Breaking News

Monthly Archives: ಡಿಸೆಂಬರ್ 2023

ಬ್ರಿಟಿಷರ ಕಾಲದ ಕ್ರಿಮಿನಲ್​ ಕಾನೂನುಗಳಿಗೆ ವಿದಾಯ: ಹೊಸ 3 ಮಸೂದೆಗಳು ಲೋಕಸಭೆಯಲ್ಲಿ ಪಾಸ್​

ಲೋಕಸಭೆಯಲ್ಲಿ ಇಂದು ಮೂರು ಕ್ರಿಮಿನಲ್ ಕಾನೂನು ಮಸೂದೆಗಳು ಅಂಗೀಕಾರಗೊಂಡವು. ನವದೆಹಲಿ: ಬ್ರಿಟಿಷರ ಕಾಲದ ಕ್ರಿಮಿನಲ್​ ಕಾನೂನುಗಳನ್ನು ಬದಲಿಸುವ ಮೂರು ಹೊಸ ಮಸೂದೆಗಳು ಇಂದು ಲೋಕಸಭೆಯಲ್ಲಿ ಪಾಸ್ ಆಗಿವೆ. ಭಾರತೀಯ ನ್ಯಾಯ (ಎರಡನೇ) ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ (ಎರಡನೇ)-2023 ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

Read More »

ಶಕ್ತಿ ಯೋಜನೆಯಿಂದ ಹೆಚ್ಚಿದ ಸಾರಿಗೆ ನಿಗಮಗಳ ಆದಾಯ: ಸದ್ಯಕ್ಕಿಲ್ಲ ಬಸ್ ಪ್ರಯಾಣ ದರ ಹೆಚ್ಚಳ

ಬೆಂಗಳೂರು : ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 15-20 ರಷ್ಟು ಹೆಚ್ಚಳವಾಗಿರುವುದರಿಂದ ನಾಲ್ಕು ಸಾರಿಗೆ ನಿಗಮಗಳ ಆದಾಯದಲ್ಲಿಯೂ ಹೆಚ್ಚಳವಾಗಿದೆ. ಹಾಗಾಗಿ ಸದ್ಯದ ಮಟ್ಟಿಗೆ ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾಪದಿಂದ ಸಾರಿಗೆ ನಿಗಮಗಳು ದೂರ ಸರಿದಿವೆ. ಉಚಿತ ಟಿಕೆಟ್ ದರದ ಮೊತ್ತ ರೀ ಎಂಬರ್ಸ್ ಮೆಂಟ್ ಸರಿಯಾಗಿ ಮಾಡಿದಲ್ಲಿ ಸಾರಿಗೆ ನಿಗಮಗಳ ನಿರ್ವಹಣೆಗೆ ಯಾವುದೇ ತೊಂದರೆ ಆಗಲ್ಲ. ಟಿಕೆಟ್ ದರ ಪರಿಷ್ಕರಣೆ ಪ್ರಸ್ತಾಪದ ಪ್ರಮೇಯವೂ ಎದುರಾಗಲ್ಲ ಎನ್ನುವ ಲೆಕ್ಕಾಚಾರದಲ್ಲಿ ಸಾರಿಗೆ …

Read More »

64 ವರ್ಷದ ವಿಧವಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಮುಂಬೈ(ಮಹಾರಾಷ್ಟ್ರ): 64 ವರ್ಷದ ವಿಧವಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಹೀನ ಕೃತ್ಯ ಈಶಾನ್ಯ ಮುಂಬೈನ ಟ್ರಾಂಬೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.   ಘಟನೆಯ ವಿವರ: ಸಂತ್ರಸ್ತೆಯ ಮಗಳು ನೀಡಿರುವ ದೂರಿನ ಆಧಾರದ ಪ್ರಕಾರ ಘಟನೆ ಕುರಿತು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. “ಮಹಿಳೆಯು ಸೋಮವಾರ ರಾತ್ರಿ ಕುರ್ಲಾದ ನೆಹರು ನಗರ ಪ್ರದೇಶದ ಸಮೀಪದ ಖಂಡೋಬಾ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಈ ವೇಳೆ ಅಲ್ಲಿದ್ದ ಅಪರಿಚಿತ ಮೂವರು ವ್ಯಕ್ತಿಗಳು ಅಪಹರಿಸಿ …

Read More »

ಚಾಕು ತೋರಿಸಿ ಹೆದರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ಕಲಬುರಗಿ: ಚಾಕು ತೋರಿಸಿ ಬೇದರಿಕೆ ಹಾಕಿ ಅಪ್ರಾಪ್ತೆ ಮೇಲೆ ಇಬ್ಬರು ಬಾಲಕರು ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಜರುಗಿದೆ. ಬಾಲಕಿ ಕುಟುಂಬಸ್ಥರು ದುಡಿಯಲು ಮುಂಬೈಗೆ ತೆರಳಿದ್ದು, ವಿದ್ಯಾಭ್ಯಾಸಕ್ಕಾಗಿ ಹತ್ತು ವರ್ಷದ ಬಾಲಕಿ ಸಂಬಂಧಿ‌ಕರ ಮನೆಯಲ್ಲಿದ್ದಾಳೆ. ಹೀಗಿರುವಾಗ 14 ಮತ್ತು 16 ವರ್ಷದ ಇಬ್ಬರು ಬಾಲಕರು ಸೇರಿ ಬಾಲಕಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಮಾಡಿರುವ ದೃಶ್ಯ ತಮ್ಮ‌ ಮೊಬೈಲ್​​​ನಲ್ಲಿ ವಿಡಿಯೋ …

Read More »

ತಮಿಳುನಾಡಿನಲ್ಲಿ ನಿಲ್ಲದ ಮಳೆ.. ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಚೆನ್ನೈ: ಕನ್ಯಾಕುಮಾರಿ ಸಮುದ್ರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ವಿಶೇಷವಾಗಿ ತಿರುನಲ್ವೇಲಿ, ತೂತುಕುಡಿ, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ. ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಹೀಗೆ ತೊಂದರೆಗೆ ಸಿಲುಕಿರುವ ಸಾರ್ವಜನಿಕರಿಗೆ ಸಹಾಯ ಮಾಡಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭಾರತೀಯ ನೌಕಾಪಡೆಯು ಟುಟಿಕೋರಿನ್ ಜಿಲ್ಲೆಯಲ್ಲಿ ಸಂತ್ರಸ್ತರಿಗೆ …

Read More »

ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಚೇರಿ ಸೇರಿದಂತೆ 3 ಸರ್ಕಾರಿ ಆಫೀಸ್​​​​​​ಗೆ ವಿದ್ಯುತ್​ ಕಡಿತ

ಮಂಡ್ಯ: ರಾಜ್ಯಕ್ಕೆ ಉಚಿತ ವಿದ್ಯುತ್​ ಕೊಟ್ಟ ಸರ್ಕಾರದ ಶಾಸಕರ ಕಚೇರಿಯೇ ಕತ್ತಲಲ್ಲಿ ಮುಳುಗಿದೆ. ಹೌದು, ಕೆ.ಇ.ಬಿಗೆ ಕರೆಂಟ್​ ಬಿಲ್​ ಪಾವತಿಸದ ಹಿನ್ನೆಲೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಚೇರಿಗೆ ವಿದ್ಯುತ್​ ಕಡಿತಗೊಳಿಸಲಾಗಿದೆ. ವಿದ್ಯುತ್​ ಕಡಿತದಿಂದ ಶಾಸಕರ ಕಚೇರಿಯಲ್ಲದೇ ಸರ್ಕಾರಿ ಕಚೇರಿಗಳು ಬೆಳಕಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ. ತಹಶೀಲ್ದಾರ್​ ​ ಹೇಳಿದ್ದಿಷ್ಟು: ಮೊದಲು ಈ ಕಟ್ಟಡವನ್ನು ಸೆಂಟ್ರಲ್​​ ಪೊಲೀಸ್​ ಠಾಣೆಗೆ ನೀಡಲಾಗಿತ್ತು. ಪೊಲೀಸ್​ ಠಾಣೆ ಇರುವ ತನಕ ಪೊಲೀಸ್​ ಇಲಾಖೆಯೆ ವಿದ್ಯುತ್​ ಬಿಲ್​ …

Read More »

ಕೋವಿಡ್​​ 19ರ ಹೊಸ ರೂಪಾಂತರ ತಳಿ JN.1 ಎಂದ WHO

ಹೈದರಾಬಾದ್​ ​: ಕೋವಿಡ್​ 19 ಉಪತಳಿಯಾಗಿರುವ ಜೆಎನ್.1 (JN.1) ಸದ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಜೆಎನ್​. 1 ತಳಿಯನ್ನು ಬಿಎ.2.68 ವಂಶವಾಹಿನಿ ವೆರಿಯೆಂಟ್ ಆಫ್​ ಇಂಟ್ರೆಸ್ಟ್​​​ (ರೂಪಾಂತರ ತಳಿ) ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಈ ಹಿಂದೆ ಬಿಎ.2.86 ಉಪವರ್ಗಗಳ ಭಾಗದ ರೂಪಾಂತರ ತಳಿ​​ ಎಂದು ವರ್ಗೀಕರಿಸಲಾಗಿದೆ. ಲಭ್ಯವಿರುವ ಸಾಕ್ಷಿಗಳ ಆಧಾರದ ಮೇಲೆ ಪ್ರಸ್ತುತ ಹೊರ ಹೊಮ್ಮಿರುವ ಜೆಎನ್​ 1ತಳಿ ಕಡಿಮೆ ಸಾರ್ವಜನಿಕ ಆರೋಗ್ಯ ಅಪಾಯವನ್ನು ಹೊಂದಿದೆ. ಇದರ …

Read More »

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾದರೆ ನನ್ನ ಸಹಮತವಿದೆ ಎಂದು ಪರಿಷತ್ ಸದಸ್ಯ ಹೆಚ್ ​​ವಿಶ್ವನಾಥ್

ಮೈಸೂರು: ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದರೆ ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್​​ವಿಶ್ವನಾಥ್ ಹೇಳಿದರು. ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಾಮಾನ್ಯ ಕುಟುಂಬದಿಂದ ಬಂದವರು. ಎಲ್ಲ ರೀತಿಯ ಆಡಳಿತ ಅನುಭವ ಇರುವವರು. ದೇವೇಗೌಡರ ನಂತರ ರಾಜ್ಯದಿಂದ ಇನ್ನೊಬ್ಬರು ಪ್ರಧಾನಿ ಆಗಲಿ ಎಂಬುದು ನನ್ನ ಆಸೆ ಎಂದರು. ಅಡ್ವಾಣಿ ಬಂದರೆ ಮೋದಿಗೆ ಕ್ರೆಡಿಟ್ ಸಿಗುವುದಿಲ್ಲ: ರಾಮ …

Read More »

ರಾಜ್ಯದಲ್ಲಿ ಕೋವಿಡ್‌ ಹೈ ಅಲರ್ಟ್‌: ಕಿಮ್ಸ್​ ಕೈ ಸೇರದ ಸರ್ಕಾರದ ಮಾರ್ಗಸೂಚಿ

ಹುಬ್ಬಳ್ಳಿ: ಕೇರಳದಲ್ಲಿ ಕೋವಿಡ್​ ಉಪ ತಳಿ ಜೆಎನ್‌-1 ಪತ್ತೆಯಾಗಿದ್ದು, ರಾಜ್ಯದಲ್ಲಿಯೂ ಆತಂಕ ಆರಂಭವಾಗಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಕರ್ನಾಟಕದಲ್ಲಿ ಹೈಲರ್ಟ್ ಘೋಷಣೆ ಮಾಡಿದೆ. ಜತೆಗೆ, 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊರೊನಾ ಲಕ್ಷಣ ಇರುವವರಿಗೂ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಡಾ. ಎಸ್.ಎಸ್.ಕಮ್ಮಾರ ಹೇಳಿದ್ದಾರೆ‌.‌ ಈಗಾಗಲೇ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ರಾಜ್ಯದಲ್ಲಿ ಕೊರೊನಾ …

Read More »

ಕೊರೊನಾ ಸೋಂಕು ತಗುಲಿದ್ದ ವೃದ್ಧ ಸಾವು: ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚನೆ ಕೊಟ್ಟ ಆರೋಗ್ಯ ಸಚಿವರು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್​ ಸೋಂಕು ತಗುಲಿದ್ದ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.   ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಇಂದು ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು. ವಿಕಾಸಸೌಧದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್​​ನಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ 64 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. …

Read More »