ಬೆಂಗಳೂರು : ನಾಡೋಜ ಸಾಲು ಮರದ ತಿಮ್ಮಕ್ಕ ಅವರಿಗೆ ಈ ಹಿಂದೆ ನೀಡಲಾಗಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮುಂದುವರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ. ಪರಿಸರ ರಾಯಭಾರಿಯಾಗಿಯೂ ಸಾಲು ಮರದ ತಿಮ್ಮಕ್ಕ ಅವರು ಮುಂದುವರೆಯಲಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
Read More »Daily Archives: ಮೇ 29, 2023
ಕುಡುಕ ಗಂಡನಿಂದ ಕಾಟ: ಮಗನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ..!
ಬೆಳಗಾವಿ: ಕುಡುಕ ಗಂಡನ ಕಾಟಕ್ಕೆ ಬೇಸತ್ತ ಪತ್ನಿ ತನ್ನ ಮಗನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ನಡೆದಿದೆ. ಚಂದ್ರಕಾಂತ ಮಾವರಕರ್(42) ಕೊಲೆಯಾದ ವ್ಯಕ್ತಿ. ಸಾವಿತ್ರಿ ಮಾವರಕರ್, ಸುನೀಲ್ ಮಾವರಕರ್ ಕೊಲೆ ಮಾಡಿದ ತಾಯಿ ಹಾಗೂ ಮಗ ಎಂದು ಗುರುತಿಸಲಾಗಿದೆ. ನಿನ್ನೆ ಬೆಳಗಿನ ಜಾವ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳ್ಳೂರು ಗ್ರಾಮದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ದ್ಯಾಮವ್ವ ಹಾಗೂ ಮಹಾಲಕ್ಷ್ಮೀ ದೇವಿ …
Read More »ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಭೀಕರ ಅಪಘಾತ: 6 ಮಂದಿ ಸಾವು..
ಮೈಸೂರು: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಡಿಕ್ಕಿ ಸಂಭವಿಸಿ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ನಡೆದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ನರಸೀಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಬಳ್ಳಾರಿ ಮೂಲದವರು ಎಂದು ಹೇಳಲಾಗುತ್ತಿದ್ದು, ಮಲೆ ಮಾದೇಶ್ವರನ ದರ್ಶನಕ್ಕೆ ಹೋಗಿ ಮೈಸೂರು ನಗರದತ್ತ ಆಗಮಿಸುತ್ತಿದ್ದರು. ಈ …
Read More »ಜಾರಕಿಹೊಳಿ ಮನೆತನದ ಸಹೋದರ ರಿಂದ ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದರು
ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ನೂತನ ಸಚಿವರಾಗಿ ಗೋಕಾಕ ಸ್ವಗೃಹಕ್ಕೆ ಆಗಮಿಸಿದ ಸತೀಶ ಜಾರಕಿಹೊಳಿ ಅವರನ್ನು ಸಂತೋಷ ಜಾರಕಿಹೊಳಿ, ಸರ್ವೊತ್ತಮ ಜಾರಕಿಹೊಳಿ ಹಾಗೂ ಸನತ್ ಜಾರಕಿಹೊಳಿ ಹಾಗೂ ಜಾರಕಿಹೊಳಿ ಮನೆತನದ ಎಲ್ಲ ಕುಟುಂಬದ ಸದಸ್ಯರು ಅಭಿನಂದನೆ ಸಲ್ಲಿಸಿದ ಕ್ಷಣಗಳು.
Read More »ಅಂಬಿ ಕಲಿಯುಗ ಕರ್ಣ ಅವರ ಜನುಮ ದಿನ ಇಂದು
ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನುಮ ದಿನ. ಅವರ ಕುರಿತಾದ ಕೆಲವು ಕುತೂಹಲದ ವಿಷಯಗಳು ಇಲ್ಲಿವೆ. ಭಾರತೀಯ ಚಿತ್ರರಂಗದ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ರೆಬೆಲ್ ಸ್ಟಾರ್ ಅಂಬರೀಶ್. ಬೇಸ್ ವಾಯ್ಸ್, ನೇರ ಮಾತುಗಳಿಂದಲೇ ರೆಬೆಲ್ ಸ್ಟಾರ್ ಅಂತಾ ಕರೆಸಿಕೊಂಡ ಇವರು ಅಭಿಮಾನಿಗಳ ನೆಚ್ಚಿನ ನಟ. ಇವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಂಡ್ಯದ ಗಂಡು ಬದುಕಿದ್ದರೆ ಇಂದು ಸಾವಿರಾರು ಅಭಿಮಾನಿಗಳ ಜೊತೆ 71ನೇ ಹುಟ್ಟು ಹಬ್ಬ ಆಚರಣೆ …
Read More »ಹಾವೇರಿಯಲ್ಲಿ ಕಣ್ಮನ ಸೆಳೆಯುತ್ತಿರುವ ಗುಲ್ಮೋಹರ್ ಪುಷ್ಪಗಳು
ಹಾವೇರಿ : ಮೇ ತಿಂಗಳು ಬಂದರೆ ಸಾಕು ಎಲ್ಲೆಲ್ಲಿಯೂ ಗುಲ್ ಮೋಹರ್ ಪುಷ್ಪಗಳದ್ದೇ ಸೌಂದರ್ಯ. ಮರದ ತುಂಬೆಲ್ಲ ಎಲೆಗಳು ಕಾಣದಂತೆ ಗುಲ್ ಮೋಹರ್ ಪುಷ್ಪಗಳು ಅರಳಿ ಕಣ್ಣಿಗೆ ಮುದ ನೀಡುತ್ತವೆ. ಬಿರುಬೇಸಿಗೆಯಲ್ಲೂ ಸಹ ಈ ಹೂಗಳು ಅರಳಿ ಮೈ ಮಸನಸ್ಸನ್ನು ಸೆಳೆಯುತ್ತವೆ. ಗೊಂಚಲು ಗೊಂಚಲಾಗಿ ಬಿಡುವ ಹೂವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಮೇ ಫ್ಲವರ್ ಎಂದೂ ಕರೆಯುತ್ತಾರೆ. ಹೂಗಳು ಮರದ ತುಂಬಾ ರಾರಾಜಿಸುತ್ತವೆ. ಸಾಮಾನ್ಯವಾಗಿ ಉಷ್ಣವಲಯದ ವಾತಾವರಣದಲ್ಲಿ ಈ ಮರಗಳು ಬೆಳೆಯುತ್ತವೆ. …
Read More »ಗ್ಯಾರಂಟಿ ಕಾರ್ಡ್ ಜಾರಿ ಸಲುವಾಗಿ ಸರ್ಕಾರ ಮೊದಲು ಸರ್ವೇ ಕಾರ್ಯ ಮುಗಿಸಬೇಕು.:ಲಕ್ಷ್ಮಣ್ ಸವದಿ
ಚಿಕ್ಕೋಡಿ (ಬೆಳಗಾವಿ) : ಗ್ಯಾರಂಟಿ ಕಾರ್ಡ್ ಜಾರಿ ಸಲುವಾಗಿ ಸರ್ಕಾರ ಮೊದಲು ಸರ್ವೇ ಕಾರ್ಯ ಮುಗಿಸಬೇಕು. ನಂತರ ಸರ್ವೇ ಕಾರ್ಯ ಕೈಗೆ ಬರಬೇಕು. ಇದಾದ ಬಳಿಕ ಅದಕ್ಕೆ ಗೈಡ್ಲೈನ್ಸ್ ಫಿಕ್ಸ್ ಮಾಡಿದ ನಂತರವೇ ಎಲ್ಲವೂ ಜಾರಿ ಆಗುತ್ತೆ. ಈಗಾಗಲೇ ಸಚಿವ ಸಂಪುಟ ಇದರ ಬಗ್ಗೆ ಕಾರ್ಯಪ್ರವೃತ್ತವಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಅಥಣಿ ಪಟ್ಟಣದ ತಮ್ಮ ಖಾಸಗಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮುಂದಿನ ತಿಂಗಳು ಈ …
Read More »ಬೆಳಗಾವಿ 2 ಪ್ರತ್ಯೇಕ ಪ್ರಕರಣ: ಓರ್ವನ ಕೊಲೆ, ನೀರಿನಲ್ಲಿ ಮುಳುಗಿ ಬಾಲಕ ಸಾವು
ಬೆಳಗಾವಿ: ಇಲ್ಲಿನ ಹೊಸೂರ ಬಸವನ ಗಲ್ಲಿಯಲ್ಲಿ ಭಾನುವಾರ ಯುವಕನನ್ನು ಹತ್ಯೆ ಮಾಡಲಾಗಿದೆ. ಮಿಲಿಂದ ಚಂದ್ರಕಾಂತ ಜಾಧವ (28) ಕೊಲೆಯಾದ ಯುವಕ. ಈತ ಕೂಲಿ ಕೆಲಸ ಮಾಡುತ್ತಿದ್ದ. ಆಸ್ತಿ ವಿಚಾರವಾಗಿ ಸಂಬಂಧಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಅಭಿಜಿತ್ ಜಾಧವ ಆರೋಪಿಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ನೀರಿನಲ್ಲಿ ಮುಳುಗಿ ಬಾಲಕ ಸಾವು: ಈಜಲು ಹೋದ ಬಾಲಕನ ತಲೆಗೆ ಕಲ್ಲು ಬಡಿದು ನೀರಿನಲ್ಲಿ …
Read More »ನಮ್ಮ ಸರ್ಕಾರದ ಮೇಲೆ ರಾಜ್ಯದ ಜನ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದ ನೂತನ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ಚುನಾವಣೆಯಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆಗಳನ್ನು ತಲುಪಿಸುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಚಿವರಾದ ಬಳಿಕ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪಕ್ಕೆ ಮೊದಲ ಬಾರಿ ಭೇಟಿ ನೀಡಿದ ಅವರು ಶ್ರೀಮಠದ ನಿಜಗುಣಾನಂದ ಶ್ರೀಗಳ ಆಶೀರ್ವಾದ ಪಡೆದು ಕಾರ್ಯಕ್ರಮದಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ನಾವು …
Read More »500 ಉದ್ಯೋಗಿಗಳನ್ನು ವಜಾಗೊಳಿಸಿದಜೆಪಿ ಮೋರ್ಗಾನ್
ನ್ಯೂಯಾರ್ಕ್: ಜೆಪಿ ಮೋರ್ಗಾನ್ ಚೇಸ್ ಆ್ಯಂಡ್ ಕಂಪನಿ ಈ ವಾರ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕೆಯು ಗ್ರಾಹಕ, ವಾಣಿಜ್ಯ ಬ್ಯಾಂಕಿಂಗ್, ಆಸ್ತಿ ಮತ್ತು ಸಂಪತ್ತು ನಿರ್ವಹಣೆ ಸೇರಿದಂತೆ ಬ್ಯಾಂಕ್‌ನ ಪ್ರಮುಖ ವ್ಯವಹಾರಗಳ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಜೆಪಿ ಮೊರ್ಗಾನ್ ಇತ್ತೀಚೆಗೆ ಸ್ವಾಧೀನಪಡಿಸಿಕೊಂಡ ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ನ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರ ಭಾಗವಾಗಿ ತನ್ನ ವಿವಿಧ ಇಲಾಖೆಗಳಲ್ಲಿ ಈ ವಾರ ಸುಮಾರು …
Read More »