Breaking News

Daily Archives: ಸೆಪ್ಟೆಂಬರ್ 2, 2023

ಸೆಪ್ಟೆಂಬರ್ 4ರಂದು ಬರಪೀಡಿತ ತಾಲೂಕಗಳ ಹೆಸರು ಘೋಷಣೆ: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲ ಉಂಟಾಗಿದ್ದು, ಸೆಪ್ಟೆಂಬರ್ 4 ರಂದು ಸಭೆ ನಡೆಸಿ ಬರಗಾಲ ಪೀಡಿತ ತಾಲೂಕಗಳ ಹೆಸರು ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಆಲಮಟ್ಟಿ ಆಣೆಕಟ್ಟೆಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಈ ಭಾಗದಲ್ಲಿ ನೀರಿನ ಸಮಸ್ಯೆ ಇರೋದಿಲ್ಲ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ‌ ಕಡಿಮೆ ಆಗಿದೆ. ಅದಕ್ಕೆ 113 …

Read More »

ಲೋಕಸಭೆ ಚುನಾವಣೆ ತಯಾರಿ: ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ

ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ರಾಜ್ಯ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಇದರ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಭಾನುವಾರ ಕರೆಯಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದು, ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ವಿಧಾನಸಭಾ …

Read More »

ಎದ್ದು ನಿಂತು ಮರ್ಯಾದೆ ಕೊಟ್ಟಿಲ್ಲವೆಂದು ಯುವಕನ ಮೇಲೆ ಅಟ್ಟಾಡಿಸಿ ಮಾರಕಾಸ್ತ್ರ ಬೀಸಿದ ಪುಂಡರು

ಬೆಂಗಳೂರು: ರಸ್ತೆಯಲ್ಲಿ ತಾವು ಬಂದಾಗ ಎದ್ದು ಮರ್ಯಾದೆ ಕೊಡಲಿಲ್ಲವೆಂದು ಯುವಕನೊಬ್ಬನನ್ನು ಪುಂಡರ ಗುಂಪೊಂದು ಮಾರಕಾಸ್ತ್ರ ಹಿಡಿದು ಅಟ್ಟಾಡಿಸಿ ಹಲ್ಲೆ ಮಾಡಿರುವ ಘಟನೆ ಆಗಸ್ಟ್ 27ರಂದು ಮಡಿವಾಳದ ವೆಂಕಟಾಪುರದಲ್ಲಿ ನಡೆದಿದೆ. ರಮೇಶ್ ಹಲ್ಲೆಗೊಳಗಾದ ಯುವಕ. ಸಂಜೆ 6:30 ರ ಸುಮಾರಿಗೆ ರಮೇಶ್ ವೆಂಕಟಾಪುರ ಬಳಿ ಟೀ ಕುಡಿಯಲು ತೆರಳಿದ್ದ. ಈ ವೇಳೆ ಟೀ ಅಂಗಡಿ ಬಳಿ ಬಂದಿದ್ದ ಕಾವೇರಿ ಶಿವು ಮತ್ತವನ ಗ್ಯಾಂಗ್ ರಮೇಶನಿಗೆ ‘ಏನೋ ನಾವ್ ಬಂದ್ರು ಎದ್ದೇಳಲ್ವಾ?’ ಎಂದು ಅವಾಜ್ …

Read More »

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಜೂನ್ 2ರಂದು ಸಂಭವಿಸಿದ್ದ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್​ ಶೀಟ್​ ದಾಖಲಿಸಿದೆ.

ನವದೆಹಲಿ: ದೇಶದ ಕಂಡ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾದ ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಶನಿವಾರ ಚಾರ್ಜ್​ಶೀಟ್​ ಸಲ್ಲಿಸಿದೆ. ಈಗಾಗಲೇ ಬಂಧಿತ ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಭುವನೇಶ್ವರದಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್​ ಶೀಟ್​ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 2ರಂದು ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಸಮೀಪ ತ್ರಿವಳಿ ರೈಲು ದುರಂತ ಸಂಭವಿಸಿತ್ತು. …

Read More »

ಹಾವೇರಿ ನಗರದಲ್ಲಿ ಉತ್ತರಾಧನೆಯ ಅಂಗವಾಗಿ ರಾಘವೇಂದ್ರಸ್ವಾಮಿಗಳ ರಥೋತ್ಸವ ನಡೆಯಿತು.

ಹಾವೇರಿ: ನಗರದ ರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವ ಆಚರಿಸಲಾಯಿತು. ಗುರುವಾರ ಪೂರ್ವಾರಾಧನೆ, ಶುಕ್ರವಾರ ಮಧ್ಯಾರಾದನೆ, ಬೆಳ್ಳಿರಥೋತ್ಸವ ಮತ್ತು ಶನಿವಾರ ಉತ್ತರಾಧನೆ ಜರುಗಿತು. ಉತ್ತರಾಧನೆಯ ಅಂಗವಾಗಿ ರಾಘವೇಂದ್ರಸ್ವಾಮಿಗಳ ರಥೋತ್ಸವ ಸಂಭ್ರಮದಿಂದ ನೆರವೇರಿತು. ನಗರದ ಅಗ್ರಹಾರದ ಆಶ್ವತ್ಥ ವೃಕ್ಷದಿಂದ ಆರಂಭವಾದ ರಥೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ನಂತರ ತೇರುಬೀದಿ ಆಂಜನೇಯ ದೇವಸ್ಥಾನಕ್ಕೆ ರಥೋತ್ಸವ ಆಗಮಿಸಿತು. ಈ ಸಂದರ್ಭದಲ್ಲಿ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಹರಿಕೃಷ್ಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು …

Read More »

ಮೂವರು ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ

ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆ ಮೂವರು ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನಿಸಿದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ ಶನಿವಾರ ನಡೆದಿದೆ. ಮೂವರು ಮಕ್ಕಳ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಒಂದು ಮಗು ಹಾಗೂ ತಂದೆ ಭೀರಣ್ಣ ಮಸಬಿನಾಳ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿದಿನ ಮನೆಯಲ್ಲಿ ಪತಿ-ಪತ್ನಿಯ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಪತಿ ಭೀರಣ್ಣ …

Read More »

ಮಗನ ಮದುವೆಗೆ ಹಾಜರಾಗಲು ಅಪರಾಧಿ ತಂದೆಗೆ ಪೆರೋಲ್​ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು : ಕಾರಣಾಂತರಗಳಿಂದ ಜೈಲು ಸೇರಿರುವ ಅಪರಾಧಿಯ ಮಗನ ಮದುವೆಯಾಗುತ್ತಿದ್ದು, ತಂದೆ ಹಾಜರಾಗುವುದು ಮಕ್ಕಳ ಬಯಕೆಯಾಗಿರುತ್ತದೆ. ಇದು ಸಂವಿಧಾನದ ಪರಿಚ್ಛೇದ 21ರ ಪ್ರಕಾರ ಮಾನವೀಯ ಗುಣಗಳಡಿ ಪರಿಗಣನೆಗೆ ಒಳಪಡಲಿದೆ ಎಂದು ತಿಳಿಸಿರುವ ಹೈಕೋರ್ಟ್, ಅಪರಾಧಿಯನ್ನು ಪೆರೋಲ್​ ಮೇಲೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.   ತನ್ನ ಮದುವೆಗೆ ತಂದೆ ಹಾಜರಿ ಆಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಮದುವೆಗಾಗಿ 30 ದಿನಗಳ ಕಾಲ ಪೆರೋಲ್​ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ …

Read More »

ಒಂದು ದೇಶ ಒಂದೇ ಚುನಾವಣೆ ಸಮಿತಿಗೆ 8 ಮಂದಿ ಸದಸ್ಯರ ನೇಮಕ

ನವದೆಹಲಿ: ‘ಒಂದು ದೇಶ ಒಂದೇ ಚುನಾವಣೆ’ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಇದೀಗ ಸಮಿತಿಗೆ ಎಂಟು ಜನ ಸದಸ್ಯರನ್ನು ನೇಮಿಸಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಆಡಳಿತ, ವಿರೋಧ ಪಕ್ಷಗಳ ನಾಯಕರ ಜತೆಗೆ ರಾಜಕಾರಣಿಗಳು, ಕಾನೂನು, ಆರ್ಥಿಕ ತಜ್ಞರಿಗೂ ಅವಕಾಶ ಕಲ್ಪಿಸಲಾಗಿದೆ. ಅವಧಿಗೂ ಮೊದಲೇ ಸಂಸತ್​ ಚುನಾವಣೆ ನಡೆಯಲಿದೆ ಎಂಬ ಊಹಾಪೋಹಗಳ ನಡುವೆಯೇ ಕೇಂದ್ರದ ಈ ನಡೆ ಮತ್ತಷ್ಟು ಕುತೂಹಲ …

Read More »

ನಿವೃತ್ತ ಯೋಧನನ್ನು ಹತ್ಯೆಗೈದ ಬಾಮೈದ

ಚಿಕ್ಕೋಡಿ (ಬೆಳಗಾವಿ): ಚಾಕುವಿನಿಂದ ಕತ್ತು ಸೀಳಿ ನಿವೃತ್ತ ಯೋಧನನ್ನು ಬಾಮೈದ ಹತ್ಯೆಗೈದಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಮೃತರನ್ನು ಚಿಕ್ಕೋಡಿಯ ವಿದ್ಯಾನಗರ ನಿವಾಸಿ ನಿವೃತ್ತ ಯೋಧ ಈರಗೌಡ ಟೋಪಗೋಳ(45) ಎಂದು ಗುರುತಿಸಲಾಗಿದೆ. ಮೃತ ಈರಗೌಡ ಪತ್ನಿಯ ಸಹೋದರ ಸಂಜಯ್ ಭಾಕರೆ ಕೊಲೆಗೈದ ಆರೋಪಿ ಎಂದು ತಿಳಿದುಬಂದಿದೆ. ಮೂಲತಃ ಜೈನಾಪುರ ಗ್ರಾಮದವರಾಗಿದ್ದ ಈರಗೌಡ ಟೋಪಗೋಳ ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಸ್ಟೋನ್‌ ಕ್ರಷರ್ ಘಟಕ ನಡೆಸುತ್ತಿದ್ದರು. ಶನಿವಾರ ಸಂಜೆ …

Read More »

ಬೀದರ್​ನಲ್ಲಿ ಪೊಲೀಸ್ ಕಾನ್​ಸ್ಟೇಬಲ್​ ಆತ್ಮಹತ್ಯೆ..

ಬೀದರ್​: ಪೊಲೀಸ್ ಕಾನ್​ಸ್ಟೇಬಲ್​ವೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬಸವಕಲ್ಯಾಣ ಪಟ್ಟಣದ ಲಾಡ್ಜ್ ನಲ್ಲಿ ನಡೆದಿದೆ. ಉಮೇಶ್ ನಾಯ್ಕ (25) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ. ಮೂಲತಃ ವಿಜಯನಗರ ಜಿಲ್ಲೆಯವರಾಗಿದ್ದ ಉಮೇಶ್ 2021ರಲ್ಲಿ ಪೊಲೀಸ್ ಕಾನ್​ಸ್ಟೇಬಲ್​ ಆಯ್ಕೆಯಾಗಿದ್ದರು. ಅವರು ಹಲವು ತಿಂಗಳಿನಿಂದ ಬಸವಕಲ್ಯಾಣ ನಗರ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಮೇಶ್ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣವಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಪೋಷಕರು ಬೀದರ್​ಗೆ ಆಗಮಿಸಿದ್ದಾರೆ. ಬಸವಕಲ್ಯಾಣ ನಗರ …

Read More »