Breaking News

Daily Archives: ಮೇ 4, 2023

ಅರಭಾವಿ ಮತಕ್ಷೇತ್ರದ ಸಮಗ್ರ ಪ್ರಗತಿಗಾಗಿಮತಯಾಚಿಸಿ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಅರಭಾವಿ ಮತಕ್ಷೇತ್ರದ ಸಮಗ್ರ ಪ್ರಗತಿಗಾಗಿ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ಮೇ. 10 ರಂದು ನಡೆಯುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿ ಜನಸೇವೆಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು. ತಾಲ್ಲೂಕಿನ ಕುಲಗೋಡ ಗ್ರಾಮದಲ್ಲಿ ಚುನಾವಣೆ ಪ್ರಚಾರದ ನಿಮಿತ್ಯ ಮತಯಾಚಿಸಿ ಮಾತನಾಡಿದ ಅವರು, ಅಭಿವೃದ್ಧಿ ಆಧಾರದ ಮೇಲೆ ಮತ ಯಾಚನೆ ಮಾಡುತ್ತಿರುವುದಾಗಿ ತಿಳಿಸಿದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ …

Read More »

ಬಜರಂಗದಳ ಬ್ಯಾನ್​ ಮಾಡುವುದು ಮೂರ್ಖತನದ ಪರಮಾವಧಿ : ಬಿ ವೈ ವಿಜಯೇಂದ್ರ

ಬಾಗಲಕೋಟೆ : ಈಗಾಗಲೇ ಕಾಂಗ್ರೆಸ್​ ಪಕ್ಷ ಇಡೀ ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್​ ಮಾಡುವುದಾಗಿ ಹೇಳಿ ಕಾಂಗ್ರೆಸ್ ಪಕ್ಷ ಇಡೀ‌ ದೇಶದಲ್ಲಿಯೇ ಬ್ಯಾನ್ ಆಗುವ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ‌ಮುಧೋಳ ಪಟ್ಟಣಕ್ಕೆ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಜರಂಗದಳ‌ ಬ್ಯಾನ್ ಮಾಡುವುದಾಗಿ ಹೇಳಿ ಕಾಂಗ್ರೆಸ್​ …

Read More »

ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದ್ರೆ ಬಿಜೆಪಿ ನೀಡಿರುವ ಮೀಸಲಾತಿ ಹಿಂಪಡೆಯುತ್ತಾರೆ : ಯತ್ನಾಳ್

ಗಂಗಾವತಿ(ಕೊಪ್ಪಳ): ಕಾಂಗ್ರೆಸ್​​ನವರು ಬಿಜೆಪಿ ಸರ್ಕಾರ ಮಾಡಿರುವ ಎಲ್ಲಾ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಹೇಳುತ್ತಾರೆ. ಎಲ್ಲ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಇಂಥವರಿಗೆ ಮತ ಹಾಕುತ್ತೀರಾ ಎಂದು ಬಿಜೆಪಿ ​ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯನ್ನು ಮನೆಗೆ ಕಳುಹಿಸದಿದ್ದರೆ ದೇಶ ವಿಭಜನೆಯಾಗುತ್ತದೆ ಎಂದು ಕಾಂಗ್ರೆಸ್​ನವರು ಬೊಬ್ಬಿಡುತ್ತಾರೆ. ಇನ್ನೊಂದೆಡೆ ಭಾರತ್ ಜೋಡೋ ಯಾತ್ರೆ ಮಾಡುತ್ತಾರೆ. ವಾಸ್ತವದಲ್ಲಿ ಪಾಕಿಸ್ತಾನ, ಬಾಂಗ್ಲಾ ವಿಭಜನೆ …

Read More »

ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತನ ನಿವಾಸದ ಮೇಲೆ ಐಟಿ ದಾಳಿ

ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಪ್ರಶಾಂತ್​ ಕೇಕರೆ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲೆಯ ಸಪ್ತಾಪುರ ಬಡಾವಣೆಯ ಕೃಷಿ ಪಾರ್ಕ್‌ನಲ್ಲಿರುವ ಕೇಕರೆ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿಯೂ ಪ್ರಶಾಂತ್​ ಕೇಕರೆ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಚುನಾವಣೆ ಹೊತ್ತಿನಲ್ಲಿ …

Read More »

ಬಜರಂಗದಳ ನಿಷೇಧ ಯಾರಿಂದಲೂ ಸಾಧ್ಯವಿಲ್ಲ:B,S.Y.

ಬೆಂಗಳೂರು: ”ಬಜರಂಗದಳ ನಿಷೇಧ ಮಾಡಲು ಯಾವನಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್‌ನವರು ಹುಚ್ಚುಹುಚ್ಚಾಗಿ ಮಾತನಾಡುತ್ತಿದಾರೆ, ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಮೂರ್ಖ ನಿರ್ಧಾರ ತಗೊಂಡಿದೆ. ಕಾಂಗ್ರೆಸ್​ನವರ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಜರಂಗದಳವನ್ನು ಯಾವನಿಂದಲೂ ಬ್ಯಾನ್ ಮಾಡೋಕೆ ಸಾಧ್ಯ ಇಲ್ಲ ಹುಚ್ಚುಚ್ಚರ ತರ ಆಡುತ್ತಿರುವ …

Read More »

ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ನಿಂತಿದ್ದ ಜಾಗದ ಬಳಿಯೇ ಬೆಂಕಿ

ಕಾರವಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಬಡಿದು ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ಹೆಲಿಪಾಡ್ ನ ಪಕ್ಕದಲ್ಲಿಯೇ ಬೆಂಕಿ ಅವಘಡ ಸಂಭವಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿಯ ರಾಮತೀರ್ಥ ಬಳಿ ನಡೆದಿದೆ. ಡಿ.ಕೆ.ಶಿವಕುಮಾರ್ ಅವರು ಹೊನ್ನಾವರ ಬಳಿಯ ರಾಮತೀರ್ಥ ಹೆಲಿಪ್ಯಾಡ್ ಗೆ ಆಗಮಿಸಿದ್ದು, ಹೆಲಿಕಾಪ್ಟರ್ ನಿಲ್ಲಿಸಿದ್ದ ಜಾಗದ ಪಕ್ಕದಲ್ಲಿಯೇ ಬೆಂಕಿ …

Read More »

ತಂದೆಯ ಜಮೀನು ಅಡವಿಟ್ಟು ವಿವಾಹ ಮಾಡಿದ್ರೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಹೈಕೋರ್ಟ್

ಬೆಂಗಳೂರು : ತಂಗಿಯ ವಿವಾಹಕ್ಕಾಗಿ ಜಮೀನು ಅಡಮಾನ ಇಟ್ಟು ಪಡೆದ ಸಾಲ ಈವರೆಗೂ ತೀರಿಲ್ಲ. ಹೀಗಾಗಿ ತಂದೆಯ ಆಸ್ತಿಯಲ್ಲಿ ಸಹೋದರಿಗೆ ಆಸ್ತಿಯಲ್ಲಿ ಭಾಗ ಕೇಳುವ ಹಕ್ಕಿಲ್ಲ ಎಂಬುದಾಗಿ ಸಹೋದರನ ವಾದ ತಿರಸ್ಕರಿಸಿರುವ ಹೈಕೋರ್ಟ್, ತಂದೆಯ ಆಸ್ತಿಯಲ್ಲಿ ಮಗಳಿಗೂ ಸಮಾನ ಹಕ್ಕಿದೆ ಎಂದು ತಿಳಿಸಿದೆ.   ತುಮಕೂರು ಜಿಲ್ಲೆಯ ಯಲ್ಲಾಪುರ ಗ್ರಾಮದ ನಿವಾಸಿಗಳಾದ ವೆಂಕಟೇಶ ಮತ್ತು ಅವರ ತಾಯಿ ವೆಂಕಟಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ …

Read More »

10 ಸಾವಿರ ರೂಪಾಯಿಗಾಗಿ ಜಗಳ.. ಹೈಕೋರ್ಟ್​ ಬಳಿ ಬರ್ಬರ ಕೊಲೆ

ಹೈದರಾಬಾದ್: ತೆಲಂಗಾಣ ಹೈಕೋರ್ಟ್ ಬಳಿ ಭೀಕರ ಹತ್ಯೆಯೊಂದು ನಡೆದಿದೆ. ಹೈಕೋರ್ಟ್‌ನ ಗೇಟ್ ಸಂಖ್ಯೆ 6 ರಲ್ಲಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಇರಿದು ಕೊಂದಿದ್ದಾರೆ. ಜನರು ನೋಡುತ್ತಿರುವಾಗಲೇ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ. 10 ಸಾವಿರ ರೂಪಾಯಿಗೆ ಇಬ್ಬರ ನಡುವೆ ಮಾರಾಮಾರಿ ನಡೆದಿದೆಯಂತೆ. ಈ ಘಟನೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ …

Read More »

ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಪ್ರತಿಭಟನೆ ನಡೆಸಿದ ಬಜರಂಗದಳ ಪದಾಧಿಕಾರಿಗಳು

ದೊಡ್ಡಬಳ್ಳಾಪುರ: ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಬುಧವಾರ ಬಜರಂಗದಳ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸುಡುವ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳದ ಕೋಲಾರ ವಿಭಾಗದ ಸಂಯೋಜಕ ನರೇಶ್ ರಡ್ಡಿ, ಹಿಂದೂಗಳ ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಬಜರಂಗದಳವನ್ನು ನಿಷೇಧ ಮಾಡುವ ಕೆಲಸಕ್ಕೆ ಮುಂದಾದರೆ ಕಾಂಗ್ರೆಸ್ ನಿಷೇದಿಸುವ ಕೆಲಸಕ್ಕೆ ನಾವು ಮುಂದಾಗುತ್ತೇವೆ.   ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ …

Read More »

ಮಹಿಳಾ ಮತದಾರರ ಮತದಾನ ಪ್ರಮಾಣ ಹೆಚ್ಚಳಕ್ಕೆ ‘ಸಖಿ ಪಿಂಕ್ ಬೂತ್’

ವಿಜಯಪುರ(ದೇವನಹಳ್ಳಿ): ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ‘ಸಖಿ ಪಿಂಕ್‌ ಬೂತ್‌’ (ಗುಲಾಬಿ ಬಣ್ಣದ ಮತಗಟ್ಟೆ) ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ‘ಪಿಂಕ್ ಬೂತ್’ ತೆರೆಯಲಾಗಿದೆ.   ಇದರ ಜೊತೆಯಲ್ಲಿ ಯತನಿಕ್ ಮತಗಟ್ಟೆ, ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಪಿಂಕ್ ಬೂತ್ ಹೊರಗೆ ಮಹಿಳೆಯರ ಮನಸ್ಸಿಗೆ ಮುದ ನೀಡುವಂತಹ, ಅವರನ್ನು ಮತಗಟ್ಟೆಗೆ ಆಹ್ವಾನಿಸುವಂತಹ ಚಿತ್ತಾಕರ್ಷಕವಾದ ಚಿತ್ರಗಳನ್ನು …

Read More »