ಇಂದಿನಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದ ಸೂಕ್ತ ಸಮಯಕ್ಕೆ ಬರುವ ಶಾಸಕರುಗಳಿಗೆ ಉಡುಗೊರೆ ಕೊಡಲಾಗುತ್ತಿದೆ. ಇನ್ನು ಈ ಬಗ್ಗೆ ಸ್ಪೀಕರ್ ಯುಟಿ ಖಾದರ್ ಮಾತನಾಡಿದ್ದು, ಅದು ಈ ಕೆಳಗಿನಂತಿದೆ, ಬೆಳಗಾವಿ, (ಡಿಸೆಂಬರ್ 04) : ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ (Belagavi Session)ಇಂದಿನಿಂದ ಆರಂಭವಾಗಲಿದೆ. ಬೆಳಗ್ಗೆ 11ಗಂಟೆಗೆ ಅಧಿವೇಶನ ಆರಂಭಗೊಳ್ಳಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು,ಇತ್ತ ಸುವರ್ಣಸೌಧದ ಹೊರಗೆ, ಪ್ರತಿಭಟನಾ ಸ್ಥಳ ಸೇರಿದಂತೆ ಎಲ್ಲೆಡೆ ಸಿಸಿಟಿವಿ …
Read More »Daily Archives: ಡಿಸೆಂಬರ್ 4, 2023
ಚಳಿಗಾಲದ ಅಧಿವೇಶನ ಈ ಭಾಗದ ರೈತರಿಗೆ, ಬಡವರಿಗೆ ಅನೂಕೂಲವಾಗಲಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬೆಳಗಾವಿ :ಉತ್ತರ ಕರ್ನಾಟಕದ ಹೆಬ್ಬಾಗಿಲು ಬೆಳಗಾವಿ (Belagavi) ಜಿಲ್ಲೆ. ಈ ಭಾಗದ ಬಡವರಿಗೆ, ರೈತರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಸುವರ್ಣಸೌಧ (Suvarna soudha) ಚಿಂತನೆ ಮಾಡಿದ್ದು ಮಾಜಿ ಸಿಎಂ ಯಡಿಯೂರಪ್ಪನವರು (B S Yediyurappa). ಚಳಿಗಾಲದ ಅಧಿವೇಶನ ಈ ಭಾಗದ ರೈತರಿಗೆ, ಬಡವರಿಗೆ ಅನೂಕೂಲವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಹೇಳಿದರು. ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನತೆ …
Read More »ನಕಲಿ ದಾಖಲೆ ಸೃಷ್ಟಿಸಿ 12 ಕೋಟಿ ರೂ. ಸಾಲ – ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಸಿಬಿಐ ಎಫ್‌ಐಆರ್
ಬೆಂಗಳೂರು : ನಕಲಿ ದಾಖಲೆಗಳನ್ನು ಸಲ್ಲಿಸಿ ಕೋಟ್ಯಾಂತರ ರೂ. ಸಾಲ (Bank loan) ಪಡೆದು ವಂಚಿಸಿರುವ ಆರೋಪದ ಮೇಲೆ ಮಾಜಿ ಸಂಸದ ಶಿವರಾಮೇಗೌಡ (L R Shivaramegowda) ವಿರುದ್ಧ ಸಿಬಿಐ (CBI) ಎಫ್‌ಐಆರ್ (FIR) ದಾಖಲಿಸಿಕೊಂಡಿದೆ. ಶಿವರಾಮೇಗೌಡರ ಪತ್ನಿ ಸೇರಿದಂತೆ ಏಳು ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National bank) ನಿಂದ 12.48 ಕೋಟಿ ರೂ. ಸಾಲ ಪಡೆದಿದ್ದ ಶಿವರಾಮೇಗೌಡ ಮತ್ತು ಅವರ ಕುಟುಂಬ …
Read More »ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್!
ಬೆಂಗಳೂರು: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ (ಡಿ. 4) ಅಧಿವೇಶನ (Belagavi Winter Session) ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ವಿಪಕ್ಷಗಳಿಂದ ನಿಲುವಳಿ ನೋಟಿಸ್ (Adjournment notice) ಜಾರಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಜಂಟಿ ನೋಟಿಸ್ ನೀಡಿದ್ದು, ಸದನದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ರಾಜ್ಯ ಸರ್ಕಾರದ (Congress Government) ವೈಫಲ್ಯ ಚರ್ಚಿಸಲು ಆಗ್ರಹಿಸಿವೆ. ರಾಜ್ಯವು ಬರಗಾಲಕ್ಕೆ ತುತ್ತಾಗುವ ಸ್ಪಷ್ಟ ಸೂಚನೆ ಇದ್ದರೂ ಬರ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾಗಿದ್ದ ಮುಂಜಾಗ್ರತೆ …
Read More »ಸಿ.ಪಿ.ಯೋಗೇಶ್ವರ್ ಭಾವ ನಾಪತ್ತೆ ಕೇಸ್: ಹನೂರಿನ ರಾಮಪುರದಲ್ಲಿ ಕಾರು ಪತ್ತೆ
ಚಾಮರಾಜನಗರ: ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದ ತೋಟದ ಮನೆಯಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಸಂಬಂಧಿಯ ಕಾರು ಹನೂರು ತಾಲೂಕಿನ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ದೊರೆತಿದೆ. ಯೋಗೇಶ್ವರ್ ಅವರ ಭಾವ ಚಕ್ಕರೆ ಗ್ರಾಮದ ಮಹದೇವಯ್ಯ ಮೂರು ದಿನಗಳ ಹಿಂದೆ ಬಿಳಿ ಬಣ್ಣದ ಬ್ರಿಜಾ ಕಾರುಸಮೇತ (KA-42 N0012) ಕಾಣೆಯಾಗಿದ್ದರು. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ …
Read More »ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಹತೆ, ಅರ್ಜಿ ಸಲ್ಲಿಕೆ, ವೇತನದ ವಿವರ
ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಒಟ್ಟು 540 ಅರಣ್ಯ ಪಾಲಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇವು ಗ್ರೂಪ್ ಸಿ ಹುದ್ದೆಗಳಾಗಿವೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಧಿಸೂಚನೆಹುದ್ದೆಗಳು- ಎಲ್ಲಿ, ಎಷ್ಟು?: ಬೆಂಗಳೂರು 49 ಬೆಳಗಾವಿ 12 ಬಳ್ಳಾರಿ 29 ಚಾಮರಾಜನಗರ 83 ಚಿಕ್ಕಮಗಳೂರು 52 ಧಾರವಾಡ 5 ಹಾಸನ 18 ಕಲಬುರಗಿ 58 ಕೆನಾರ 33 ಕೊಡಗು 26 ಮಂಗಳೂರು 62 ಮೈಸೂರು 47 ಶಿವಮೊಗ್ಗ 66 ವಿದ್ಯಾರ್ಹತೆ: ಅಧಿಕೃತ …
Read More »ಹಾವೇರಿ: 7 ಜೀವಂತ ನಾಡ ಬಾಂಬ್ ಪತ್ತೆ, ಆರೋಪಿ ಬಂಧನ
ಹಾವೇರಿ: ಹಾನಗಲ್ ತಾಲೂಕಿನ ಆಡೂರು ಪೊಲೀಸರು ಕಾರ್ಯಾಚರಣೆ ನಡೆಸಿ 7 ಜೀವಂತ ನಾಡ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಡ ಬಾಂಬ್ ಇಟ್ಟಿದ್ದ ಆರೋಪದಡಿ ದುರ್ಗಪ್ಪ ತುರಬಿಗುಡ್ಡ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಡು ಹಂದಿ ಬೇಟೆಯಾಡುವ ಉದ್ದೇಶದಿಂದ ಕುಸನೂರು ಅರಣ್ಯ ಪ್ರದೇಶದಲ್ಲಿ ಈತ ನಾಡ ಬಾಂಬ್‌ಗಳನ್ನು ಇಟ್ಟಿದ್ದ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪತ್ತೆಯಾದ 7 ಜೀವಂತ ನಾಡಬಾಂಬ್‌ಪ್ರತ್ಯೇಕ ಪ್ರಕರಣ- ಖಾಸಗಿ ಫೋಟೋ ಸೆರೆಹಿಡಿದು …
Read More »2024ರ ಲೋಕಸಭೆಯ ಹ್ಯಾಟ್ರಿಕ್ ಗೆಲುವಿಗೆ ಗ್ಯಾರಂಟಿ ಸಿಕ್ಕಿದೆ : ಪ್ರಧಾನಿ ಮೋದಿ ವಿಶ್ವಾಸ
ನವದೆಹಲಿ : ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದರು. ಬಳಿಕ ಚುನಾವಣಾ ಫಲಿತಾಂಶ ಮತ್ತು ಇದಕ್ಕಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭೆ ಚುನಾವಣೆಯ ಗೆಲುವು ಐತಿಹಾಸಿಕ ಮತ್ತು ಅಭೂತಪೂರ್ವ ಗೆಲುವು. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಭಾವನೆ ಇಂದು ಗೆದ್ದಿದೆ. ಈ ಗೆಲುವು ಸ್ವಾವಲಂಬಿ …
Read More »ಬೆಳಗಾವಿಯಲ್ಲಿ ಅಧಿವೇಶನದ ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಹಾಗು ಜೆಡಿಎಸ್ ಸಿದ್ಧ
ಬೆಂಗಳೂರು : ಕುಂದಾನಗರಿ ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಹಣಿಯಲು ಪ್ರತಿಪಕ್ಷಗಳಾದ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಅಖಾಡಕ್ಕೆ ದುಮುಕಲು ಸಿದ್ಧವಾಗಿದ್ದು, ಪರಸ್ಪರ ಸಹಕಾರದಿಂದ ಒಟ್ಟಾಗಿ ಕಾಂಗ್ರೆಸ್ ಎದುರಿಸಲು ಸನ್ನದ್ಧವಾಗಿವೆ. ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೈಫಲ್ಯ ಕಂಡಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಸದನದಲ್ಲಿ ಉಭಯ ಪ್ರತಿಪಕ್ಷಗಳು ಜಂಟಿಯಾಗಿ ವಾಗ್ದಾಳಿ ನಡೆಸಲಿವೆ. …
Read More »ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು : ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ನಾಲ್ಕು ರಾಜ್ಯಗಳ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಡ್ದಲ್ಲಿ ಹಿನ್ನಡೆ ಆಗಿದೆ. ತೆಲಂಗಾಣ ನಮ್ಮ ನೆರೆಯ ರಾಜ್ಯವಾಗಿರುವ ಕಾರಣ ಅಲ್ಲಿನ …
Read More »