ಹಾಸನ : ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿ ಕೋಡಿಮಠದ ಶ್ರೀಗಳನ್ನು ಭೇಟಿಯಾಗಿದ್ದಾರೆ. ರಾಜಕೀಯ ಭವಿಷ್ಯ ನುಡಿಯುವ ಶಿವಾನಂದ ಶಿವಯೋಗಿ ಶ್ರೀಗಳನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸ್ವಾಮೀಜಿ ಬಳಿ ಸಿದ್ದರಾಮಯ್ಯ ಏನಾದರೂ ರಾಜಕೀಯ ಭವಿಷ್ಯ ಕೇಳಿದ್ರಾ..? ಎಂಬ ಪ್ರಶ್ನೆ ಮೂಡಿದೆ.ಸುಮಾರು 1 ಗಂಟೆಗಳ ಕಾಲ ಕೋಡಿಮಠದ ಶ್ರೀ ಗಳ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿದರು. ಶ್ರೀಗಳು ಕೂಡ ಸಿದ್ದರಾಮಯ್ಯಗೆ …
Read More »Monthly Archives: ಮಾರ್ಚ್ 2023
26ರಂದು ದೇವೇಗೌಡ ರೋಡ್ ಶೋ: H,D,K,
ಬೆಂಗಳೂರು: ಜೆಡಿಎಸ್ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯ ಸಮಾರೋಪ ಮಾರ್ಚ್ 26ರಂದು ನಡೆಯಲಿದ್ದು, ಆ ದಿನ ಕುಂಬಳಗೋಡಿನಿಂದ ಆರಂಭವಾಗುವ ರೋಡ್‌ಶೋದಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಭಾಗವಹಿಸಲಿದ್ದಾರೆ. ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ಅವರು ನಗರದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕ್ಷೇತ್ರದ ನಿವಾಸಿಗಳ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಈ ವಿಷಯ ತಿಳಿಸಿದರು. ‘ಮಂಡ್ಯ ಮತ್ತು ಮೈಸೂರು ನಡುವಿನ ಸ್ಥಳವೊಂದರಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ. ಸಮಾರೋಪದ …
Read More »ಚುನಾವಣಾ ಆಯೋಗವು ಅಧಿಕಾರದಲ್ಲಿರುವ ‘ಗುಲಾಮ’; ಉದ್ಧವ್ ಠಾಕ್ರೆ ಟೀಕೆ
ಮುಂಬೈ: ಪಕ್ಷದ ಚಿಹ್ನೆ ಮತ್ತು ಹೆಸರನ್ನು ಕಳೆದುಕೊಂಡು ಕೆರಳಿರುವ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಚುನಾವಣಾ ಆಯೋಗವನ್ನು ಅಧಿಕಾರದಲ್ಲಿರುವವರ ‘ಗುಲಾಮ’ ಎಂದು ಕರೆದಿದ್ದಾರೆ. “ನೀವು (ಚುನಾವಣಾ ಆಯೋಗ) ನಮ್ಮಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕಿತ್ತುಕೊಂಡಿದ್ದೀರಿ, ಆದರೆ ನೀವು ನನ್ನಿಂದ ಶಿವಸೇನೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ರತ್ನಗಿರಿ ಜಿಲ್ಲೆಯ ಖೇಡ್‌ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಉದ್ಧವ್ ಹೇಳಿದರು. ಭಾರತೀಯ ಜನತಾ ಪಕ್ಷವು …
Read More »ಪ್ರಧಾನಿ ಮೋದಿ ವಿದ್ಯಾರ್ಥಿಗಳು ಮತ್ತು ಬಡವರ ಶಾಪ ಎದುರಿಸಲಿದ್ದಾರೆ: ಅರವಿಂದ ಕೇಜ್ರಿವಾಲ್
ಹೊಸದಿಲ್ಲಿ: ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನವನ್ನು ವಿರೋಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಸೋಡಿಯಾ ಅವರನ್ನು ‘ಸಂತ ಮತ್ತು ಮಹಾನ್ ಚೇತನ’ ಎಂದು ಬಣ್ಣಿಸಿರುವ ಕೇಜ್ರಿವಾಲ್, ಜೈಲಿಗೆ ಹಾಕಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು ಮತ್ತು ಬಡವರ ಶಾಪವನ್ನು ಎದುರಿಸಲಿದ್ದಾರೆ ಎಂದು ಹೇಳಿದ್ದಾರೆ. ಭಾನುವಾರ ಛತ್ತೀಸ್ ಗಢದ ರಾಜಧಾನಿ ರಾಯ್ಪುರದ ಹೊರವಲಯದಲ್ಲಿರುವ ಜೋರಾ ಮೈದಾನದಲ್ಲಿ ಆಪ್ ಕಾರ್ಯಕರ್ತರ …
Read More »ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ನಿಂದ ಬಂದ್ ಕರೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಭ್ರಷ್ಟಾಚಾರದ ಕೂಪ ಕಾಂಗ್ರೆಸ್, ಅವರು ಮಾಡಿರುವ ಕರ್ಮಕಾಂಡ ಒಂದಾ ಎರಡೇ. ಕಾಂಗ್ರೆಸ್ ಪಕ್ಷವೇ ಬಂದಾಗುತ್ತಿದೆ. ಇಂತಹ ಪ್ರತಿಭಟನೆ ಮೂಲಕ ಮುಂದಿನ ಚುನಾವಣೆ ನಡೆಸಬೇಕು ಎಂದುಕೊಂಡಿದ್ದಾರೆ. ಜನರು ಬಹಳ ಬುದ್ಧಿವಂತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ವಿರುಪಾಕ್ಷಪ್ಪ ಮಾಡಾಳ ಅವರ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಅಸ್ತಿತ್ವಕ್ಕಾಗಿ ಬಂದ್ ಗೆ ಕರೆ ಕೊಟ್ಟಿದ್ದಾರೆ. ಆರೋಪ ಮಾಡುವವರು ಮೊದಲು ಶುದ್ಧ …
Read More »ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ಮಾಡಾಳು ವಿರೂಪಾಕ್ಷಪ್ಪ
ಬೆಂಗಳೂರು: ಲಂಚ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ಯಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾಡಾಳು ವಿರೂಪಾಕ್ಷಪ್ಪ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ವಕೀಲರು ಮನವಿ ಮಾಡಿದರು. ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠವು ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ. ರಾಜ್ಯ ಬಂದ್ ಗೆ ಕಾಂಗ್ರೆಸ್ ಕರೆ ಇತ್ತ ವಿರೂಪಾಕ್ಷಪ್ಪ ಅವರ ಬಂಧನ ಮತ್ತು …
Read More »ನಾನೇ ಲೋಕಾಯುಕ್ತ ಬಂದ್ ಮಾಡಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ: ಸಿದ್ದರಾಮಯ್ಯ
ಮೈಸೂರು: ನಾನು ಲೋಕಾಯುಕ್ತ ಬಂದ್ ಮಾಡಿಲ್ಲ. ನಾನು ಲೋಕಾಯುಕ್ತ ಬಂದ್ ಮಾಡಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಲೋಕಾಯುಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇದ್ದರು. ಎಲ್ಲಾ ಸತ್ಯ ಗೊತ್ತಿದ್ದರು ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಎಸಿಬಿ ರದ್ದು ಮಾಡಿದ್ದು ಬಿಜೆಪಿ ಸರ್ಕಾರವಲ್ಲ. ನ್ಯಾಯಾಲಯ ಎಸಿಬಿ ರದ್ದು ಮಾಡಿದ್ದು. ಬಿಜೆಪಿಯವರಿಗೆ …
Read More »ಅಸಮರ್ಥರ ವಜಾಗೊಳಿಸಲು ಪೊಲೀಸ್ ಇಲಾಖೆ ದಿಟ್ಟ ನಿರ್ಧಾರ
ಸೇವೆಗೆ ಸೇರಿ 10, 15, 20 ವರ್ಷವಾದರೂ ಪ್ರೊಬೇಷನರಿ ಅವಧಿ ಇತ್ಯರ್ಥಪಡಿಸದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಲಿಪಿಕ ಸಿಬ್ಬಂದಿಯನ್ನು (ಕ್ಲರಿಕಲ್ ಸ್ಟಾಫ್) ಸೇವೆಯಿಂದಲೇ ಬಿಡುಗಡೆಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಗರಿಷ್ಠ ಕಾಲಮಿತಿಯ ನಂತರವೂ ದೀರ್ಘ ಕಾಲದವರೆಗೆ ಇಲಾಖಾ ಪರೀಕ್ಷೆಗಳನ್ನು ಪಾಸ್ ಮಾಡದ, ತರಬೇತಿ ಪೂರೈಸಲು ಅಸಮರ್ಥ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಕರ್ನಾಟಕ ಸಿವಿಲ್ ಸೇವೆಗಳ (ಪ್ರೊಬೇಷನ್) ನಿಯಮಗಳು 1977ರ ಅನ್ವಯ ಪ್ರೊಬೇಷನರಿ …
Read More »ಮೇ 28 ರಂದು ಕಾಮೆಡ್-ಕೆ ಪರೀಕ್ಷೆ
ಮಂಗಳೂರು: ರಾಜ್ಯದ 150 ಎಂಜಿನಿಯರಿಂಗ್ ಕಾಲೇಜು ಮತ್ತು 50ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶಕ್ಕಾಗಿ ಸಂಯೋಜಿತ ಪರೀಕ್ಷೆಯಾಗಿ ಮೇ 28ರಂದು ಕಾಮೆಡ್-ಕೆ ಯುಗೇಟ್ ಮತ್ತು ಯುನಿ ಗೇಜ್ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಪ್ರವೇಶ ಪರೀಕ್ಷೆಯನ್ನು ಕರ್ನಾ ಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘದೊಂದಿಗೆ ಸಂಯೋಜಿತವಾ ಗಿರುವ ಕಾಲೇಜುಗಳು ಮತ್ತು ಬಿಇ/ ಬಿಟೆಕ್ ತರಗತಿ ಒದಗಿಸುವ ಯುನಿ-ಗೇಜ್ ಸದಸ್ಯ ವಿ.ವಿ.ಗಳಿಗೆ ನಡೆಸಲಾಗುತ್ತದೆ. ದೇಶಾದ್ಯಂತ 150ಕ್ಕೂ ಹೆಚ್ಚು ನಗರಗಳಲ್ಲಿ 400 …
Read More »ರತಿ-ಮನ್ಮಥರನ್ನು ನಗಿಸಿದವರಿಗೆ 4.04 ಲಕ್ಷ ರೂ. ಬಹುಮಾನ!
ರಾಣೆಬೆನ್ನೂರು: ಕಳೆದ 64 ವರ್ಷಗಳಿಂದ ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸುತ್ತಾ ಬಂದಿರುವ ಜೀವಂತ ರತಿ-ಮನ್ಮಥ ಪ್ರತಿಷ್ಠಾಪನೆ ಕಾರ್ಯಕ್ರಮ ಈ ಬಾರಿ ಮಾ.7ರಂದು ರಾತ್ರಿ 8 ಗಂಟೆಗೆ ಜರಗಲಿದೆ. ರಾಮಲಿಂಗೇಶ್ವರ ದೇವಸ್ಥಾನದದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟಕರು, ರತಿ ಪಾತ್ರಧಾರಿಯಾಗಿ ಕುಮಾರ ಹಡಪದ ಹಾಗೂ ಗದಿಗೆಪ್ಪ ದೊಡ್ಡನವರ ಮನ್ಮಥನ ಪಾತ್ರ ಮಾಡುತ್ತಾ ಬಂದಿದ್ದು, ಈ ಬಾರಿಯೂ ಇವರೇ ಇರಲಿದ್ದಾರೆ. ರತಿ-ಮನ್ಮಥರನ್ನು ನಗಿಸಿದವರಿಗೆ 4.04 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ
Read More »