Breaking News

Yearly Archives: 2023

ರಾಜ್ಯದಲ್ಲಿ ಬಿಜೆಪಿ ಪರ ಅಲೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬರಲಾರಂಭಿಸಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಬೀಸಲಾರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಖಾಸಗಿ ಹೊಟೇಲ್ ನಲ್ಲಿ ಬುಧವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮಾತನಾಡಿ, ಆಡಳಿತ ವಿರೋಧಿ ಅಲೆ ಇಲ್ಲ. ಯಾರೂ ಧೃತಿಗೆಡಬೇಕಾಗಿಲ್ಲ, ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು. ಕಾಂಗ್ರೆಸ್ ನವರ ಈಗಿನ ಅಬ್ಬರ ಚುನಾವಣೆ ವೇಳೆಗೆ ಇರುವುದಿಲ್ಲ ಎಂದೂ …

Read More »

2023: ಸ್ವಿಗ್ಗಿ ಆಹಾರ ಹೊತ್ತು ಸಾಗಲಿವೆ ಡ್ರೋನ್

ಬೆಂಗಳೂರು: ಸ್ವಿಗ್ಗಿ ಆಯಪ್‌ನಲ್ಲಿ ಆಹಾರ ಪೂರೈಕೆಗೆ ಆರ್ಡರ್ ಮಾಡಿದರೆ ಅದನ್ನು ಮುಂದಿನ ದಿನಗಳಲ್ಲಿ ಹೊತ್ತು ಡೆಲಿವರಿ ಬಾಯ್ ತರುವುದಿಲ್ಲ, ಬದಲಿಗೆ ಡ್ರೋನ್ ಬರಲಿದೆ! ಹೌದು, ಆಹಾರ ಹೊತ್ತು ಬರುವ ಡ್ರೋನ್ ಈಗ ಸಿದ್ಧವಾಗಿದೆ. ಗರುಡ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿರುವ ಡ್ರೋನ್, ಏರೋ ಇಂಡಿಯಾ-2023ರಲ್ಲಿ ಪ್ರದರ್ಶನಗೊಳ್ಳುತ್ತಿದೆ.   ‘ಡೆಲಿವರಿ ಡ್ರೋನ್’ ಎಂದೇ ಇದಕ್ಕೆ ಹೆಸರಿಡಲಾಗಿದ್ದು, ಸದ್ಯಕ್ಕೆ 5 ಕೆ.ಜಿ ತೂಕ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 10 ರಿಂದ 15 ಕೆ.ಜಿ …

Read More »

ಜಾಹೀರಾತಿನಲ್ಲೇ ಉಸಿರಾಡುತ್ತಿರುವ ಸರ್ಕಾರ: ವೀರಪ್ಪ ಮೊಯಿಲಿ

ಮೈಸೂರು: ‘ಬಡತನದ ರೇಖೆ ಕೆಳಗೆ ಜಾರುತ್ತಿರುವ ಲಕ್ಷಾಂತರ ಜನರನ್ನು ಸಂರಕ್ಷಣೆ ಮಾಡುತ್ತಿಲ್ಲ. ಜಾಹೀರಾತಿನ ಮೂಲಕವೇ ರಾಜ್ಯ ಬಿಜೆಪಿ ಸರ್ಕಾರ ಉಸಿರಾಡುತ್ತಿದೆ’ ಎಂದು ಎಐಸಿಸಿ ಚುನಾವಣಾ ಸಮಿತಿ ಸದಸ್ಯ ಎಂ.ವೀರಪ್ಪ ಮೊಯಿಲಿ ಟೀಕಿಸಿದರು. ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ‘ಬಡವರ ಸಂರಕ್ಷಣೆ ಮಾಡಬೇಕಾದ್ದು, ಸರ್ಕಾರದ ಬದ್ಧತೆ. ಆದರೆ, ಬಿಜೆಪಿ ಅವಧಿಯಲ್ಲಿ ಶ್ರೀಮಂತರು ಮತ್ತೂ ಶ್ರೀಮಂತರಾಗುತ್ತಿದ್ದಾರೆ. ಹೀಗಾಗಿಯೇ ಶೇ 95ರಷ್ಟು ಚುನಾವಣಾ ಬಾಂಡ್‌ಗಳು ಬಿಜೆಪಿ ಪಾಲಾಗಿವೆ’ …

Read More »

ಸುನೀಲ್‌ ಕುಮಾರ್‌ ಅವರಂತೆ ಬ್ಯಾಂಕ್ ಬ್ಯಾಲೆನ್ಸ್, ಬೇನಾಮಿ ಜಮೀನು ಹೊಂದಿಲ್ಲ: ಪ್ರಮೋದ್ ಮುತಾಲಿಕ್

ಉಡುಪಿ: ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬಂದಿಲ್ಲ. ದುಡ್ಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ಸಚಿವ ಸುನೀಲ್‌ ಕುಮಾರ್ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ. ಏನು ಆಗಿದ್ದರು, ಈಗೇನು ಆಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದರು.   ಸಚಿವ ಸುನೀಲ್‌ ಕುಮಾರ್ ಮಾಡಿರುವ ಆರೋಪಗಳಿಗೆ ನಗರದಲ್ಲಿ ಇಂದು ಅವರು ತಿರುಗೇಟು ನೀಡಿದ್ದಾರೆ. ನನ್ನ ಸ್ಪರ್ಧೆಯಿಂದ ಸುನೀಲ್‌ ಕುಮಾರ್ ಹತಾಶರಾಗಿದ್ದಾರೆ. ಅವರು …

Read More »

ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು,

ಉಡುಪಿ: ಬಸ್ ಸ್ಟಾಂಡ್ ಪಕ್ಕದ ಬೀದಿಬದಿಯಲ್ಲಿ ಚಿಕ್ಕ ಟೇಬಲ್, ಡಬ್ಬಗಳಲ್ಲಿ ವಿಧ ವಿಧದ ತಿಂಡಿ ತಿನಿಸು, ಟೀ. ಚಿಕ್ಕದಾದ್ರೂ ಚೊಕ್ಕ ಕ್ಯಾಂಟೀನ್ (Transgenders Hotel In Udupi)  ಇಟ್ಕೊಂಡಿರೋ ಇವ್ರು ಮಂಗಳಮುಖಿಯರು (Positive Story Of Transgenders) ಅಂದ್ರೆ ಯಾರೂ ನಂಬಲ್ಲ! ಆದ್ರೆ ಉಡುಪಿಯ ಈ ಮಂಗಳಮುಖಿಯರು ಮಾತ್ರ ತಮ್ಮ ಪ್ರಯತ್ನದಿಂದ ಕ್ರಾಂತಿ ಗೀತೆಯನ್ನೇ ಹಾಡುತ್ತಿದ್ದಾರೆ. ಹೀಗೆ ಬದಲಾವಣೆಯ ದಾರಿ ಹಿಡಿದ ಮಂಗಳಮುಖಿಯರ ಹೆಸರು ಪೂರ್ವಿ, ಡಿಂಪಲ್, ವೈಷ್ಣವಿ ಮತ್ತು …

Read More »

ಬೃಹತ್ ಹಳದಿ ಕುಂಕುಮ ಕಾರ್ಯಕ್ರಮ : ಶಾಸಕ ಅನಿಲ ಬೆನಕೆ ಬಾಗಿ

ಬೆಳಗಾವಿ :ಬೆಳಗಾವಿ ನಗರದ ಬಸವಣಕುಡಚಿಯಲ್ಲಿ ಮಂಗಳವಾರದAದು ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಬೃಹತ್ ಹಳದಿ ಕುಂಕುಮ ಕಾರ್ಯಕ್ರಮಆಯೋಜನೆ ಮಾಡಲಾಗಿತ್ತು.ಬಸವಣಕುಡಚಿಗ್ರಾಮದ ಬಸವಣ್ಣ ಮಂದಿರಆವರಣದಲ್ಲಿಆಯೋಜನೆ ಮಾಡಲಾದಕಾರ್ಯಕ್ರಮದಲ್ಲಿಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನುದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆರವರು ನಾನು ಶಾಸಕನಾಗುವ ಮುಂಚೆಯಿAದಲೂ ಬಸವಣಕುಡಚಿಜನ ನನ್ನ ಮೇಲೆ ತುಂಬಾ ಪ್ರೀತಿ ವಿಶ್ವಾಸವನ್ನುಇಟ್ಟಿದ್ದು, ೨೦೧೮ ರಚುನಾವಣೆಗೆ ನಾನು ಸ್ಪರ್ದೆ …

Read More »

ಯಾದಗಿರಿ: ಕಲುಷಿತ ನೀರು ಸೇವಿಸಿ ವಾಂತಿ ಭೇದಿ; ಮಹಿಳೆ ಮೃತ್ಯು

ಯಾದಗಿರಿ: ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಉಲ್ಬಣಗೊಂಡು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಅನಪುರ ಗ್ರಾಮದಲ್ಲಿ ನಡೆದಿದೆ. ಸಾವಿತ್ರಮ್ಮ (35) ಮೃತ ಮಹಿಳೆ. ಗ್ರಾಮಕ್ಕೆ ನೀರು ಪೂರೈಸುವ ಪೈಪ್ ನಲ್ಲಿ ಚರಂಡಿ ನೀರು ಸೇರ್ಪಡೆಯಾಗಿರುವ ಪರಿಣಾಮ ಕಲುಷೀತ ನೀರು ಸೇವನೆಯಿಂದ ಗ್ರಾಮದಲ್ಲಿ ವಾಂತಿ ಭೇದಿ ಉಲ್ಬಣಗೊಂಡಿದೆ. ಇದುವರೆಗೆ 30 ಜನರಲ್ಲಿ ಕಾಣಿಸಿಕೊಂಡ ವಾಂತಿ ಭೇದಿ ಕಾಣಿಸಿಕೊಂಡಿದೆ. ನಿನ್ನೆ 24 ,ಇಂದು 6 ಜನರಿಗೆ ಕಾಣಿಸಿಕೊಂಡ ವಾಂತಿ …

Read More »

ಮಹದಾಯಿ, ಕಳಸಾ-ಬಂಡೂರಿ ಕಾಮಗಾರಿ ಆರಂಭಿಸದೆ ಬಿಜೆಪಿ ರೈತರಿಗೆ ಮೋಸ ಮಾಡಿದೆ: ಎಚ್.ಕೆ.ಪಾಟೀಲ

ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿಯಿಂದ ನೀರು ಗ್ರಾಮದಲ್ಲಿ ತಂದೇಬಿಟ್ಟವು ಎಂದು ವಿಜಯೋತ್ಸವ ಆಚರಿಸಿದ್ದ ಬಿಜೆಪಿ ನಾಯಕರು ಕಾಮಗಾರಿ ಆರಂಭಿಸದೆ ರೈತರಿಗೆ ಮೋಸ ಮಾಡಿದ್ದು, ಯೋಜನೆ ಬಗ್ಗೆ ರಾಜ್ಯ ಸರಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಒತ್ತಾಯಿಸಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಹ್ಲಾದ ಜೋಶಿ ಅವರುಗಳು ಸುಳ್ಳು ಹೇಳಿ ಉತ್ತರ ಕರ್ನಾಟಕದ ರೈತರು, ಜನರಿಗೆ ಮೋಸ ಮಾಡಿದ್ದಾರೆ …

Read More »

ಟಿಪ್ಪು ರಣ ಹೇಡಿಯಲ್ಲ, ಸ್ವಾತಂತ್ರ್ಯ ಹೋರಾಟಗಾರ: ಬಿ.ಕೆ.ಹರಿಪ್ರಸಾದ್

ಶಿರಸಿ: ಟಿಪ್ಪು ಸುಲ್ತಾನ್ ರಣ ಹೇಡಿಯಲ್ಲ. ಅವನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ವಿಧಾನ ಪರಿಷತ್ ಪ್ರತಿಪಕ್ಷ‌ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಪಾದಿಸಿದರು. ಬುಧವಾರ ನಗರದಲ್ಲಿ ಮಾತನಾಡಿ, ಗೋಡ್ಸೆ ಸಂತತಿಯನ್ನು ಸೋಲಿಸುವುದೇ ಕಾಂಗ್ರೆಸ್ ಗುರಿ ಎಂದೂ ಸಮರ್ಥಿಸಿ ಬಿಜೆಪಿ ವಿರುದ್ಧ ಹರಿಯಾಯ್ದರು.   ಮಹಾತ್ಮಾ ಗಾಂಧಿ ಅವರನ್ನು ಕೊಂದ ಪಕ್ಷ ಬಿಜೆಪಿ. ಭಯೋತ್ಪಾದನೆ ಹುಟ್ಟಿದ್ದೇ ಬಿಜೆಪಿಯ ಮೂಲದಿಂದ ಎಂದು ಆರ್ ಎಸ್ ಎಸ್ ವಿರುದ್ಧವೂ ಪರೋಕ್ಷ ವಾಗ್ದಾಳಿ ಮಾಡಿ, ಬ್ರಿಟೀಷರ ಏಜೆಂಟರು ನಮ್ಮನ್ನು ಭಯೋತ್ಪಾದಕರು …

Read More »

ಬೆಂಕಿ ಮಳೆ ಸುರಿದ್ರೂ ಏನೂ ಆಗಲ್ಲ!: ವಿನೂತನ ಜೀವರಕ್ಷಕ ಜಾಕೆಟ್‌ ಅಭಿವೃದ್ಧಿ

ಬೆಂಗಳೂರು: ಈ ಜಾಕೆಟ್‌ ಹಾಕಿಕೊಂಡಾಗ, ನಿಮ್ಮ ಮೇಲೆ ಬೆಂಕಿಯ ಮಳೆಯೇ ಸುರಿದರೂ ನೀವು ಒಳಗೆ “ಕೂಲ್‌’ ಆಗಿರ್ತೀರಾ. ಒಂದೇ ಒಂದು ಗಾಯ ಕೂಡ ಆಗುವುದಿಲ್ಲ! ವೀರಾ ಎಂಬ ಕಂಪನಿಯು ಈ ವಿನೂ ತನ ಜೀವರಕ್ಷಕ ಜಾಕೆಟ್‌ ಅಭಿವೃದ್ಧಿಪಡಿಸಿದೆ. ಇದನ್ನು ಧರಿಸಿದರೆ, ನೀವು -200 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿರಲಿ ಅಥವಾ 1000 ಡಿಗ್ರಿ ಸೆಲ್ಸಿಯಸ್‌ ಇರಲಿ ನಿಮ್ಮ ದೇಹದ ತಾಪಮಾನದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಇದರ ಹೆಸರು “ಟಾರ್ಡಿಗ್ರೇಡ್‌ ಜಾಕೆಟ್‌’. ಅತಿ ಎತ್ತರದ …

Read More »