Breaking News

Daily Archives: ನವೆಂಬರ್ 2, 2023

ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿಕ್ರಿಯೆ

ಕೊಪ್ಪಳ: ನರೇಗಾ ಯೋಜನೆಯಡಿ ರಾಜ್ಯಕ್ಕೆ ಬರಬೇಕಿರುವ 600 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲು ಒಂದು ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದು, ಇಲ್ಲಿಯವರೆಗೂ ನಯಾಪೈಸೆ ಕೊಟ್ಟಿಲ್ಲ. ಬರ ಪರಿಹಾರವನ್ನೂ ನೀಡಿಲ್ಲ. ರಾಜ್ಯದ ಬಗ್ಗೆ ಅವರು ಮಲತಾಯಿ ಧೋರಣೆ ತಾಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರವನ್ನು ದೂರಿದ್ದಾರೆ. ತಾಲೂಕಿನ ಬಸಾಪೂರ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಶಾಸಕ, ಸಚಿವರನ್ನೇ ಭೇಟಿ ಆಗಲು …

Read More »

ಕಲಬುರಗಿಯಲ್ಲಿ ಬೈಕ್​-ಲಾರಿ ಮುಖಾಮುಖಿ ಡಿಕ್ಕಿ: ನವವಿವಾಹಿತೆ ಸೇರಿ ನೇಪಾಳ ಮೂಲದ ಒಂದೇ ಕುಟುಂಬದ ಐವರ ಸಾವು

ಕಲಬುರಗಿ: ಅಫಜಲಪುರ ಮತ್ತು ಬಳ್ಳೂರಗಿ ನಡುವಿನ ರಸ್ತೆಯ ಹಳ್ಳೋರಿ ಕ್ರಾಸ್ ಬಳಿ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ನವವಿವಾಹಿತೆ ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.   ನೇಪಾಳ ದೇಶದ ಸುರಕೇತ ಮೂಲದ ಹಾಗೂ ಸದ್ಯ ನಾಲ್ಕು ವರ್ಷಗಳಿಂದ ಅಫಜಲಪುರ ಪಟ್ಟಣದಲ್ಲಿ ವಾಸವಾಗಿದ್ದ ರತನ್ (25), ಇವರ ಪತ್ನಿ ಅಸ್ಮಿತ್ (21), ಇವರ ಮಕ್ಕಳಾದ ಮಿಲನ್ (5), ಧರಕನ್ (2) ಹಾಗೂ ಅಸ್ಮಿತ್ ಅವರ …

Read More »

ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಬಂಧ ಪಟಾಕಿ ಮಾರಾಟ: ಬಳಕೆ ಸಂಬಂಧ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಸಮಯದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುವುದನ್ನು ತಡೆಗಟ್ಟಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.   ಪೌರಾಡಳಿತ ನಿರ್ದೇಶನಾಲಯ ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಮಹಾನಗರಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ನಿಯಂತ್ರಿಸಲು ಸುಪ್ರೀಂ ಕೋರ್ಟ್ ಆದೇಶದನ್ವಯ ರಾಜ್ಯದ ಎಲ್ಲ ಮಹಾನಗರಪಾಲಿಕೆಗಳು, …

Read More »

ಭಾರತದ ಬಿರುಗಾಳಿ ಬೌಲಿಂಗ್​ಗೆ ಪತರುಗುಟ್ಟಿದ ಸಿಂಹಳೀಯರು ಟೀಂ ಇಂಡಿಯಾ ಭರ್ಜರಿ ಗೆಲುವು

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್​ ಶರ್ಮಾ ಬಳಗ ಗೆಲುವಿನ ಕೇಕೆ ಹಾಕಿದೆ. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಸತತ 7ನೇ ಜಯ ದಾಖಲಿಸಿದೆ. ಮುಂಬೈ (ಮಹಾರಾಷ್ಟ್ರ): ಶ್ರೀಲಂಕಾದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್​ ಶರ್ಮಾ ಪಡೆಯ ಬಿರುಗಾಳಿ ಬೌಲಿಂಗ್​ ದಾಳಿಗೆ ಸಿಂಹಳೀಯರು ಪತರುಗುಟ್ಟಿದ್ದು, ಲಂಕಾ ಆಟಗಾರರು ಕೇವಲ 55 ರನ್​ಗಳಿಗೆ ಸರ್ವಪತನ ಕಂಡಿದ್ದಾರೆ. ಇದರಿಂದ ಭಾರತ ತಂಡ ದಾಖಲೆಯ 302 ರನ್​ಗಳಿಂದ ಜಯ ಸಾಧಿಸಿದೆ. …

Read More »

ಢವಳೇಶ್ವರ ಗ್ರಾಮಸ್ಥರ ಒಗ್ಗೂಡಿಕೆ ಕಾರ್ಯ ಶ್ಲಾಘನೀಯವಾದದ್ದು : ಶಾಸಕ ಬಾಲಚಂದ್ರ ಜಾರಕಿಹೊಳಿ

ಢವಳೇಶ್ವರ ಗ್ರಾಮಸ್ಥರ ಒಗ್ಗೂಡಿಕೆ ಕಾರ್ಯ ಶ್ಲಾಘನೀಯವಾದದ್ದು : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಉಳಿಮುಟ್ಟದ ರಂಗೇಶ್ವರ, ಶಿವ ದೇವಾಲಯ ಹಾಗೂ ಲಕ್ಷ್ಮೀ ದೇವಸ್ಥಾನಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಭಾಗಿ ಮೂಡಲಗಿ : ಢವಳೇಶ್ವರ ಗ್ರಾಮದಲ್ಲಿ ಎಲ್ಲರೂ ಭಕ್ತಿ ಭಾವದಿಂದ ಸುಮಾರು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ರಂಗೇಶ್ವರ, ಶಿವ ಮತ್ತು ಲಕ್ಷ್ಮೀ …

Read More »

ರಾಜ್ಯೋತ್ಸವ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಅಪಘಾತ

ಬೆಳಗಾವಿ: ಬೆಳಗಾವಿಯಿಂದ ರಾಜ್ಯೋತ್ಸವ ಮುಗಿಸಿಕೊಂಡು ಮರಳುತ್ತಿದ್ದಾಗ ಪಾದಚಾರಿಗಳಿಗೆ ಬೈಕ್​ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡರು. ಈ ಘಟನೆ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತು. ಮೃತರನ್ನು ಧಾರವಾಡ ಜಿಲ್ಲೆಯ ನರೇಂದ್ರದ ಲಬೈಕ್‌ ಹಲಸಿಗರ ಹಾಗೂ ಬೆಳಗಾವಿ ತಾಲ್ಲೂಕಿನ ಬಾಳೇಕುಂದ್ರಿ ಗ್ರಾಮದ ಶ್ರೀನಾಥ ಗುಜನಾಳ ಎಂದು …

Read More »

15 ತಿಂಗಳ ಮಗುವಿಗೆ ಅಪರೂಪದ ಕಾಯಿಲೆ! ಚುಚ್ಚುಮದ್ದು ಆಮದು ಸುಂಕಕ್ಕೆ ವಿನಾಯಿತಿ ಕೇಳಿದ ಸಿಎಂ

ಬೆಂಗಳೂರು: ರಾಜ್ಯದ 15 ತಿಂಗಳ ಮಗುವೊಂದು ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ವಿದೇಶದಿಂದ ಆಮದು ಮಾಡಿಕೊಳ್ಳಬೇಕಿರುವ ದುಬಾರಿ ಚುಚ್ಚುಮದ್ದಿನ ಆಮದು ಸುಂಕಕ್ಕೆ ವಿನಾಯಿತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.   ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿಯವರನ್ನು (Narendra Modi) ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ಕರ್ನಾಟಕದ 15 …

Read More »

ಹಾವೇರಿ ಕ್ಷೇತ್ರಕ್ಕೆ ಈಶ್ವರಪ್ಪ ಪುತ್ರನಿಗೆ ಟಿಕೆಟ್‌ ಕೊಟ್ಟರೆ ಸೋಲು: ಬಿ.ಸಿ. ಪಾಟೀಲ್

ದಾವಣಗೆರೆ: ಹಾವೇರಿ ಲೋಕಸಭಾ ಕ್ಷೇತ್ರದಿಂದ (Lok Sabha Election 2024) ಬಿಜೆಪಿ ಟಿಕೆಟ್ ಸಿಕ್ಕಿದರೆ ಸ್ಪರ್ಧಿಸುತ್ತೇನೆ. ಪಕ್ಷ ಬೇರೆಯವರಿಗೆ ಟಿಕೆಟ್ ಕೊಟ್ಟರೂ ಬೆಂಬಲವನ್ನು ನೀಡುತ್ತೇನೆ. ಯಾರಿಗೆ, ಯಾವುದೇ ಜಾತಿಯವರಿಗೆ ಟಿಕೆಟ್‌ ಕೊಟ್ಟರೂ ನನ್ನ ಬೆಂಬಲ ಇದ್ದೇ ಇರುತ್ತದೆ. ಆದರೆ, ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ (Former Deputy CM KS Eshwarappa) ಪುತ್ರ ಕೆ.ಇ. ಕಾಂತೇಶ್‌ ಹಾವೇರಿಗೆ ಬಂದು ಸ್ಪರ್ಧೆ ಮಾಡಿದರೆ ಗೆಲ್ಲುವುದು ಕಷ್ಟ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್‌ …

Read More »

ಬಿಜೆಪಿಯವ್ರು ಸುಮ್ಮನಿರಲಾಗದೆ ಮೈ ಪರಚಿಕೊಳ್ತಿದ್ದಾರೆ: ಚೆಲುವರಾಯಸ್ವಾಮಿ

ಮಂಡ್ಯ: ಬಿಜೆಪಿಯವ್ರು ಸುಮ್ಮನಿರಲಾಗದೆ ಮೈ ಪರಚಿಕೊಳ್ತಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಯಾವುದು ವಿಚಾರ ಇಲ್ಲ, ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ ಮುಖಂಡರನ್ನು ಮಾತನಾಡಿಸುವ ಸೌಜನ್ಯ ರಾಷ್ಟ್ರೀಯ ನಾಯಕರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.   ಇತಿಹಾಸದಲ್ಲಿ ಮೊದಲ ರಾಜ್ಯಪಾಲರ ಭಾಷಣ, ಮೊದಲ ಬಜೆಟ್‌ಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಿರದ ಇತಿಹಾಸವೇ ಇಲ್ಲ. ನಾನೇನಾದ್ರೂ

Read More »

ಹೈಕಮಾಂಡ್ ಬುಲಾವ್ ಮೇರೆಗೆ ಈಶ್ವರಪ್ಪ ದೆಹಲಿಗೆ

ಬೆಂಗಳೂರು: ಹೈಕಮಾಂಡ್ ಬುಲಾವ್ ಮೇರೆಗೆ ಇಂದು (ಗುರುವಾರ) ದೆಹಲಿಗೆ ತೆರಳುತ್ತಿದ್ದೇನೆ. ಯಾವ ವಿಚಾರದ ಕುರಿತು ಕರೆದಿದ್ದಾರೆ ಎಂದು ಅಲ್ಲಿಗೆ ಹೋದ ನಂತರವೇ ತಿಳಿಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ಮಾತನಾಡಿದ ಅವರು, ದೆಹಲಿ ಕಚೇರಿಯಿಂದ ಕರೆ ಬಂದಿತ್ತು. ಹಾಗಾಗಿ, ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ. ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಪಿ.ಸಿ.ಮೋಹನ್ ಅವರನ್ನೂ ಕರೆದಿದ್ದಾರೆ. ನಾವು ಮೂವರು ಹೋಗಲಿದ್ದೇವೆ ಎಂದರು. ರಾಜ್ಯಾಧ್ಯಕ್ಷರ …

Read More »