Breaking News

Daily Archives: ನವೆಂಬರ್ 25, 2023

ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ಧಾರವಾಡ, ನ.25: ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ (Electric shock) ತಗುಲಿ ಬಾಲಕ ಮೃತಪಟ್ಟ (Death) ಘಟನೆ ಧಾರವಾಡ ನಗರದ ಸಿದ್ದರಾಮ ಕಾಲೋನಿಯಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ 16 ವರ್ಷದ ಶ್ರೇಯಸ್ ಶಿನ್ನೂರ ಮೃತಪಟ್ಟಿದ್ದಾನೆ. ಮನೆ ಮಹಡಿ ಮೇಲೆ ಗೆಳೆಯರೊಂದಿಗೆ ಸಂಜೆ ಕ್ರಿಕೆಟ್ (Cricket) ಆಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕ್ಯಾಚ್ ಹಿಡಿಯಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ಶ್ರೇಯಸ್ ಅಸ್ವಸ್ಥಗೊಂಡಿದ್ದ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ …

Read More »

ರಾಹುಲ್ ಗಾಂಧಿ  ಅಪ್ರಬುದ್ಧ ರಾಜಕಾರಣಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ,  : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಟೀಕಿಸಿದ ರಾಹುಲ್ ಗಾಂಧಿ  ಅಪ್ರಬುದ್ಧ ರಾಜಕಾರಣಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ರಾಹುಲ್ ಗಾಂಧಿಯ ಇಂತಹ ಹೇಳಿಕೆಗಳ ಕಾರಣದಿಂದಲೇ ಕಾಂಗ್ರೆಸ್ ಪಕ್ಷವು ಕಳೆದ ಎರಡೂ ಲೋಕಸಭಾ ಚುನಾವಣೆಗಳಲ್ಲೂ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯನ್ನೂ ಪಡೆಯಲಾಗದಷ್ಟು ಹೀನಾಯವಾಗಿ ಸೋತಿದೆ ಎಂದರು. ನರೇಂದ್ರ ಮೋದಿಯವರನ್ನು ಭಾರತ ದೇಶವಷ್ಟೇ ಅಲ್ಲ, …

Read More »

ಕಂಟೋನ್ಮೆಂಟ್ ಬೋರ್ಡ್ ಸಿಇಒ ಕೊಠಡಿಯಲ್ಲಿ ಸಿಕ್ಕ ಡೆತ್ ನೋಟ್​ನಲ್ಲಿ ಆತ್ಮಹತ್ಯೆಯ ಅಸಲಿ ಸತ್ಯ ಬಯಲು

ಬೆಳಗಾವಿ, ನ.25: ಈ ಆನ್ ಲೈನ್ ಗ್ಯಾಮ್ಲಿಂಗ್ ಗೇಮ್​ಗಳೇ ಹಾಗೇ ಒಂದು ಬಾರಿ ನೀವು ಅದರಲ್ಲಿ ಇಳಿದ್ರೆ ಮತ್ತೆ ಎದ್ದು ಬಂದ ಉದಾಹರಣೆಗಳೇ ಇಲ್ಲ. ಜನ ಸಾಮಾನ್ಯರಿಗೆ ತಿಳಿ ಹೇಳಬೇಕಿದ್ದ ಅಧಿಕಾರಿಯೊಬ್ಬರು ಇದೇ ಆನ್ ಲೈನ್ ಗ್ಯಾಮ್ಲಿಂಗ್​ಗೆ (Online Gambling) ಬಲಿಯಾಗಿದ್ದಾರೆ. ರಕ್ಷಣಾ ಇಲಾಖೆಯ ಅಡಿಯಲ್ಲಿ ಸಿಇಒ ಆಗಿ ಕೆಲಸ ಮಾಡ್ತಿದ್ದ ಅಧಿಕಾರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಬಿಐ (CBI) ದಾಳಿಯಾದ ನಾಲ್ಕೇ ದಿನಕ್ಕೆ ಅಧಿಕಾರಿ ಸಾವಿನ ದಾರಿ …

Read More »

ಚಳಿಗಾಲದ ಅಧಿವೇಶನ ಇಲ್ಲಿಯೇ ಯಾಕಾದರೂ ನಡೆಯುತ್ತದೋ ಎಂದು ಇಲ್ಲಿನ ರೈತರಿಗೆ ಧುತ್ತನೆ ಎದುರಾಗಿದೆ ಟೆನ್ಷನ್! ಏನದು ವಿಷಯ?

ಬೆಳಗಾವಿಯ ಸುವರ್ಣ ಸೌಧದಲ್ಲಿ ( Belagavi Suvarna soudha) ವಾರ್ಷಿಕ ಕಾರ್ಯಕ್ರಮದಂತೆ ಮುಂದಿನ ತಿಂಗಳು ಡಿಸೆಂಬರ್​​ 4 ರಿಂದ 15ರ ವರೆಗೆ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಆದರೆ ಯಾಕಾದ್ರೂ ಈ ಚಳಿಗಾಲದ ಅಧಿವೇಶನ (legislative winter session) ಆರಂಭವಾಗ್ತಿದೆಯಲ್ಲಾ ಅನ್ನೋ ಟೆನ್ಷನ್ ಇಲ್ಲಿನ ರೈತರಿಗೆ (farmers) ಧುತ್ತನೆ ಎದುರಾಗಿದೆ. ಸುವರ್ಣ ಸೌಧದ ಆಸುಪಾಸು ಇರುವ 50ಕ್ಕೂ ಅಧಿಕ ರೈತರು ಅದಾಗಲೇ ಈ ಟೆನ್ಷನ್ ಅನುಭವಿಸತೊಡಗಿದ್ದಾರೆ! ಏನಿಲ್ಲ ಪಾಪಾ ತಾವು ಕಷ್ಟಪಟ್ಟು …

Read More »

ಭವಿಷ್ಯ ಹೇಳ್ತಿದ್ದವಳ ತಲೆ ಸೀಳಿದ ಹಂತಕರು! ಅತ್ಯಾಚಾರವೆಸಗಿ ಕೊಲೆ?

ಕಲಬುರಗಿಯಲ್ಲಿ ಒಂಟಿ ವೃದ್ದೆಯ ಭೀಕರ ಹತ್ಯೆ ಪ್ರಕರಣ ದಾಖಲಿಸಿಕೊಂಡಿರೋ ಆರ್ ಜೆ ನಗರ ಪೊಲೀಸರು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ. ಅದೆನೇ ಇರಲಿ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಿದ್ದ ರತ್ನಾಬಾಯಿ, ತನ್ನ ಭವಿಷ್ಯ ಹಿಗೇ ಅಂತ್ಯವಾಗುತ್ತೆ ಅನ್ನೊದು ತಿಳಿಯದೇ ಇರೋದು ದುರಂತವೇ ಸರಿ. ಹಂತಕರ ಬಂಧನದ ನಂತರವೇ ರತ್ನಾಬಾಯಿ ಹತ್ಯೆಗೆ ಕಾರಣ ಏನು ಅನ್ನೊದು ತಿಳಿಯಲಿದೆ‌.ಆ ವೃದ್ದೆ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಾ ಜನರ ಕಷ್ಟಕಾರ್ಪಣ್ಯಗಳನ್ನ ದೂರ ಮಾಡುತ್ತ ಒಬ್ಬಂಟಿಯಾಗಿ …

Read More »

ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿಗೆ ಶಾಮನೂರು ಶಿವಶಂಕರಪ್ಪ ವಿರೋಧ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕವಾಗಿ ಸಮಿಕ್ಷೆಯಾಗಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದಾರೆ. ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಜಾತಿ ಜನಗಣತಿ ವರದಿ ಸರಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ”ಜಾತಿ ಗಣತಿ ಲೋಪದಿಂದ ಕೂಡಿದೆ ಎಂದು ನಾವು ವಿರೋಧ ಮಾಡುತ್ತಿದ್ದೇವೆ. ವರದಿಯಲ್ಲಿ …

Read More »

ಸೈನಿಕರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಯೋಧ ಕ್ಯಾಪ್ಟನ್​ ಪ್ರಾಂಜಲ್​ ಅವರು ಹುತಾತ್ಮ ಸಾರ್ವಜನಿಕರಿಂದ ಗೌರವ ಸಮರ್ಪಣೆ

ಬೆಂಗಳೂರು: ಹುತಾತ್ಮ ಯೋಧ ಕ್ಯಾಪ್ಟನ್​ ಪ್ರಾಂಜಲ್​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್​ನ ಅವರ ಮನೆ ಬಳಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಹಲವು ಗಣ್ಯರು ಪ್ರಾಂಜಲ್​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್​ ಅಶೋಕ್​, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ಡಿ ಕೆ ಸುರೇಶ್ ಮುಂತಾದ ಗಣ್ಯರು ಪ್ರಾಂಜಲ್​ ಅವರ ಪಾರ್ಥೀವ ಶರೀರದ …

Read More »

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿ

ನವದೆಹಲಿ: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿಸಿದೆ. ಅಲ್ಲದೇ, ಅಪರಾಧಿಗಳಿಗೆ 5 ಲಕ್ಷ ರೂಪಾಯಿ ದಂಡವನ್ನೂ ಹಾಕಲಾಗಿದೆ. ಮತ್ತೊಬ್ಬ ಅಪರಾಧಿ ಅಜಯ್ ಸೇಥಿ ಎಂಬಾತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.     ದೆಹಲಿಯಲ್ಲಿ 2008ರ ಸೆಪ್ಟೆಂಬರ್ 30ರಂದು ಬೆಳಗಿನ ಜಾವ 3:30ರ ಸುಮಾರಿಗೆ ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರನ್ನು …

Read More »

ರಾಜಸ್ಥಾನ ಚುನಾವಣೆ: ಅಶೋಕ್ ಗೆಹ್ಲೋಟ್, ವಸುಂಧರಾ ರಾಜೆ ಸೇರಿ ಗಣ್ಯರಿಂದ ವೋಟಿಂಗ್, ಶೇ.24.74ರಷ್ಟು ಮತದಾನ

ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಸ್ಥಾನಗಳಿಗೆ ಮತದಾನ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬೆಳಿಗ್ಗೆ 11 ಗಂಟೆಯವರೆಗೆ ಶೇ 24.74ರಷ್ಟು ಮತದಾನವಾಗಿದೆ.   ಜೈಪುರ (ರಾಜಸ್ಥಾನ): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಅಂತಿಮ ಹಂತಕ್ಕೆ ಬಂದಿವೆ. ಮಿಜೋರಾಂ, ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಮತದಾನ ಪೂರ್ಣಗೊಂಡಿದೆ. ರಾಜಸ್ಥಾನದ ಮತದಾರರು ಇಂದು (ಶನಿವಾರ) …

Read More »

ಬೆಳಗಾವಿಯ ದಂಡು ಮಂಡಳಿ ಸಿಇಒ ಕರ್ನಲ್ ಆನಂದ್​ ನಿಗೂಢ ಸಾವು

ಬೆಳಗಾವಿ: ಬೆಳಗಾವಿಯ ದಂಡು ಮಂಡಳಿ ಸಿಇಒ ಕರ್ನಲ್ ಆನಂದ್​ (40) ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಕೆ.ಆನಂದ್​ ಅವರ ಸರ್ಕಾರಿ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ್​ ಅವರು ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್​ಗೆ ಸೇರಿದ್ದರು. ಮೃತ ಆನಂದ ತಮಿಳುನಾಡು ಮೂಲದವರಾಗಿದ್ದು, ವಿವಾಹ ಆಗಿಲ್ಲ, ತಂದೆ-ತಾಯಿ ತಮಿಳುನಾಡಿನಲ್ಲಿದ್ದಾರೆ. ಬೆಳಗಾವಿಯ ಸರ್ಕಾರಿ‌ ನಿವಾಸದಲ್ಲಿ …

Read More »