Breaking News

Yearly Archives: 2023

ರಾಜ್ಯ ಸರ್ಕಾರ ಶೀಘ್ರವೇ ಮೀಸಲಾತಿ ಕೊಡುತ್ತದೆ ಎನ್ನುವ ಭರವಸೆ ಇದೆ.:ಬಸವಜಯ ಮೃತ್ಯುಂಜಯ ಶ್ರೀ

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ ಶೀಘ್ರವೇ ಮೀಸಲಾತಿ ಕೊಡುತ್ತದೆ ಎನ್ನುವ ಭರವಸೆ ಇದೆ. ಎಲ್ಲಾ ಪಕ್ಷಗಳಿಗೂ ಪಂಚಮಸಾಲಿ ಮತಗಳು ಬೇಕು. ಹೀಗಾಗಿ ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಇಂದು ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಸರ್ವಪಕ್ಷಗಳ ಪಂಚಮಸಾಲಿ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಹೋರಾಟಕ್ಕೆ ಸರಿಯಾದ ನ್ಯಾಯ …

Read More »

ಕಾಂಗ್ರೆಸ್ ಪಕ್ಷ​ ಅಧಿಕಾರಕ್ಕೆ ಬಂದಾಗಲೆಲ್ಲ ಗೂಂಡಾ ಪ್ರವೃತ್ತಿ ತೋರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ

ಬೆಳಗಾವಿ: “ಕಾಂಗ್ರೆಸ್​ ಗೂಂಡಾ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ” ಎಂದು ವಿಪಕ್ಷ ನಾಯಕ ಆರ್​.ಅಶೋಕ್ ಆರೋಪಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಈ ಹಿಂದೆ 2013ರಿಂದ 2018ರವರೆಗೆ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಸುಮಾರು 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿತ್ತು” ಎಂದರು. ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ಆರ್​. …

Read More »

ದೇವಸ್ಥಾನ ಪುನರಾಭಿವೃದ್ಧಿ ಯೋಜನೆ ಅನುದಾನ ದುರ್ಬಳಕೆ ಆರೋಪ: ತನಿಖೆಗೆ ಸಚಿವರ ರಾಮಲಿಂಗಾರೆಡ್ಡಿ ಆದೇಶ

ದೇವಸ್ಥಾನಗಳ ಅಭಿವೃದ್ಧಿ ಮತ್ತು ದುರಸ್ತಿಗೆ ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ ಅನುದಾನ ದುರ್ಬಳಕೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸೋಮವಾರ ಹೇಳಿದರು. ಬೆಳಗಾವಿ: ‘ದೇವಸ್ಥಾನಗಳ ಅಭಿವೃದ್ಧಿ ಮತ್ತು ದುರಸ್ತಿಗೆ ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ ಅನುದಾನ ದುರ್ಬಳಕೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸೋಮವಾರ …

Read More »

ರೈತರ ನೆರವಿಗೆ ರೂ.10 ಸಾವಿರ ಕೋಟಿ ನೀಡಿ: ಸರ್ಕಾರಕ್ಕೆ ಬಿಜೆಪಿ ಎಂಎಲ್ ಸಿ ಪೂಜಾರಿ ಆಗ್ರಹ

ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಅವರು, ರೈತರ ನೆರವಿಗೆ ಕೂಡಲೇ 10 ಸಾವಿರ ಕೋಟಿ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ. ಬೆಳಗಾವಿ: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಅವರು, ರೈತರ ನೆರವಿಗೆ ಕೂಡಲೇ 10 …

Read More »

ಹುಬ್ಬಳ್ಳಿಯ ಹಜರತ್ ಬಾದಶಾ ಪೀರ್ ದರ್ಗಾ ಅಭಿವೃದ್ಧಿಗೆ ಅನುದಾನ ಬಿಡುಗಡೆ:ಸಿದ್ದರಾಮಯ್ಯ

ಹುಬ್ಬಳ್ಳಿಯ ಹಜರತ್ ಬಾದಶಾ ಪೀರ್ ದರ್ಗಾ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಭರವಸೆ ನೀಡಿದರು. ಹುಬ್ಬಳ್ಳಿ: ಹುಬ್ಬಳ್ಳಿಯ ಹಜರತ್ ಬಾದಶಾ ಪೀರ್ ದರ್ಗಾ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಭರವಸೆ ನೀಡಿದರು. ಹುಬ್ಬಳ್ಳಿಯ ಹಜರತ್ ಬಾದ್ ಶಾ ಪೀರಾನ್ ದರ್ಗಾದ ಆವರಣದಲ್ಲಿ ನಡೆದ ಬೃಹತ್ ಔಲಾದೇ ಗೌಸೆ ಅಜಮ್ (ಮೆಹಬೂಬೇ ಸುಭಾನೇ ಮಕ್ಕಳ ಸಮಾವೇಷ) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ …

Read More »

ಕರ್ನಾಟಕ-ತಮಿಳುನಾಡು ನಡುವಿನ ರೈಲು ಸಂಚಾರದಲ್ಲಿ ಅಡಚಣೆ

ಮಿಚಾಂಗ್ ಚಂಡಮಾರುತವು ತಮಿಳುನಾಡು-ಕರ್ನಾಟಕದ ನಡುವೆ ಚಲಿಸುವ 40ಕ್ಕೂ ಹೆಚ್ಚು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಬೆಂಗಳೂರು: ಮಿಚಾಂಗ್ ಚಂಡಮಾರುತವು ತಮಿಳುನಾಡು-ಕರ್ನಾಟಕದ ನಡುವೆ ಚಲಿಸುವ 40ಕ್ಕೂ ಹೆಚ್ಚು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಚಂಡಮಾರುತದ ಪರಿಣಾಮ ದಕ್ಷಿಣ ರೈಲ್ವೆ ಒಂಬತ್ತು ರೈಲುಗಳನ್ನು ರದ್ದುಗೊಳಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. .. ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 20607/20608); ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ …

Read More »

ಪೊಲೀಸ್ ಠಾಣೆ ಆವರಣದಲ್ಲಿಯೇ ಮದುವೆ

ಧಾರವಾಡ: ಯುವಕ ಮತ್ತು ಯುವತಿ ಮದುವೆ ವಯಸ್ಸಿಗೆ ಬಂದವರಿದ್ದರೇ, ಧರ್ಮ ಜಾತಿ ಯಾವುದೇ ಇರಲಿ, ಪರಸ್ಪರ ಒಪ್ಪಿ ಮದುವೆ (Love Marriage) ಆಗೋದಕ್ಕೆ ಕಾನೂನಿನಲ್ಲಿ ಒಪ್ಪಿಗೆಯೇ ಇದೆ. ಆದರೆ ಈ ರೀತಿ ಆಗಿದ್ದ ಮದುವೆಯೊಂದನ್ನು ಮುರಿದು, ಪ್ರೇಮಿಗಳನ್ನು ಬೇರ್ಪಡಿಸಲು ಮುಂದಾಗಿರೋ ಪೊಲೀಸರ ಮೇಲೆಯೇ ಬಂದಿತ್ತು. ಕೊನೆಗೆ ಠಾಣೆಯಲ್ಲಿಯೇ ಪೊಲೀಸರು (Dharwad Police) ಜೋಡಿಗೆ ಮದುವೆ ಮಾಡಿ ಕಳುಹಿಸಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ್ ಮಾಯಕಾರ …

Read More »

ಭ್ರಷ್ಟರಿಗೆ ‘ಲೋಕಾಯುಕ್ತ’ ಶಾಕ್ : ರಾಜ್ಯದ ಹಲವೆಡೆ ದಾಳಿ,

ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ 13 ಸರ್ಕಾರಿ ಅಧಿಕಾರಿಗಳ 63 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೂರು ಸ್ಥಳಗಳು, ಬೀದರ್ ಎರಡು ಸ್ಥಳಗಳು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ ಮತ್ತು ಧಾರವಾಡದ ತಲಾ ಒಂದು ಸ್ಥಳಗಳ ಮೇಲೆ 200 ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.   ಜಕ್ಕೂರಿನ ಅಮೃತ್ ಹಳ್ಳಿಯಲ್ಲಿರುವ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ …

Read More »

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಪ್ತ ಸಂಬಂಧಿಗೂ ಲೋಕಾಯುಕ್ತ ಶಾಕ್‌!

ಕಲಬುರಗಿ : ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಸಿಬ್ಬಂದಿ (Lokayukta) 13 ಮಂದಿ ಅಧಿಕಾರಿಗಳ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದು, ಅವರ ಪೈಕಿ ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ಅವರ ಪತ್ನಿಯ ಸೋದರ ಸಹ ಸೇರಿದ್ದಾರೆಂದು ತಿಳಿದುಬಂದಿದೆ. ಕಲಬುರಗಿಯ (Kalaburagi) ಕರುಣೇಶ್ವರ ಕಾಲನಿಯಲ್ಲಿರುವ ಡಾ. ಪ್ರಭುಲಿಂಗ ಮಾನಕರ್‌ (Dr Prabhulinga Mankar) ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಾದಗಿರಿಯ ಜಿಲ್ಲಾ ಆರೋಗ್ಯಾಧಿಕಾರಿಯಾಗಿ …

Read More »

ಪೃಥ್ವಿ ಸಿಂಗ್‌ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ : ರಮೇಶ್‌ ಜಾರಕಿಹೊಳಿ ಆಪ್ತ ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೃಥ್ವಿ ಸಿಂಗ್‌ ಗೆ ಚಾಕು ಇರಿತ ಪ್ರಕರಣ ರಾಜಕೀಯ ಪ್ರೇರಿತವೋ ಅಥವಾ ಶಡ್ಯಂತ್ರವೋ ಗೊತ್ತಾಗಬೇಕು. ಆತ ಮೋಸ್ಟ್‌ ಬೋಗಸ್‌ ಎಂದಿದ್ದಾರೆ. ನಮ್ಮ ಕುಟುಂಬದವರೆಲ್ಲರೂ ಶಾಂತಿ ಪ್ರಿಯರು. ಎಸ್ ಪಿ ಜೊತೆ ಮಾತನಾಡಿದ್ದೇನೆ. ಚಾಕು ಇರಿತದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕಿದೆ. …

Read More »