Breaking News

Yearly Archives: 2023

ಹುಡುಗಿ ಜೊತೆ ಅಸಭ್ಯ ವರ್ತನೆ: ಸಹೋದರರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

ವಿಜಯಪುರ: ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಅವಳಿ ಸಹೋದರರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ತಾಲ್ಲೂಕಿನ ಹೆಗಡಿಹಾಳ ಲಂಬಾಣಿ ತಾಂಡಾದ ಬಸವ ನಗರದಲ್ಲಿ ಶುಕ್ರವಾರ ನಡೆದಿದೆ.   ಹೆಗಡಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಸಿಂಗ್ ಹಾಗೂ ತಾಂಡಾದ ಪಂಚರ ಸಮ್ಮುಖದಲ್ಲಿ ತೇಜು ಚವ್ಹಾಣ, ರಾಜು ಚವ್ಹಾಣ ಎಂಬುವರ ತಲೆ ಬೋಳಿಸಿ, ಸುಣ್ಣ ಬಳಿದು, ಚಪ್ಪಲಿ ಹಾರ ಹಾಕಿ …

Read More »

ಮಾಜಿ ಸಚಿವ ಟಿ.ಜಾನ್ ನಿಧನ

ಬೆಂಗಳೂರು: ಮಾಜಿ ಸಚಿವ ಟಿ.ಜಾನ್(92) ಅವರು ಇಂದಿರಾನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾದರು. ಜಾನ್‌ ಅವರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.   ಕೇರಳದಲ್ಲಿ ಜನಿಸಿದ್ದ ಇವರು, ಮಡಿಕೇರಿಯಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಟಿ.ಜಾನ್ ಶಿಕ್ಷಣ ಸಂಸ್ಥೆ ಕಟ್ಟಿದ ಬಳಿಕ ಬೆಂಗಳೂರಿನಲ್ಲೇ ನೆಲೆ ಊರಿದರು. ಕಾಂಗ್ರೆಸ್‌ನಿಂದ ವಿಧಾನ ಪರಿಷತ್ತಿನ ಸದಸ್ಯರಾಗಿ ಎಸ್.ಎಂ.ಕೃಷ್ಣ ನೇತೃತ್ವದ ಸಂಪುಟದಲ್ಲಿ ಮೂಲಸೌಕರ್ಯ ಮತ್ತು ವಿಮಾನಯಾನ …

Read More »

ಕಣಬರ್ಗಿ ಸಿದ್ದೇಶ್ವರ ಮಂದಿರದ ಭವ್ಯ ಕಳಸಾರೋಹಣ ಕಾರ್ಯಕ್ರಮ

ಬೆಳಗಾವಿ-: ಜಿಲ್ಲೆಯ ಕಣಬರ್ಗಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಸಿದ್ದೇಶ್ವರ ಮಂದಿರದ ಪುರಾತನ ಕಟ್ಟಡವನ್ನು ಜಿರ್ಣೋದ್ದಾರ ಮಾಡಿ ನವೀಕೃತ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿಗೆ ಅನೇಕ ಭಕ್ತರು ಸಹ ಉದಾರವಾಗಿ ದೇಣಿಗೆಯನ್ನು ನೀಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ದೇವಾಲಯದ ನವೀಕೃತ ಭವ್ಯ ಕಟ್ಟಡದ ಭವ್ಯ ಉದ್ಘಾಟನಾ, ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಶ್ರೀ ಸಿದ್ಧೇಶ್ವರ ವ್ಯವಸ್ಥಾಪಕ ಮಂಡಳಿ ಕಣಬರ್ಗಿ ಹಾಗೂ ಶ್ರೀ ಸಿದ್ದೇಶ್ವರ …

Read More »

ಮದುವೆಗೆ ಮುನ್ನವೇ ಕಿಯಾರಾ ಅಡ್ವಾಣಿ ಗರ್ಭಿಣಿ.!?

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ಜೈಸಲ್ಮೇರ್‌ನ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಕೆಲವೇ ದಿನಗಳಲ್ಲಿ, ಕಿಯಾರಾ ಅಡ್ವಾಣಿ ಗರ್ಭಧಾರಣೆಯ ವದಂತಿಗಳು ಹರಡಲು ಪ್ರಾರಂಭಿಸಿವೆ. ವಾಸ್ತವವಾಗಿ, ಮದುವೆಯ ನಂತರ ಜೈಸಲ್ಮೇರ್‌ನಿಂದ ದೆಹಲಿಗೆ ಹಿಂದಿರುಗುವಾಗ, ಕಿಯಾರಾ ಅಡ್ವಾಣಿ ಕಪ್ಪು ಬಟ್ಟೆಯನ್ನು ಧರಿಸಿದ್ದರು. ಇದರೊಂದಿಗೆ, ನಟಿ ಬೂದು-ಕಪ್ಪು ಬಣ್ಣದ ಶಾಲು ಧರಿಸಿದ್ದರು. ಕಿಯಾರಾ ಅಡ್ವಾಣಿ ಫೋಟೋಗಳಿಗೆ ಪೋಸ್‌ ನೀಡುವಾಗ ಶಾಲು ಹೊದ್ದುಕೊಂಡು ಮತ್ತೆ ಮತ್ತೆ ಅಡ್ಜಸ್ಟ್ ಮಾಡಿಕೊಂಡು ಹೊಟ್ಟೆ ಮುಚ್ಚಿಕೊಳ್ಳುತ್ತಿದ್ದ …

Read More »

ಬೆಳಗಾವಿ ಜಿಲ್ಲಾ ಕೋರ್ಟ್ ನೇಮಕಾತಿ : ಜವಾನ, ಪ್ರೊಸೆಸ್ ಸರ್ವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಇಲ್ಲಿದೆ ಮಾಹಿತಿ

ಬೆಳಗಾವಿ: ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ 68 ಸ್ಟೆನೋಗ್ರಾಫರ್ ಗ್ರೇಡ್ 3, ಜವಾನ, ಪ್ರೊಸೆಸ್ ಸರ್ವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಬೆಳಗಾವಿ ಜಿಲ್ಲಾ ನ್ಯಾಯಾಲಯ ನೇಮಕಾತಿ 2023 ಗೆ ಅಧಿಕೃತ ವೆಬ್ಸೈಟ್ ಬೆಳಗಾವಿ ಕೋರ್ಟ್ ಜಾಬ್ಸ್ ಮೂಲಕ ಮಾರ್ಚ್ 3, 2023 ರೊಳಗೆ ಅರ್ಜಿ ಸಲ್ಲಿಸಬಹುದುವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರಗಳನ್ನು …

Read More »

ಕಳೆದ ವರ್ಷದ ಬಜೆಟ್ ಓದಿ ದ C.M.

ಜೈಪುರ: ಬಜೆಟ್ ಅಧಿವೇಶನದ ವೇಳೆ ಹಾಸ್ಯಾಸ್ಪದ ಘಟನೆಯೊಂದು ರಾಜಸ್ಥಾನದ ವಿಧಾನಸಭೆಯಲ್ಲಿ ನಡೆದಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಳೆ ಬಜೆಟ್ ಓದುವ ಮೂಲಕ ನಗೆಪಾಟಲಿಗೆ ಕಾರಣರಾಗಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್ ಮಂಡಿಸಬೇಕಿತ್ತು. ಆದರೆ ವಿಧಾನಸಭೆಯಲ್ಲಿ ಕಳೆದ ವರ್ಷದ ಬಜೆಟ್ ಓದಿ ಎಡವಟ್ಟು ಮಾಡಿಕೊಂಡಿದ್ದಾರೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಜೆಟ್ ಪ್ರತಿ ಕೈಗೆತ್ತಿಕೊಂಡ ಸಿಎಂ ಗೆಹ್ಲೋಟ್, ಬಜೆಟ್ ಓದಲು ಆರಂಭಿಸಿದ್ದಾರೆ. ಅದು ಕಳೆದ ವರ್ಷದ …

Read More »

ಪಂಚರತ್ನ ಯಾತ್ರೆ ಯಶಸ್ಸಿನಿಂದ ಬಿಜೆಪಿ, ಕಾಂಗ್ರೆಸ್ ಗೆ ಭಯ:H.D.K.

ಬೆಳಗಾವಿ: ಇದೇ ತಿಂಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2ನೇ ಹಂತದಲ್ಲಿ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಖಾನಾಪುರ ತಾಲೂಕಿನ ಜೆಡಿಎಸ್ ಅಭ್ಯರ್ಥಿಯಾಗಲಿದ್ದ ವ್ಯಕ್ತಿ 3 ವರ್ಷಗಳ ಹಿಂದೆಯೇ ಪಕ್ಷ ಬಿಡುವ ಆಲೋಚನೆ ಮಾಡಿದ್ದು ನಾಳೆ ಹೊಸ ಅಭ್ಯರ್ಥಿ ಘೋಷಿಸಲಾಗುವುದು ಎಂದರು. ನಾಳೆ ಅರಸಿಕೇರೆಗೆ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲು ತಾವು …

Read More »

ಲೋಕಾಯುಕ್ತ ಬಲೆಗೆ ಬಿದ್ದ PDO,

ಚಿತ್ರದುರ್ಗ: 4 ಸಾವಿರ ರೂಪಾಯಿಗೆ ಲಂಚಕ್ಕೆ ಕೈಯೊಡ್ದಿದ್ದ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಜಾನಕಲ್ ನಲ್ಲಿ ನಡೆದಿದೆ. ಪಿಡಿಒ ಶ್ರೀನಿವಾಸ್ ಹಾಗೂ ಕಂಪ್ಯೂಟರ್ ಆಪರೇಟರ್ ಚನ್ನಬಸಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು. ಶಾಲಾ ಕಾಂಪೌಂಡ್ ಕಾಮಗಾರಿಗಾಗಿ 4 ಸಾವಿರ ರೂಪಾಯಿ ಲಂಚ ನೀಡುವಂತೆ ಭೀಮಪ್ಪ ಎಂಬುವವರಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಭೀಮಪ್ಪ ಅವರಿಂದ …

Read More »

ನನಗೆ ಆಹ್ವಾನವಿರಲಿಲ್ಲ..; ಅಭಿಮಾನಿಗಳ ಆಕ್ರೋಶಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಬೆಂಗಳೂರು : ದಾವಣಗೆರೆಯ ರಾಜನಹಳ್ಳಿಯ ಗುರುಪೀಠದ ವಾಕ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಬರಲಿಲ್ಲ ಎಂದು ನೂರಾರು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ. ”ಸ್ನೇಹಿತರಿಗೆ ನಲ್ಮೆಯ ನಮಸ್ಕಾರ – ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು.ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ.ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ.” ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.   ”ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು …

Read More »

ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅನಿವಾರ್ಯವಲ್ಲ: ಹೆಚ್ ಡಿಕೆ ಪುನರುಚ್ಚಾರ

ಬೆಳಗಾವಿ: ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯವಾಗಿ ಭವಾನಿ ರೇವಣ್ಣ ಅವರು ಈ ಚುನಾವಣೆಯಲ್ಲಿ ಅನಿವಾರ್ಯ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಹಾಸನ ಟಿಕೆಟ್ ವಿಚಾರ ಇನ್ನೊಂದು ವಾರದಲ್ಲಿ ಬಗೆಹರಿಯಲಿದೆ. ಚುನಾವಣೆ ಗೆಲ್ಲಬೇಕಾದ ಹಿನ್ನಲೆಯಲ್ಲಿ ನಾವು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ನಮಗೆ 30 ರಿಂದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಈ ಕೊರತೆ ತುಂಬಿಕೊಳ್ಳಲು ಜನರ ವಿಶ್ವಾಸ ಪಡೆದುಕೊಳ್ಳುವ ಹೊಸ …

Read More »