Breaking News

Daily Archives: ಸೆಪ್ಟೆಂಬರ್ 11, 2023

ಅಣ್ಣ ಚಿರು ಸಮಾಧಿ ಬಳಿ ಪತ್ನಿ ಸೀಮಂತ ನೆರವೇರಿಸಿದ ಧ್ರುವ ಸರ್ಜಾ

ಕನ್ನಡ ಚಿತ್ರರಂಗದಲ್ಲಿ ನಟನೆ ಮತ್ತು ಗುಣದಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟ ಧ್ರುವ ಸರ್ಜಾ. ಸಿನಿಮಾ ಮತ್ತು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳ ಹಿಂದೆ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿದ್ದ ಧ್ರುವ ಸರ್ಜಾ ಅವರ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಇದೀಗ ಆಯಕ್ಷನ್​ ಪ್ರಿನ್ಸ್​ ಮನೆಯಲ್ಲಿ ಸೀಮಂತದ ಸಂಭ್ರಮ ಮನೆ ಮಾಡಿದೆ. ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ವಿಶೇಷ …

Read More »

ನೆದರ್ಲೆಂಡ್ಸ್​ ಪ್ರಧಾನಿಯೊಂದಿಗೆ ಡಿಸಿಎಂ ಸಭೆ

ಬೆಂಗಳೂರು: ಅತ್ಯುತ್ತಮ ಕೈಗಾರಿಕಾ ನೀತಿ, ಮೂಲ ಸೌಕರ್ಯ, ಮಾನವ ಸಂವನ್ಮೂಲ, ಪರಿಸರದಿಂದಾಗಿ ಕರ್ನಾಟಕ ರಾಜ್ಯ ಭಾರತದಲ್ಲೇ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ, ಮೈಸೂರು, ಹುಬ್ಭಳ್ಳಿ, ಮಂಗಳೂರು, ಬೆಳಗಾವಿ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನೆದರ್ಲೆಂಡ್ಸ್​ ಪ್ರಧಾನಿಯೊಂದಿಗೆ ಕಾಂಗ್ರೆಸ್​ ನಾಯಕರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನೆದರ್ಲೆಂಡ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಹಾಗೂ ಆ …

Read More »

ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದೆ: ಕೋಡಿಮಠ ಸ್ವಾಮೀಜಿ

ಹುಬ್ಬಳ್ಳಿ: ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ರಾಜಕೀಯದಲ್ಲಿ ಏನಾಗುತ್ತದೆ ಎಂದು ಯುಗಾದಿ ನಂತರ ಕಾದು‌ನೋಡಿ ಎಂದು ಭವಿಷ್ಯ ನುಡಿದರು. ರಾಜ್ಯದಲ್ಲಿ ಬರಗಾಲದ ಛಾಯೆ ಬಗ್ಗೆ ಮಾತನಾಡಿ, ಮನುಷ್ಯ ಮಾಡಿದ ತಪ್ಪುಗಳಿಗೆ ದೇವರು ಕ್ಷಮಿಸುತ್ತಾನೆ. ಆದರೆ, ಮನುಷ್ಯ ಮಾಡಿದ ಪಾಪ‌ಕರ್ಮಗಳು ಮನುಷ್ಯನನ್ನ‌ ಕ್ಷಮಿಸುವುದಿಲ್ಲ. ಮನುಷ್ಯನ‌ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ, ಮನುಷ್ಯನ‌ ಕರ್ಮ ಭಾದೆಗಳು ಹೆಚ್ಚಾದಾಗ …

Read More »

ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ : C.M.ಸಿದ್ದರಾಮಯ್ಯ

ಮೈಸೂರು: ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಸಂವಿಧಾನದ ಪೀಠಿಕೆಯನ್ನು ಓದಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿಕೊಳ್ಳಬೇಕು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಹಾಗೂ ಬಿಜಿಎಸ್ ಸಾಂಸ್ಕೃತಿಕ ಭವನ ಉದ್ಘಾಟನೆ ಮತ್ತು ಉಚಿತ ವಿದ್ಯಾರ್ಥಿನಿಲಯದ ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜಿಎಸ್ ಸಾಂಸ್ಕೃತಿಕ ಭವನ ಮತ್ತು ಉಚಿತ ವಿದ್ಯಾರ್ಥಿನಿಲಯದ ಲೋಕಾರ್ಪಣೆ ಮಾಡಿದ ಸಿಎಂನೂತನ …

Read More »

ಮಲೆನಾಡು ಭಾಗದಲ್ಲಿ ಹಬ್ಬ ಹರಿದಿನಗಳು ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡಿವೆ.

ಶಿರಸಿ: ಮಲೆನಾಡು ಭಾಗದಲ್ಲಿ ಹಬ್ಬ ಹರಿದಿನಗಳು ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡಿವೆ. ಅದರಲ್ಲೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಡೆಯುವ ಚಕ್ಲಿ ಕಂಬಳಕ್ಕೆ ಹಲವು ವಿಶೇಷತೆಗಳಿವೆ. ಈಗ ಚೌತಿಗೆ ಕೆಲವೇ ದಿನ ಉಳಿದಿರುವಾಗ ಮಲೆನಾಡಿನ ಶಿರಸಿಯ ಗ್ರಾಮೀಣ ಭಾಗದಲ್ಲಿ ಜೋರಾಗಿ ಚಕ್ಲಿ ಕಂಬಳ ನಡೆಯುತ್ತಿದೆ. ಮಲೆನಾಡಿನ ಭಾಗದಲ್ಲಿ ಹಬ್ಬ ಹರಿದಿನಗಳು ವಿಭಿನ್ನ, ವೈವಿಧ್ಯ, ಅದೇ ಇಲ್ಲಿನವರ ವಿಶೇಷತೆ. ಹಬ್ಬ ಹರಿದಿನವಿರಬಹುದು, ಪೂಜೆ ಪುನಸ್ಕಾರಗಳಿರಬಹುದು, ಎಲ್ಲದರಲ್ಲಿಯೂ ಇತರರಿಗಿಂತ ಸ್ವಲ್ಪ ವಿಭಿನ್ನ.   ಈಗ ಗೌರಿ …

Read More »

ಜವಾನ್’​ ಸಿನಿಮಾ ಬಿಡುಗಡೆಯಾಗಿ ಕೇವಲ ನಾಲ್ಕೇ ದಿನಗಳಲ್ಲಿ 8 ಹೊಸ ದಾಖಲೆಯನ್ನು ಬರೆದಿದೆ.

ಜವಾನ್’​ ಸಿನಿಮಾ ಬಿಡುಗಡೆಯಾಗಿ ಕೇವಲ ನಾಲ್ಕೇ ದಿನಗಳಲ್ಲಿ 8 ಹೊಸ ದಾಖಲೆಯನ್ನು ಬರೆದಿದೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ.. ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಕಾಂಬೋದಲ್ಲಿ ಮೂಡಿಬಂದ ‘ಜವಾನ್’​ ಸಿನಿಮಾ ಸೆಪ್ಟೆಂಬರ್​ ​ 7, ಗುರುವಾರದಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡ ಚಿತ್ರ ಕಲೆಕ್ಷನ್​ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಶಾರುಖ್​ ಸೇರಿದಂತೆ ನಯನತಾರಾ, …

Read More »

23 ಪಾರಿವಾಳಗಳನ್ನು ಕತ್ತು ಕೊಯ್ದು ಕೊಂದ ಕಿಡಿಗೇಡಿಗಳು

ಹುಬ್ಬಳ್ಳಿ : 23 ಪಾರಿವಾಳಗಳನ್ನು ಕತ್ತು ಕೊಯ್ದು ಕೊಂದಿರುವ ಘಟನೆ ಹುಬ್ಬಳ್ಳಿಯ ಗೋಕುಲ್ ರೋಡ್ ಯಾವಗಲ್ ಫ್ಲಾಟ್​ನಲ್ಲಿ ಶನಿವಾರ ನಡೆದಿದೆ. ರಾಹುಲ್ ದಾಂಡೇಲಿ ಎಂಬವರು ಸಾಕಿದ್ದ 23 ಪಾರಿವಾಳಗಳನ್ನು ಹಾಗೂ ಪಾರಿವಾಳದ ಮೊಟ್ಟೆಯನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಅಲ್ಲದೇ ಪಾರಿವಾಳಗಳ ಗೂಡನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಈ ಕುರಿತು ಪಾರಿವಾಳಗಳ ಮಾಲೀಕ ರಾಹುಲ್ ದಾಂಡೇಲಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರುದಾರ ರಾಹುಲ್ ದಾಂಡೇಲಿ ಸಹೋದರ ನಿಖಿಲ್​ ದಾಂಡೇಲಿ ಈ …

Read More »

ಬೆಂಗಳೂರು ಬಂದ್ ವೇಳೆ ರಾಪಿಡೊ ಹಾಗೂ ಆಟೊ ಚಾಲಕರ ಮೇಲೆ ನಡೆದ ಹಲ್ಲೆ ಸಂಬಂಧ 12 ಜನರನ್ನು ಬಂಧಿಸಲಾಗಿದೆ

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಮಾಲೀಕರ ಒಕ್ಕೂಟ ಕರೆ ನೀಡಿದ್ದ ಬೆಂಗಳೂರು ಬಂದ್ ವೇಳೆ ರಾಪಿಡೊ ಹಾಗೂ ಆಟೊ ಚಾಲಕರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ದೂರು ನೀಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ. ಇಂದು ಬಂದ್ ವೇಳೆ ನಗರದ ಕೆಲವೆಡೆ ಬೈಕ್ ಟಾಕ್ಸಿಗಳ ಮೇಲೆ ಹಾಗೂ ಆಟೊ ಚಾಲಕರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿ, ಅಲ್ಲದೇ ವಾಹನಗಳನ್ನ ಜಖಂಗೊಳಿಸಿದ್ದರು. ಈ …

Read More »

ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ವಿವಿಧ ಭಾಗಗಳಿಗೆ ಬೆಂಗಳೂರಿನಿಂದ ಕೆಎಸ್‌ಆರ್​​ಟಿಸಿ ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ

ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಜನರು ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗಲು ಕೆಎಸ್‌ಆರ್​​ಟಿಸಿಯು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ 1,200 ಹೆಚ್ಚುವರಿ ವಿಶೇಷ ಬಸ್ ಸೇವೆ ಕಲ್ಪಿಸಿದೆ. ಸೆಪ್ಟೆಂಬರ್ 15 ಮತ್ತು 16ರಂದು ವಾರಾಂತ್ಯ ಹಾಗೂ ಸೆಪ್ಟೆಂಬರ್ 18ರಂದು ಗೌರಿ ಗಣೇಶ ಹಬ್ಬ ಇದ್ದು, ಪ್ರಯಾಣಿಕರ ದಟ್ಟಣೆ ಹೆಚ್ಷಾಗಲಿದೆ. ಹಾಗಾಗಿ ಕೆಎಸ್‌ಆರ್​​ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 15, 16 ಹಾಗೂ 17ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ವಿಶೇಷ ಸಾರಿಗೆ …

Read More »

ಪ್ರಜ್ವಲ್​ ರೇವಣ್ಣ ವಿರುದ್ಧದ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ವಕೀಲ ಜಿ.ದೇವರಾಜೇಗೌಡ ಹೇಳಿದ್ದಾರೆ.

ಹಾಸನ: ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗುವವರೆಗೂ ಪಾರ್ಲಿಮೆಂಟ್‌ನಲ್ಲಿ ಪ್ರಜ್ವಲ್ ರೇವಣ್ಣ ಭಾಗವಹಿಸು ಹಾಗಿಲ್ಲ. ನನ್ನಿಂದ ವಿಚ್ಛೇದನ ಪಡೆದ ಮಹಿಳೆಯನ್ನು ಕರೆದುಕೊಂಡು ಹೇಳಿಕೆ ನೀಡಿರುವವರನ್ನು ರಾಜಕೀಯವಾಗಿ ಮುಗಿಸುವವರೆಗೂ ಆ ಬ್ರಹ್ಮ ಬಂದರೂ ನಾನು ಕಾನೂನು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಕೀಲರಾದ ಜಿ. ದೇವರಾಜೇಗೌಡ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನೀಡಿರುವ ತೀರ್ಪುನ್ನು ಅಮಾನತು ಮಾಡುವಂತೆ ಪ್ರಜ್ವಲ್‌ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದು, ಇದರ ವಿರುದ್ಧ ನಾವು ತಕರಾರು ಸಲ್ಲಿಸಿದ್ದೆವು. ಯಾರೇ ಆಗಲಿ ನ್ಯಾಯಾಲಯವನ್ನು ಗೌರವವಾಗಿ …

Read More »