Breaking News

Monthly Archives: ಮೇ 2023

BJP ನಾಯಕರಿಗೆ ನಾನು ಹೇಳಿದ್ದು ಇಂದು ಅರಿವಾಗಿದೆ: ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: ನಾನು ಹಿಂದೆ ಯಡಿಯೂರಪ್ಪ ಕಣ್ಣೀರನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗುತ್ತೆ ಎಂದಿದ್ದೆ‌. ಇಂದು ಆ ಪಕ್ಷದ ನಾಯಕರಿಗೆ ಇದು ಅರಿವಾಗಿದೆ ಎಂದು ಶಿರಹಟ್ಟಿ ಫಕ್ಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ತಾಲೂಕಿನ ನೂಲ್ವಿ ಕ್ರಾಸ್ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಬಂದ ಸಂದರ್ಭದಲ್ಲಿ ಆ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ತಿನ್ನಬಾರದ ಪೆಟ್ಟು ತಿನ್ನುತ್ತಾರೆ ಎಂದರು.   ನಾನು ಅಂದು ಒಬ್ಬ ವ್ಯಕ್ತಿ ಉದ್ದೇಶಿಸಿ ಹೇಳಿರಲಿಲ್ಲ. ಯಡಿಯೂರಪ್ಪ …

Read More »

ಮಹದಾಯಿ ಉಳಿಸಲು ಎಲ್ಲವನ್ನೂ ಮಾಡಲಾಗಿದೆ : ಸಿಎಂ ಸಾವಂತ್

ಪಣಜಿ: ಮಹದಾಯಿ ನದಿ ಉಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲಾಗಿದೆ. ಮಹದಾಯಿ ಎಲ್ಲಾ ಗೋಮಾಂತಕ ಜನತೆಯ ತಾಯಿ. ಹೀಗಾಗಿ ಯಾವುದೇ ಸಂದರ್ಭದಲ್ಲೂ ನದಿ ನೀರು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಪುನರುಚ್ಛರಿಸಿದ್ದಾರೆ.   ಗೋವಾ ಪಂಚಾಯತ್ ಮಹಿಳಾ ಶಕ್ತಿ ಅಭಿಯಾನ ಆಯೋಜಿಸಿದ್ದ ‘ಗೋವಾ ಸ್ಟಾರ್ ಮಹಿಳಾ ಪ್ರಶಸ್ತಿ-2023’ ವಿತರಣಾ ಸಮಾರಂಭದಲ್ಲಿ ‘ಜೀವನಗೌರವ’ ಪ್ರಶಸ್ತಿ ಪುರಸ್ಕೃತ ಜನಪ್ರಿಯ ಗಾಯಕಿ ಹೇಮಾ ಸರ್ದೇಸಾಯಿ ಅವರು ಮುಖ್ಯಮಂತ್ರಿಗಳಿಗೆ ದಿಢೀರ್ ಮಹದಾಯಿ ಕುರಿತು ಪ್ರಶ್ನೆ …

Read More »

ಚರಂಡಿಯಲ್ಲಿ ಸಿಲುಕಿದ ಪೆಟ್ರೋಲ್-ಡೀಸೆಲ್ ತುಂಬಿದ್ದ ಟ್ಯಾಂಕರ್

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ತ್ಯಾಜ್ಯ ತುಂಬಿದ ಚರಂಡಿಯಲ್ಲಿ ಪೆಟ್ರೋಲ್-ಡೀಸೆಲ್ ತುಂಬಿದ್ದ ಟ್ಯಾಂಕರ್ ಸಿಲುಕಿದ ಘಟನೆ ಭಾನುವಾರ ನಡೆದಿದೆ. ವಾಹನ ನಿಲ್ಲಿಸಲು ಚಾಲಕ ರಸ್ತೆ ಪಕ್ಕ ವಾಹನ ತೆಗೆದುಕೊಳ್ಳುತ್ತಿದ್ದಂತೆ ಟ್ಯಾಂಕರ್ ಎಡಭಾಗದ ಎಲ್ಲ ಚಕ್ರಗಳು ಚರಂಡಿಯಲ್ಲಿ ಕುಸಿದಿವೆ. ಟ್ಯಾಂಕರ್ ವಾಲಿಕೊಂಡು ನಿಂತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸಂಜೆ ಎರಡು ಕ್ರೇನ್ ಗಳ‌ ಮೂಲಕ ತೈಲ ತುಂಬಿದ್ದ ಟ್ಯಾಂಕರ್ ಮೇಲೆತ್ತಲಾಗಿದೆ. ಹೆದ್ದಾರಿ ನಿರ್ವಹಣಾ ಕಂಪನಿ ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಸ್ಥಳೀಯ …

Read More »

R.S.S. ಕಚೇರಿಗೆ ಭೇಟಿ ಮಹತ್ವದ ಚರ್ಚೆ ನಡೆಸಿದ ಬೊಮ್ಮಾಯಿ

ಬೆಂಗಳೂರು: ಚುನಾವಣೆಯ ಫಲಿತಾಂಶದ ಬಳಿಕ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಆರ್ ಎಸ್ ಎಸ್ ನಾಯಕರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು. ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವ ಕೃಪಕ್ಕೆ ಭೇಟಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇಂದು ಆರ್ ಎಸ್ ಎಸ್ ಮುಖಂಡರೊಂದಿಗೆ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಬರುವಂತಹ ದಿನಗಳಲ್ಲಿ ಪಕ್ಷವನ್ನು ಮುಂದೆ ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ಚರ್ಚೆ ಆಗಿದೆ.‌ ರಾಜ್ಯಾಧಕ್ಷರು, ವರಿಷ್ಠರ ಜೊತೆಗೆ …

Read More »

ಭೀಕರ ಅಪಘಾತ ಸ್ಥಳದಲ್ಲೇ ಸಾವ

ಗದಗ: ಎರಡು ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ನಡೆದಿದೆ. ಶಿವಪ್ಪ ನಾಯ್ಕ್ (50), ಛಬ್ಬಿ ತಾಂಡಾ ನಿವಾಸಿ ಶಿವಾನಂದ ಲಮಾನಿ (33) ಹಾಗೂ ಡೋಣಿ ತಾಂಡಾ ನಿವಾಸಿ ಕೃಷ್ಣಪ್ಪ ಚೌಹಾಣ್ (31) ಮೃತರು. ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ. ಗದಗ …

Read More »

ಐದು ವರ್ಷ ಕಳೆದರೂ ಸಹ ಇನ್ನು ವರೆಗೆ ಸ್ಮಾರ್ಟ್ ಸಿಟಿ ಯಾಗುತ್ತಿಲ್ಲ

ಬೆಳಗಾವಿ ನಗರದಲ್ಲಿ ಐದು ವರ್ಷ ಕಳೆದರೂ ಸಹ ಇನ್ನು ವರೆಗೆ ಸ್ಮಾರ್ಟ್ ಸಿಟಿ ಯಾಗುತ್ತಿಲ್ಲ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿ ಗೆ ಮೊದಲ ಮಹತ್ವ ನೀಡಲಾಗಿದೆ. ಇಲ್ಲಿ ಬೇಕಾಗಿರುವ ಪುಟ್ ಪಾತ್ ವಿದ್ಯುತ್ ಹಾಗೂ ಉದ್ಯಾನವನಗಳು ಹೀಗೆ ಹಲವಾರು ಯೋಜನೆಗಳನ್ನು ನಗರಕ್ಕೆ ನೀಡಲಾಗಿದೆ. ಒಂದೆಡೆ ಸ್ವಚ್ಛ, ಸುಂದರ ಹಾಗೂ ಹಸಿರು ನಗರ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ.ಆದ್ರೆ ನಗರದ ಜನ ಸರಿಯಾದ ರೀತಿಯಲ್ಲಿ ಉಪಯೋಗ ಮಾಡದಿರುವುದು ಬೇಸರದ ಸಂಗತಿ …

Read More »

ರಾಜ್ಯದ ಮುಂದಿನ ಮುಖ್ಯಮಂತ್ರಿ ನನ್ನ ಒಲವು ಯಾರ ಕಡೆಗೆ ಅಂತ ಮಾಧ್ಯಮಗಳಿಗೆ ಹೇಳಲಾಗದು: ಸತೀಶ್ ಜಾರಕಿಹೊಳಿ

ವೀಕ್ಷಕರ ಮುಂದೆ ಗೆದ್ದ ಅಭ್ಯರ್ಥಿಗಳು ತಮ್ಮ ಅಭಿಪ್ರಾಯಗಳ್ನು ತಿಳಿಸಿದ್ದಾರೆ ಎಂದ ಸತೀಶ್ ತಮ್ಮ ಒಲವು ಯಾರ ಕಡೆ ಅನ್ನೋದನ್ನು ಮಾತ್ರ ಬಹಿರಂಗಪಡಿಸಲಿಲ್ಲ.   ಬೆಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರೆನ್ನುವುದು ಕನಿಷ್ಟ ಇವತ್ತು ಸಾಯಂಕಾಲದವರೆಗೆ ಯಕ್ಷಪ್ರಶ್ನೆಯಾಗಿ ಉಳಿಯಲಿದೆ. ನಿನ್ನೆ ಸಾಯಂಕಾಲ ನಗರದ ಖಾಸಗಿ ಹೋಟೆಲೊಂದರಲ್ಲಿ ಸಿಎಲ್ ಪಿ ಮೀಟಿಂಗ್ (CLP meeting) ಬಳಿಕ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಚರ್ಚೆಯಾಗಿದೆ ಶಾಸಕರೆಲ್ಲ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ, ನಿರ್ಣಯ ಹೈಕಮಾಂಡ್ ಗೆ (high command) …

Read More »

ಆರ್ಡರ ಮಾಡಿದ್ದು ಡ್ರೋಣ ಕ್ಯಾಮರಾ ಬಂದಿದ್ದು, ನೀರಿನ ಬಾಟಲಿ.

ಹುಕ್ಕೇರಿ ತಾಲೂಕಿನ ಶಿರಗಾಂವ ಹ್ರಾಮದ ಯುವಕ ಮಿಶ್ಯೂ ಕಂಪನಿ ಆ್ಯಪ್ ಮೂಲಕ ಆನ್ ಲೈನ್ ದಲ್ಲಿ ಡ್ರೋಣ ಕ್ಯಾಮೆರಾ ಆರ್ಡರಮಾಡಿ ಅದಕ್ಕೆ ತಗಲುವ ಹಣ ಸಂದಾಯ ಸಹ ಮಾಡಿದ್ದ ಆದರೆ ಡೆಲಡವರಿ ಬಾಯ್ ಮೂಲಕ ಬಂದಿದ್ದು ಅರ್ಧ ಲೀಟರಿನ ನಾಲ್ಕು ನೀರಿನ ಬಾಟಲ್. ಹೌದು ಇದು ನಡೆದಿದ್ದು ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದಲ್ಲಿ, ಈಗ ಗ್ರಾಮಸ್ಥರು ಡೇಲೆವರಿ ಬಾಯ್ ಸಮೀರ ನದಾಫ್ ನನ್ನು ತರಾಟೆಗೆ ತಗೆದುಕೊಂಡು ಹಣ ಮರಳಿ ನೀಡುವಂತೆ …

Read More »

ವಿದ್ಯುತ್ ಬಿಗ್​ ಕಟ್ಟಲು ನಿರಾಕರಿಸಿದ ಗ್ರಾಮಸ್ಥರು

ಚಿತ್ರದುರ್ಗ: ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ(Karnataka Assembly Elections 2023) ಗೆಲ್ಲಲೇಬೇಕೆಂದು ಕಾಂಗ್ರೆಸ್ ಹಲವು ಗ್ಯಾರಂಟಿಗಳು ಘೋಷಿಸಿದೆ. ಇದರಲ್ಲಿ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ (Free Electricity) ಪೂರೈಕೆಯೂ ಒಂದಾಗಿದ್ದು, ಜೂನ್ 1ರಿಂದ ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಘಂಟಾಘೋಷವಾಗಿ ಹೇಳಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದ್ರೆ, ಸಿಎಂ ಯಾರು ಎನ್ನುವುದು …

Read More »

ಶ್ರೀ ಮಾರಿಯಮ್ಮ ದೇವಿ ಮೊರೆ ಹೋಗಿದ್ದಾರೆ ಮುತಾಲಿಕ

ಕಾರ್ಕಳ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಡೀಲ್ ಮಾಡಿಕೊಂಡು ಹಣ ಪಡೆದಿದ್ದಾಗಿ ಬಿಜೆಪಿಯ ವಿಜೇತ ಅಭ್ಯರ್ಥಿ ಸುನೀಲ್ ಕುಮಾರ್ ಅವರು ಆರೋಪಿಸಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಆರೋಪದ ಸತ್ಯಾಸತ್ಯತೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಕಾರ್ಕಳದ ಶ್ರೀ ಮಾರಿಯಮ್ಮ ದೇವಿ ಮೊರೆ ಹೋಗಿದ್ದಾರೆ. ಅವರು ದೇಗುಲಕ್ಕೆ ಭೇಟಿ ನೀಡಿ ತೆಂಗಿನಕಾಯಿ ಹಿಡಿದು ಪ್ರಾರ್ಥಿಸಿ ಸತ್ಯಾಸತ್ಯತೆ ತೋರಿಸಿಕೊಡುವಂತೆ ಮಾರಿಯಮ್ಮ ದೇವಿಯಲ್ಲಿ ಮೊರೆಯಿಟ್ಟರು. ನಂತರ ಪರಪ್ಪು ಸಮೀಪದ ತಮ್ಮ ಚುನಾವಣಾ …

Read More »