ ನಾಗಶೇಖರ್ ಈಗಾಗಲೇ ಹೇಳಿಕೊಂಡಾಗಿದೆ. …
Read More »ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರ ಹೇಳಿಕೆ
ಮಂಗಳೂರು: ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರ ನೇಮಕ, ವಿಪಕ್ಷನಾಯಕನ ಆಯ್ಕೆ ನಡೆದಿರುವ ಬೆನ್ನಲ್ಲೇ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ನಲ್ಲಿ ಆಂತರಿಕ ಜಗಳ ತಾರಕ್ಕೇರಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹಾಗೂ ಸತೀಶ್ ಜಾರಕಿಹೊಳಿ ತಂಡ ಇಬ್ಭಾಗವಾಗುತ್ತಿದೆ. ಇದರ ಮಧ್ಯೆ ಮರಿ ಖರ್ಗೆ ಮುಖ್ಯಮಂತ್ರಿ ಹುದ್ದೆ ಬೇಡಿಕೆ ಇಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹಸ್ತದ ಒಳಗೆ ಹಸ್ತದ ಆಪರೇಷನ್ …
Read More »ವಿಜಯೇಂದ್ರ ಇನ್ನು ಮಗು, : ಚಲುವರಾಯಸ್ವಾಮಿ
ಮಂಡ್ಯ: “ರಾಜ್ಯದ 226 ತಾಲೂಕುಗಳನ್ನು ಬರಗಾಲಪೀಡಿತ ತಾಲೂಕುಗಳು ಎಂದು ಘೋಷಿಸಿದ್ದೇವೆ. ಈಗ ಹಂತ ಹಂತವಾಗಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಪರಿಹಾರ ಕೊಡುವ ಹಂತಕ್ಕೆ ಬಂದಿದ್ದೇವೆ” ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮಳವಳ್ಳಿಯ ಹಲಗೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರದ ಘೋಷಣೆಯನ್ನು ನಾವು ಕಾಯುತ್ತಿದ್ದೇವೆ. ನಂತರ ನಾವು ಕ್ಯಾಬಿನೆಟ್ನಲ್ಲಿ ರೈತರಿಗೆ ಏನು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ ” ಎಂದು ಹೇಳಿದರು. “ರಾಜ್ಯದ ಜನರಿಗೆ ವಿವಿಧ ರೀತಿಯಲ್ಲಿ ಪರಿಹಾರ ನೀಡಲು …
Read More »