Breaking News

Yearly Archives: 2023

ಶ್ರದ್ಧೆ, ಭಕ್ತಿ ಇದ್ದಲ್ಲಿ ದೇವರಿದ್ದಾನೆ: ಮುರಘೇಂದ್ರ ಸ್ವಾಮೀಜಿ

ತಲ್ಲೂರ: ಎಲ್ಲಿ ಭಕ್ತಿ, ಶ್ರದ್ಧೆ ಇರುತ್ತದೆಯೋ ಅಲ್ಲಿ ಭಗವಂತ ನೆಲೆಸುತ್ತಾನೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ಹೇಳಿದರು. ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ 16ನೇ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಜ್ಯೋತಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಭಗವಂತನ ಒಲುಮೆ ಆಗಬೇಕಾದರೆ ನಿರ್ಮಲವಾದ ಭಕ್ತಿ ಬೇಕು. ಅಂತಹ ಶ್ರದ್ಧಾಭಕ್ತಿ ಹಾಗೂ ಪರಿಶ್ರಮವನ್ನು ನಾನು ತಲ್ಲೂರಿನ ಅಯ್ಯಪ್ಪ ಭಕ್ತರಲ್ಲಿ ಕಂಡಿದ್ದೇನೆ. …

Read More »

ಕುಡಿದ ಅಮಲಿನಲ್ಲಿ ಜಗಳ: ವ್ಯಕ್ತಿ ಕೊಲೆ

ಬೈಲಹೊಂಗಲ: ತಾಲ್ಲೂಕಿನ ಆನಿಗೋಳ ಗ್ರಾಮದಲ್ಲಿ ಭಾನುವಾರ ರಾತ್ರಿ ಮದ್ಯ ಕುಡಿದ ಮತ್ತಿನಲ್ಲಿ ಯುವಕನೊಬ್ಬ ವ್ಯಕ್ತಿಯನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಮಂಜುನಾಥ ರುದ್ರಪ್ಪ ಸುಣಗಾರ (45) ಕೊಲೆಯಾದವರು. ಅಜಯ ಗುರುಸಯ್ಯ ಹಿರೇಮಠ (26) ಆರೋಪಿ.   ಇಬ್ಬರೂ ಮದ್ಯ ಕುಡಿಯಲು ಕುಳಿತಿದ್ದರು. ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಡಿದರು. ಈ ವೇಳೆ ಹತ್ತಿರದಲ್ಲಿದ್ದ ದೊಡ್ಡ ಕಲ್ಲು ಎತ್ತಿಕೊಂಡ ಅಜಯ ಮಂಜುನಾಥ ಅವರ ತಲೆ ಮೇಲೆ ಎಸೆದು, ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ. ತೀವ್ರ …

Read More »

ಕಳಸಾ-ಭಂಡೂರಿ ಯೋಜನೆಯಿಂದ ಖಾನಾಪುರ, ಮಲಪ್ರಭಾ ದಡದ ಗ್ರಾಮಗಳಿಗೆ ಪ್ರವಾಹದ ಭೀತಿ

ಪಣಜಿ: ಕಳಸಾ-ಭಂಡೂರಿ ನಾಲೆಯಿಂದ ನೀರು ಹರಿಸುವ ಕರ್ನಾಟಕದ ಪರಿಷ್ಕೃತ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ. ಇದಕ್ಕೆ ಅಡ್ಡಿತರುವ ನಿಟ್ಟಿನಲ್ಲಿ ಗೋವಾ ಸರ್ಕಾರ ಮತ್ತೆ ತನ್ನ ಪ್ರಯತ್ನ ಆರಂಭಿಸಲು ಮುಂದಾಗಿದೆ. ಇಷ್ಟೇ ಅಲ್ಲದೆಯೇ ಗೋವಾದಲ್ಲಿ ಪರಿಸರ ಹೋರಾಟಗಾರರೂ ಕೂಡ ತಮ್ಮ ಹೋರಾಟ ಆರಂಭಿಸುವ ಮೂಲಕ ಕರ್ನಾಟಕದ ಈ ಜನ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ.   ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಆಕ್ರೋಶ: ನೈಸರ್ಗಿಕ ಸಂಪತ್ತನ್ನು ಒತ್ತುವರಿ ಮಾಡಿಕೊಂಡು …

Read More »

ಮಹದಾಯಿ ನೀರನ್ನು ತಿರುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಅಭಿಪ್ರಾಯ

ಪಣಜಿ: ಕೇಂದ್ರ ಸರ್ಕಾರವೇ ಏನು… ಮಹದಾಯಿ ನೀರನ್ನು ತಿರುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೋವಾ ರಾಜ್ಯದ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಬಲವಾಗಿ ಅಭಿಪ್ರಾಯಪಟ್ಟಿದ್ದಾರೆ. ಕಳಸಾ-ಭಂಡೂರ ನೀರಿನ ಯೋಜನೆಗೆ ಕರ್ನಾಟಕ ಸರ್ಕಾರದ ಪರಿಷ್ಕೃತ ವಿಸ್ತೃತ ಯೋಜನಾ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದ ನಂತರ ರಾಜ್ಯದಲ್ಲಿ ಅಸಮಾಧಾನ ಹರಡಿದೆ. ಈ ಹಿನ್ನೆಲೆಯಲ್ಲಿ ಅಡ್ವಕೇಟ್ ಜನರಲ್ ಪಾಂಗಮ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ಬಂದಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರವು …

Read More »

ಪ್ರೇಕ್ಷಕರು ತರುವ ಹೊರಗಿನ ಆಹಾರಕ್ಕೆ ಕಡಿವಾಣ ಹಾಕುವ ಹಕ್ಕು ಥಿಯೇಟರ್ ಮಾಲೀಕರಿಗಿದೆ: ಸುಪ್ರೀಂ

ನವದೆಹಲಿ: ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಮಾ ಪ್ರೇಕ್ಷಕರು ಆಹಾರ ಮತ್ತು ಪಾನೀಯವನ್ನು ಹೊರಗಿನಿಂದ ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕನ್ನು ಥಿಯೇಟರ್ ಮಾಲೀಕರು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.   ಪ್ರೇಕ್ಷಕರು ಸಿನಿಮಾ ಹಾಲ್‌ಗಳಿಗೆ ಆಹಾರವನ್ನು ತೆಗೆದುಕೊಂಡು ಹೋಗಬಹುದೇ ಎಂಬ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ವಿವಾದಗಳು ನಡೆದ ಬಳಿಕ ಕೋರ್ಟ್ ತನ್ನ ವರದಿಯನ್ನು ನೀಡಿದ್ದು ನೀವು ಹೊರಗಿನಿಂದ ಆಹಾರ, ಪಾನೀಯಗಳನ್ನು ಥಿಯೇಟರ್ ಒಳಗೆ ನಿಮ್ಮಿಚ್ಛೆಯಂತೆ ತರಲು ಸಿನಿಮಾ …

Read More »

ಜ.12 ಹಾಗೂ 13 ರಂದು ರಾಯಣ್ಣ ಉತ್ಸವ ವಿಜೃಂಭಣೆಯಿಂದ ಆಚರಣೆ

ಬೈಲಹೊಂಗಲ: ಪ್ರತಿವರ್ಷದಂತೆ ಜ.12 ಹಾಗೂ 13 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಸೋಮವಾರ ತಾಲೂಕಿನ ಸಂಗೊಳ್ಳಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೋವಿಡ್‌ ಕಾರಣಕ್ಕೆ ಎರಡು ವರ್ಷಗಳಿಂದ ಸರಳ ರೀತಿಯಲ್ಲಿ ಆಚರಿಸಲಾಗಿದೆ. ಆದರೆ ಈ ಬಾರಿ ಗ್ರಾಮಸ್ಥರ ಒಕ್ಕೊರಲಿನ ಒತ್ತಾಯದಂತೆ ಉತ್ಸವವನ್ನು ಸಡಗರದಿಂದ ಆಚರಿಸಲಾಗುವುದು. ಉತ್ಸವಕ್ಕಾಗಿ …

Read More »

ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಈಗಿನಿಂದಲೇ ಬೂಥ್ ಮಟ್ಟದಿಂದ ದುಡಿಯುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಅರಭಾವಿ ಮಂಡಲ ಬೂಥ್ ವಿಜಯ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರು ಒಗ್ಗಟ್ಟಿನ ನಾಮಬಲದೊಂದಿಗೆ ಪಕ್ಷದ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುವಂತೆ ಹೇಳಿದರು.   ಬಿಜೆಪಿಯು ರಾಜ್ಯದಲ್ಲಿ ಮತ್ತೊಮ್ಮೆ …

Read More »

ಕಿಸೆ’ಯಿಲ್ಲದ ವೈರಾಗ್ಯಮೂರ್ತಿ ಸಿದ್ಧೇಶ್ವರ ಸ್ವಾಮೀಜಿ

ವಿಜಯಪುರ: ಬಿಜ್ಜರಗಿ ಎಂಬ ಪುಟ್ಟ ಗ್ರಾಮದ ‘ಸಿದ್ಧು’ ಎಂಬ ಶಾಂತ ಸ್ವಭಾವದ ಬಾಲಕ ‘ಸಿದ್ಧೇಶ್ವರ ಶ್ರೀ’ ಎಂಬ ಮಹಾನ್‌ ‘ಜ್ಞಾನಯೋಗಿ’ ಯಾಗಿ, ತತ್ವಜ್ಞಾನಿಯಾಗಿ, ಸದಾ ಶ್ವೇತವಸ್ತ್ರಧಾರಿಯಾಗಿ ‘ಕಿಸೆ’ಯಿಲ್ಲದ ವೈರಾಗ್ಯ ಮೂರ್ತಿಯಾಗಿ ಬೆಳೆದು ಬಂದ ದಾರಿ ಅಕ್ಷರಶಃ ವಿಸ್ಮಯ.   ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಬಿಜ್ಜರಗಿಯಲ್ಲಿ 1940ರ ಸೆಪ್ಟೆಂಬರ್‌ 5 ರಂದು ಕೃಷಿಕರಾದ ಓಗೆಪ್ಪ ಗೌಡ ಬಿರಾದಾರ, ಸಂಗವ್ವ ದಂಪತಿಯ ಆರು ಜನ ಮಕ್ಕಳಲ್ಲಿ ಹಿರಿಯ ಪುತ್ರರಾಗಿ ಜನಿಸಿದ ಸಿದಗೊಂಡ …

Read More »

ಡಬಲ್ ಎಂಜಿನ್‌ ಸರ್ಕಾರ ತೆಗೆಯದಿದ್ದರೆ ಸಂಕಷ್ಟ: ಬಡಗಲಪುರ ನಾಗೇಂದ್ರ

ಬಾಗಲಕೋಟೆ: ‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್‌ ಎಂಜಿನ್‌ ಸರ್ಕಾರ ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಹೆಚ್ಚಾಗಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವಾಗಿ, ಉಸಿರಾಡಿಸಲೂ ಕಷ್ಟವಾಗಬಹುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.   ಜನಾಂದೋಲನಗಳ ಮಹಾಮೈತ್ರಿ ಕರ್ನಾಟಕ, ಸಿಟಿಜನ್‌ ಫಾರ್‌ ಡೆಮೊಕ್ರಸಿ, ಜನತಂತ್ರ ಪಯೋಗ ಶಾಲೆ ಹಾಗೂ ಸಂಯುಕ್ತ ಹೋರಾಟ ಮುಖಂಡರು ಸೇರಿಕೊಂಡು ಜಿಲ್ಲೆಯ ಕೂಡಲಸಂಗಮದಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿರುವ ಸಮಾಜ ಪರಿವರ್ತನ ಸತ್ಯಾಗ್ರಹ …

Read More »

ಮಹದಾಯಿ ಡಿಪಿಆರ್‌ಗೆ ತರಾತುರಿಯಲ್ಲಿ ಅನುಮೋದನೆ: ಸಿದ್ದರಾಮಯ್ಯ

ಹುಬ್ಬಳ್ಳಿ: ‘ಮಹದಾಯಿ ಕುರಿತು ಗೆಜೆಟ್‌ ಹೊರಡಿಸಿ 2 ವರ್ಷ 10 ತಿಂಗಳು ಕಳೆದಿದ್ದರೂ ಸುಮ್ಮನೆ ಕುಳಿತಿದ್ದ ಬಿಜೆಪಿ, ನಾವು ಇವತ್ತು ಇಲ್ಲಿ ಹೋರಾಟ ಆರಂಭಿಸಲಿದ್ದೇವೆ ಎನ್ನುವುದು ಗೊತ್ತಾಗುತ್ತಿದ್ದಂತೆ ತರಾತುರಿಯಿಂದ ಡಿಪಿಆರ್‌ಗೆ (ವಿಸ್ತೃತ ಯೋಜನಾ ವರದಿ) ಅನುಮೋದನೆ ನೀಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.   ಇಲ್ಲಿನ ನೆಹರೂ ಮೈದಾನದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಮಹದಾಯಿ: ಜಲ- ಜನ ಆಂದೋಲನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ‘ಅಧಿಕಾರಕ್ಕೆ ಬಂದರೆ …

Read More »