ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಖಾಸಗಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ ಆತ್ಮೀಯ ಕ್ಷಣಗಳು ಭಾರಿ ವೈರಲ್ ಆಗಿವೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಪರಸ್ಪರ ಹೆಗಲಮೇಲೆ ಕೈ ಹಾಕಿಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಮೂಲಕ ವಿರೋಧಿಗಳಿಗೆ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದ್ದಾರೆ.
Read More »Daily Archives: ಏಪ್ರಿಲ್ 22, 2023
PUC Results 2022-23| ವಿಜ್ಞಾನದಲ್ಲಿ ಕೌಶಿಕ್, ಸುರಭಿ ರಾಜ್ಯಕ್ಕೇ ಪ್ರಥಮ
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ವಿಜ್ಞಾನ ವಿಭಾಗದಲ್ಲಿ ಶ್ರೀನಿವಾಸಪುರ ಪಟ್ಟಣದ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ.ಕೌಶಿಕ್ ಮತ್ತು ಬೆಂಗಳೂರಿನ ಆರ್.ವಿ ಪಿಯು ಕಾಲೇಜಿನ ಸುರಭಿ ಅವರು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಇಬ್ಬರೂ 600ಕ್ಕೆ 596 ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಬಾರಿ 74.67 ಫಲಿತಾಂಶ ಇದೇ ಮೊದಲ ಬಾರಿಗೆ ಪಿಯುಸಿಯಲ್ಲಿ ಶೇ 74.67 ಫಲಿತಾಂಶ ಲಭ್ಯವಾಗಿದೆ. 7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಫಲಿತಾಂಶದಲ್ಲಿ …
Read More »ರೌಡಿಗೆ ಕೈ ಮುಗಿತಾರೆ, ಭ್ರಷ್ಟರಿಗೆ ಕರೆ ಮಾಡ್ತಾರೆ: ಮೋದಿ ವಿರುದ್ಧ ಕಾಂಗ್ರೆಸ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರೌಡಿಗಳಿಗೆ ಕೈ ಮುಗಿಯುತ್ತಾರೆ ಹಾಗೂ ಭ್ರಷ್ಟಾಚಾರಿಗಳಿಗೆ ಕರೆ ಮಾಡುತ್ತಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾತನಾಡಿರುವ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿ ಅವರು ರೌಡಿಗಳಿಗೆ ಕೈ ಮುಗಿಯುತ್ತಾರೆ. ಭ್ರಷ್ಟಾಚಾರಿಗಳಿಗೆ ಕರೆ ಮಾಡಿ ಪ್ರೋತ್ಸಾಹಿಸುತ್ತಾರೆ. ಆದರೆ, ಭ್ರಷ್ಟಾಚಾರದ ದೂರುಗಳ ಪತ್ರಗಳಿಗೆ ಮಾತ್ರ ಮೌನ ವಹಿಸುತ್ತಾರೆ. ನೆರೆ ಸಂತ್ರಸ್ತರ …
Read More »ಅಭ್ಯರ್ಥಿಗಳಿಂದ ಹಣ ಪಡೆದ ಆರೋಪ: ಡಿಕೆಶಿ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಭ್ಯರ್ಥಿಗಳಿಗೆ ಬಿ- ಫಾರಂ ನೀಡುವುದರ ಜತೆಗೆ ಅವರಿಂದ ಹಣವನ್ನೂ ವಸೂಲಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚುನಾವಣೆಗೆ ಸ್ಪರ್ಧಿಸಲು ಬಿ-ಫಾರಂ ನೀಡುವ ಅಧಿಕೃತ ವ್ಯಕ್ತಿಯೂ ಆಗಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಂದ ಕೆಪಿಸಿಸಿ ಹಣ …
Read More »ಶಶಿಕಲಾ ಜೊಲ್ಲೆಗೆ ಹ್ಯಾಟ್ರಿಕ್ ಗೆಲುವು ನೀಡಿ:ಮಹಾರಾಷ್ಟ್ರ ರಾಜ್ಯಾಧ್ಯಕ್ಷೆಚಿತ್ರಾ
ನಿಪ್ಪಾಣಿ: ‘ಪ್ರಚಾರಸಭೆಗೆ ನೆರೆದ ಇಷ್ಟೊಂದು ಜನಸಮುದಾಯ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರಿಂದ ಜರುಗಿದ ಅಭಿವೃದ್ಧಿಪರ ಕಾರ್ಯಗಳಿಗೆ ರಸೀದಿಯಾಗಿದೆ. ದೇಶಕ್ಕಾಗಿ, ಧರ್ಮಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಬಹುಮತಗಳಿಂದ ಆರಿಸಿ ತನ್ನಿ’ ಎಂದು ಬಿಜೆಪಿ ಪಕ್ಷದ ಮಹಿಳಾ ಘಟಕದ ಮಹಾರಾಷ್ಟ್ರ ರಾಜ್ಯಾಧ್ಯಕ್ಷೆ ಚಿತ್ರಾ ವಾಘ ಹೇಳಿದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರ ನಿಪ್ಪಾಣಿಯಲ್ಲಿನ ಮುನಿಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘75 ವರ್ಷಗಳ ನಂತರ ದೇಶದಲ್ಲಿ ನರೇಂದ್ರ …
Read More »ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ತಿರಸ್ಕೃತವಾಗುತ್ತಾ?
ಸವದತ್ತಿ: ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ತಿರಸ್ಕೃತವಾಗುತ್ತಾ? ಅಂತಹ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಮತ್ತು ಆಪ್ ಅಭ್ಯರ್ಥಿ ಬಾಪುಗೌಡ ಎನ್ನುವವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಇಂತಹ ಆತಂಕ ಮತ್ತು ಚರ್ಚೆ ನಡೆಯುತ್ತಿದೆ. ರತ್ನಾ ಮಾಮನಿ ನಾಮಪತ್ರ ಸಲ್ಲಿಸುವಾಗ 2018ರ ಅಫಿಡವಿಟ್ ನ್ನು ಸಲ್ಲಿಸಿದ್ದಾರೆ. ಹಾಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ದೂರುದಾರರು ಕೋರಿದ್ದರು. ಈ ಕುರಿತು ವಿಚಾರಣೆಯನ್ನು ಶನಿವಾರ ಬೆಳಗ್ಗೆ 10 …
Read More »ಹಿಡಕಲ್ ಜಲಾಶಯದಿಂದ ಜಿಆರ್‍ಬಿಸಿ, ಜಿಎಲ್‍ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಹಿಡಕಲ್ ಜಲಾಶಯದಿಂದ ಜಿಆರ್‍ಬಿಸಿ, ಜಿಎಲ್‍ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಕೆ ಮಾಡಲು ಮನವಿ ಮಾಡಿಕೊಂಡ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆ ದಿ. 22 ರಿಂದ 7 ದಿನಗಳವರೆಗೆ ಕುಡಿಯುವ ನೀರಿನ ಉದ್ಧೇಶಕ್ಕಾಗಿ 2.963 ಟಿಎಂಸಿ …
Read More »