ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಇಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲೆ ಪ್ರವಾಸ ಮಾಡಲಿದ್ದಾರೆ. ಇನ್ನೊಂದೆಡೆ, ಬರ ಬರಿಹಾರ ವಿಚಾರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಇಂದು ದೆಹಲಿಗೆ ತೆರಳಿ ಕೇಂದ್ರದ ನಾಯಕರನ್ನು ಭೇಟಿಯಾಗಲಿದ್ದಾರೆ. ಇದರೊಂದಿಗೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.Karnataka News Live : ನಿಗಮ ಮಂಡಳಿಗೆ ನೇಮಕಾತಿ ಪ್ರಕ್ರಿಯೆ ಸಂಬಂಧ …
Read More »Yearly Archives: 2023
ಜಾತಿಗಣತಿ ವರದಿ: ಬರೀ ಊಹೆಗಳ ಮೇಲೆ ಮಾತನಾಡುವುದು ಸರಿಯಲ್ಲ, ಬಿಜೆಪಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ- ಸಿದ್ದರಾಮಯ್ಯ
ಜಾತಿ ಜನಗಣತಿ ವರದಿ ಸಲ್ಲಿಸುವ ಮುನ್ನವೇ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ಅದನ್ನು ಬೇಡ ಎನ್ನುವವರಿಗೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಾಗಲಕೋಟೆ: ಜಾತಿ ಜನಗಣತಿ ವರದಿ ಸಲ್ಲಿಸುವ ಮುನ್ನವೇ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ಅದನ್ನು ಬೇಡ ಎನ್ನುವವರಿಗೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಾಗಲಕೋಟೆಯ ನವನಗರದ ಹೆಲಿಪ್ಯಾಡಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಸಲ್ಲಿಕೆಯಾದ ನಂತರ ನೋಡೋಣ. ಸುಮ್ಮನೆ ಊಹೆಗಳ ಮೇಲೆ …
Read More »ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿ ಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಸದಸ್ಯನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ: ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿ ಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಸದಸ್ಯನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಜಾಪರ್ ಸಂಶಿ ಬಂಧಿತ ಆರೋಪಿ. ದಾದಾಪೀರ್ ಲೋಹರ್ ಎಂಬವರಿಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಮನೆ ಮಂಜೂರಾಗಿತ್ತು. ಈ ಮನೆಗೆ ಜಿಪಿಎಸ್ ಮಾಡಿಸಲು ಮಹಮ್ಮದ್ ಜಾಪರ್ ಸಂಶಿ 40 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟದ್ದರು. 20 ಸಾವಿರ ರೂಪಾಯಿ ಲಂಚ …
Read More »ಟಿ20 ಕ್ರಿಕೆಟ್‌ನಿಂದ ದೂರ ಉಳಿದ ರೋಹಿತ್ ಶರ್ಮಾ?
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನವೇ ಅವರು ತಮ್ಮ ಭವಿಷ್ಯದ ಬಗ್ಗೆ ಚರ್ಚಿಸಿದ್ದರು ಎಂದು ತಿಳಿದುಬಂದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಚೇರಿ ಈ ಮಾಹಿತಿ ನೀಡಿದೆ. ನವೆಂಬರ್ 2022ರಲ್ಲಿ ಭಾರತ ಟಿ20 ವಿಶ್ವಕಪ್‌ನಲ್ಲಿ ಸೋತ ನಂತರ, ರೋಹಿತ್ ಟಿ20 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಅಂದಿನಿಂದ ಪಾಂಡ್ಯ …
Read More »ಪೊಲೀಸ್ ಇನ್ಸ್ಪೆಕ್ಟರ್ ಬ್ಯಾಂಕ್ ಖಾತೆಗೆ ಆನ್ಲೈನ್ ವಂಚಕರ ಕನ್ನ: ₹8.25 ಲಕ್ಷ ವರ್ಗಾವಣೆ
ಹುಬ್ಬಳ್ಳಿ: ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ಖಾತೆಗೆ ಆನ್ಲೈನ್ ವಂಚಕರು ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ದಯಾನಂದ ಶೇಗುಣಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 8.25 ಲಕ್ಷ ಹಣವನ್ನು ಅಪರಿಚಿತರು ವರ್ಗಾವಣೆ ಮಾಡಿಕೊಂಡಿದ್ದು, ಈ ಕುರಿತಂತೆ ಅವರು ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಯಾನಂದ ಯಾರೊಂದಿಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೂ ಅವರ ಹಣ ವರ್ಗಾವಣೆಯಾಗಿದೆ. ಬ್ಯಾಂಕಿನವರು ನೆಟ್ ಸೆಕ್ಯೂರಿಟಿ ಬಳಸದೆ ನಿಷ್ಕಾಳಜಿಯಿಂದಲೋ ಅಥವಾ …
Read More »ಲೋಕಸಭೆ ಚುನಾವಣೆ: ಎಲ್ಲರೂ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ- ರಮೇಶ್ ಜಾರಕಿಹೊಳಿ
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಎಲ್ಲರೂ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಭೇಟಿ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ನೋವು ಏನು ಅಂತ ಈಗ ಹೇಳೋದಕ್ಕೆ ಬರಲ್ಲ. ನಾವು ಇಬ್ಬರೂ ಸೇರಿ ಚರ್ಚೆ ಮಾಡಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಮಾಡಿದ ಚರ್ಚೆಯನ್ನು ಬಹಿರಂಗವಾಗಿ ಹೇಳಲ್ಲ. …
Read More »ಈ ಜೋಡಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳಿಸದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷಚೇತನ ನವಜೋಡಿ
ಹಾಸನ: ಈ ಜೋಡಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳಿಸದು. ಆದರೂ ತಮ್ಮ ತಮ್ಮ ನಡುವಿನ ಸನ್ನೆ ಮಾತುಗಳ ಮೂಲಕ, ನೀ ನನಗೆ ನಾ ನಿನಗೆ ಎಂಬಂತೆ ಹಸಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಶುರುವಿಟ್ಟಿದ್ದಾರೆ. ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಇಂತಹದ್ದೊಂದು ಅಪರೂಪದ ಮದುವೆ ನಡೆಯಿತು. ಬಾಳ್ಳುಪೇಟೆ ಗ್ರಾಮದ ಕೆಂಚಮ್ಮ- ಮಲ್ಲೇಗೌಡ ಸಮುದಾಯ ಭವನದಲ್ಲಿ ನಡೆದ ವಿಶೇಷ ಮದುವೆಯಲ್ಲಿ ಇವರು ಹೊಸ ಜೀವನಕ್ಕೆ ಕಾಲಿಟ್ಟರು. ಈ ಸನ್ನಿವೇಶಕ್ಕೆ ಎರಡೂ ಮನೆಯ ಕುಟುಂಬರಷ್ಟೇ ಅಲ್ಲದೇ, …
Read More »ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ಗೆ ಮಹಾರಾಷ್ಟ್ರದ ಸಚಿವ, ಸಂಸದರನ್ನು ರಾಜ್ಯಕ್ಕೆ ಕರೆತರುವ ಯೋಜನೆ ರೂಪಿಸಿದೆ :M.E.S.
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4, 2023ರಿಂದ ಡಿಸೆಂಬರ್ 15ರವರೆಗೆ 10 ದಿನಗಳ ಕಾಲ ನಡೆಯುವ ಚಳಿಗಾಲ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ ನಡೆಸಲು ಎಂಇಎಸ್ ನಿಂದ ಸಿದ್ಧತೆ ನಡೆಸಿದ್ದು, ಗಡಿ ಜಿಲ್ಲೆಯಲ್ಲಿ ಮತ್ತೆ ಭಾಷಾ ದ್ವೇಷದ ಕಿಡಿ ಹಚ್ಚಲು ಮುಂದಾಗಿದೆ. ಮರಾಠಾ ಮಂದಿರದಲ್ಲಿ ಸಭೆ ಸೇರಿ ಮಹಾಮೇಳಾವ್ ನಡೆಸಲು ಎಂಇಎಸ್ ತೀರ್ಮಾನ ಕೈಗೊಳ್ಳುವ ಮೂಲಕ ಗಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಮಹಾಮೇಳಾವ್ ಯಶಸ್ಸಿಗಾಗಿ ಬೆಳಗಾವಿ ಮತ್ತು ಖಾನಾಪುರದಲ್ಲಿ ಸಮಿತಿ ರಚನೆಗೆ …
Read More »ನಟನೆಯಲ್ಲಿ ಅಭಿ ಸಾಮರ್ಥ್ಯ ಬೇರೇನೇ ಇದೆ.
ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ನಾಯಕರಾಗಿರುವ “ಬ್ಯಾಡ್ ಮ್ಯಾನರ್ಸ್’ ಚಿತ್ರ ನ.24ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಹಿಟ್‌ಲಿಸ್ಟ್ ಸೇರಿದೆ. ನಿರ್ದೇಶಕ ಸೂರಿ ಹೊಸ ಲೋಕವನ್ನು ಕಟ್ಟಿಕೊಟ್ಟಿರೋದು ಕಾಣುತ್ತಿದೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಿರ್ದೇಶಕ ಸೂರಿ “ಬ್ಯಾಡ್ ಮ್ಯಾನರ್ಸ್’ ಬಗ್ಗೆ ಮಾತನಾಡಿದ್ದಾರೆ. ಬ್ಯಾಡ್ ಮ್ಯಾನರ್ ಆರಂಭ ಹೇಗೆ? ಅಭಿ ಮಾಡಿರುವ “ಅಮರ್’ ಸಿನಿಮಾ ನಂಗೆ ಇಷ್ಟವಾಗಿತ್ತು. ನಾನು ಆ ಸಿನ್ಮಾನ ಅಭಿ ಪೋರ್ಟ್‌ಪೋಲಿಯೋ ಥರಾನೇ ನೋಡಿದ್ದೆ. ತಡಮಾಡದೇ ದರ್ಶನ್ ಸರ್‌ಗೆ …
Read More »ಕರ್ತವ್ಯ ನಿರ್ಲಕ್ಷ್ಯ ಆರೋಪ. ಸಿಪಿಐ ಸಾಗರ್ ಅಮಾನತು
ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ರೂವಾರಿ ಎನ್ನಲಾಗುತ್ತಿರುವ ಆರ್.ಡಿ. ಪಾಟೀಲ್, ವಾರ್ದ ಅಪಾರ್ಟ್ಮೆಂಟ್ ನಿಂದ ತಪ್ಪಿಸಿಕೊಳ್ಳುವಲ್ಲಿ ಉಂಟಾಗಿರುವ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಿಪಿಐ ಸಾಗರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಆದೇಶವನ್ನು ಕಲ್ಬುರ್ಗಿ ಈಶಾನ್ಯ ವಲಯದ ಐಜಿಪಿ ಹೊರಡಿಸಿದ್ದಾರೆ ಕಲ್ಬುರ್ಗಿ ನಗರದ ವಾರ್ದಾ ಅಪಾರ್ಟ್ಮೆಂಟಿನಲ್ಲಿ ಆರ್ ಡಿ ಪಾಟೀಲ್ ಇರುವ ಮಾಹಿತಿ ಅಫ್ಜಲ್ಪುರ್ ಠಾಣೆಯ ಸಿಪಿಐ ಪಂಡಿತ್ ಸಾಗರ್ ಅವರಿಗೆ ತಲುಪಿತ್ತು. ಆದರೆ, ಅವರು ತಡವಾಗಿ ಅಪಾರ್ಟ್ಮೆಂಟ್ ಗೆ …
Read More »