Breaking News

Monthly Archives: ನವೆಂಬರ್ 2023

ದಾಖಲೆ ಸರಿಗಟ್ಟಿದ ವಿರಾಟ್​ಗೆ ಸಚಿನ್​ ಸಂದೇಶ.. ರೆಕಾರ್ಡ್​​ ಮುರಿಯಲು ಗುರಿ ನೀಡಿದ ತೆಂಡೂಲ್ಕರ್​

ಮುಂಬೈ (ಮಹಾರಾಷ್ಟ್ರ): ರನ್​ ಮಷಿನ್​ ಎಂದೇ ಕೆರೆಸಿಕೊಳ್ಳುವ ವಿರಾಟ್​ ಕೊಹ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಅದಕ್ಕೆ ಪೂರಕ ಎಂಬಂತೆ ಆಟವನ್ನು ಆಡುತ್ತಿದ್ದಾರೆ. 2023ರ ವಿಶ್ವಕಪ್​ನಲ್ಲಿ ಎರಡನೇ ಶತಕವನ್ನು ವಿರಾಟ್​ ದಾಖಲಿಸಿ, ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ಅವರ ಶತಕದ ದಾಖಲೆಯನ್ನು ಸಮಮಾಡಿಕೊಂಡಿದ್ದಾರೆ. ಇಬ್ಬರೂ ವಿಶ್ವ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಜಂಟಿಯಾಗಿ ಅಲಂಕರಿಸಿದ್ದಾರೆ. ಸಚಿನ್​ ಅವರ ದಾಖಲೆಯನ್ನು ವಿರಾಟ್ ಸರಿಗಟ್ಟಿದ ನಿಮಿಷದಲ್ಲಿ ಎಕ್ಸ್​ ಆಯಪ್​ನಲ್ಲಿ ತೆಂಡೂಲ್ಕರ್​ ಶುಭಾಶಯದ ಕೋರಿದ್ದಾರೆ. …

Read More »

ಕೋಲ್ಕತ್ತಾದಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್​ಗಳ ಬೃಹತ್​ ಗೆಲುವು

ಕೋಲ್ಕತ್ತಾದಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್​ಗಳ ಬೃಹತ್​ ಗೆಲುವು ದಾಖಲಿಸಿದೆ. ​ ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್​ನಲ್ಲಿ ಭಾರತದ ಬೌಲಿಂಗ್​ ಮಿಂಚುತ್ತಿದ್ದು, ಶ್ರೀಲಂಕಾ ನಂತರ ದಕ್ಷಿಣ ಆಫ್ರಿಕಾವನ್ನು 100ರ ಒಳಗೆ ಭಾರತ ಕಟ್ಟಿಹಾಕಿ ಬೃಹತ್​ ಜಯ ದಾಖಲಿಸಿದೆ. 327 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 27.1 ಓವರ್​​ಗೆ 83 ರನ್​ ಗಳಿಸಿ ಆಲ್​ಔಟ್​ ಆಯಿತು. ಇದರಿಂದ ಭಾರತ 243 ರನ್​ಗಳ ಬೃಹತ್​ ಜಯ …

Read More »

ರಾಜ್ಯ ಸರ್ಕಾರ ಹೊಸದಾಗಿ ರೈತರ ಕೃಷಿ ಪಂಪಸೆಟ್​ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸುವ ಅಕ್ರಮ ಸಕ್ರಮ ಯೋಜನೆಯನ್ನು ಕೈಬಿಟ್ಟಿರುವುದಕ್ಕೆ ಬೆಳಗಾವಿ ರೈತರ ಆಕ್ರೋಶ

ಬೆಳಗಾವಿ: ಹೊಸದಾಗಿ ರೈತರ ಕೃಷಿ ಪಂಪಸೆಟ್​ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅಕ್ರಮ ಸಕ್ರಮ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ಮೊದಲೇ ಬರದಿಂದ ಕಂಗೆಟ್ಟಿರುವ ರೈತರಿಗೆ ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಬೆಳಗಾವಿ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಒಮ್ಮೆ ನೆರೆ, ಮತ್ತೊಮ್ಮೆ ಬರದಿಂದಾಗಿ ರಾಜ್ಯದ ರೈತರ ಸ್ಥಿತಿ ಹದಗೆಟ್ಟಿದೆ. ಈ ನಡುವೆ ಸೆಪ್ಟೆಂಬರ್ 22ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ …

Read More »

ಕುಲಗೋಡ, ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ

*̊ಕುಲಗೋಡ, ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ* ಮೂಡಲಗಿ: ತಾಲೂಕಿನ ಕುಲಗೋಡ ಮತ್ತು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಕಳೆದ ಗುರುವಾರದಂದು ತಾಲೂಕಿನ ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಕುಲಗೋಡ ಮತ್ತು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು …

Read More »

ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ ಎಂದು ಅಬಕಾರಿ ಸಚಿವ

ಬಾಗಲಕೋಟೆ : ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ ಎಂದು ಅಬಕಾರಿ ಸಚಿವ ಆರ್. ಬಿ ತಿಮ್ಮಾಪೂರ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್ ಅವರಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಟೀಲ್ ಸಾಹೇಬರೆ ಬರೀ ಮಾತನಾಡುವುದು, ಗಲ್ಲಿ ಗಲ್ಲಿ ಸಂಚಾರ ಮಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ ಹಣ ತೆಗೆದುಕೊಂಡು ಬನ್ನಿ ಎಂದು ತಿರುಗೇಟು ನೀಡಿದರು. …

Read More »

ನೌಕರರಿಗೆ ಸರ್ಪ್ರೈಸ್ ಆಗಿ ರಾಯಲ್ ಎನ್‌ಫೀಲ್ಡ್​ ಬುಲೆಟ್ ಗಿಫ್ಟ್​ ನೀಡಿದ ಮಾಲೀಕ

ಚೆನ್ನೈ (ತಮಿಳುನಾಡು): ದೀಪಾವಳಿ ಹಬ್ಬದ ನಿಮಿತ್ತ ತಮಿಳುನಾಡಿನ ಉದ್ಯಮಿ, ಟೀ ಎಸ್ಟೇಟ್ ಮಾಲೀಕರೊಬ್ಬರು ತಮ್ಮ ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿಯೇ ಭರ್ಜರಿ ಗಿಫ್ಟ್​ ನೀಡಿದ್ದಾರೆ. ದೀಪಾವಳಿ ಬೋನಸ್‌ ಆಗಿ ತಮ್ಮ 15 ಜನ ನೌಕಕರಿಗೆ ರಾಯಲ್ ಎನ್‌ಫೀಲ್ಡ್​ ಬುಲೆಟ್​ ಸೇರಿದಂತೆ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ತಿರುಪುರ ಮೂಲದ ಉದ್ಯಮಿ ಶಿವಕುಮಾರ್ ಎಂಬುವವರೇ ಈ ಬಾರಿ ದೀಪಾವಳಿ ಹಬ್ಬದ ಖುಷಿಗೆ ತಮ್ಮ ಕಾರು ಚಾಲಕನಿಂದ ಹಿಡಿದು ಮ್ಯಾನೇಜರ್​​ವರೆಗೆ ಯಾರಿಗೂ ತಾರತಮ್ಯ …

Read More »

ಶಿವಮೊಗ್ಗ ರೈಲು ನಿಲ್ದಾಣದ ಬಳಿ 2 ಅನುಮಾನಾಸ್ಪದ ಬಾಕ್ಸ್​ ಪತ್ತೆ

ಶಿವಮೊಗ್ಗ : ನಗರದ ಮುಖ್ಯ ರೈಲು‌ ನಿಲ್ದಾಣದ ಪಾರ್ಕಿಂಗ್ ಸ್ಥಳದ ಬಳಿ ಎರಡು ಅನುಮಾನಾಸ್ಪದ ಬಾಕ್ಸ್​ಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆಂತಕ ಉಂಟು ಮಾಡಿದೆ. ಪತ್ತೆಯಾದ ಎರಡು ಬಾಕ್ಸ್​ಗಳು ನಿನ್ನೆಯಿಂದಲೂ ಅದೇ ಜಾಗದಲ್ಲಿದ್ದು, ಇಂದು ಆಟೋ ಚಾಲಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಕ್ಸ್ ಸುತ್ತಲೂ ಮರಳಿನ ಚೀಲ ಹಾಕಿದ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಯನಗರ ಠಾಣೆ ಪೊಲೀಸರು ಬಾಕ್ಸ್ ಪರಿಶೀಲನೆಗೆ ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ಅನ್ನು ಕರೆಯಿಸಿ …

Read More »

ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಸರಣಿ ಸಾವು 45 ದಿನದಲ್ಲಿ ಒಂದೇ ಗ್ರಾಮದ 30 ಜನ ಸಾವು;

ಬೆಳಗಾವಿ: ಒಬ್ಬರಲ್ಲ, ಇಬ್ಬರಲ್ಲ, ಒಂದೂವರೆ ತಿಂಗಳಲ್ಲಿ ಬರೋಬ್ಬರಿ 30 ಜನರ ಅಕಾಲಿಕ ಮರಣ. ಈ ದಿಢೀರ್​ ಸಾವುಗಳಿಗೆಕಾರಣವೇ ಗೊತ್ತಿಲ್ಲ. ಹೌದು,ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಸರಣಿ ಸಾವು ಸಂಭವಿಸುತ್ತಿರುವುದರಿಂದ ಊರಿನ ಜನರು ಆತಂಕಕ್ಕೊಳಗಾಗಿದ್ದಾರೆ. ಕಳೆದ 45 ದಿನಗಳ ಅಂತರದಲ್ಲಿ 30 ಜನ ಸಾವನ್ನಪ್ಪಿದ್ದಾರೆ. ಈ ಸರಣಿ ಸಾವಿನಿಂದಾಗಿ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಗ್ರಾಮಸ್ಥರು ಏನಂತಾರೆ? : ಈ ಸಾವುಗಳಿಗೆ ಗ್ರಾಮದ ದುರ್ಗಾದೇವಿಗೆ ಪೂಜೆ ಸಲ್ಲಿಸುವಾಗ ದೇವಿ ಮೂರ್ತಿಯು ವಿರೂಪಗೊಂಡಿರುವುದು ಕಾರಣ …

Read More »

ಬಂಡೀಪುರ ಕಾಡಲ್ಲಿ ಗುಂಡಿನ ಚಕಮಕಿ: ಓರ್ವ ಬೇಟೆಗಾರ ಸಾವು

ಚಾಮರಾಜನಗರ: ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು, ಓರ್ವ ಬೇಟೆಗಾರ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಚೆಕ್ ಪೋಸ್ಟ್ ಸಮೀಪ ನಡೆದಿದೆ. ಮೃತರನ್ನು ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಯುವಕ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಮದ್ದೂರು ಅರಣ್ಯ ವಲಯದಲ್ಲಿ 8-10 ಮಂದಿಯ ಗುಂಪು ಬೇಟೆಗೆ ಬಂದಿದ್ದರು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದರು. ಆಗ ಅರಣ್ಯ …

Read More »

ಯಾರಿಗೆಲ್ಲ ಸೆಮಿಫೈನಲ್ ಪ್ರವೇಶಿಸುವ ಅವಕಾಶ? ಹೀಗಿದೆ ಲೆಕ್ಕಾಚಾರ

ಚೆನ್ನೈ: ವಿಶ್ವಕಪ್ ಕ್ರಿಕೆಟ್​ ಪಂದ್ಯಾಟದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರುತ್ತಿದ್ದು ಈಗಾಗಲೇ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವೂ ಸೆಮಿಫೈನಲ್​ ಸುತ್ತು ಪ್ರವೇಶಿಸಿದೆ. ಸತತ ಗೆಲುವಿನಿಂದ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈಗಾಗಲೇ ಏಳು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನೂ ಗೆದ್ದಿರುವ ಟೀಮ್​ ಇಂಡಿಯಾ, ಇಂದು ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈಗಾಗಲೇ ಎರಡೂ ತಂಡಗಳು ಸೆಮಿಫೈನಲ್​ ಪ್ರವೇಶಿಸಿರುವುದರಿಂದ ಈ ಗೆಲುವು ಇತ್ತಂಡಗಳಿಗೂ ಮುಖ್ಯ. ಭಾರತ ಏಳು …

Read More »