ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲಿ ಎಐಸಿಸಿ, ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದೆ. ನಾಲ್ಕನೇ ಪಟ್ಟಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ 7 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಪಶ್ಚಿಮ- ದೀಪಕ್ ಚ್ಂಚೋರೆ ಲಿಂಗಸಗೂರು- ದುರ್ಗಪ್ಪ ಎಸ್ ಹುಲಗೇರಿ ಶಿಗ್ಗಾವಿ-ಮೊಹಮ್ಮದ್ ಯೂಸೂಫ್ ಸವಣೂರು ಹರಿಹರ- ನಂದಗಾವಿ ಶ್ರೀನಿವಾಸ್ ಚಿಕ್ಕಮಗಳೂರು-ಹೆಚ್.ಡಿ.ತಮ್ಮಯ್ಯ ಶ್ರವಣಬೆಳಗೊಳ-ಎಂ.ಎ.ಗೋಪಾಲಸ್ವಾಮಿ
Read More »Daily Archives: ಏಪ್ರಿಲ್ 18, 2023
ಬಾಲಚಂದ್ರ ಜಾರಕಿಹೊಳಿ ಅಧಿಕಾರಕ್ಕೆ ಬರಬೇಕೆಂದು 18 ಕಿ.ಮೀ ದೂರ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ದೇವರಿಕೆ ಹರಕೆ
ಬೆಳಗಾವಿ: ತಮ್ಮಿಷ್ಟದ ಶಾಸಕರು ಅಧಿಕಾರಕ್ಕೆ ಬರಬೇಕೆಂದು ಅಭಿಮಾನಿಗಳ ಆಸೆ ಪಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭಿಮಾನಿಗೆ ಆಸೆ ಮಾತ್ರವಲ್ಲ, ಹರಕೆಯನ್ನು ಕಟ್ಟಿಕೊಂಡಿದ್ದಾನೆ. ಬರೋಬ್ಬರಿ 18 ಕಿ.ಮೀ ದೂರ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ದೇವರಿಕೆ ಹರಕೆ ಕಟ್ಟಿಕೊಂಡಿದ್ದಾನೆ. ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಅರವಿಭಾವಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಈ ಕ್ಷೇತ್ರದಿಂದ ಅತಿ ಹೆಚ್ಚಿನ ಲೀಡ್ ನಿಂದ ಅವರನ್ನು ಗೆಲ್ಲಿಸುವಂತೆ ರಮೇಶ್ ತಿಗಡಿ ಎಂಬಾತ ಹರಿಕೆ ಕಟ್ಟಿಕೊಂಡಿದ್ದಾನೆ. …
Read More »ಕುಸಿದು ಬಿದ್ದ ಕಬ್ಬಿಣದ ಹೋರ್ಡಿಂಗ್ : ಐವರು ಸಾವು.!
ಮುಂಬೈ-ಪುಣೆ ಹೆದ್ದಾರಿಯ ರಾವೆಟ್ ಕಿವಾಲೆ ಪ್ರದೇಶದ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೆಲವರು ಬಿರುಗಾಳಿಯಿಂದ ಕಬ್ಬಿಣದ ಹೋರ್ಡಿಂಗ್ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಹೋರ್ಡಿಂಗ್ ಅವರ ಮೇಲೆ ಕುಸಿದು ಬಿದ್ದಿದೆ. ಪರಿಣಾಮ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಐದು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ ಯಾರಾದರೂ ಹೋರ್ಡಿಂಗ್ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆಯೇ ಎಂದು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. …
Read More »BJPಯಲ್ಲಿ ಟಿಕೆಟ್ ಹಂಚಿಕೆ ವ್ಯಕ್ತಿಗತ ನಿರ್ಧಾರವಲ್ಲ: ಶೆಟ್ಟರ್ ಹೇಳಿಕೆ ವಿರುದ್ಧ ಗುಡುಗಿದ ಮಹೇಶ ಟೆಂಗಿನಕಾಯಿ
ಹುಬ್ಬಳ್ಳಿ: ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯು ಒಗ್ಗಟ್ಟಿನ ನಿರ್ಧಾರವಾಗಿರುತ್ತದೆ. ವ್ಯಕ್ತಿಗತವಾಗಿ ಎಂದಿಗೂ ತಿರ್ಮಾನ ಆಗುವುದಿಲ್ಲ ಎಂದು ಹು- ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಹೇಳಿದರು. ಇಲ್ಲಿಯ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ನೀಡುವುದನ್ನು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಒಬ್ಬರೇ ನಿರ್ಣಯ ಮಾಡಿಲ್ಲ. ಬಿಜೆಪಿಯ ಸಂಸದೀಯ ಮಂಡಳಿ ನಿರ್ಣಯ ಮಾಡಿದೆ ಎಂದರು. ನನಗೆ ಜಗದೀಶ್ ಶೆಟ್ಟರ್ …
Read More »ಪ್ರಚಾರಕ್ಕೆ ತೆರಳಿದ್ದ ವಿ.ಸೋಮಣ್ಣ, ಪ್ರತಾಪ ಸಿಂಹಗೆ ತೀವ್ರ ತರಾಟೆ
ಮೈಸೂರು; ಪ್ರಚಾರಕ್ಕೆ ತೆರಳಿದ್ದ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ ಸಿಂಹಗೆ ಜನರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ವರುಣಾ ಕ್ಷೇತ್ರದಲ್ಲಿ ನಡೆದಿದೆ. ವಿ.ಸೋಮಣ್ಣ ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದು, ಇಂದು ವರುಣಾ ಕ್ಷೇತ್ರ ವ್ಯಾಪ್ತಿಯ ಲಲಿತಾದ್ರಿಪುರಂನಲ್ಲಿ ಮತಯಾಚನೆಗೆ ತೆರಳಿದ್ದರು. ಈ ವೇಳೆ ಲಲಿತಾದ್ರಿಪುರಂ ಗ್ರಾಮಸ್ಥರು, ನೀವು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಸೋಮಣ್ಣ ಹಾಗೂ ಪ್ರತಾಪ ಸಿಂಹ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. …
Read More »ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ, ಬಿಜೆಪಿಗೆ ಆಘಾತ
ಬೆಂಗಳೂರು, ಏಪ್ರಿಲ್ 18; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ. ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಚುನಾವಣಾ ಕಾವು ಏರುತ್ತಿದ್ದಂತೆಯೇ ಹೊರ ಬಂದಿರುವ ಸಮೀಕ್ಷೆಯೊಂದು ಆಡಳಿತ ಪಕ್ಷ ಬಿಜೆಪಿಗೆ ದೊಡ್ಡ ಆಘಾತ ತಂದಿದೆ. ಕಾಂಗ್ರೆಸ್ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. LokPoll ಮಾರ್ಚ್ ತಿಂಗಳಿನಲ್ಲಿ ರಾಜ್ಯದಲ್ಲಿ ನಡೆಸಿದ …
Read More »ಶೆಟ್ಟರ್ ಸೇರ್ಪಡೆಯಿಂದ ‘ಕೈ’ಗೆ ಬಲ: ಖರ್ಗೆ
ಬೆಂಗಳೂರು: ‘ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವಂತೆ ರಾಹುಲ್ ಗಾಂಧಿ ಹೇಳಿದ್ದಾರೆ. ಜಗದೀಶ ಶೆಟ್ಟರ್ ಅವರ ಸೇರ್ಪಡೆಯಿಂದ ಆ ಸಾಧನೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ತಮ್ಮ ಕ್ಷೇತ್ರ ಮಾತ್ರವಲ್ಲ, ರಾಜ್ಯದ ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ಖರ್ಗೆ, ‘ಜನಸಂಘದ ಹಿನ್ನೆಲೆ ಇದ್ದರೂ ವಿವಾದವಿಲ್ಲದೇ ಶೆಟ್ಟರ್ ಕೆಲಸ …
Read More »ಬಿಜೆಪಿಯ ಕೆಲ ನಾಯಕರಿಂದ ನಾನು ನೋವನುಭವಿಸಿದ್ದೇನೆ ನನಗೆ ಟಿಕೆಟ್ ಕೈತಪ್ಪಲು ಕೆಲ ನಾಯಕರು ಕಾರಣ::ಶೆಟ್ಟರ್
ಹುಬ್ಬಳ್ಳಿ: ಬಿಜೆಪಿಯಲ್ಲಿ ನನಗೆ ಅವಕಾಶ ಸಿಕ್ಕಾಗ ಒಳ್ಲೆಯ ಕೆಲಸ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಬಿಜೆಪಿಯ ಕೆಲ ನಾಯಕರಿಂದ ನಾನು ನೋವನುಭವಿಸಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗುವವರೆಗೆ ಸುಮ್ಮನಿದ್ದೆ. ನನಗೆ ಟಿಕೆಟ್ ಕೈತಪ್ಪಲು ಕೆಲ ನಾಯಕರು ಕಾರಣ. ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಪಕ್ಷದಿಂದ ಹೊರ ಬರುವಂತೆ ಮಾಡಿದರು. ಅವರು ಯಾರು …
Read More »ಅಥಣಿಯಲ್ಲಿ ಯುವಕನ ಬರ್ಬರವಾಗಿ ಹತ್ಯ
ಅಥಣಿ: ಅಥಣಿಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯ ಮಾಡಲಾಗಿದೆ. ಕೊಕಟನೂರು ರಸ್ತೆಯ ಶಾಂತಿನಾಥ ಬಡಾವಣೆಯಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಮಾಡಲಾಗಿದೆ. ನಂದಗಾಂವ್ ನಿವಾಸಿಯಾಗಿದ್ದ ಜ್ಯೋತಿಬಾ ಗಾಯಕವಾಡ (35) ಕೊಲೆಯಾದಾತ. ಅಥಮಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.
Read More »