Breaking News

Daily Archives: ಏಪ್ರಿಲ್ 2, 2023

SSLC ಪರೀಕ್ಷೆಗೆ910 ವಿದ್ಯಾರ್ಥಿಗಳು ಗೈರು

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಗಮವಾಗಿ ನಡೆಯಿತು. 271 ಕೇಂದ್ರಗಳಲ್ಲಿ ನಡೆದ ಪ್ರಥಮ ಭಾಷೆ ಪರೀಕ್ಷೆಗೆ 910 ವಿದ್ಯಾರ್ಥಿಗಳು ಗೈರು ಹಾಜರಾದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 32,346 ವಿದ್ಯಾರ್ಥಿಗಳ ಪೈಕಿ 31,810 ವಿದ್ಯಾರ್ಥಿಗಳು ಹಾಜರಾದರು. 536 ಮಂದಿ ಗೈರು ಹಾಜರಾದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 43,525 ವಿದ್ಯಾರ್ಥಿಗಳ ಪೈಕಿ 43,151 ವಿದ್ಯಾರ್ಥಿಗಳು ಹಾಜರಾದರು. 374 ವಿದ್ಯಾರ್ಥಿಗಳು ಗೈರು ಹಾಜರಾದರು. …

Read More »

ಶಿವಸೇನೆ ಸಂಸದ ಸಂಜಯ್ ರಾವತ್ ಗೆ ಜೀವ ಬೆದರಿಕೆ

ಉದ್ದವ್ ಠಾಕ್ರೆ ಬಣದ ಶಿವಸೇನೆ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರಿಗೆ ಜೀವ ಬೆದರಿಕೆ ಬಂದಿದೆ. ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಎಸ್‌ಎಂಎಸ್ ಮೂಲಕ ಈ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸ್ ತನಿಖೆ ವೇಳೆ ಪುಣೆಯಿಂದ ಈ ಸಂದೇಶ ಕಳುಹಿಸಿರುವುದು ಗೊತ್ತಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Read More »

ಪುನೀತ್ ಕೆರೆಹಳ್ಳಿ ವಿರುದ್ಧ ಕೊಲೆ ಆರೋಪ

ರಾಮನಗರ: ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು (Puneeth Kerehalli, Hindu Activist) ಸಾತನೂರು ಪೊಲೀಸರು (Satanuru Police) ಬಂಧಿಸಿರುವ ಮಾಹಿತಿ  ಲಭ್ಯವಾಗಿದೆ. ಸಾತನೂರು ಸಮೀಪ ಜಾನುವಾರುಗಳನ್ನು ರಕ್ಷಣೆ ಮಾಡುವ ವೇಳೆ ಇರ್ದಿಷ್ ಪಾಷಾ ಎಂಬಾತ ಸಾವನ್ನಪ್ಪಿದ್ದನು. ಇರ್ಗಿಷ್ ಮೇಲೆ ಹಲ್ಲೆಗೈದು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂಧ ಇರ್ದಿಷ್ ಕುಟುಂಬಸ್ಥರು ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ …

Read More »

ಸುಮಾರು 10 ತಿಂಗಳ ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಶನಿವಾರ ಜೈಲಿಂದ ಹೊರ ಬಂದ ನವಜೋತ್ ಸಿಂಗ್ ಸಿಧು

ಪಟಿಯಾಲಾ: ಸುಮಾರು 10 ತಿಂಗಳ ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಶನಿವಾರ ಬಿಡುಗಡೆಯಾದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಅನರ್ಹಗೊಂಡ ಸಂಸತ್ ಸದಸ್ಯ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಬಿಡುಗಡೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಾಂಧಿಗೆ ಸಂಬಂಧಿಸಿದ ಬೆಳವಣಿಗೆಗಳಿಗಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿಯನ್ನು ಲೆಕ್ಕಿಸದೆ ಪಕ್ಷ ಮತ್ತು ನಾಯಕರನ್ನು ಯಾವಾಗಲೂ ಬೆಂಬಲಿಸುವುದಾಗಿ ಹೇಳಿದ್ದಾರೆ. ರಾಹುಲ್ ಅವರನ್ನು ಕ್ರಾಂತಿಕಾರಿ ನಾಯಕ ಎಂದು ಕರೆದಿರುವ ಸಿಧು, ನಾನು …

Read More »

ಮೂಡಲಗಿ ಬಳಿ ಕಾರು ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಅಪಘಾತಕ್ಕೆ ನವದಂಪತಿ ಬಲಿ

ಮೂಡಲಗಿ :  ಬೆಳಗಾವಿ ಜಿಲ್ಲೆಯ  ಮೂಡಲಗಿ ಬಳಿ ಕಾರು ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ನವದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ತಾಲೂಕಿನ ಹಳ್ಳೂರ ಗ್ರಾಮದ ಬಳಿ ಕಾರು ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದ್ದು, ವಿವಾಹವಾಗಿ 10 ನೇ ದಿನಕ್ಕೆ ನವ ದಂಪತಿ ಮೃತರಾಗಿದ್ದಾರೆ. ಮಹಾರಾಷ್ಟ್ರ ಮೂಲದ ಇಂದ್ರಜೀತ್ ಮೋಹನ ಡಮ್ಮಣಗಿ (27) ಹಾಗೂ ಕಲ್ಯಾಣಿ ಮೋಹನ ಡಮ್ಮಣಗಿ (24) ಮೃತರು. ನವ ದಂಪತಿ ಶನಿವಾರ ಕಾರಿನಲ್ಲಿ ಬಾದಾಮಿಯ ಬನಶಂಕರಿ ದೇವಿ ದರ್ಶನ ಪಡೆದು ಮರಳಿ …

Read More »

26 ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಕ್ಯಾಸಿನೋಗೆ ತೆರಳಲು ಹೊರಟಿದ್ದ ಗಂಡ, ಬೆಳಗಾವಿಯಲ್ಲೇ ಲಾಕ್!

ಬೆಳಗಾವಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಎಲ್ಲಾ ಜಿಲ್ಲೆಗಳ ಪ್ರಮುಖ ಮಾರ್ಗಗಳಲ್ಲಿ ಚೆಕ್​ ಪೋಸ್ಟ್​ ನಿರ್ಮಿಸಿ ಚುನಾವಣಾ ಭ್ರಷ್ಟಾಚಾರಕ್ಕೆ ಬ್ರೇಕ್​ ಹಾಕಲು ಮುಂದಾಗಿದ್ದಾರೆ. ಈ ನಡುವೆ ಬೆಳಗಾವಿಯ ಕರ್ನಾಟಕ ಚೌಕ್ ಬಳಿಯ ಚೆಕ್ ಪೋಸ್ಟ್ ಬಳಿ ವ್ಯಕ್ತಿಯೋರ್ವ ಯಾವುದೇ ದಾಖಲೆ ಇಲ್ಲದೆ 26 ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ ಕೂಡಲೇ ಪೊಲೀಸರು ಹಣ ಸೀಜ್​ ಮಾಡಿದ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು …

Read More »

ಸಿಎಂ ವಿರುದ್ಧ ಕಾಂಗ್ರೆಸ್​ನಿಂದ ಅಚ್ಚರಿಯ ಅಭ್ಯರ್ಥಿ?

ಹಾವೇರಿ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರವನ್ನು ಈ ಬಾರಿ ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆಯಬೇಕು ಎಂದು ನಾನಾ ತಂತ್ರಗಳನ್ನು ಹೂಡುತ್ತಿರುವ ಕಾಂಗ್ರೆಸ್ ಈ ಬಾರಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.   ಪಂಚಮಸಾಲಿ ಹಾಗೂ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲಿ ನಾಲ್ಕು ಬಾರಿ ಮುಸ್ಲಿಂ ಅಭ್ಯರ್ಥಿಯಾಗಿ ಮಾಜಿ ಶಾಸಕ ಅಜೀಮಪಿರ ಖಾದ್ರಿ ಸ್ಪರ್ಧಿಸಿ ಸೋತಿದ್ದಾರೆ. ‘ವಿನಯ ಕುಲಕರ್ಣಿ ಅಥವಾ …

Read More »