Breaking News

Daily Archives: ನವೆಂಬರ್ 26, 2023

ಅಡಿಕೆ ದೋಚುತ್ತಿದ್ದ ವೇಳೆ ಆರೋಪಿಯನ್ನು ಹಿಡಿದ ಸ್ಥಳೀಯರು

ಕಡಬ (ದಕ್ಷಿಣ ಕನ್ನಡ) : ಅಡಿಕೆಯನ್ನು ಕದ್ದು ವಾಹನಕ್ಕೆ ತುಂಬಿಸುತ್ತಿರುವುದನ್ನು ಕಂಡು ಅದನ್ನು ತಡೆದ ವೇಳೆ ಅಪರಿಚಿತ ವ್ಯಕ್ತಿಗಳು ವ್ಯಕ್ತಿಯೋರ್ವರಿಗೆ ತಲವಾರಿನಿಂದ ಹಲ್ಲೆ ನಡೆಸಿ, ಕದ್ದ ಅಡಿಕೆಯೊಂದಿಗೆ ಪರಾರಿಯಾಗಿದ್ದಾರೆ. ಈ ವೇಳೆ ಓರ್ವ ಕಳ್ಳನನ್ನು ಅಡಿಕೆ ಚೀಲಗಳ ಮಾಲೀಕ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಪಣೆಮಜಲು ಎಡಪತ್ಯ ಫಾರ್ಮ್ಸ್ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕಡಬ ತಾಲೂಕಿನ ಸವಣೂರು ಗ್ರಾಮದ ಕಡಬ ನಿವಾಸಿ …

Read More »

ಅಕ್ರಮ ಮರಳು ದಂಧೆಕೋರರ ಅಟ್ಟಹಾಸ: ಕಂದಾಯ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ

ಶಹದೋಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಅಟ್ಟಹಾಸ ಮೆರೆದಿದ್ದಾರೆ. ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಹೋದ ಕಂದಾಯ ಇಲಾಖೆಯ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿದೆ. ಪ್ರಸನ್ನ ಸಿಂಗ್​ (45) ಎಂಬುವವರೇ ಹತ್ಯೆಗೀಡಾದ ಅಧಿಕಾರಿ ಎಂದು ಎಂದು ಗುರುತಿಸಲಾಗಿದೆ. ಇಲ್ಲಿನ ಗೋಪಾಲ್‌ಪುರ ಪ್ರದೇಶದ ಸೋನ್ ನದಿಯ ಶನಿವಾರ ಮಧ್ಯರಾತ್ರಿ ನಡೆದ ಈ ಘಟನೆ ನಡೆದಿದೆ. ಕಂದಾಯ ಇಲಾಖೆಯಲ್ಲಿ ಪಟ್ವಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸನ್ನ …

Read More »

ಒಂದೇ ಕುಟುಂಬದ ಐವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ

ತುಮಕೂರು: ಒಂದೇ ಕುಟುಂಬದ ಐವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ನಗರದ ಸದಾಶಿವನಗರದ ಗರೀಬ್‌ಸಾಬ್‌ (32), ಸುಮಯಾ (30), ಹಜೀರಾ, ಮಹ್ಮದ್‌ ಶುಭಾನ್‌, ಮಹ್ಮದ್‌ ಮುನೀರ್‌ ಮೃತರು. ಮೃತರೆಲ್ಲರುವ ಶಿರಾ ತಾಲೂಕು ಚಿಕ್ಕನಹಳ್ಳಿಯ ನಿವಾಸಿಗಳು ಎನ್ನಲಾಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಮಕೂರಿನ ಸದಾಶಿವನಗರದಲ್ಲಿ ವಾಸವಿದ್ದರು.   ಜೀವನ ನಿರ್ವಹಣೆಗೆ ಕಬಾಬ್‌ ಅಂಗಡಿ ನಡೆಸುತ್ತಿದ್ದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ಬಂಧುಗಳಲ್ಲಿ ಆತಂಕಕ್ಕೆ ದೂಡಿದೆ. ಅಕ್ಕಪಕ್ಕದ ಮನೆಯವರು ಪ್ರತಿನಿತ್ಯ …

Read More »

ಆತ್ಮಹತ್ಯೆ ತಡೆಗೆ HELP LINE _82779-46600ಗೆ ಕರೆ ಮಾಡಿ

ಬೆಂಗಳೂರು: ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಡೆಗಟ್ಟಲು ನಗರ ಪೊಲೀಸರು ಪ್ರತ್ಯೇಕ ಸಹಾಯವಾಣಿ ಸ್ಥಾಪಿಸಿದ್ದಾರೆ. ಆಗ್ನೇಯ ವಿಭಾಗದಲ್ಲಿ ವೀ ಕೇರ್ (ನಾವು ಕಾಳಜಿ ವಹಿಸುತ್ತೆವೆ) ಸಹಾಯವಾಣಿ 82779 46600 ಸ್ಥಾಪಿಸಲಾಗಿದೆ. ಆರು ಮಹಿಳಾ ಪೊಲೀಸರನ್ನು ನೇಮಕ ಮಾಡಲಾಗಿದೆ. ಪಾಳಿಯಲ್ಲಿ ದಿನ 24*7 ಕಾರ್ಯ ನಿರ್ವಹಿಸಲಿದ್ದಾರೆ. ಇವರಿಗೆ ನಿಮ್ಹಾನ್ಸ್ ವೈದ್ಯರಿಂದ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚನೆ ಮಾಡುವವರು ಈ ಕೂಡಲೇ ವೀ ಕೇರ್ ಹೆಲ್ಪ್‌ಲೈನ್‌ಗೆ ಕರೆ ಮಾಡಬಹುದು, ವಾಟ್ಸ್‌ಆಯಪ್ ಸಂದೇಶ, …

Read More »

668 ಕೋಟಿ ನಿರ್ಭಯಾ ನಿಧಿಯಲ್ಲಿ ನಿರ್ಮಾಣ; ಸೇಫ್ ಸಿಟಿ ಕಮಾಂಡ್ ಸೆಂಟರ್ ಉದ್ಘಾಟನೆ

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸ್ಥಾಪಿಸಲಾದ ‘ಸೇಫ್ ಸಿಟಿ ಕಮಾಂಡ್ ಸೆಂಟರ್’ (ಸುರಕ್ಷಾ ನಗರ ಕಮಾಂಡ್ ಕೇಂದ್ರ) ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇಂತಹ ಸೌಲಭ್ಯಗಳ ಪ್ರಯೋಜನಗಳು ಜನರಿಗೆ ತಲುಪಬೇಕು ಎಂದರು.   ಅಪರಾಧ ಹೆಚ್ಚಳ ಒಪ್ಪಿಕೊಂಡ ಸಿಎಂ: ಬೆಂಗಳೂರಿನಲ್ಲಿ ಸರಗಳ್ಳತನ, ಮಹಿಳೆಯರ ಮೇಲಿನ ಹಿಂಸಾತ್ಮಕ ಅಪರಾಧಗಳು ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಒಪ್ಪಿಕೊಂಡ ಅವರು, ‘ನಿರ್ಭಯಾ ನಿಧಿ’ ಬಳಸಿ 668 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಕೇಂದ್ರವನ್ನು ಸರಿಯಾಗಿ …

Read More »

ಜನರ ದುಡ್ಡು ಜನರ ಜೇಬಿಗೆ ಹಾಕಿದರೆ ಬಿಜೆಪಿಯವರಿಗೆ ಹೊಟ್ಟೆಯುರಿ ಏಕೆ: ಸಿಎಂ

ಬೆಂಗಳೂರು:ದೇಶದಲ್ಲಿ ಯಾವ ಸರ್ಕಾರಗಳೂ ಹಿಂದೆಂದೂ ಮಾಡದ ಸಾಧನೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಸಾಧಿಸಿ ತೋರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಾರಿಗೆ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಯೋಜನೆಯ ಶತಕೋಟಿ ಸಂಭ್ರಮ ಕಾರ್ಯಕಮವನ್ನು ಉದ್ಘಾಟಿಸಿ, ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಆಗೋದಿಲ್ಲ, ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎಂದು …

Read More »

ದ್ವಿತೀಯ ಪಿಯು ಪರೀಕ್ಷೆ ನೋಂದಣಿ ಅವಧಿ ಡಿ.1ರವೆಗೆ ವಿಸ್ತರಣೆ

ಬೆಂಗಳೂರು: ಮಾರ್ಚ್-2024ಕ್ಕೆ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1ಕ್ಕೆ ಹೊಸ ವಿದ್ಯಾರ್ಥಿಗಳ ನೋಂದಾಣಿ ಮಾಹಿತಿಯನ್ನು ಪಿಯು ಪರೀಕ್ಷಾ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಡಿ.1ರವೆಗೆ ಅಂತಿಮ ಅವಕಾಶ ನೀಡಲಾಗಿದೆ. ಈ ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ನ.21ರ ತನಕ ಸಮಯ ನೀಡಿತ್ತು. ಆದರೆ ಪ್ರಕ್ರಿಯೆ ಪೂರ್ಣಗೊಂಡಿಲ್ಲದ ಹಿನ್ನೆಲೆಯಲ್ಲಿ ನೋಂದಣಿ ಅವಧಿಯನ್ನು ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡದೆ ಇದ್ದರೆ ಅದಕ್ಕೆ ಪ್ರಾಂಶುಪಾಲರೇ ನೇರ …

Read More »

ಅರ್ಜಿ ಸಲ್ಲಿಸಿದ ಎಲ್ಲರಿಗೂ 10 ದಿನದೊಳಗೆ ಬರುತ್ತೆ ‘ಗೃಹಲಕ್ಷ್ಮಿ’ ಹಣ

ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಜಮಾ ಆಗಿಲ್ಲ. ಇದೀಗ ಯಜಮಾನಿಯರಿಗೆ ಗುಡ್ ನ್ಯೂಸ್ ಏನಪ್ಪ ಅಂದರೆ ಅರ್ಜಿ ಸಲ್ಲಿಸಿದ ಎಲ್ಲರಿಗೂ 10 ದಿನದೊಳಗೆ ‘ಗೃಹಲಕ್ಷ್ಮಿ’ ಹಣ ಜಮಾ ಆಗಲಿದೆ.   ಹೌದು, ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ …

Read More »

2024 ರಲ್ಲಿ ಕರ್ನಾಟಕದಲ್ಲಿ ಯುವನಿಧಿ ಜಾರಿ:C.M.

ತೆಲಂಗಾಣ : 2024 ರಲ್ಲಿ ಕರ್ನಾಟಕದಲ್ಲಿ ಯುವನಿಧಿ ಜಾರಿಗೊಳಿಸಲಾಗುತ್ತದೆ ಹಾಗೂ ಯುವಜನರಿಗೆ ಕೌಶಾಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಭಾನುವಾರ ತೆಲಂಗಾಣಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದರು. . ಕರ್ನಾಟಕ ರಾಜ್ಯದ ಜನತೆಗೆ ಮೋಸ ಮಾಡಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ..ಯುವ ನಿಧಿ ಯೋಜನೆಯನ್ನು ಜಾರಿಗೆ ಮಾಡಿದರೆ ನಾವು ಘೋಷಣೆ ಮಾಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಒಂದೇ ವರ್ಷದೊಳಗೆ ಜಾರಿಗೊಳಿಸಿದಂತಾಗುತ್ತದೆ …

Read More »

ಅಥಣಿಯಲ್ಲಿ ವಿದ್ಯುತ್ ತಗುಲಿ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕೋಡಿ : ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತುಳಿದ ತಾಯಿ ಹಾಗೂ ಮಗು ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ಅಥಣಿಯಲ್ಲಿ ತಂದೆ ಮತ್ತು ಮಗನಿಗೆ ವಿದ್ಯುತ್ ತಗುಲಿ, ಸ್ಥಳದಲ್ಲಿಯೇ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.   ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಹಾಗೂ ಪ್ರೀತಮ್​ ಮಲ್ಲಿಕಾರ್ಜುನ ಪೂಜಾರಿ (7) ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿರುವ …

Read More »