Breaking News

Yearly Archives: 2023

ಸದನದಲ್ಲಿ ಬುಧವಾರ ವಿದಾಯ ಭಾಷಣ ಮಾಡಿ ಭಾವುಕರಾದ B.S.Y.

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಬುಧವಾರ ವಿದಾಯ ಭಾಷಣ ಮಾಡಿ ಭಾವುಕರಾದರು. ವಿಧಾನಸಭೆಯಲ್ಲಿ ಮಾತನಾಡಿದ 79ರ ಹರೆಯದ ಹಿರಿಯ ನಾಯಕ ಯಡಿಯೂರಪ್ಪ ಅವರು, ಇದೊಂದು ಅಪರೂಪದ ಕ್ಷಣ, ನಾನು ಈಗಾಗಲೇ ಹೇಳಿದಂತೆ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದು ನನ್ನ ವಿದಾಯ ಭಾಷಣ. ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ನೀಡಿದ ಸ್ಥಾನಮಾನ ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ …

Read More »

ಕಾವೇರಿದ ಕಣ; ಮೂರು ಪಕ್ಷಗಳಲ್ಲೂ ಬಿರುಸಿನ ರಾಜಕಾರಣ ಆರಂಭ

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಅಧಿವೇಶನದ ಮಧ್ಯೆಯೂ ರಾಜಕೀಯ ವಿದ್ಯಮಾನಗಳು ಬಿರುಸಾಗುತ್ತಿವೆ. ಕಳೆದ ವಾರ ಕರಾವಳಿ ಜಿಲ್ಲೆಯ ನಾಯಕರಿಗೆ ಟಾಸ್ಕ್ ನಿಗದಿ ಮಾಡಿ ತೆರಳಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫೆ. 23ರಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜಧಾನಿಯ ನಾಯಕರಿಗೆ ರಾಜಕೀಯ ಪಾಠ ಮಾಡಲಿದ್ದಾರೆ.   ಎರಡು ದಿನಗಳಿಂದ ರಾಜ್ಯದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ಪ್ರವಾಸ ಮುಗಿಸಿ ದಿಲ್ಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ಅಮಿತ್‌ ಶಾ …

Read More »

ಮಾ. 1ರಿಂದ ಮುಷ್ಕರ: ಸರಕಾರಿ ನೌಕರರ ಎಚ್ಚರಿಕೆ

ಬೆಂಗಳೂರು: ಹಳೆಯ ಪಿಂಚಣಿ ಯೋಜನೆ ಜಾರಿ ಸಹಿತ 2 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರಿ ನೌಕರರ ಸಂಘ ಸರಕಾರಕ್ಕೆ ಒಂದು ವಾರದ ಗಡುವು ನೀಡಿದೆ. ಫೆ. 28ರ ಒಳಗೆ ಬೇಡಿಕೆ ಈಡೇರಿಸದೆ ಇದ್ದರೆ ಮಾ. 1ರಿಂದ ಸರಕಾರಿ ನೌಕರರು ರಾಜ್ಯ ವ್ಯಾಪಿಯಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಎಚ್ಚರಿಸಿದ್ದಾರೆ. ಕಬ್ಬನ್‌ ಪಾರ್ಕ್‌ನ ಸರಕಾರಿ ನೌಕರರ ಸಭಾಂಗಣದಲ್ಲಿ ಮಂಗಳವಾರ ನಡೆದ ಸರಕಾರಿ …

Read More »

ಸವದತ್ತಿ: ಕಾಲೇಜಿನ ಪ್ರತಿಷ್ಠೆಗಾಗಿ ಪ್ರಾಚಾರ್ಯ ಹಾಗೂ ಸಿಬ್ಬಂದಿಗಳು ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ

ಸವದತ್ತಿ: ಕಾಲೇಜಿನ ಪ್ರತಿಷ್ಠೆಗಾಗಿ ಪ್ರಾಚಾರ್ಯ ಹಾಗೂ ಸಿಬ್ಬಂದಿಗಳು ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಿದ್ದಾರೆ. ಪಿಯುಸಿ ಪ್ರಥಮ ವರ್ಷದ ಮಕ್ಕಳ ಹಾಜರಾತಿ ನೆಪವೊಡ್ಡಿ 72 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನಿಷೇಧಿಸಲಾಗಿದೆ. ಪ್ರತಿವರ್ಷ ಇದನ್ನು ಮುಂದುವರೆಸಿದೆ ಎಂದು ಕರ್ನಾಟಕ ಸಮತಾ ಸೈನಿಕ ದಳದ ಬೆಳಗಾವಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಬಸವರಾಜ ತಳವಾರ ಆಕ್ರೋಶಿದರು. ಇಲ್ಲಿನ ಜಿ.ಜಿ. ಚೋಪ್ರಾ ಕಾಲೇಜಿನಲ್ಲಿ ಹಾಜರಾತಿ ನೆಪವೊಡ್ಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನಿರಾಕರಿಸಿದ್ದನ್ನು ಖಂಡಿಸಿ ದಲಿತ ಮುಖಂಡರು ಹಾಗೂ ವಿದ್ಯಾರ್ಥಿಗಳಿಂದ …

Read More »

24.93 ಲಕ್ಷ ಮೌಲ್ಯದ ಅಡುಗೆ ಎಣ್ಣೆ ಕಳ್ಳತನ ಪ್ರಕರಣ: ಮೂರೇ ದಿನದಲ್ಲಿ ಕಳ್ಳರು ಅಂದರ್

ಬೆಳಗಾವಿ: ಮಂಗಳೂರಿನಿಂದ ನಿಪ್ಪಾಣಿ ಕಡೆಗೆ ಲಾರಿಯಲ್ಲಿ ಅಡುಗೆ ಎಣ್ಣೆ ತೆಗೆದುಕೊಂಡು ಹೋಗುವಾಗ ತಡೆದು ಕಳ್ಳತನ ಮಾಡಿದ್ದ ಆರೋಪಿಗಳನ್ನು ಮೂರೇ ದಿನದಲ್ಲಿ ಪತ್ತೆ ಹಚ್ಚಿ 24.93 ಲಕ್ಷ ರೂ. ಮೌಲ್ಯದ ಅಡುಗೆ ಎಣ್ಣೆ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.   ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು ಬಂಧಿತರಿಂದ 23,93,560 ರೂ. ಮೌಲ್ಯದ 878 ಅಡುಗೆ ಎಣ್ಣೆ ಟನ್‌ಗಳು ಹಾಗೂ 14 ಬಾಕ್ಸ್ ಎಣ್ಣೆ ಪೌಚ್‌ಗಳು, ದ್ವಿಚಕ್ರ ವಾಹನ ಸೇರಿ ಒಟ್ಟು 24,23,560 …

Read More »

ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ..

ವಿಧಾನಸಭೆ: ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ. ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರಲಿದ್ದು, ಈ ಅವಧಿಯಲ್ಲಾದರೂ ಪ್ರೀತಿ ತೋರಿಸಿ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್‌ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ್ದಾರೆ.   ನನ್ನ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ರಸ್ತೆ ಹಾಳಾಗಿದ್ದು ದುರಸ್ತಿ ಆಗಬೇಕಿದೆ. ನೆರೆ ತಡೆ ಗೋಡೆ ನಿರ್ಮಾಣ ಮಾಡುವುದು ಸೇರಿದಂತೆ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ರಸ್ತೆ ಮತ್ತಿತರ ಮೂಲಸೌಕರ್ಯಗಳ …

Read More »

ಮಗುವಿನ ಚಿಕಿತ್ಸೆಗೆ ₹11.6 ಕೋಟಿ ನೀಡಿ, ಹೆಸರು ಬಹಿರಂಗಪಡಿಸಬೇಡಿ ಎಂದ ಪುಣ್ಯಾತ್ಮ!

ಮುಂಬೈ: ಬೆನ್ನುಮೂಳೆಯ ಸ್ನಾಯು ಕ್ಷೀಣತೆ (Spinal Muscular Atrophy) ರೋಗದಿಂದ ಬಳಲುತ್ತಿರುವ 15 ತಿಂಗಳ ಮಗುವಿನ ಚಿಕಿತ್ಸೆ 17.5 ಕೋಟಿ ರೂಪಾಯಿಗಳು ಅವಶ್ಯಕತೆಯಿದೆ. ಅದಕ್ಕಾಗಿ ಕುಟುಂಬ ಸರ್ಕಾರ ಹಾಗೂ ಕ್ರೌಡ್​ ಫಂಡಿಂಗ್ (Crowd Funding) ಮೂಲಕ ನೆರವು ಕೋರಿದ್ದರು. ಇದೀಗ ಮಾನವೀಯ ಮನೋಭಾವನೆಯುಳ್ಳ (Humanitarian Spirit) ಅನಾಮಧೇಯ ವ್ಯಕ್ತಿಯೊಬ್ಬರು ಬರೋಬ್ಬರಿ 11.6 ಕೋಟಿ (1.4 ಮಿಲಿಯನ್ ಡಾಲರ್) ರೂಪಾಯಿಗಳನ್ನು ದೇಣಿಗೆ ನೀಡಿ ಔದಾರ್ಯ ಮೆರೆದಿದ್ದಾರೆ. ಮಗುವಿನ ಜೀವ ಉಳಿಸಿಕೊಳ್ಳಲು ಹಣ …

Read More »

ರೋಹಿಣಿ, ರೂಪಾ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್ : ಮತ್ತೊಂದು ‘ವಾಟ್ಸಾಪ್ ಚಾಟ್’ ಲಿಸ್ಟ್ ಫೋಟೋ ವೈರಲ್

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇಬ್ಬರ ವರ್ಗಾವಣೆ ನಡುವೆಯೇ ಮತ್ತೊಂದು ‘ವಾಟ್ಸಾಪ್ ಚಾಟ್’ ವೈರಲ್ ಆಗಿದೆ. ಈಗಾಗಲೇ ರೋಹಿಣಿ ಸಿಂಧೂರಿಯ ಹಲವು ವಾಟ್ಸಾಪ್ ಚಾಟ್ ಲಿಸ್ಟ್ ಗಳನ್ನ ಐಪಿಎಸ್ ಅಧಿಕಾರಿ ಡಿ ರೂಪ ಬಿಡುಗಡೆ ಮಾಡಿದ್ದರು. ಇದೀಗ ಇಬ್ಬರು ಅಧಿಕಾರಿಗಳ ವರ್ಗಾವಣೆಗೂ ಮುನ್ನ ಡಿ ರೂಪ-ಸಿ ಎಸ್ ವಂದಿತಾ ಶರ್ಮಾ ಜೊತೆ ನಡೆಸಿದ್ದರು ಎನ್ನಲಾದ …

Read More »

ಜಾಮೀನು ಸಿಕ್ಕ ತಕ್ಷಣ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸಿದ ಸಪ್ನಾ ಗಿಲ್!

ಕ್ರಿಕೆಟಿಗ ಪೃಥ್ವಿ ಶಾ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ಭೋಜ್ಪುರಿ ನಟಿ ಸಪ್ನಾ ಗಿಲ್ ನಡುವಿನ ಜಗಳ ಸಾಕಷ್ಟು ಸುದ್ದಿ ಮಾಡಿತ್ತು. ಕ್ರಿಕೆಟಿಗ ಪೃಥ್ವಿ ಶಾ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ಭೋಜ್ಪುರಿ ನಟಿ ಸಪ್ನಾ ಗಿಲ್ ನಡುವಿನ ಜಗಳ ಸಾಕಷ್ಟು ಸುದ್ದಿ ಮಾಡಿತ್ತು. ಈ ಸಂಬಂಧ ಪೃಥ್ವಿ ಶಾ ಸ್ನೇಹಿತರು ಓಶಿವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಪ್ನಾ ಗಿಲ್ ಅನ್ನು …

Read More »

ಮತದಾನ ಸಮಯ ಕಾಯ್ದಿರಿಸಿ!- ಮೊಬೈಲ್‌ ಆಯಪ್‌ ಅಭಿವೃದ್ಧಿಪಡಿಸಿದ ಚು. ಆಯೋಗ

ಬೆಂಗಳೂರು: ಸಿನೆಮಾ, ರೈಲ್ವೇ ಟಿಕೆಟ್‌ಗಳನ್ನು ಮುಂಚಿತವಾಗಿಯೇ ಕಾಯ್ದಿರಿಸುವಂತೆ ಈಗ ನೀವು ಮತದಾನ ಮಾಡುವ ಸಮಯವನ್ನೂ ಮೊದಲೇ ನಿಗದಿ ಮಾಡಿಕೊಳ್ಳಬಹುದು! ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣ ವಿಭಾಗ ನೂತನ ಮೊಬೈಲ್‌ ಅಪ್ಲಿಕೇಷನ್‌ ಸಿದ್ಧಪಡಿಸುತ್ತಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಆಯೋಗ ಈಗಿನಿಂದಲೇ ಸಿದ್ಧತೆ ನಡೆಸಿದೆ. ಇದು ಯಶಸ್ವಿಯಾದರೆ ಮುಂದಿನ ಹಂತಗಳಲ್ಲಿ ರಾಜ್ಯದೆಲ್ಲೆಡೆ ವಿಸ್ತರಿಸುವ ಆಲೋಚನೆ ಆಯೋಗಕ್ಕಿದೆ. ಮತದಾನ ಮಾಡಲು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ …

Read More »