Breaking News

Daily Archives: ಡಿಸೆಂಬರ್ 27, 2023

PSI ನೇಮಕಾತಿಯಲ್ಲಿ ಅಕ್ರಮ: ಹೆಚ್​ಡಿಕೆ, ಯತ್ನಾಳ್ ಸೇರಿದಂತೆ ಹಲವರಿಗೆ ವೀರಪ್ಪ ಆಯೋಗದಿಂದ‌ ಸಮನ್ಸ್

ಬೆಂಗಳೂರು, (ಡಿಸೆಂಬರ್ 26): 545 ಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ(PSI Scam Case) ಸತ್ಯಾಂಶ ತಿಳಿಯಲು ರಾಜ್ಯ ಸರ್ಕಾರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ವಿಚಾರಣಾ ಆಯೋಗ ರಚನೆ ಮಾಡಿದ್ದು, ಇದೀಗ ವೀರಪ್ಪ ನೇತೃತ್ವದ ಆಯೋಗ ಪ್ರಕರಣದ ತನಿಖೆ ಚುರುಕುಗೊಳಿಸಿದೆ. ಈ ಸಂಬಂಧ ಹೆಚ್‌.ಡಿ.ಕುಮಾರಸ್ವಾಮಿ, ಬಸನಗೌಡ ಪಾಟೀಲ‌್ ಯತ್ನಾಳ್, ಧಡೇಸಗೂರು ಬಸವರಾಜ್, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಪ್ರಕರಣ ಸಂಬಂಧ ಸಾಕ್ಷ್ಯಗಳಿದ್ದರೆ ಹಾಜರುಪಡಿಸುವಂತೆ ತಿಳಿಸಲಾಗಿದೆ. ಹೆಚ್‌.ಡಿ.ಕುಮಾರಸ್ವಾಮಿ, ಬಸನಗೌಡ …

Read More »

ಕಾರು ಮನೆಯಲ್ಲಿದ್ದರೂ ಫಾಸ್ಟ್​​ಟ್ಯಾಗ್​ನ ಹಣ​ ಕಡಿತ

ಬೆಂಗಳೂರು, ಡಿಸೆಂಬರ್​ 27: ಟೋಲ್​ ಫ್ಲಾಜಾಗಳಲ್ಲಿ (Toll Plaza) ಉಂಟಾಗುವ ಟ್ರಾಫಿಕ್​ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್​​ಟ್ಯಾಗ್ (Fastag)​ ಸೌಲಭ್ಯ ಜಾರಿಗೆ ತಂದಿದೆ. ಈ ಫಾಸ್ಟ್​​ಟ್ಯಾಗ್​​ನಿಂದ ಬೆಂಗಳೂರಿನ ವಾಹನ ಮಾಲಿಕರು ಹಣ ಕಳೆದುಕೊಂಡಿದ್ದಾರೆ. ಹೌದು ಸುಮಾರು ಒಂದು ತಿಂಗಳ ಹಿಂದೆ, ಜೆನಿಲ್ ಜೈನ್ ಎಂಬುವರು ಮನೆಯಲ್ಲಿದ್ದಾಗ ಅವರ ಮೊಬೈಲ್​ಗೆ ಬೆಂಗಳೂರು-ಮಂಗಳೂರು ಹೆದ್ದಾರಿಯ ಟೋಲ್ ಫ್ಲಾಜಾದಲ್ಲಿ 60 ರೂಪಾಯಿ ಸಂಗ್ರಹಿಸಲಾಗಿದೆ ಮೆಸೆಜ್​ ಬಂದಿತ್ತು. ಇದರಿಂದ ಗಾಭರಿಗೊಂಡ ಜೆನಿಲ್​ ಜೈನ್,​ ತಮ್ಮ ಕಾರು ಅಥವಾ ಫಾಸ್ಟ್‌ಟ್ಯಾಗ್ …

Read More »

ಜಾತಿಗಣತಿ ವರದಿ ಜಾರಿಗೆ ಒತ್ತಾಯಿಸಿ ಶೋಷಿತ ಸಮುದಾಯಗಳ ಸಮಾವೇಶಕ್ಕೆ ಮುಹೂರ್ತ ಫಿಕ್ಸ್, ಸಿಎಂಗೆ ಆಹ್ವಾನ

ಬೆಂಗಳೂರು, (ಡಿಸೆಂಬರ್ 27): ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಕಾಂತರಾಜು ಅವರು ಜಾತಿ ಗಣತಿ ವರದಿ (caste census report) ಜಾರಿಗೆ ಸಂಬಂಧ ಪರ-ವಿರೋಧ ಚರ್ಚೆಗಳು ನಡೆದಿವೆ. ಶೋಷಿತ ಸಮುದಾಯದ ನಾಯಕರುಗಳು ಜಾತಿ ಗಣತಿ ವರದಿ ಜಾರಿ ಮಾಡಲೇಬೇಕೆಂದು ಒತ್ತಾಯಿಸಿದರೆ, ಮತ್ತೊಂದೆಡೆ ಮೇಲ್ವರ್ಗ ಸಮುದಾಯಗಳು ಇದಕ್ಕೆ ವಿರೋಧ ವ್ಯಕ್ತಪಪಡಿಸುತ್ತಿವೆ. ಈ ಪರ-ವಿರೋಧದ ಆರ್ಭಟದ ಮಧ್ಯೆ ಕಾಂತರಾಜು ವರದಿ ಜಾರಿಗೆ ಒತ್ತಾಯಿಸಿ ಶೋಷಿತ ಸಮುದಾಯಗಳ ಒಕ್ಕೂಟ ಬೃಹತ್ ಸಮಾವೇಶ ಮಾಡಲು ತೀರ್ಮಾನಿಸಿದ್ದು, ಇದೀಗ …

Read More »

ಹಿರಿಯ ಪತ್ರಕರ್ತ ಅಶೋಕ ಜೋಶಿ ನಿಧನ

ಬೆಳಗಾವಿ ; ಬೆಳಗಾವಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶ್ರೀ ಅಶೋಕ ಜೋಶಿ ( ವ.72) ಇವರು ಇಂದು ಬುಧವಾರ ಬೆಳಿಗ್ಗೆ ಅನಾರೋಗ್ಯ ಕಾರಣ ನಿಧನರಾದರು. ಶ್ರೀ ಅಶೋಕ ಜೋಶಿ ಅವರು ಸಂಯುಕ್ತ ಕರ್ನಾಟಕ, ಹಸಿರು ಕ್ರಾಂತಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದರು. ಕಳೆದ ಒಂದು ವಾರದಿಂದ ವಿವಿಧ ಅಂಗಾಂಗಗಳ ವೈಫಲ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರು …

Read More »

ಕರವೇ ರ‍್ಯಾಲಿ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ?

ಬೆಂಗಳೂರು, (ಡಿಸೆಂಬರ್ 27): ಅಂಗಡಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ (Kannada) ಬಳಸುವಂತೆ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ( karnataka rakshana- Vedike) ಬೆಂಗಳೂರಿಲ್ಲಿಂದು ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ. ಬೆಂಗಳೂರು (Bengaluru) ವಿಮಾನ ನಿಲ್ದಾಣದ ಸಾದಹಳ್ಳಿ ಗೇಟ್​​ ಬಳಿಯ ಟೋಲ್​ ಪ್ಲಾಜಾದಿಂದ ಆರಂಭವಾಗುವ ರ‍್ಯಾಲಿ ಕಬ್ಬನ್ ಪಾರ್ಕ್ ವರೆಗೆ ಸಾಗಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡಿದ್ದಾರೆ. ಅಲ್ಲದೇ ಟ್ರಾಫಿಕ್​ ಜಾಮ್ ಆಗದಂತೆ ಪೊಲೀಸರು ಏರ್​ಪೋರ್ಟ್​ ರಸ್ತೆಯ …

Read More »

ನೆಲಮಂಗಲದ ಉದ್ಭವ ಗಣೇಶ ಜಾತ್ರೆಯಲ್ಲಿ ಪುಂಡರ, ಮಂಗಳಮುಖಿಯರ ಹಾವಳಿ; ರೋಸಿಹೋದ ವ್ಯಾಪಾರಿಗಳು

ನೆಲಮಂಗಲ, : ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯನೆಲಮಂಗಲ(Nelamangal) ಪಟ್ಟಣದಲ್ಲಿ ನಡೆಯುವ ಐತಿಹಾಸಿಕ ಉದ್ಭವ ಗಣೇಶ (Lord Ganesh) ಜಾತ್ರೆಯಲ್ಲಿ ಪುಂಡರ ಹಾವಳಿಯಿಂದ ಅಂಗಡಿಕಾರರು ರೋಸಿ ಹೋಗಿದ್ದಾರೆ. ​​ಹೌದು ಪುಂಡರು ರೌಡಿಶೀಟರ್ ರಂಗ ಅಲಿಯಾಸ್​​​ ಗಣೇಶನ ಗುಡಿ ರಂಗ ಹೆಸರಿನಲ್ಲಿ ಜಾತ್ರೆಯಲ್ಲಿ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದರು. ಈ ವಿಚಾರ ತಿಳಿದ ನೆಲಮಂಗಲ ಟೌನ್ ಠಾಣೆ ಪೊಲೀಸರು ಸ್ಥಳೀಯರ ನೆರವಿನಿಂದ ಆರೋಪಿಗಳನ್ನು ವಶಕ್ಕೆ ಪಡೆದರು. ನೆಲಮಂಗಲ ಟೌನ್ ಪೊಲೀಸ್​​​ ಠಾಣೆಯಲ್ಲಿ …

Read More »