Breaking News

Yearly Archives: 2023

ಹೆಡ್ಗೆವಾರ್ ತರಹದ ಹೇಡಿಗಳನ್ನು ನಮ್ಮ‌ ಮಕ್ಕಳ ಪಠ್ಯದಲ್ಲಿರಲು ಬಿಡಲ್ಲ-ಬಿ.ಕೆ.ಹರಿಪ್ರಸಾದ್

ಶಿವಮೊಗ್ಗ: ”ಸಂಘ ಪರಿವಾರದ ಸಿದ್ಧಾಂತಗಳು ಯಾವುದೇ ಇಲಾಖೆಯಲ್ಲಿ ತೂರಲು ಬಿಡೋದಿಲ್ಲ. ಹೆಡ್ಗೆವಾರ್ ತರಹದ ರಣಹೇಡಿಗಳ ಪಠ್ಯ ಇರೋದಿಲ್ಲ” ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಶಿವಮೊಗ್ಗದಲ್ಲಿ ಇಂದು ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ”ಭಾರತೀಯ ಜನತಾ ಪಾರ್ಟಿಯ ಅನೈತಿಕ ಸರ್ಕಾರ ಮಾಡಿದ ಮೇಲೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ನಾಲ್ಕು ವರ್ಷ ಇವರ ಆಡಳಿತ ನೋಡಿದ್ದೇನೆ. ಕೃಷಿ, ಕಾರ್ಮಿಕ, ಶಿಕ್ಷಣ ಇಲಾಖೆಯಲ್ಲಿ ಸಂಪೂರ್ಣ ಕೇಸರೀಕರಣ ಮಾಡಲು ಬಿಜೆಪಿ ಹೊರಟಿತ್ತು. ಭಾರತ ಸಾವಿರಾರು …

Read More »

ಬುಡಾ ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಕ್ರಮ ಕೈಗೊಳ್ಳಲಿ: ಟೋಪಣ್ಣವರ

ಬೆಳಗಾವಿ: ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೋ ಅಥವಾ ಭ್ರಷ್ಟಾಚಾರದ ಪರ ಕೆಲಸ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು‌ ಆಮ್ ಆದ್ಮಿ ಪಕ್ಷದ ಉತ್ತರ ಕರ್ನಾಟಕ ಉಸ್ತುವಾರಿ‌ ರಾಜಕುಮಾರ ಟೋಪಣ್ಣವರ ಆರೋಪಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2022 ಮಾರ್ಚ್​ 18 ರಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಕ್ಷನ್ ಮಾಡದೆ ಸೈಟ್ ಹಂಚಿಕೆ ಮಾಡಿರುವ ಕುರಿತು ನಗರ ಪೊಲೀಸ್ ಇಲಾಖೆ, ಲೋಕಾಯುಕ್ತಕ್ಕೆ ದೂರು ನೀಡಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿರಲಿಲ್ಲ. …

Read More »

ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಲೈನ್‌ಮ್ಯಾನ್

ಧಾರವಾಡ: ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್ ಸ್ಪರ್ಶಿಸಿ ಲೈನ್‌ಮ್ಯಾನ್ ಸಾವಿಗೀಡಾಗಿರುವ ಘಟನೆ ಧಾರವಾಡ ತಾಲೂಕಿನ ಬೇಲೂರಿನಲ್ಲಿ ನಡೆದಿದೆ. ಶಿಬಾರಗಟ್ಟಿ ಗ್ರಾಮದ ನಿಜಗುಣಿ ಗಿರಿಯಪ್ಪನವರ (28) ಎಂಬುವವರೇ ಸಾವಿಗೀಡಾದ ಲೈನ್‌ಮ್ಯಾನ್. ಇಂದು ಬೇಲೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಿಜಗುಣಿ ಅವರಿಗೆ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದ್ದಾರೆ. ಸದ್ಯ ನಿಜಗುಣಿ ಅವರ ಶವವನ್ನು ಧಾರವಾಡ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಶರಣಾದ

ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿಯ ಉಪ್ಪಾರವಾಡಿಯಲ್ಲಿ ಪತಿಯೋರ್ವ ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತ ಮಹಿಳೆ ಉಪ್ಪರವಾಡಿ ಗಲ್ಲಿಯ ಉಷಾ ಖೋತ (29) ಎಂದು ತಿಳಿದುಬಂದಿದೆ. ಇನ್ನು ಪತಿ ಧರೆಪ್ಪ ಖೋತ ಕೊಲೆಗೈದ ಆರೋಪಿಯಾಗಿದ್ದಾನೆ‌. ಮೃತ ಉಷಾ ಮನೆಯ ಕೊಠಡಿಯಲ್ಲಿ ಮಲಗಿದ್ದಾಗ ಪತಿ ಧರೆಪ್ಪ ಖೋತಾ ಚಾಕುವಿನಿಂದ ಕತ್ತಿಗೆ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.ಬಳಿಕ …

Read More »

ಕೆಲಸ ಇಲ್ಲದವನೆಂದು ಬೈದು ಬುದ್ಧಿವಾದ ಹೇಳಿದ್ದ ಅಜ್ಜಿಯನ್ನು ಕೊಂದು ಸುಟ್ಟುಹಾಕಿದ್ದ ಮೊಮ್ಮಗ

ಮೈಸೂರು: ಅಜ್ಜಿ ದಿನನಿತ್ಯ ಬೈಯುತ್ತಿದ್ದಕ್ಕೆ ಬೇಸತ್ತು ಕೋಪದಿಂದ ಮೊಮ್ಮಗ ಅಜ್ಜಿಯನ್ನೇ ಕೊಂದು ನಂತರ ಸುಟ್ಟುಹಾಕಿದ ಘಟನೆ ನಗರದ ಗಾಯತ್ರಿ ಪುರಂನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.   ಮೈಸೂರು ನಗರದ ಗಾಯತ್ರಿ ಪುರಂ ನಿವಾಸಿ ಸುಪ್ರೀತ್ (23) ಬಂಧಿತ ಆರೋಪಿ. ಈತ ತನ್ನ ಅಜ್ಜಿ ಸುಲೋಚನಾ (75) ಅವರನ್ನು ಕೊಲೆಗೈದಿದ್ದ. ಮನೆಯಲ್ಲಿ ಸದಾ ತನಗೆ ಕೆಲಸ ಇಲ್ಲದವನು ಎಂದು ಅಜ್ಜಿ ಬೈಯುತ್ತಿದ್ದಳು. ಇದರಿಂದ ಬೇಸತ್ತು ಅಜ್ಜಿಯನ್ನು ಹೊಡೆದು ಸಾಯಿಸಿ, ಶವವನ್ನು …

Read More »

ಲೋಕಸಭೆ ಚುನಾವಣೆಗೆ ಶಾಸಕರಿಗೆ ಗುರಿ ನೀಡುವ‌ ಕುರಿತು ಚರ್ಚೆ- ಬೊಮ್ಮಾಯಿ

ಬೆಂಗಳೂರು: ”ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕರಿಗೆ ಗುರಿ ನೀಡುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ನೂತನ ಶಾಸಕರ ಅಭಿನಂದನಾ ಸಮಾರಂಭದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ”ಹೊಸ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಗಿದೆ. ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಏನೆಲ್ಲ ಮಾಡಬಹುದಿತ್ತು ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ” ಎಂದರು. ಇದೇ ವೇಳೆ ವಿಧಾನಸಭೆ ಪ್ರತಿಪಕ್ಷದ ನಾಯಕನ ಆಯ್ಕೆ …

Read More »

ಕುಡಿಯುವ ನೀರಿನ ಸಮಸ್ಯೆಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ

ಚಿಕ್ಕೋಡಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನಲೆಯಲ್ಲಿ ಮಹಿಳೆಯರು ಪುರಸಭೆ ಎದುರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಒಂದು ತಿಂಗಳೊಳಗೆ ಸಮರ್ಪಕ ನೀರು ಪೂರೈಕೆ ಆಗದಿದ್ದರೆ ಚಿಕ್ಕೋಡಿ ಬಂದ್ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆಯನ್ನು ನೀಡಿದರು. ಚಿಕ್ಕೋಡಿ ಪುರಸಭೆ ಎದುರು ಮಹಿಳೆಯರು ಹಾಗೂ ಕಾಂಗ್ರೆಸನ ಸದಸ್ಯರು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರಿಗೆ ಮನವಿಯನ್ನು ನೀಡಲಾಯಿತು. ಕಳೆದ ತಿಂಗಳಿನಿಂದ ಚಿಕ್ಕೋಡಿ ಪಟ್ಟಣದ ಎಲ್ಲ …

Read More »

ಹಿಂದೂಗಳ ಭಾವನೆಗೆ ದಕ್ಕೆಮಾಡಿದವರನ್ನು ಕೂಡಲೆ ಪೋಲಿಸರು ಬಂಧಿಸುವಂತೆ ಮನವಿ

ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂಗಳ ಭಾವನೆಗೆ ದಕ್ಕೆಮಾಡಿದವರನ್ನು ಕೂಡಲೆ ಪೋಲಿಸರು ಬಂಧಿಸುವಂತೆ ವಿವಿಧ ಹಿಂದೂ ಸಂಘಟನೆಗಳು ಮನವಿ ಬೆಳಗಾವಿಯ ಕೊಲ್ಲಾಪುರ ನಿಪ್ಪಾಣಿಗಳಲ್ಲಿ ನಡೆದ ಘಟನೆಗೆ ಸಂಭದಿಸಿದಂತೆ ನಗರದಲ್ಲಿಯು ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವವರನ್ನು ಕೂಡಲೆ ಬಂಧಿಸುವಂತೆ ವಿವಿಧ ಹಿಂದೂಪರ ಸಂಘಟನೆಗಳು ಇಂದು ಎಸಿಪಿ ನಾರಾಯಣ ಭರಮನಿಗೆ ಅವರಿಗೆ ಮನವಿಯನ್ನು ಸಲ್ಲಿಸಿದರು. ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ಶ್ರೀರಾಮ ಸೇನೆ ಹಿಂದೂ ರಾಷ್ಟ್ರದ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಕೊಲ್ಲಾಪುರ ನಿಪ್ಪಾಣಿಗಳಲ್ಲಿನಡೆದ ಘಟನೆಗಳು ಹಿಂದೂಗಳ ಭಾವನೆ …

Read More »

ಫೈನಾನ್ಸ್ ಕಂಪನಿಗೆ 5.47 ಲಕ್ಷ ಪಂಗನಾಮ

ವಾಣಿಜ್ಯನಗರಿ ಹುಬ್ಬಳ್ಳಿಯ ಜೆಸಿ ನಗರದ ಶ್ರೀರಾಮ ಸಿಟಿ ಯೂನಿಯನ್‌ ಫೈನಾನ್ಸ್‌ ಕಂಪನಿಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಾಕರ ಜಯರಾಜ ಅವರು, ಗ್ರಾಹಕರು ತುಂಬಿದ 5.47 ಲಕ್ಷವನ್ನು ಸ್ವಂತಕ್ಕೆ ಬಳಸಿಕೊಂಡು ಕಂಪನಿಗೆ ವಂಚನೆ ಮಾಡಿದ ಪ್ರಕರಣ ಶಹರ ಠಾಣೆಯಲ್ಲಿ ದಾಖಲಾಗಿದೆ. ಅರವಿಂದ ನಗರದ ದಿವಾಕರ ಅವರು ಫೈನಾನ್ಸ್‌ ಕಂಪನಿಯಲ್ಲಿ ಶಾಖಾ ವ್ಯವಸ್ಥಾಪಕ, ಶಾಖಾ ಹಿರಿಯ ವ್ಯವಸ್ಥಾಪಕ, ವಿಭಾಗೀಯ ವ್ಯವಸ್ಥಾಪಕ ಮತ್ತು ಪ್ರಾದೇಶಿಕ ವ್ಯವಹಾರಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ವೇಳೆ …

Read More »

ಶಕ್ತಿ ಯೋಜನೆಯಿಂದ ಹೊರಗುಳಿದ ಚಿಗರಿ: ಹು-ಧಾ ಮಹಿಳೆಯರಿಗೆ ಎಸಿ ಬಸ್ ಪ್ರಯಾಣ ಭಾಗ್ಯವಿಲ್ಲ

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಹುಬ್ಬಳ್ಳಿ- ಧಾರವಾಡದ ಪ್ರತಿಷ್ಠಿತ ಬಿ.ಆರ್.ಟಿ.ಎಸ್ ಯೋಜನೆ ಈಗ ಸರ್ಕಾರಕ್ಕೆ ತಲೆನೋವಾಗಿದೆ. ಉಚಿತ ಬಸ್ ಪ್ರಯಾಣದ ಭರವಸೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಈಗ ಚಿಗರಿ ಚಿಂತಿಸುವ ಕಾಲಘಟ್ಟಕ್ಕೆ ಬಂದು ತಲುಪಿದೆ. ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯ ಚಿಗರಿ ಬಸ್, ಸಾರಿಗೆ ವ್ಯಾಪ್ತಿಯ ಹವಾ ನಿಯಂತ್ರಿತ ಬಸ್ ಆಗಿದ್ದು, ಚಿಗರಿ ಬಸ್​ನಲ್ಲೂ ಫ್ರೀ ಬಿಡಬೇಕು ಎಂಬ ಮಾತು ಕೇಳಿಬಂದಿದೆ. ಆದರೆ ಹುಬ್ಬಳ್ಳಿ- ಧಾರವಾಡ ನಡುವೆ ಸಂಚರಿಸುವ ಹವಾನಿಯಂತ್ರಿತ …

Read More »