Breaking News

Yearly Archives: 2023

ಮಹಿಷಾ ದಸರಾ, ಚಲೋ ಜಾಥಾಗೆ ನಿರಾಕರಣೆ: ಚಾಮುಂಡಿ ಬೆಟ್ಟ ಹಾಗೂ ಮೈಸೂರು ನಗರದಲ್ಲಿ ನಿಷೇದಾಜ್ಞೆ, ಬಿಗಿ ಬಂದೋಬಸ್ತ್​​

ಮೈಸೂರು: ಮಹಿಷಾ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟ ಹಾಗೂ ಮೈಸೂರು ನಗರದಲ್ಲಿ ಮಧ್ಯರಾತ್ರಿಯಿಂದ ನಾಳೆ ಬೆಳಗ್ಗೆ6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷಾ ಪ್ರತಿಮೆ ಸುತ್ತ ಹಾಗೂ ನಾಲ್ಕು ಕಡೆ ಚಾಮುಂಡಿ ಬೆಟ್ಟದ ದ್ವಾರಗಳಲ್ಲಿ ಬಿಗಿಯಾದ ಪೊಲೀಸ್​ ಬಂದೋಬಸ್ತ್ ಹಾಕಲಾಗಿದೆ. ಈ ನಿಷೇಧಾಜ್ಞೆ ಕೇವಲ ಮಹಿಷಾ ದಸರಾ ಹಾಗೂ ಚಾಮುಂಡಿ ಚಲೋ …

Read More »

ಜ್ಯುವೆಲ್ಲರಿ ಶಾಪ್ ದರೋಡೆ ಪ್ರಕರಣ: ಹೈದರಾಬಾದ್​ನತ್ತ ಹೊರಟಿದ್ದ ಆರೋಪಿ ಸೆರೆ

ಬೆಂಗಳೂರು : ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಪ್ರಕರಣದಲ್ಲಿ ಇದೀಗ ಒಬ್ಬ ಆರೋಪಿಯನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೃತ್ಯದ ಬಳಿಕ ಹೈದರಾಬಾದ್​ಗೆ ವಿಮಾನ ಹತ್ತುವ ಯತ್ನದಲ್ಲಿದ್ದ ಹುಸೇನ್​ ಎಂಬಾತನನ್ನು ಅರೆಸ್ಟ್​ ಮಾಡಲಾಗಿದ್ದು, ಆತನ ಬಳಿ ಸ್ವಲ್ಪ ಪ್ರಮಾಣದ ಚಿನ್ನಾಭರಣ ದೊರೆಕಿದೆ. ಇನ್ನುಳಿದ ಆರೋಪಿಗಳಾದ ಸಿಕಂದರ್, ಶಿವ ಹಾಗೂ ವಿಕಾಸ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ‌. ಸಣ್ಣಪುಟ್ಟ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಶಿವನಿಗೆ …

Read More »

ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ ಎಂದು ಮಾಜಿ ಸಿಎಂ ಹಾಗೂ ಸಂಸದ ಸದಾನಂದಗೌಡ

ಬೆಂಗಳೂರು : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಒಳ್ಳೆಯ ಆಡಳಿತ ಕೊಡಬೇಕು ಅಂತಿದ್ದಾರೆ. ಬ್ರಾಂಡ್ ಬೆಂಗಳೂರು ಮಾಡಬೇಕು ಅಂದ್ರೆ ಆ ಕೆಲಸ ಮಾಡಬೇಕು, ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ ಎಂದು ಮಾಜಿ ಸಿಎಂ ಹಾಗೂ ಸಂಸದ ಸದಾನಂದಗೌಡ ಕಿಡಿಕಾರಿದರು. ನನ್ನ ಸಂಪರ್ಕದಲ್ಲಿ ಅನೇಕರು ಇದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿಕೆ ವಿಚಾರವಾಗಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರು ಮಾಡಬೇಕು ಅಂದ್ರೆ …

Read More »

ಸಭಾಪತಿ ಹೊರಟ್ಟಿ ಪತ್ನಿಗೆ ಮೋಸ-ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ಗೆ ಗ್ರಾಹಕರ ಆಯೋಗ ಖಡಕ್ ಸೂಚನೆ

ಧಾರವಾಡ: ಹುಬ್ಬಳ್ಳಿಯ ಪಿಂಟೋ ರಸ್ತೆ ನಿವಾಸಿಯಾದ ಹೇಮಲತಾ ಬ. ಹೊರಟ್ಟಿಯವರು ಅಲ್ಲಿಯ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ನವರು ಆರಂಭಿಸಿದ ಆದಿತ್ಯ ಗೋಲ್ಡ್ ಪರ್ಚೇಸ್ ಸ್ಕಿಮ್‌ಗೆ ಸದಸ್ಯರಾಗಿದ್ದರು. ನಿಯಮದಂತೆ ಪ್ರತಿ ತಿಂಗಳು 10,000 ರೂಪಾಯಿಗಳಂತೆ ಅವರು ಒಟ್ಟು 19 ಕಂತಿನ 1,90,000 ರೂಪಾಯಿಗಳನ್ನು ಕಟ್ಟಿದ್ದರು. 19 ಕಂತಿನ ಹಣ ಕಟ್ಟಿದ ಮೇಲೆ ಸದಸ್ಯರಿಗೆ 53.168 ಗ್ರಾಂ ತೂಕದ ಚಿನ್ನ ಕೊಡುವ ಕರಾರು ಇತ್ತು. ಪೂರ್ತಿ ಹಣ ಕಟ್ಟಿ ಯೋಜನಾ ಅವಧಿ ಮುಕ್ತಾಯವಾದರೂ ನಿಯಮಾನುಸಾರ …

Read More »

ರಾಜ್ಯದ ಜನತೆಗೆ ಲೋಡ್ ಶೆಡ್ಡಿಂಗ್ ಸಂಕಟ

ಬೆಳಗಾವಿ : ರಾಜ್ಯದಲ್ಲಿ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಸಂಭವಿಸುತ್ತಿದ್ದು, ರಾತ್ರಿ ಹೊತ್ತು ಕರೆಂಟ್ ಇಲ್ಲದೆ ಜನರು ಹಾಗೂ ಬೆಳೆಗಳಿಗೆ ನೀರು ಹಾಯಿಸಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಕೆಸರೆರಚಾಟ ನಡೆಸುತ್ತಿವೆ. ಈ ಕುರಿತು ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ರಾಜ್ಯ ಬಿಜೆಪಿ, ‘ಡಿಯರ್ ಕಾಂಗ್ರೆಸ್, ಕಾಣೆಯಾಗಿದ್ದ ಬಸ್ ಸ್ಟಾಂಡನ್ನು ಕೊನೆಗೂ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ, …

Read More »

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವಂತೆಯೇ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮತ್ತೆ ಮುನ್ನೆಲೆಗೆ

ಬೆಳಗಾವಿ : ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವಂತೆಯೇ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರ ಗಡಿ ತಜ್ಞರ ಸಮಿತಿ ಮುಖ್ಯಸ್ಥ ಮತ್ತು ಲೋಕಸಭಾ ಸಂಸದ ಧೈರ್ಯಶೀಲ್ ಮಾನೆ ಅವರು ಮುಂಬೈನಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಯೋಗದೊಂದಿಗೆ ಸಭೆ ನಡೆಸಿದ್ದಾರೆ. ಇಲ್ಲಿ ಮಹಾರಾಷ್ಟ್ರ ಸರ್ಕಾರದ ಜನ ಆರೋಗ್ಯ ವಿಮಾ ಯೋಜನೆಯನ್ನು ಕರ್ನಾಟಕದ 865 ಗಡಿ ಗ್ರಾಮಗಳ ಮರಾಠಿ ಭಾಷಿಕ ಜನರಿಗೆ ವಿಸ್ತರಿಸಲು ಚರ್ಚೆ ನಡೆಸಲಾಗಿದೆ. …

Read More »

ಪ್ರತ್ಯೇಕ 3 ಪೋಕ್ಸೊ ಪ್ರಕರಣ: ಅಪರಾಧಿಗಳಿಗೆ ದಂಡಸಮೇತ ಜೈಲು ಶಿಕ್ಷೆ

ಬೆಂಗಳೂರು : ಲೈಂಗಿಕ ದೌರ್ಜನ್ಯ ಸಂಬಂಧ ಪ್ರತ್ಯೇಕ ಮೂರು ಪೊಕ್ಸೋ ಪ್ರಕರಣಗಳಲ್ಲಿ ಮೂವರು ಅಪರಾಧಿಗಳಿಗೆ ತ್ವರಿತಗತಿ ವಿಶೇಷ ನ್ಯಾಯಾಲಯ (ಎಫ್​ಟಿಎಸ್​ಸಿ) ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತು. ನ್ಯಾಯಾಧೀಶರಾದ ಕೆ.ಎನ್‌.ರೂಪ ಅವರು ಅಪರಾಧಿಗಳಾದ ಬಾಬು, ದಿವಾಕರ ಹಾಗೂ ಚಿದಾನಂದ ಎಂಬವರಿಗೆ ಜೈಲುಶಿಕ್ಷೆ ವಿಧಿಸಿದರು. ಮಾರತ್​ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಬೀಸನಹಳ್ಳಿ‌ ‌ನಿವಾಸಿ ಬಾಬು ಎಂಬಾತನಿಗೆ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ‌ ದಂಡ ವಿಧಿಸಲಾಗಿದೆ. ಬಾಬು ತಮಿಳುನಾಡು ಮೂಲದವನಾಗಿದ್ದು, ನಗರದಲ್ಲಿ …

Read More »

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2023-24ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಪೂರ್ವಭಾವಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಬೆಂಗಳೂರು: ರಾಜ್ಯದ ರೈತರು, ಬಡವರು, ಆರ್ಥಿಕ ದುರ್ಬಲರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಸಿಗಬೇಕೆಂಬ ದೃಷ್ಟಿಯಿಂದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರಂಭಿಸಿದ್ದರು. ಈ ಯೋಜನೆಯು ಜೂನ್ 1, 2003 ರಂದು ಕಾರ್ಯರೂಪಕ್ಕೆ ಬಂದಿದೆ. ಕಾಲಾನಂತರದಲ್ಲಿ ಸ್ಥಗಿತಗೊಂಡಿತ್ತು. ರಾಜ್ಯದ ಸಹಕಾರಿಗಳು ಹಾಗೂ ರೈತರ ನಿರಂತರ ಒತ್ತಾಯ ಮತ್ತು ಬೇಡಿಕೆ ಪರಿಗಣಿಸಿ 2018ರಲ್ಲಿ ಸ್ಥಗಿತಗೊಳಿಸಿದ್ದ ಯಶಸ್ವಿನಿ ಯೋಜನೆಯನ್ನು ಪುನರ್‌ಜಾರಿಗೊಳಿಸಲು ಅಂದಿನ ರಾಜ್ಯ ಸರ್ಕಾರ ತೀರ್ಮಾನಿಸಿತು. 2022-23 ನೇ …

Read More »

ಹುಬ್ಬಳ್ಳಿ ದಲಿತರ ಕೇರಿಯಲ್ಲಿ ಪೇಜಾವರ ಶ್ರೀ ಪಾದಯಾತ್ರೆ

ಹುಬ್ಬಳ್ಳಿ: ಇಲ್ಲಿನ ಭುವನೇಶ್ವರಿ ನಗರದ ದಲಿತರ ಕಾಲೋನಿಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪಾದಯಾತ್ರೆ ನಡೆಸಿದರು. ವಿಶ್ವ ಹಿಂದೂ ಪರಿಷತ್, ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲೋಟಿ ಅವರ ಮನೆಗೆ ಶ್ರೀಗಳು ಭೇಟಿ ನೀಡಿದರು. ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಪ್ರಚಾರಕ ಬಸವರಾಜ್ ಅವರು ಕುಟುಂಬ ಸದಸ್ಯರನ್ನು ಶ್ರೀಗಳಿಗೆ ಪರಿಚಯಿಸಿದರು. ಕಾಲೋನಿಯ ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ದೇವಸ್ಥಾನದಲ್ಲಿ …

Read More »

ಬಹುಬೇಡಿಕೆ ನಟ ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಸಿನಿಮಾ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿದೆ.

ಶೀರ್ಷಿಕೆ ಹಾಗೂ ಹಾಡುಗಳಿಂದ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ ‘ಟಗರು ಪಲ್ಯ’. ಇಕ್ಕಟ್ ಚಿತ್ರ ಖ್ಯಾತಿಯ ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ‘ಟಗರು ಪಲ್ಯ’ ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕ ಡಾಲಿ ಧನಂಜಯ್ ಇಂದು ಅನೌನ್ಸ್ ಮಾಡಿದ್ದಾರೆ.         ಡಾಲಿ ಧನಂಜಯ್​ ಟ್ವೀಟ್​: ಸದ್ಯ ಮೇಕಿಂಗ್​​ನಿಂದ ಗಮನ ಸೆಳೆಯುತ್ತಿರುವ ಟಗರು ಪಲ್ಯ ಸಿನಿಮಾ ಬಿಡುಗಡೆ ದಿನಾಂಕವನ್ನು …

Read More »