ಬೆಳಗಾವಿ: ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಪ್ರಚಾರಾರ್ಥವಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿರೋದು ಖುಷಿ ವಿಚಾರ. ಇದೇ 24ಕ್ಕೆ ಬ್ಯಾಡ್ ಮ್ಯಾನರ್ಸ್ ಬಿಡುಗಡೆ ಆಗುತ್ತಿದ್ದು, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ನಟ ಅಭಿಷೇಕ್ ಅಂಬರೀಶ್ ಕೋರಿದರು. ಬೆಳಗಾವಿ ಖಾಸಗಿ ಹೊಟೇಲ್ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಅಭಿಷೇಕ್ ಅಂಬರೀಶ್, ಬ್ಯಾಡ್ ಮ್ಯಾನರ್ಸ್ನಲ್ಲಿ ಬೆಳಗಾವಿ ಜಿಲ್ಲೆಯವರು ಅಭಿನಯಿಸಿದ್ದಾರೆ. ಕಲಾವಿದರು ಇಲ್ಲಿಗೆ ಬರೋದಿಲ್ಲ ಎಂಬ ದೂರು ಇದೆ. ಹೀಗಾಗಿ ಬೆಳಗಾವಿಗೆ ಬಂದು ಪ್ರಚಾರ …
Read More »Daily Archives: ನವೆಂಬರ್ 22, 2023
“ಕೊಲ್ಲಾಪುರಿ ಬ್ರಾಂಡ್ನ ಚಪ್ಪಲಿ ತಯಾರಾಗುವುದು ಅಥಣಿಯಲ್ಲಿ. ಆದರೆ ಹೆಸರು ಬಂದಿದ್ದು ಮಾತ್ರ ಕೊಲ್ಲಾಪುರ್ ಅಂತ
ಚಿಕ್ಕೋಡಿ(ಬೆಳಗಾವಿ): ದೇಶ, ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಲ್ಲಾಪುರ್ ತೊಗಲಿನ ಚಪ್ಪಲಿ ತಯಾರಕರ ಪರಿಸ್ಥಿತಿ ಸದ್ಯ ದುಸ್ಥಿತಿಯಾಗಿದ್ದು, ಸರ್ಕಾರವು ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಮೋದ್ಯೋಗ ನಡೆಸುತ್ತಿರುವ ಕುಟುಂಬಗಳ ಕುರಿತು ಚರ್ಚಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕುಶಲಕರ್ಮಿಗಳು ಒತ್ತಾಯಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮ ಹಾಗೂ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಪ್ಪಲಿಯನ್ನು ತಯಾರಿಸಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಆಧುನಿಕತೆಯಿಂದ ದಿನದಿನಕ್ಕೆ ಚರ್ಮದಿಂದ ತಯಾರಿಸಿದ ಚಪ್ಪಲಿ ಬೇಡಿಕೆ ಕಡಿಮೆಯಾಗುತ್ತಿದ್ದು ಮತ್ತು …
Read More »ಬೆಳಗಾವಿ ಅಧಿವೇಶನ: ₹300 ಕೋಟಿ ವೆಚ್ಚದಲ್ಲಿ ಶಾಸಕರು, ಅಧಿಕಾರಿಗಳ ವಾಸ್ತವ್ಯಕ್ಕೆ ಪಂಚತಾರಾ ಹೊಟೇಲ್ ನಿರ್ಮಾಣಕ್ಕೆ ಚಿಂತನೆ
ಬೆಂಗಳೂರು: ಪ್ರತಿವರ್ಷ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ಕೋಟಿ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡಲಾಗುತ್ತದೆ. ಇದೀಗ ಇಂಥ ಖರ್ಚು ಕಡಿಮೆಗೊಳಿಸುವುದು, ವಾಸ್ತವ್ಯದ ಅನಾನುಕೂಲತೆ, ವೆಚ್ಚವನ್ನು ತಗ್ಗಿಸಲು ಬೆಳಗಾವಿ ಸುವರ್ಣಸೌಧದ ಸಮೀಪದಲ್ಲೇ ಪಂಚತಾರಾ ಹೊಟೇಲ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಡಿ.4 ರಿಂದ ಡಿ.15 ರವರೆಗೆ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಕಳೆದ ವರ್ಷ ನಡೆದ ಅಧಿವೇಶನಕ್ಕೆ ಅಂದಾಜು …
Read More »ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ರದ್ದು
ಹುಬ್ಬಳ್ಳಿ: ಉತ್ತರ ಕರ್ನಾಟಕ ಜನರ ಅಚ್ಚುಮೆಚ್ಚಿನ ರೈಲು ಎಂದೇ ಖ್ಯಾತಿ ಗಳಿಸಿದ್ದ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲಿನ ಸಂಚಾರ ರದ್ದು ಮಾಡಲಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ವೇಗದೂತದಂತೆ ಬರುತ್ತಿದ್ದ ಈ ರೈಲು ಅಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಆದರೆ, ಏಕಾಏಕಿ ಈ ರೈಲು ಸಂಚಾರವನ್ನು ರದ್ದು ಮಾಡಿ ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಬೆಂಗಳೂರು-ಹುಬ್ಬಳಿ ಸೂಪರ್ ಫಾಸ್ಟ್ ರೈಲು ಉತ್ತರ ಕರ್ನಾಟಕ ಮಂದಿಗೆ ಅತಿ ವೇಗದ ರೈಲು. ಈ ರೈಲು ಅಂದ್ರೆ ಈ …
Read More »ನಿಗಮ, ಮಂಡಳಿ ನೇಮಕಾತಿ ಗೊಂದಲ ಸಿಎಂ, ಡಿಸಿಎಂ ನಡುವೆ ಒಮ್ಮತ ಮೂಡಿಸಲು ಸುರ್ಜೇವಾಲ ಕಸರತ್ತು
ಬೆಂಗಳೂರು: ನಿಗಮ, ಮಂಡಳಿ ನೇಮಕಾತಿ ಗೊಂದಲ ಮುಂದುವರಿದಿದೆ. ಮಂಗಳವಾರ ತಡರಾತ್ರಿಯವರೆಗೆ ರಣದೀಪ್ ಸಿಂಗ್ ಸುರ್ಜೇವಾಲ ಖಾಸಗಿ ಹೊಟೇಲ್ನಲ್ಲಿ ನಿಗಮ, ಮಂಡಳಿಗಳಿಗೆ ನೇಮಕಾತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಸಮಾಲೋಚಿಸಿದ್ದಾರೆ. ಈ ಸಂದರ್ಭದಲ್ಲಿ ಸುರ್ಜೇವಾಲ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಭಿಪ್ರಾಯ ಆಲಿಸಿದರು. ಸುದೀರ್ಘವಾಗಿ ಚರ್ಚಿಸಿದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ನಿಗಮ, ಮಂಡಳಿ ನೇಮಕಾತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ತೀವ್ರಗೊಂಡಿದೆ. …
Read More »ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ(ಸಿಎಸ್) ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಸದ್ಯಕ್ಕೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗೋಯಲ್, ಡಿಸೆಂಬರ್ 1ರಂದು ಅಧಿಕಾರ ಸ್ವೀಕರಿಸುವರು. ಪ್ರಸ್ತುತ ಮುಖ್ಯ ಕಾರ್ಯದರ್ಶಿಯಾಗಿರುವ ವಂದಿತಾ ಶರ್ಮಾ ಅವರ ಅಧಿಕಾರಾವಧಿ ನವೆಂಬರ್ 30ರಂದು ಕೊನೆಗೊಳ್ಳಲಿದೆ. ಹಿರಿತನದ ಆಧಾರದಡಿ ರಜನೀಶ್ ಗೋಯಲ್ ಅವರನ್ನು ಮುಂದಿನ ಮುಖ್ಯ ಕಾರ್ಯದರ್ಶಿಯನ್ನಾಗಿ ಆಯ್ಕೆ …
Read More »