Breaking News

Yearly Archives: 2023

‘ಕೈ’ ಟಿಕೆಟ್‌: ಡಿಕೆಶಿ ಇಂದು ದೆಹಲಿಗೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸುಮಾರು 150 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಸಂಕ್ರಾಂತಿ (ಜ.14) ಕಳೆಯುತ್ತಿದ್ದಂತೆ ಘೋಷಿಸಲು ತಯಾರಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರ ಜೊತೆ ಸಮಾಲೋಚಿಸಲು ಬುಧವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.   ‘ಬುಧವಾರ ಬೆಳಿಗ್ಗೆ ತುರುವೇಕೆರೆಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಳಿಕ ದೆಹಲಿಗೆ ತೆರಳಲಿದ್ದಾರೆ. ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ್‌ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಅವರನ್ನು …

Read More »

ಶಾಲಾ ಪಠ್ಯದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಜೀವನಗಾಥೆ: ಸಿ.ಎಂ ಬೊಮ್ಮಾಯಿ

ಬೆಂಗಳೂರು: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರ ಜೀವನಗಾಥೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ‘ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜೀವನಗಾಥೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವ ಬಗ್ಗೆ ಅವರ ಉಯಿಲಿನಲ್ಲಿರುವ ಆಶಯದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಟ್ವೀಟ್ ಮಾಡಿದ್ದಾರೆ.

Read More »

ನನ್ನಂತೆ ರಾಜಕೀಯಕ್ಕೆ ಕುಟುಂಬದವರನ್ನು ಕರೆತರದಿರಲು ನಿಮ್ಮಿಂದ ಸಾಧ್ಯವೇ?: ಎಚ್​ಡಿಕೆಗೆ ಪ್ರಹ್ಲಾದ್​ ಜೋಶಿ ಸವಾಲು

ಗದಗ, ಜ.3: ‘ನಾನು ರಾಜಕೀಯಕ್ಕೆ ಬಂದು 25 ವರ್ಷವಾಯಿತು. ನಾನು ನನ್ನ ಕುಟುಂಬದಿಂದ ಯಾರನ್ನೂ ರಾಜಕೀಯಕ್ಕೆ ಕರೆ ತರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತೇನೆ. ಅದರಂತೆಯೇ ಕುಮಾರಸ್ವಾಮಿ ಅವರು ಹೇಳಲಿ’ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸವಾಲು ಹಾಕಿದ್ದಾರೆ.   ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಯಾರ ಗುಂಡಿ ಯಾರು ತೋಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಅಂತ ಬಂದಾಗ ಕುಮಾರಸ್ವಾಮಿ, ದೇವೇಗೌಡ್ರು, ರೇವಣ್ಣ, …

Read More »

ರೆಡ್ಡಿ ಪಕ್ಷ ಸೇರಿದ ಕಾಂಗ್ರೆಸ್‌ ಮುಖಂಡರು

ಕೊಪ್ಪಳ/ಗಂಗಾವತಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೂತನವಾಗಿ ಆರಂಭಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ವಿವಿಧ ಪಕ್ಷಗಳ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಆಪ್ತ ಅಲಿಖಾನ್ ಸಹಾಯದಿಂದ ಮುಸ್ಲಿಂ, ಪರಿಶಿಷ್ಟಜಾತಿ, ಕುರುಬ ಸೇರಿ ಸಮಾಜದ ಮುಖಂಡರನ್ನು ಸೆಳೆಯಲು ವಿವಿಧ ರೀತಿಯ ರಣತಂತ್ರ ಹೂಡಿ, ಪ್ರಯೋಗ ಮಾಡಿದ್ದು, ವಿವಿಧ ಸಮಾಜದ ಮುಖಂಡರು ರೆಡ್ಡಿ ಪಕ್ಷಕ್ಕೆ ಸೇರುತ್ತಿದ್ದಾರೆ.   …

Read More »

ರಾಜ್ಯ ಸರ್ಕಾರದಿಂದ ‘ಪಡಿತರ ಚೀಟಿದಾರ’ರಿಗೆ ಭರ್ಜರಿ ಗುಡ್ ನ್ಯೂಸ್ : 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆಗೆ ಅದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬದ ಸದಸ್ಯರಿಗೆ ಐದು ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದೀಗ ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಐದು ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ವಿತರಿಸಲಿದೆ. ಈ ಮೂಲಕ ಹೊಸ ವರ್ಷಕ್ಕೆ ರಾಜ್ಯ ಸರ್ಕಾರದಿಂದ ಬಿಗ್ ಗಿಫ್ಟ್ ನೀಡಲಾಗಿದೆ. ಈ ಸಂಬಂಧ ಆಹಾರ, ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಆ …

Read More »

ಕಲಾವಿದನ ಕುಂಚದಲ್ಲಿಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ.

ಧಾರವಾಡದ ಚಿತ್ರಕಲಾವಿದ ಮಂಜುನಾಥ ಹಿರೇಮಠ ಎಂಬುವವರಿಂದ ಅರಳಿದ ಸಿದ್ದೇಶ್ವರ ಶ್ರೀಗಳ ಮೂರ್ತಿ ಕಲಾವಿದನ ಕುಂಚದಲ್ಲಿ ಅರಳಿದ ಎರಡು ಅಡಿ ಇರೋ ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ. ಶ್ರೀಗಳ ನಿಧನಕ್ಕೆ ವಿಶೇಷ ಸಂತಾಪ ಸೂಚಿಸಿದ ಕಲಾವಿದ. ಬಳಿಕ 11ಗಂಟೆಗೆ ಕೆಲಗೇರಿ ಗ್ರಾಮಸ್ಥರಿಂದ ಸಿದ್ದೇಶ್ವರ ಶ್ರೀಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ.

Read More »

ಸಿದ್ದೇಶ್ವರ ಮಹಾಸ್ವಾಮಿಗಳು ಅಸ್ತಂಗತವಾದ ಹಿನ್ನೆಲೆಯಲ್ಲಿ ಅಥಣಿ ಕಾರ್ಯನಿರತ ಪತ್ರಕರ್ತ ಸಂಘದಿಂದ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಶ್ರದ್ಧಾಂಜಲಿ

ನಾಡು ಕಂಡ ಶ್ರೇಷ್ಠ ಸಂತ ಸಿದ್ದೇಶ್ವರ ಮಹಾಸ್ವಾಮಿಗಳು ಅಸ್ತಂಗತವಾದ ಹಿನ್ನೆಲೆಯಲ್ಲಿ ಅಥಣಿ ಕಾರ್ಯನಿರತ ಪತ್ರಕರ್ತ ಸಂಘದಿಂದ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಶ್ರದ್ಧಾಂಜಲಿಯನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಸಿ. ಎ ಇಟ್ನಾಳಮಠ ವಿಶ್ವದ ಶ್ರೇಷ್ಠ ಸಂತರಲ್ಲಿ ಒಬ್ಬರಾದ ಸಿದ್ಧೇಶ್ವರ ಮಹಾಸ್ವಾಮಿಗಳು ತಮ್ಮ ಸರಳತೆಯಿಂದ ಮತ್ತು ಜ್ಞಾನದಿಂದ ಜನರ ಮನಸ್ಸಿನಲ್ಲಿ ನೆಲೆಸಿದವರು ಅಂತ ಅವರ ಅಗಲಿಕೆಯಿಂದ ನಿಜಕ್ಕೂ ನಾಡು ಅನಾಥವಾಗಿದೆ ಸಾಕಷ್ಟು ಸಾಧು ಸಂತರು ದೇಣಿಗೆ ಸಂಗ್ರಹ …

Read More »

ಬೆಳಗಾವಿ ಜಿಲ್ಲೆಯ ಭಕ್ತರೊಂದಿಗೆ ಸಿದ್ಧೇಶ್ವರ ಸ್ವಾಮೀಜಿ ದಶಕಗಳ ಆಪ್ತತೆ

ಬೆಳಗಾವಿ: ವಿಶ್ವಸಂತ, ನಡೆದಾಡುವ ದೇವರು ಎಂದೇ ಹೆಸರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರಿಗೂ ಬೆಳಗಾವಿ ಜಿಲ್ಲೆಗೂ ಎರಡು ದಶಕಗಳ ನಂಟಿದೆ. ಅವರ ಅತಿ ಹೆಚ್ಚು ಪ್ರವಚನಗಳು ಬೆಳಗಾವಿ ಜಿಲ್ಲೆಯಲ್ಲೇ ನಡೆದಿವೆ. ಇಂದೋ ನಿನ್ನೆಯೋ ಶ್ರೀಗಳು ಕಣ್ಣ ಮುಂದೆ ತಮ್ಮ ಜ್ಞಾನ ಬಿತ್ತಿದ್ದಾರೆ ಎನ್ನುವಷ್ಟು ಆಪ್ತತೆ ಜಿಲ್ಲೆಯ ಜನರಲ್ಲಿದೆ. ಶ್ರೀಗಳು ಇನ್ನಿಲ್ಲ ಎನ್ನುವ ಸುದ್ದಿ ತಿಳಿದು ಜಿಲ್ಲೆಯ ಭಕ್ತರೂ ದಿಗಿಲುಗೊಂಡಿದ್ದಾರೆ. ಕಳೆದೊಂದು ವಾರದಿಂದ ಅಪಾರ ಸಂಖ್ಯೆಯ ಜನ ಶ್ರೀಗಳನ್ನು ನೋಡಲು …

Read More »

ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಾಣ

ಸಾಂಬ್ರಾ: ಸಮೀಪದ ಮಾರೀಹಾಳ ಗ್ರಾಮದ ರೈತರೇ ಒಂದಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಹೊಲಗಳಿಗೆ ಹೋಗುವ ರಸ್ತೆ ನಿರ್ಮಾಣಕ್ಕೆ ಮುಂದಾದರು. ರೈತರೇ ಸೇರಿಕೊಂಡಿ ಜೆಸಿಬಿಗೆ ಪೂಜೆ ಸಲ್ಲಿಸಿ ಕಾಮಗಾರಿಗೂ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ ಧರ್ಮೋಜಿ ಅವರು ಜೆಸಿಬಿ ಪೂಜೆ ಮಾಡುವ ಮೂಲಕ ರಸ್ತೆ ನಿರ್ಮಾಣ ಆರಂಭಿಸಿದರು. ರೈತರಾದ ರಫೀಕ್‌ ಮುಲ್ಲಾ, ಅಪ್ಪಣ್ಣ ಕಲ್ಲನ್ನವರ, ಗಣಪತಿ ಕಲ್ಲನ್ನವರ, ದಸ್ತಗೀರ ಮುಲ್ಲಾ, ಗುರುನಾಥ ಅಕ್ಕತಂಗೇರಹಾಳ, ಚಂದ್ರಹಾಸ ಅಕ್ಕತಂಗೇರಹಾಳ, ಗುಲ್ಲು …

Read More »

ದಶಕ ಕಾದರೂ ಸಿಗದ ಸಮರ್ಪಕ ನೀರು

ನಾಗರಮುನ್ನೋಳಿ: ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡು ದಶಕ ಕಳೆದಿದೆ. ಆದರೆ, ಕಳೆದ ಏಳು ತಿಂಗಳಿಂದ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಜನರ ಕೊಡ ನೀರಿಗೂ ಮೈಲುದ್ದ ಅಲೆಯಬೇಕಾದ ಸ್ಥಿತಿ ಬಂದಿದೆ.   ನಾಗರಮುನ್ನೋಳಿ ಹೋಬಳಿ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬ ಉದ್ದೇಶದಿಂದ ಘಟಪ್ರಭಾ ನದಿಯಿಂದ ಬಹುಗ್ರಾಮ ಯೋಜನೆ 2012-13ರಲ್ಲಿ ಮಂಜೂರಾಗಿತ್ತು. ₹15.88 ಕೋಟಿ ಅನುದಾನ ಬಳಕೆಯಾಗಿದೆ. …

Read More »