ಶಿರಸಿ(ಉತ್ತರ ಕನ್ನಡ): ರಾಜ್ಯದಲ್ಲಿ ದಲಿತ ಸಿಎಂ ಆಗಲೂ ಇನ್ನೂ ಕಾಲ ಕೂಡಿ ಬಂದಿಲ್ಲ, ಕಾಲ ಕೂಡಿ ಬಂದಾಗ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕಾರ್ಯಕ್ರಮವೊಂದರ ನಿಮಿತ್ತ ಶಿರಸಿಗೆ ಶನಿವಾರ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಮಾಡುವಂತೆ ನಾವು ಒತ್ತಾಯ ಮಾಡಬಹುದು, ಆದರೆ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ದಲಿತ ಸಿಎಂ ವಿಚಾರ ಇಲ್ಲ ಎಂದರು. ಪಕ್ಷದ ಮುಖಂಡ ಬಿ ಕೆ ಹರಿಪ್ರಸಾದ್ ಅವರನ್ನು …
Read More »Monthly Archives: ಡಿಸೆಂಬರ್ 2023
ರಾಜ್ಯಕ್ಕೆ ಐಜಿಎಸ್ಟಿ ಕಡಿತ ಆಘಾತ: ಸ್ಪಷ್ಟನೆ ಕೋರಿ ಕೇಂದ್ರ ಸಚಿವರಿಗೆ ಸಿಎಂ ಪತ್ರ
ಬೆಂಗಳೂರು: ಬರ, ಗ್ಯಾರಂಟಿ ಯೋಜನೆಗಳಿಂದ ತೀವ್ರ ಆರ್ಥಿಕ ಹೊರೆ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಇದೀಗ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಕೇಂದ್ರ ಸರ್ಕಾರ ಕರ್ನಾಟಕದ ಐಜಿಎಸ್ಟಿ ಸಂಗ್ರಹದಿಂದ 798 ಕೋಟಿ ರೂ. ಕಡಿತಗೊಳಿಸಿದೆ. IGST ಅಂದರೆ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಆಗಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಮತ್ತು ಸೇವೆಗಳು ಚಲಿಸಿದಾಗ ಐಜಿಎಸ್ಟಿ ವಿಧಿಸಲ್ಪಡುತ್ತದೆ. ಐಜಿಎಸ್ಟಿ ಹಂತದಲ್ಲಿ ಬರುವ ಆದಾಯವನ್ನು ಕೇಂದ್ರ ಹಾಗೂ …
Read More »ವಿಜಯಪುರದಲ್ಲಿ ಭೀಕರ ಬರ ವಿಜಯಪುರದಲ್ಲಿ ಭೀಕರ ಬರ
ವಿಜಯಪುರ: ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿಯೂ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಹೀಗಾಗಿ ಕೆಲವೆಡೆ ಇಡೀ ಗ್ರಾಮದ ಮನೆಗಳಿಗೆ ಬೀಗ ಜಡಿದು ಜನ್ರು ದುಡಿಯೋಕೆ ಹೋಗಿರುವ ದೃಶ್ಯಗಳು ಕಂಡುಬಂದಿವೆ. ಹೌದು, ವಿಜಯಪುರ ಜಿಲ್ಲೆಯ ಬಹುತೇಕ ಗ್ರಾಮಗಳ ಜನರು ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೇ ಹೋಗುತ್ತಾರೆ. ಅವರಲ್ಲಿ ಹೆಚ್ಚಿನವರು ತಾಂಡಾಗಳ ಜನರೇ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಕುಟುಂಬ ಸಮೇತ ತೆರಳುತ್ತಿದ್ದಾರೆ. ಹೀಗೆ ಹೋಗುವ …
Read More »ವಾಟರ್ ಪ್ರೂಫ್ ಟೆಂಟ್, ಮಳೆ ಬಂದರೂ ಯಾವುದೇ ಸಮಸ್ಯೆಯಾವುಗುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ನಿನ್ನೆ ಚಳಿಗೆ ಟೆಂಟ್ ಒಳಗೆ ಪೊಲೀಸರು ತತ್ತರಿಸಿ ಹೋಗಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ
ಬೆಳಗಾವಿ: ಡಿ.4ರಿಂದ 15ರ ವರೆಗೆ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ಬಂದೋಬಸ್ತ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಸಿಬ್ಬಂದಿ ಉಳಿದುಕೊಳ್ಳಲು ಬೃಹದಾಕಾರದ ಜರ್ಮನ್ ಟೆಂಟ್ಗಳಿಂದ ಟೌನ್ಶಿಪ್ಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಸಿಬ್ಬಂದಿಗೆ ನಿರ್ಮಿಸಲಾಗಿರುವ ಜರ್ಮನ್ ಟೆಂಟ್ ವ್ಯವಸ್ಥೆ ಹೇಗಿದೆ, ಪೊಲೀಸರು ಏನಂತಾರೆ. ಇಲ್ಲಿದೆ ಮಾಹಿತಿ. ಹೌದು, ಸುವರ್ಣ ವಿಧಾನಸೌಧ ಸಮೀಪದ ಅಲಾರವಾಡ ಗ್ರಾಮದ ಹೊರವಲಯದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಟೌನ್ಶಿಪ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ನಾಲ್ಕು ದೊಡ್ಡ ದೊಡ್ಡ ಜರ್ಮನ್ …
Read More »ಹೊಸ ‘BPL, APL ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನಾಳೆ ‘ಅರ್ಜಿ ಸಲ್ಲಿಕೆ’ಗೆ ಅವಕಾಶ |
ಬೆಂಗಳೂರು: ಹೊಸ ರೇಷನ್ ಕಾರ್ಡ್ ಗೆ ( Ration Card ) ಅರ್ಜಿ ಸಲ್ಲಿಸೋ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ ಡಿ.3ರಂದು ಅರ್ಜಿ ಸಲ್ಲಿಕೆಗೆ ಆಹಾರ ಇಲಾಖೆ ಅವಕಾಶ ನೀಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಆಹಾರ ಇಲಾಖೆಯು, ಹೊಸ ರೇಷನ್ ಕಾರ್ಡ್ ಗೆ ಡಿಸೆಂಬರ್.3ರಂದು ರಾಜ್ಯಾಧ್ಯಂತ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದೆ. ರೇಷನ್ …
Read More »ಇಂದಿನಿಂದ ಮಲ್ಲೇಶ್ವರಂನ ‘ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯ’ದಲ್ಲಿ ‘ಕಡಲೆಕಾಯಿ ಪರಿಷೆ’
ಬೆಂಗಳೂರು: ಇಲ್ಲಿನ ಮಲ್ಲೇಶ್ವರಂನಲ್ಲಿರುವ ಶ್ರೀ ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಡಿಸೆಂಬರ್.2ರ ಇಂದಿನಿಂದ ಡಿ.4ರವರೆಗೂ 7ನೇ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕಡಲೆಕಾಯಿ ಪರಿಷೆ ಹಾಗೂ ಹಸಿರು ಚೈತನ್ಯೋತ್ಸವ ಕಾರ್ಯಕ್ರಮದ ಆಡಿಯಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಇಂದಿನ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಚಾಲನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ …
Read More »ಕೊಪ್ಪಳದಲ್ಲಿ ‘ಜೈ ಶ್ರೀರಾಮ್’ ಹೇಳುವಂತೆ ಅಂಧ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ
ಕೊಪ್ಪಳ:ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ‘ಜೈ ಶ್ರೀರಾಮ’ ಎಂದು ಪಠಿಸುವಂತೆ ಒತ್ತಾಯಿಸಿ 62 ವರ್ಷದ ಅಂಧ ಮುಸ್ಲಿಂ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಂಗಾವತಿ ಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಹುಸೇನ್ ಸಾಬ್ ಅವರು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ತನಗೆ ಬಲವಂತವಾಗಿ ಬೈಕ್ ಹತ್ತಿಸಿ, ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ನವೆಂಬರ್ 25 ರ ಮಧ್ಯರಾತ್ರಿ ತನ್ನ ಮೇಲೆ …
Read More »ಚೀನಾದ ಮಕ್ಕಳಲ್ಲಿ ಆರ್ಭಟಿಸುತ್ತಿರುವಂತ ಹೊಸ ಮಾದರಿಯ ವೈರಸ್ ರಾಜ್ಯಕ್ಕೆ ಕಾಲಿಡೋ ಮುನ್ನವೇ ತಡೆಗಟ್ಟೋ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ.:D.C.
ಬೆಳಗಾವಿ: ಚೀನಾದ ಮಕ್ಕಳಲ್ಲಿ ಆರ್ಭಟಿಸುತ್ತಿರುವಂತ ಹೊಸ ಮಾದರಿಯ ವೈರಸ್ ರಾಜ್ಯಕ್ಕೆ ಕಾಲಿಡೋ ಮುನ್ನವೇ ತಡೆಗಟ್ಟೋ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ. ಅದರಲ್ಲಿ ಡಿ.4ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಈ ವೇಳೆ ವೈರಸ್ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಕಂಟ್ರೋಲ್ ರೂಂ ತೆರೆಯಲಾಗಿದೆ. ಇಂದು ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ಅಧಿವೇಶನದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಅನ್ನು ಚೀನಾ ಹೊಸ ಮಾದರಿಯ ವೈರಸ್ ವಿಚಾರವಾಗಿ …
Read More »ರಾಜ್ಯ ಸರ್ಕಾರದಿಂದ ‘ಬರ ಪರಿಹಾರ’ಕ್ಕೆ ಅರ್ಹ ‘ರೈತ’ರ ಪಟ್ಟಿ ಬಿಡುಗಡೆ: ನಿಮ್ಮ ಹೆಸರಿದ್ಯಾ? ಹೀಗೆ ಚೆಕ್ ಮಾಡಿ
ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ನಂತ್ರ, ರೈತರ ಫಸಲು ಹಾನಿಯಾಗಿತ್ತು. ಹೀಗಾಗಿ ರಾಜ್ಯದ ಅನೇಕ ತಾಲೂಕುಗಳನ್ನು ಬರಪೀಡಿತ ತಾಲೂಕು ಅಂತ ಸರ್ಕಾರ ಘೋಷಣೆ ಮಾಡಿದೆ. ಈಗ ಬರ ಪರಿಹಾರ ಪಡೆಯಲು ಅರ್ಹರಿರುವಂತ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಹೆಸರಿರೋರಿಗೆ ಮಾತ್ರ ಪರಿಹಾರ ಸಿಗಲಿದೆ. ಹಾಗಾದ್ರೇ ನಿಮ್ಮ ಹೆಸರು ಇದ್ಯಾ ಅಂತ ಹೇಗೆ ಚೆಕ್ ಮಾಡೋದು ಅನ್ನೋ ಬಗ್ಗೆ ಮುಂದೆ ಓದಿ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ನಂತ್ರ, ಹಲವು ತಾಲ್ಲೂಕುಗಳನ್ನು ಸರ್ಕಾರ …
Read More »ಡಿ.23ರಂದು ‘545 ಪಿಎಸ್‌ಐ ನೇಮಕಾತಿ’ಗೆ ಮರು ಪರೀಕ್ಷೆ: ಮುಂದೂಡಲು ‘ಶಾಸಕ’ರು ಆಗ್ರಹ
ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ನಂತ್ರ, ಪರೀಕ್ಷೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರದ್ದುಪಡಿಸಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರವು ಡಿ.23ರಂದು ಮರು ಪರೀಕ್ಷೆ ನಡೆಸೋದಕ್ಕೆ ದಿನಾಂಕ ನಿಗದಿ ಪಡಿಸಿದೆ. ಇಂತಹ ಮರು ನಿಗದಿ ಪರೀಕ್ಷೆಯನ್ನು ಮುಂದೂಡುವಂತೆ ಸಿಎಂ ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿಗೆ ಪತ್ರ ಬರೆದು ಶಾಸಕರು ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಸೇರಿದಂತೆ ಹಲವರಿಗೆ ಶಾಸಕರಾದಂತ …
Read More »