ಬಳ್ಳಾರಿ : ಜಿಲ್ಲೆಯ ತೋರಣಗಲ್ಲು ರೈಲು ನಿಲ್ದಾಣ ಪ್ರದೇಶದ 11ನೇ ವಾರ್ಡ್‌ನ ಘೋರ್ಪಡೆ ನಗರದಲ್ಲಿ ಎಚ್‌ಎಲ್‌ಸಿ ಕಾಲುವೆಯ ಬಳಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ದಾಳಿ ನಡೆದಿದೆ. ಪರಿಣಾಮ ಪುರಸಭೆ ಸದಸ್ಯ ನಾಗರಾಜ ನಾಯ್ಕ (32) ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ವಾರ್ಡ್ ನಿವಾಸಿ ಶಿವಕುಮಾರ್ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪಿ. ನಾಗರಾಜ ನಾಯ್ಕ ಅವರಿಗೆ ತಲೆ, ಬೆನ್ನಿಗೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ …
Read More »Daily Archives: ನವೆಂಬರ್ 13, 2023
ದೇವೇಗೌಡರ ಆಶೀರ್ವಾದ ಪಡೆದ ವಿಜಯೇಂದ್ರ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಬಿ.ವೈ. ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಮಾಜಿ ಪ್ರಧಾನಮಂತ್ರಿ ದೇವೇಗೌಡರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ, ಅವರ ಆಶೀರ್ವಾದ ಪಡೆದಿದ್ದೇನೆ ಎಂದರು. ಇಷ್ಟು ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿ ಇಷ್ಟು ಚಿಕ್ಕ ವಯಸ್ಸಿಗೇ ದೊಡ್ಡ ಜವಾಬ್ದಾರಿ ಕೊಟ್ಟ ಬಗ್ಗೆ ಹೆಮ್ಮೆ …
Read More »ಬೆಂಗಳೂರಲ್ಲಿ ನಡೆದ ಸರಣಿ ಅಪಘಾತ
ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಬಳಿ ಕಾರು ಚಾಲಕನೊಬ್ಬ ನಿಯಂತ್ರಣ ತಪ್ಪಿ ಸರಣಿ ಅಪಘಾತ ಎಸಗಿದ ಘಟನೆ ಭಾನುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಒಡಿಶಾ ಮೂಲದ ಸ್ಮಿತಾ, ಕಿರಣ್, ಮೊಯ್ಸಿನ್ ಎಂಬುವರು ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳ ಪೈಕಿ ಸ್ಮಿತಾಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಘಟನೆಯಲ್ಲಿ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಘಟನೆ ಸಂಬಂಧ ಕಾರು ಚಾಲಕ ಬನ್ನೇರುಘಟ್ಟ ರಸ್ತೆ ನಿವಾಸಿ ಅಗರ್ವಾಲ್ ಎಂಬಾತನನ್ನು ವಶಕ್ಕೆ …
Read More »ಟೈಗರ್ 3’ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್: ಮೊದಲ ದಿನವೇ 44 ಕೋಟಿ ಕಲೆಕ್ಷನ್!
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ‘ಟೈಗರ್ 3’ ಚಿತ್ರ ಬಿಡುಗಡೆಯಾದ ಮೊದಲ ದಿನ 44.5 ಕೋಟಿ ರೂಪಾಯಿ ಗಳಿಸಿದೆ. ದೀಪಾವಳಿ ಹಬ್ಬದ ಉಡುಗೊರೆಯಾಗಿ ನವೆಂಬರ್ 12ರಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಕತ್ರಿನಾ ಕೈಫ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟೈಗರ್ 3’ ಬಿಡುಗಡೆ ಆಗಿದೆ. ಮನೀಶ್ ಶರ್ಮಾ ನಿರ್ದೇಶನದ ಸ್ಪೈ ಥ್ರಿಲ್ಲರ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲನೇ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ …
Read More »ಪಟಾಕಿ ಅವಘಡ: ಬೆಂಗಳೂರಲ್ಲಿ ಗಾಯಗೊಂಡು 25 ಮಂದಿ
ಬೆಂಗಳೂರು: ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ನಗರದಲ್ಲಿ ಸಾಕಷ್ಟು ಕ್ರಮ ಕೈಗೊಂಡಿದ್ದರೂ 25 ಪಟಾಕಿ ಅವಘಡ ಪ್ರಕರಣಗಳು ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿಯಿಂದ ಇಲ್ಲಿಯವರೆಗೆ ಏಳು ಜನರು ಪಟಾಕಿ ಸಂಬಂಧಿತ ಗಾಯಗಳ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಬ್ಬರು ಗಾಯಾಳುಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಐವರಿಗೆ ಓಪಿಡಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇವರಲ್ಲಿ 10 ವರ್ಷದ ಬಾಲಕಿ ಮತ್ತು 18 …
Read More »ದೇಶದ ಪಟಾಕಿ ಕೇಂದ್ರ ‘ಶಿವಕಾಶಿ’ಗೆ 50 ಕೋಟಿ ರೂಪಾಯಿ ವ್ಯವಹಾರ ನಷ್ಟ: ವರದಿ
ವಿರುದುನಗರ (ತಮಿಳುನಾಡು): ಪಟಾಕಿ ತಯಾರಿಕೆಗೆ ಹೆಸರುವಾಸಿಯಾದ ತಮಿಳುನಾಡಿನ ಶಿವಕಾಶಿ ಈ ಬಾರಿ ಭಾರಿ ವ್ಯವಹಾರ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ 6 ಸಾವಿರ ಕೋಟಿಯಷ್ಟು ಪಟಾಕಿ ಮಾರಾಟವಾಗಿದ್ದರೂ, ಇದು ಕಳೆದ ಬಾರಿಗಿಂತ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿ ಇಡೀ ದೇಶಕ್ಕೆ ಪಟಾಕಿ ಸರಬರಾಜು ಮಾಡುವ ಮುಖ್ಯ ಕೇಂದ್ರವಾಗಿದೆ. ಇಲ್ಲಿನ ಪಟಾಕಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಪ್ರಮುಖ ವ್ಯವಹಾರ ಕೇಂದ್ರವೂ ಆಗಿರುವ ಶಿವಕಾಶಿ ಈ ಬಾರಿಯ …
Read More »ಹಳೆ ವೈಷಮ್ಯ ಹಿನ್ನೆಲೆ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ನಡೆದಿದೆ.
ಬೆಳಗಾವಿ : ಹಳೇ ವೈಷಮ್ಯ ಹಿನ್ನೆಲೆ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಭಾನುವಾರ ರಾತ್ರಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ಗೋಕಾಕ್ ಪಟ್ಟಣದ ಆದಿಜಾಂಬವ ನಗರದ ನಿವಾಸಿ ಶಾನೂರು ಪೂಜಾರಿ (27) ಕೊಲೆಯಾದ ಯುವಕ. ಘಟನೆಯಿಂದ ಕೆರಳಿದ ಮೃತ ಯುವಕನ ಕುಟುಂಬಸ್ಥರು ಅದೇ ಕಾಲೋನಿಯ ಯುವಕರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ, ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ 1 ಬೈಕ್, …
Read More »