ದಾವಣಗೆರೆ: ಶೀಲ ಶಂಕಿಸಿ ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾಯಕೊಂಡ ಗ್ರಾಮದ ನಾಗರಾಜ ಶಿಕ್ಷೆಗೆ ಗುರಿಯಾದ ಅಪರಾಧಿ. ಶಿಲ್ಪಾ ಹಾಗೂ 2 ವರ್ಷದ ಮಗು ಕೃತಿಕಾ ಕೊಲೆಯಾದವರು. ನಾಗರಾಜನಿಗೆ 2015ರಲ್ಲಿ ಶಿಲ್ಪಾ ಅವರ ಜೊತೆ ವಿವಾಹವಾಗಿತ್ತು. ಅವರಿಗೆ 2 ವರ್ಷದ ಕೃತಿಕಾ ಎನ್ನುವ ಹೆಣ್ಣು ಮಗುವಿತ್ತು. ನಾಗರಾಜ ಪತ್ನಿಯ ಶೀಲದ ಬಗ್ಗೆ …
Read More »Daily Archives: ಮೇ 30, 2023
ಹೊಲದಲ್ಲಿ ತುರ್ತು ಭೂಸ್ಪರ್ಷ ಮಾಡಿದ ವಿಮಾನ
ಬೆಳಗಾವಿ: ತಾಲೂಕಿನ ಹೊನ್ನಿಹಾಳ- ಬಾಗೇವಾಡಿ ಮಾರ್ಗ ಮಧ್ಯೆ ತರಬೇತಿ ವಿಮಾನವೊಂದು ಬೆಳಗ್ಗೆ ಹೊಲದಲ್ಲೇ ತುರ್ತು ಭೂ ಸ್ಪರ್ಷ ಮಾಡಿದ್ದು ಭಾರೀ ದುರಂತವೊಂದು ತಪ್ಪಿದೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ತರಬೇತಿ ನಡೆಸಲಾಗುತ್ತಿದ್ದ ವಿಮಾನ ತಾಂತ್ರಿಕ ತೊಂದರೆಯಿಂದ ಹೊಲದಲ್ಲೇ ಲ್ಯಾಂಡ್ ಆಯಿತು. ಈ ವೇಳೆ ತರಬೇತುದಾರ ಪೈಲಟ್ ಕಾಲಿಗೆ ಪೆಟ್ಟಾಗಿದೆ.ಘಟನೆ ನಡೆದ ಬೆನ್ನಿಗೇ ಮಾರಿಹಾಳ ಠಾಣೆ ಪೊಲೀಸರು ಹಾಗೂ ವಾಯುಸೇನೆ …
Read More »ಲೈಂಗಿಕ ದೌರ್ಜನ್ಯ, ಕೊಲೆ ಅಪರಾಧಿಗೆ 15 ದಿನಗಳಲ್ಲೇ ಮರಣದಂಡನೆ ವಿಧಿಸಿದ ಮಥುರಾ ಕೋರ್ಟ್…!
ಮಥುರಾ (ಉತ್ತರ ಪ್ರದೇಶ): ಜಿಲ್ಲೆಯ ವಿಶೇಷ ಪೋಕ್ಸೊ ಕಾಯಿದೆ ನ್ಯಾಯಾಲಯವು ಕೇವಲ 15 ದಿನಗಳಲ್ಲಿ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸುವ ಮೂಲಕ ಸೋಮವಾರ ಇತಿಹಾಸ ಸೃಷ್ಟಿಸಿದೆ. ಪೊಲೀಸರ ಚುರುಕುತನ ಮತ್ತು ಎಲ್ಲ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಪರಾಧಿಗೆ 15 ದಿನಗಳಲ್ಲಿಯೇ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಹೌದು, ನ್ಯಾಯಾಲಯವು ಅಪರಾಧಿಗೆ ಮರಣದಂಡನೆ ವಿಧಿಸಿದೆ. ಏಪ್ರಿಲ್ 8ಕ್ಕೆ ಕಾಣೆಯಾಗಿದ್ದ ಬಾಲಕ: ಸದರ್ ಬಜಾರ್ ಪೊಲೀಸ್ ಠಾಣೆಯ ಔರಂಗಾಬಾದ್ ಪ್ರದೇಶದ 9 ವರ್ಷದ ಬಾಲಕ …
Read More »2 ಸಾವಿರದ ನೋಟು ಚಲಾವಣೆಗೆ ತಂದು ಬ್ಯಾನ್ ಮಾಡಿದ್ದು ಅಸಂಬದ್ಧ: ಚಿದಂಬರಂ ಟೀಕೆ
ಮುಂಬೈ: ಎರಡು ಸಾವಿರದ ನೋಟು ಚಲಾವಣೆ ಮತ್ತು ಅದರ ಹಿಂಪಡೆಯುವಿಕೆ ಭಾರತೀಯ ಕರೆನ್ಸಿಯ ಸಮಗ್ರತೆ ಮತ್ತು ಸ್ಥಿರತೆಯ ಮೇಲೆ ಅನುಮಾನ ಮೂಡಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೋಮವಾರ ಹೇಳಿದ್ದಾರೆ. ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರದ ಮಾಜಿ ಹಣಕಾಸು ಸಚಿವರು, ಆರ್ಥಿಕ ಸೂಚ್ಯಂಕಗಳು ಕೆಳಮುಖವಾಗುತ್ತಿವೆ. ಇದು ಆರ್ಥಿಕತೆ ಬೆಳವಣಿಗೆ ಹೊಂದುತ್ತದೆ ಎಂಬ ವಿಶ್ವಾಸ ಕಡಿಮೆ ಮಾಡಿದೆ ಎಂದು ಹೇಳಿದರು. ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟುಗಳನ್ನು …
Read More »ಮುಂಬರುವ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲಿದೆ: ರಾಹುಲ್ ಗಾಂಧಿ ಭವಿಷ್ಯ
ನವದೆಹಲಿ: ಕರ್ನಾಟಕ ಚುನಾವಣೆಯ ಗೆಲುವಿನ ಉತ್ಸಾಹದಲ್ಲಿರುವ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ನವದೆಹಲಿಯಲ್ಲಿ ಮಧ್ಯಪ್ರದೇಶ ನಾಯಕರೊಂದಿಗೆ ಚರ್ಚೆ ನಡೆಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದರು. ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಾಧ್ಯಕ್ಷ ಕಮಲ್ ನಾಥ್, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು. ಮಧ್ಯಪ್ರದೇಶದ ರಾಜ್ಯ ನಾಯಕರಿಗೆ ಪಕ್ಷದಲ್ಲಿರುವ ಬೇರೆ ಯಾವುದೇ ನಾಯಕರು ಹೇಳಿಕೆ …
Read More »ಮೇ 31 ರಿಂದ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಶಾಲೆಗಳು ಆರಂಭ
ಬೆಂಗಳೂರು : ಇಂದಿನಿಂದ 2023-24ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷಾರಂಭಗೊಂಡಿದ್ದು, ಮೇ 31 ರಿಂದ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಶಾಲೆಗಳು ಆರಂಭಗೊಳ್ಳಲಿವೆ. ಶಾಲೆಗಳ ಆರಂಭಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ. 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಶಾಲೆಗಳಿಗೆ ನೀಡಲಾಗಿದ್ದ ಬೇಸಿಗೆ ರಜೆ ನಿನ್ನೆಗೆ ( ಭಾನುವಾರ) ಅಂತ್ಯಗೊಂಡಿದ್ದು, ಇಂದಿನಿಂದ ನೂತನ ಶೈಕ್ಷಣಿಕ ವರ್ಷಾರಂಭವಾಗಿದೆ. ಆದರೆ, ಶಾಲೆಗಳ ಆರಂಭಕ್ಕೆ ಇನ್ನು …
Read More »ಜಿಪಂ, ತಾಪಂ ಚುನಾವಣೆಗೆ ಪ್ರಕ್ರಿಯೆ ಪೂರ್ಣಗೊಳಿಸಲು ನಾಲ್ಕು ವಾರ ಕಾಲಾವಕಾಶ ನೀಡಿದ ಹೈಕೋರ್ಟ್
ಬೆಂಗಳೂರು: ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಪ್ರಕಿಯೆ ಪೂರ್ಣ ಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಅವಧಿ ಮುಗಿದ ಜಿಪಂ ಮತ್ತು ತಾಪಂಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ರಾಜ್ಯದಲ್ಲಿ ತಾಪಂ, ಜಿಪಂ ಕ್ಷೇತ್ರ ಮರುವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು …
Read More »IPL ಚಾಂಪಿಯನ್ ಚೆನ್ನೈಗೆ 20 ಕೋಟಿ ರೂ ಬಹುಮಾನ: ವಿವಿಧ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ..
ಅಹಮದಾಬಾದ್ (ಗುಜರಾತ್): ಕಳೆದ ಎರಡು ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ ‘ಮಿಲಿಯನ್ ಡಾಲರ್ ಟೂರ್ನಿ’ ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್) ತಡರಾತ್ರಿ ಮುಕ್ತಾಯಗೊಂಡಿತು. ಬೃಹತ್ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿತು. ಈ ಮೂಲಕ 5 ನೇ ಬಾರಿಗೆ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಪಂದ್ಯ ಮುಕ್ತಾಯದ ಬಳಿಕ ಈ ಸೀಸನ್ನಿನ …
Read More »