ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ನಿಂದ ಬಹಳಷ್ಟು ಜನ ಕಾಂಗ್ರೆಸ್ಗೆ ಬರುತ್ತಾರೆ. ಹಾಲಿ ಶಾಸಕರುಗಳೂ ಹಾಗೂ ಮಾಜಿಗಳು ಬರ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿಯಲ್ಲಿಂದು ಮಾತನಾಡಿದ ಅವರು, ಬರುವವರನ್ನೆಲ್ಲರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ನೋ ಆಪರೇಷನ್, ಪಕ್ಷದ ಸಿದ್ಧಾಂತ ಒಪ್ಪಿ ಬರುವವರು ಬಿಜೆಪಿಯವರಾಗಿರಲಿ ಅಥವಾ ಜೆಡಿಎಸ್ನವರಾಗಿರಲಿ, ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುತ್ತೇವೆ ಎಂದರು. ಪ್ರಧಾನಿ ಮೋದಿಗೆ ಸಿಎಂ ತಿರುಗೇಟು: ಮಧ್ಯಪ್ರದೇಶ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ಮಾಡಿದ ಭಾಷಣಕ್ಕೆ …
Read More »Daily Archives: ನವೆಂಬರ್ 6, 2023
ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕನ ಬಂಧನ
ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೆ.ಎಸ್. (45) ಹತ್ಯೆ ಪ್ರಕರಣ ಸಂಬಂಧ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ಅವರು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಆರೋಪಿ ಕಿರಣ್ ಕಳೆದ ಎಂಟು ವರ್ಷಗಳಿಂದ ಗಣಿ ಇಲಾಖೆ ಪ್ರಧಾನ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು …
Read More »ನಾನು 2028ಕ್ಕೆ ಸಿಎಂ ಸ್ಥಾನಕ್ಕಾಗಿ ಕ್ಲೈಮ್ ಮಾಡುತ್ತೇನೆ: ಸತೀಶ್ ಜಾರಕಿಹೊಳಿ
ಬೆಂಗಳೂರು: ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಾನು 2028ಕ್ಕೆ ಸಿಎಂ ಸ್ಥಾನಕ್ಕಾಗಿ ಕ್ಲೈಮ್ ಮಾಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇರೆಯವರು ಕೇಳುವುದು, ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟದ್ದು. ನಾವು 28ಕ್ಕೆ ಕ್ಲೈಂ ಮಾಡ್ತೇವೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಅಂತ ಹೇಳಿದ್ದಾರೆ, ಬೇರೆಯವರು ಹೇಳುವ …
Read More »ಕರುನಾಡಲ್ಲಿ ಘಮ್ಮೆಂದ ‘ಟಗರು ಪಲ್ಯ’; ಎರಡನೇ ವಾರವೂ ಹೌಸ್ಫುಲ್ ಪ್ರದರ್ಶನ
ಕರುನಾಡ ಅಂಗಳದಲ್ಲಿ ಕನ್ನಡ ರಾಜ್ಯೋತ್ಸವದ ಜೊತೆಗೆ ‘ಟಗರು ಪಲ್ಯ’ ವಿಜಯೋತ್ಸವವೂ ಜೋರಾಗಿದೆ. ಡಾಲಿ ಧನಂಜಯ್ ನಿರ್ಮಾಣದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ನಾಟಿ ಸ್ಟೈಲ್ನಲ್ಲಿ ತಯಾರಾಗಿ ಥಿಯೇಟರ್ಗೆ ಬಂದ ‘ಟಗರು ಪಲ್ಯ’ ಕನ್ನಡ ಕಲಾಭಿಮಾನಿಗಳಿಗೆ ರುಚಿಕೊಟ್ಟಿದೆ. ಪ್ರೇಕ್ಷಕರು ಒಮ್ಮತದಿಂದ ಗ್ರಾಮೀಣ ಸೊಗಡಿನ ಸಿನಿಮಾವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಗಂಧದ ಗುಡಿಯಲ್ಲಿ ಘಮ್ಮೆಂದ ‘ಟಗರು ಪಲ್ಯ’ಕ್ಕೆ ಈಗ ಅಕ್ಕ-ಪಕ್ಕದ ರಾಜ್ಯದಿಂದಲೂ ಬೇಡಿಕೆ ಹೆಚ್ಚಾಗಿದೆ. ಸಿನಿಮಾ ರೈಟ್ಸ್ಗೆ ಕ್ಯೂ ನಿಲ್ಲುವಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೇಟ್ …
Read More »ಹುಬ್ಬಳ್ಳಿಯಲ್ಲಿ ಮಳೆ ರಗಳೆ: ಜಲಾವೃತಗೊಂಡ ರಸ್ತೆಗಳು
ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲ ಕೆರೆಯಂತಾಗಿದ್ದವು. ನಗರದ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಹುಬ್ಬಳ್ಳಿಯ ಗಣೇಶನಗರದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಶಾಲಾ ಮಕ್ಕಳು, ಸಾರ್ವಜನಿಕರು ನೀರಿನಲ್ಲಿಯೇ ಓಡಾಡುವ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಅಲ್ಲದೇ ಪ್ರತಿಬಾರಿ ಮಳೆ ಬಂದಾಗಲೂ ಇಂತಹ ಅವ್ಯವಸ್ಥೆ ಸರ್ವೇ ಸಾಮಾನ್ಯವಾಗಿದೆ. ಹುಬ್ಬಳ್ಳಿಯ ಚನ್ನಪೇಟೆಯಲ್ಲಿ ಬಹುತೇಕ ಮನೆಗಳಿಗೆ ನೀರು …
Read More »ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ಹಣ ಎಗರಿಸಿ ಕಳ್ಳರು ಪರಾರಿ
ಮಂಡ್ಯ: ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ಹಣ ಎಗರಿಸಿ ಕಳ್ಳರು ಪರಾರಿಯಾಗಿರುವ ಘಟನೆ ಮಂಡ್ಯದ ನಗರಸಭೆ ಆವರಣದಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡವರು. ನಗರಸಭೆ ಆವರಣದಲ್ಲಿ ಕಾರು ನಿಲ್ಲಿಸಿ ಎಸ್ಬಿಐ ಬ್ಯಾಂಕ್ಗೆ ಕೆಲಸದ ನಿಮಿತ್ತ ಹೋಗಿದ್ದರು. ಕಾರಿನಲ್ಲಿ ಹಣವಿಟ್ಟಿದ್ದನ್ನು ಗಮನಿಸಿದ ಖತರ್ನಾಕ್ ಕಳ್ಳರು ಕಾರಿನ ಗಾಜು ಒಡೆದು ಹಣ ದೋಚಿದ್ದಾರೆ. ಪರಮೇಶ್ ರಿಜಿಸ್ಟರ್ ಕಚೇರಿಯಲ್ಲಿ ಜಮೀನು ರಿಜಿಸ್ಟರ್ ಮಾಡಿಸಿ ಹಣ ಪಡೆದು …
Read More »ಒಂದೂವರೆ ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಗೆ ವಿಚಾರಣೆಗೆ ಬರಲು ಕೋರ್ಟ್ ನೋಟಿಸ್:
ಬೆಹ್ರೋರ್ (ರಾಜಸ್ಥಾನ): ಇಂತಹ ಘಟನೆಗಳಿಂದ ನಮ್ಮ ನ್ಯಾಯಾಲಯಗಳು ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಅನುಮಾನ ಮತ್ತು ಬೇಸರ ಉಂಟಾಗುತ್ತದೆ. ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಗೆ ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಆರೋಪದ ಮೇಲೆ ಕೋರ್ಟ್ ಈಗ ನೋಟಿಸ್ ನೀಡಿದೆ. ಕಂಡು ಕುಟುಂಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ಈ ಘಟನೆ ಬೆಳಕಿಗೆ ಬಂದಿದ್ದು ರಾಜಸ್ಥಾನದಲ್ಲಿ. ರಾಜ್ಯದಲ್ಲಿ ನವೆಂಬರ್ 25 ರಂದು ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಸೂಕ್ಷ್ಮ ಪ್ರದೇಶಗಳಾದ ಬೆಹ್ರೋರ್, ನೀಮ್ರಾನಾ ಮತ್ತು ಮಂದನ್‌ನಲ್ಲಿ ಕೆಲವರನ್ನು …
Read More »5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ 20 ವರ್ಷ ಕಠಿಣ ಶಿಕ್ಷೆ
ಚಾಮರಾಜನಗರ: ಹೆಂಡತಿ ಹೊರ ಹೋದ ವೇಳೆ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ಚಾಮರಾಜನಗರದ ಮಕ್ಕಳ ಸ್ನೇಹಿ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಮೈಸೂರಿನ ಗೌಸಿಯ ನಗರದ ನಿವಾಸಿ ಸೈಯದ್ ಮುಜಾಮಿಲ್(45) ಶಿಕ್ಷೆಗೊಳಗಾದ ಅಪರಾಧಿ. ಈತ ಮೂರು ಮದುವೆ ಯಾಗಿದ್ದು, ಮೊದಲ ಹೆಂಡತಿ ದೂರವಾಗಿದ್ದರೆ, ಎರಡನೇ ಹೆಂಡತಿ ಮೃತಪಟ್ಟಿದ್ದಳು. ಚಾಮರಾಜನಗರದ ಮೂಲದ ಮಹಿಳೆಯೊಬ್ಬರ ಜೊತೆ ಮೂರನೇ ವಿವಾಹವಾಗಿತ್ತು. 2022ರ ಜನವರಿ 4 ರಂದು ಅಪರಾಧಿ ಪತ್ನಿ …
Read More »ರಾಜ್ಯದ ವಿವಿಧೆಡೆ ಧಾರಾಕಾರ ಮಳೆ.
ಹಾವೇರಿ: ಸೋಮವಾರ ಸಂಜೆ ಹಾವೇರಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ನಿಧಾನವಾಗಿ ಆರಂಭವಾದ ಮಳೆ ನಂತರ ತೀವ್ರತೆ ಪಡೆಯಿತು. ಸುಮಾರು ಗಂಟೆಗೂ ಅಧಿಕ ಕಾಲ ಸುರಿದ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಮಳೆಯ ರಭಸಕ್ಕೆ ಚರಂಡಿಗಳೆಲ್ಲ ತುಂಬಿ ಚರಂಡಿಯ ನೀರು ತ್ಯಾಜ್ಯ ರಸ್ತೆಗಳ ಮೇಲೆ ಬಂದು ನಿಂತಿತು. ರೈಲು ನಿಲ್ದಾಣದ ಬಳಿ ಇರುವ ಅಂಡರ್ ಬ್ರಿಡ್ಜ್‌ನಲ್ಲಿ ಮಳೆ ನೀರು ನಿಂತು ಕೆಲಕಾಲ ರಸ್ತೆ ಸಂಚಾರ ಸಹ ಸ್ಥಗಿತವಾಗಿತ್ತು. ವಾಹನ …
Read More »ಕಳ್ಳನೊಂದಿಗೆ ಶಾಮೀಲಾಗಿ ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ರೈಲ್ವೆ ಹೆಡ್ಕಾನ್ಸ್ಟೇಬಲ್
ಬೆಂಗಳೂರು : ಬೇಲಿಯೇ ಎದ್ದು ಹೊಲ ಮೇಯ್ದಂತೆ ಖದೀಮರನ್ನ ಸದೆ ಬಡಿಯಬೇಕಾದ ರೈಲ್ವೇ ಹೆಡ್ಕಾನ್ಸ್ಟೇಬಲ್ ಬಬ್ಬರನ್ನು ಕಳ್ಳನೊಂದಿಗೆ ಶಾಮೀಲಾಗಿ ರೈಲುಗಳಲ್ಲಿ ಕಳ್ಳತನವೆಸಗುತ್ತಿದ್ದ ಜಾಲವನ್ನ ಬೆಂಗಳೂರು ದಂಡು ರೈಲ್ವೇ ಪೊಲೀಸರು ಪತ್ತೆ ಹಚ್ಚಿದ್ದಾರೆ. ಚಿಕ್ಕಬಳ್ಳಾಪುರ ರೈಲ್ವೆ ಹೊರ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿರುವ ಸಿದ್ದರಾಮರೆಡ್ಡಿ ಹಾಗೂ ಖದೀಮ ಸಾಬಣ್ಣ ಎಂಬುವರನ್ನ ಬಂಧಿಸಿ, ಪೊಲೀಸ್ ಕಸ್ಟಡಿ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. 2011ರ ಬ್ಯಾಚ್ ಸಿಬ್ಬಂದಿಯಾಗಿದ್ದ ಸಿದ್ದರಾಮರೆಡ್ಡಿ, ರೈಲ್ವೇ ಹೆಡ್ಕಾನ್ಸ್ಟೇಬಲ್ ಆಗಿ ರಾಯಚೂರಿನಲ್ಲಿ ಸೇವೆಗೆ …
Read More »