Breaking News

Daily Archives: ಡಿಸೆಂಬರ್ 3, 2023

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ಮುನ್ನಡೆ:

ನವದೆಹಲಿ: ರಾಜಸ್ಥಾನ ಹಾಗೂ ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ಗಣನೀಯ ಮುನ್ನಡೆ ಸಾಧಿಸುತ್ತಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ.         ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ಇದು ಬಿಜೆಪಿಗೆ ಸಕರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತಿದೆ. ಪಕ್ಷವು ಪ್ರತಿ ರಾಜ್ಯದಲ್ಲೂ ಮುನ್ನಡೆ ಸಾಧಿಸುತ್ತಿದೆ. ಮತ ಹಂಚಿಕೆ ಮತ್ತು ಸೀಟು ಹಂಚಿಕೆ ಎರಡರಲ್ಲೂ ನಾವು ಎಲ್ಲಾ ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ” ಎಂದು …

Read More »

ಅಂಬಾರಿ ಡಬಲ್ ಡೆಕ್ಕರ್ ಬಸ್‌ ಬೆಳಗಾವಿ ಜಿಲ್ಲೆಯಲ್ಲಿ ಶೀಘ್ರದಲ್ಲೇ ಪ್ರಯಾಣ ಆರಂಭ

ಬೆಳಗಾವಿ, : ಬೆಳಗಾವಿ ಜಿಲ್ಲೆಯ ಜನತೆಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದ್ದು, ಶೀಘ್ರದಲ್ಲೇ ಅಂಬಾರಿ ಡಬಲ್ ಡೆಕ್ಕರ್ ಬಸ್‌ ಬೆಳಗಾವಿ ಜಿಲ್ಲೆಯಲ್ಲಿ ಪ್ರಯಾಣ ಆರಂಭಿಸಲಿದೆ. ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವವರು ಶೀಘ್ರದಲ್ಲೇ ಅಂಬಾರಿ ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯಲಿದ್ದಾರೆ.   ಪ್ರಸ್ತುತ ರಾಜ್ಯ ಪ್ರವಾಸೋದ್ಯಮ ಇಲಾಖೆಯಡಿ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವಿಶಿಷ್ಟ ಬಸ್‌ಗಳು ಬೆಳಗಾವಿಗೆ ತೆರಳಿದ್ದು, ಶೀಘ್ರದಲ್ಲೇ ಬೆಳಗಾವಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ವಿಶೇಷವಾಗಿ ರಚನೆ ಮಾಡಿರುವ ಅಂಬಾರಿ …

Read More »

ರಾಯಚೂರು: ಅಂಗವೈಕಲ್ಯವನ್ನು ಮೆಟ್ಟಿ ಬದುಕು ಕಟ್ಟಿಕೊಂಡ ಮಾದರಿ ಮಹಿಳೆ!

ರಾಯಚೂರು ಡಿಸೆಂಬರ್ 3: ಈಕೆಗೆ ಒಂದು ಕಾಲಿನಲ್ಲಿ ಸ್ವಾಧೀನ ಇಲ್ಲ. ಎಲ್ಲರಂತೆ ನಡೆಯಲು ಓಡಾಡಲು ಸಾಧ್ಯವಾಗುವುದಿಲ್ಲ. ಹಾಗಂತ ಈಕೆ ಎಂದೂ ಕೂಡ ಮನೆಯಲ್ಲಿ ಖಾಲಿಯಾಗಿ ಕುಳಿತವಳಲ್ಲ. ಜೀವನದಲ್ಲಿ ತಾನೂ ಕೂಡ ಎಲ್ಲರಂತೆ ಬದುಕು ನಡೆಸಬೇಕು ಅನ್ನೋ ಛಲ ಈಕೆಯದ್ದು. ಹೀಗಾಗಿ ಸ್ವಾವಲಂಬಿ ಜೀವನ ನಡೆಸುವ ಮೂಲಕ ಈ ಮಹಿಳೆ ಎಲ್ಲಾ ಮಹಿಳೆಯರಿಗೂ ಮಾದರಿಯಾಗಿದ್ದಾಳೆ. ಅಷ್ಟಕ್ಕೂ ಆ ಮಹಿಳೆ ಯಾರು? ಎಲ್ಲಿಯವರು? ಈ ಎಲ್ಲಾ ಮಾಹಿತಿಗಾಗಿ ಮುಂದೆ ಓದಿ… ನಿತ್ಯ ನೂರಾರು …

Read More »

ಲೋಕಸಭೆನೂ ಗೆಲ್ತಿವಿ ರಾಹುಲ್‌ ಪ್ರಧಾನಿಯಾಗ್ತಾರೆ:ಸಲೀಂ ಅಹಮ್ಮದ್ ಭವಿಷ್ಯ

ದಾವಣಗೆರೆ, ಡಿಸೆಂಬರ್‌ 03: ಪಂಚರಾಜ್ಯ ಚುನಾವಣೆ ಸೆಮಿ ಫೈನಲ್. ಇಲ್ಲಿ ಗೆದ್ದು ಲೋಕಸಭೆನೂ ಗೆಲ್ಲುತ್ತೇವೆ, ನಮ್ಮ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ ಎಂದು ದಾವಣಗೆರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ , ಕಾಂಗ್ರೆಸ್ ಪಕ್ಷಕ್ಕೆ ಒಳ್ಳೇಯ ದಿನ. ಐದರಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಎಲ್ಲಾ ಸಮೀಕ್ಷೆಗಳು ಕೂಡ ನಮ್ಮ ಪರವಾಗಿ ಬಂದಿವೆ. ಪಂಚರಾಜ್ಯ …

Read More »

ಅಂಗನವಾಡಿ, ಜಲ ಕುಂಭ ನಿರ್ಮಾಣಕ್ಕೆ ಜಮೀನು ದಾನ ಮಾಡಿದ ಬಡ ರೈತ!

ಚಿಕ್ಕೋಡಿ(ಬೆಳಗಾವಿ): ಆಸ್ತಿಗಾಗಿ ಅಣ್ಣ ತಮ್ಮಂದಿರೇ ದಾಯಾದಿಗಳಾಗಿರುವ ಮತ್ತು ತುಂಡು ಭೂಮಿಗಾಗಿ ಕೊಲೆಗಳೇ ನಡೆದಿರುವುದನ್ನು ನೀವು ನೋಡಿರುತ್ತೀರಾ ಮತ್ತು ಕೇಳಿರುತ್ತೀರಾ. ಆದರೆ, ಇತಂಹ ಕಾಲದಲ್ಲಿಯೂ ಬಡ ರೈತನೊಬ್ಬ ಗ್ರಾಮದ ಒಳಿತಿಗಾಗಿ ಜಮೀನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಹೌದು, ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪೂರ ಗ್ರಾಮದ ಬಡ ರೈತ ಅಪ್ಪಣ್ಣಾ ಕಾನೂರೆ ಎಂಬುವರು ತಮಗಿದ್ದ ಅಲ್ಪ ಪ್ರಮಾಣದ ಒಂದು ಎಕರೆ ಜಮೀನಿನ ಶೇ.25ರಷ್ಟು ಭಾಗ ಅಂದರೆ 10 ಗುಂಟೆ ಜಮೀನನ್ನು ಗ್ರಾಮದ ದಲಿತ …

Read More »

ನಾಲ್ಕು ರಾಜ್ಯಗಳ ಪ್ರಮುಖ ನಾಯಕರ ಚುನಾವಣಾ ಫಲಿತಾಂಶದ ಟ್ರೆಂಡ್​ ಇಲ್ಲಿದೆ.

ಹೈದರಾಬಾದ್​: ತೆಲಂಗಾಣದಲ್ಲಿ ಮುಖ್ಯಮಂತ್ರಿ ಹಾಗೂ ಬಿಆರ್​ಎಸ್​ ನಾಯಕ ಕೆ. ಚಂದ್ರಶೇಖರ್​ ರಾವ್​ ಕಾಮರೆಡ್ಡಿ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕ ರೇವಂತ್​ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ. ಕೋಡಂಗಲ್​ ಕ್ಷೇತ್ರದಲ್ಲೂ ಸ್ಪರ್ಧಿಸಿರುವ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ರೇವಂತ್​​ ರೆಡ್ಡಿ ಅಲ್ಲೂ ಮುನ್ನಡೆ ಸಾಧಿಸಿದ್ದಾರೆ. ಇದೇ ವೇಳೆ ಮತ್ತೊಂದು ಕ್ಷೇತ್ರ ಗಜ್ವಾಲ್​ನಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಕೆಸಿಆರ್, ಆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮುಖ್ಯಮಂತ್ರಿ ಕೆಸಿಆರ್​ ಪುತ್ರ ಕೆ ಟಿ ರಾಮರಾವ್​ ಸಿರ್ಸಿಲಾ ಕ್ಷೇತ್ರದಲ್ಲಿ ಮುನ್ನಡೆ …

Read More »