Breaking News

Monthly Archives: ಮಾರ್ಚ್ 2023

ಮಕ್ಕಳೋಂದಿಗೆ ಬಿಸಿಯೂಟ ಸವಿದು ಸರಳತೆ ಮೆರೆದ ಅಥಣಿ ಶಾಸಕ

ಶಾಸಕರೆಂದರೆ ಸಾಮಾನ್ಯವಾಗಿ ನಾವು ತಮ್ಮದೇಯಾದ ದವಲತ್ತು ಹಾಗೂ ವರ್ಚಸ್ಸು ಇರುವವರನ್ನು ನಾವೇಲ್ಲ ನೋಡಿದ್ದೇವೆ ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಅವರು ಶಾಲೆಯಲ್ಲಿ ಚಿಕ್ಕ ಮಕ್ಕಳೋಂದಿಗೆ ಬಿಸಿಯೂಟ ಸವಿದೂರ ಮೂಲಕ ಸರಳತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹೌದು ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರು ತಾಲೂಕಿನ ತಂಗಡಿ ಗ್ರಾಮದಲ್ಲಿರುವ ಕನ್ನಡ ಶಾಲೆಯಲ್ಲಿ 24 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ ನೀಡಲು …

Read More »

ಬಳ್ಳಾರಿಯಲ್ಲಿ ರಾಮುಲು ಸ್ಪರ್ಧೆಯಿಂದ ನನಗೆ ಆನೆ ಬಲ

ದಾವಣಗೆರೆ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದಾಗಿ ಹೇಳಿರುವುದರಿಂದ ನನಗೆ ಆನೆ ಬಲ ಬಂದಿದೆ. ನನ್ನ ಕ್ಷೇತ್ರದ ಪಕ್ಕದಲ್ಲೇ ಶ್ರೀರಾಮುಲು ಇರುವುದರಿಂದ ಅನುಕೂಲ ಆಗಲಿದೆ ಎಂದು ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಡೂರಿನಲ್ಲಿ ಸ್ಪರ್ಧಿಸುವುದಾಗಿ ಶ್ರೀರಾಮುಲು ಹೇಳಿರಲಿಲ್ಲ. ಪಕ್ಷವನ್ನು ಇನ್ನಷ್ಟು ಬಲಪಡಿಸಲು ಅಮಿತ್‌ ಶಾ ಕಾರ್ಯಕ್ರಮ ಸಂಡೂರಿನಲ್ಲಿ ಆಯೋಜಿಸಲಾಗಿತ್ತು. ಜನಾರ್ದನ ರೆಡ್ಡಿ ಪಕ್ಷಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ನಮ್ಮದು …

Read More »

ಜಗ್ಗೇಶ್ ‘ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಡೇಟ್ ಫಿಕ್ಸ್

ನವರಸ ನಾಯಕ ಜಗ್ಗೇಶ್ ನಟನೆಯ ಮುಂದಿನ ಬಹುನಿರೀಕ್ಷಿತ ‘ರಾಘವೇಂದ್ರ ಸ್ಟೋರ್ಸ್’ ಚಿತ್ರವು ಕೊನೆಗೂ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಜಗ್ಗೇಶ್ ಹುಟ್ಟುಹಬ್ಬದ ದಿನವಾದ ಇಂದು (ಮಾರ್ಚ್ 17) ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡಿದೆ.   “ನಮ್ಮ ರಾಘವೇಂದ್ರ ಸ್ಟೋರ್ಸ್‌ನ ಖ್ಯಾತ ಬಾಣಸಿಗರಾದ ಜಗ್ಗೇಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28, 2023ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಉಣಬಡಿಸಲಿದ್ದೇವೆ. …

Read More »

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಫೈನಲ್ ಆಗಿದ್ದು, ಇಂದು ಸಂಜೆ ವೇಳೆಗೆ ಬಿಡುಗಡೆ

ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಫೈನಲ್ ಆಗಿದ್ದು, ಇಂದು ಸಂಜೆ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ ವರಿಷ್ಠರ ನೇತೃತ್ವದಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದ್ದು, ಕೈ ಅಭ್ಯರ್ಥಿಗಳ ಹೆಸರು ಮತ್ತೊಮ್ಮೆ ಫೈನಲ್ ಆಗಲಿದೆ. ಸಭೆ ಬಳಿಕ ಸಂಜೆಯೇ ಅಭ್ಯರ್ಥಿಗಳ ಹೆಸರು ಘೋಷಣೆಯಾದರೂ ಅಚ್ಚರಿ ಇಲ್ಲ. ಕಾಂಗ್ರೆಸ್ …

Read More »

ಶಿಗ್ಗಾವಿಯಿಂದ ಸ್ಪರ್ಧಿಸಲಿದ್ದಾರಾ ವಿನಯ್ ಕುಲ್ಕರ್ಣಿ?

ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಎಂ ಬಸವರಾಜ್ ಬೊಮ್ಮಾಯಿ ಕ್ಷೇತ್ರ ಶಿಗ್ಗಾವಿಯಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಧಾರವಾಡ ಜಿಲ್ಲಾಪಂಚಾಯಿತಿ ಸದಸ್ಯ ಯೇಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ವಿನಯ್ ಕುಲ್ಕರ್ಣಿ, ಈ ಬಾರಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಶಿಗ್ಗಾವಿಯಿಂದ ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ …

Read More »

ಹೆರಿಗೆ ಮಾಡಿಸಲು ಹಣ ಕೇಳಿದ್ದ ಪ್ರಕರಣ ಡಾ.ಪಲ್ಲವಿ ಪೂಜಾರಿ ಅಮಾನತು

ಹೆರಿಗೆ ಮಾಡಿಸಲು ಹಣ ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಪಲ್ಲವಿ ಪೂಜಾರಿ ಅವರನ್ನು ಅಮಾನತುಗೊಳಿಸಿ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್.ಆದೇಶ ಹೊರಡಿಸಿದ್ದಾರೆ. ಹೆರಿಗೆಗಾಗಿ ಸಂಗೀತಾ ಎಂಬ ಗರ್ಭಿಣಿ ಆಸ್ಪತ್ರೆಗೆ ಬಂದಿದ್ದರು. ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲು ಡಾ.ಪಲ್ಲವಿ 10 ಸಾವಿರ ಹಣ ಕೇಳಿದ್ದಾರೆ. ಅಷ್ಟೊಂದು ಹಣ ತಮ್ಮ ಬಳಿ ಇಲ್ಲ ಎಂದು ಸಂಗೀತಾ ಹೇಳಿದ್ದಾರೆ. ಹಣ ತರದೆ ಹೆರಿಗೆ ಮಾಡಿಸಲು ನಿರಾಕರಿಸಿದ್ದಾರೆ. ಸಂಗೀತಾ ಹಲವೆಡೆ …

Read More »

ಪರಿಹಾರಕ್ಕಾಗಿ ಟವರ್ ಏರಿದ ರೈತರು

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಗಿ ಗ್ರಾಮದ ಆರು ಜನ ರೈತರು ಮಳೆಯಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಮೊಬೈಲ್‌ ಟವರ್‌ ಏರಿ ಕುಳಿತುಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಮಲ್ಲಪ್ಪ ಬಿರಾದಾರ, ಸಿದ್ದು ಶಿಂಧೆ, ಯಲ್ಲಪ್ಪ ಬೆಳ್ಳುಬ್ಬಿ, ಮುನಿಕ ಗುರಚಿ, ಜ್ಞಾನದೇವ ಮಳಿಕ ಹಾಗೂ ಚಿರಾವ ಮೊಹಿತೆ ಟವರ್ ಏರಿದವರು. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ದ್ರಾಕ್ಷಿ ಬೆಳೆ ಹಾಳಾಗಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. …

Read More »

ವಿಜಯಪುರ: ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಕಾರು ಅಪಘಾತ

ವಿಜಯಪುರ : ಜಿಲ್ಲೆಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದರೂ ಸುದೈವಶಾತ್ ಯಾವುದೇ ಅಪಾಯವಾಗಿಲ್ಲ. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಗುರುವಾರ ಪಕ್ಷದ ಸಂಘಟನೆಗಾಗಿ ಜಿಲ್ಲೆಯ ಪ್ರವಾಸದಲ್ಲಿದ್ದರು.   ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಗುರುವಾರ ಪಕ್ಷದ …

Read More »

ಲಿಂಗಾಯತ ಮತ ಬೇಕಿಲ್ಲ; ಸುಳ್ಳಿನ ಫ್ಯಾಕ್ಟರಿಯಿಂದ ಸುಳ್ಳಿನ ಸುದ್ದಿ:ಸಿ.ಟಿ.ರವಿ

ಚಿಕ್ಕಮಗಳೂರು : ಲಿಂಗಾಯತ ಸಮುದಾಯಕ್ಕೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂಬ ಹೇಳಿಕೆ ಕುರಿತು ವ್ಯಾಪಕ ಚರ್ಚೆಯಾಗುತ್ತಿರುವ ವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದು, ”ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಸುಳ್ಳಿನ ಸುದ್ದಿ ಹಬ್ಬಿಸಿದ್ದಾರೆ” ಎಂದಿದ್ದಾರೆ.   ”ಕನಸಿನಲ್ಲೂ ಕೂಡ ಜಾತಿ ರಾಜಕಾರಣ ಮಾಡಿದವನಲ್ಲ ಜಾತಿಯ ಬಗ್ಗೆ ಯೋಚನೆಯನ್ನು ಮಾಡಲ್ಲ,ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಲಿಂಗಾಯತ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸವನ್ನ ಮಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ …

Read More »

ಸಿಡಿಲಿಗೆ ರೈತ, ಹೋರಿ ಬಲಿ: ಓರ್ವನಿಗೆ ಗಾಯ, ದ್ರಾಕ್ಷಿ ಬೆಳೆ ಹಾನಿ

ವಿಜಯಪುರ: ಬೇಸಿಗೆ ಮಳೆಯ ಬಿರುಗಾಳಿ, ಸಿಡಿಲಿಗೆ ಜಿಲ್ಲೆಯಲ್ಲಿ ಓರ್ವ ರೈತ ಹಾಗೂ ಒಂದು ಜಾನುವಾರು ಬಲಿಯಾಗಿದ್ದು, ಮತ್ತೋರ್ವ ರೈತ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಬಿರುಗಾಳಿ, ಗುಡು, ಸಿಡಿಲಿನ ಅಬ್ಬರ ಜೋರಾಗಿದೆ. ಪರಿಣಾಮ ಗೋದಿ ರಾಶಿಯನ್ನು ಮಳೆಯಿಂದ ರಕ್ಷಿಸಲು ತಾಡಪತ್ರಿ ಹೊದಿಸುವಾಗ ಬಬಲೇಶ್ವರ ತಾಲೂಕಿನ ಸಂಗಾಪೂರ ಎಸ್.ಎಚ್. ಗ್ರಾಮದ ಯುವ ರೈತ ಬಸವರಾಜ ಹಣಮಂತ ಹಮಾರಿ ಹಾಗೂ ಸಂಗಪ್ಪ ಹಣಮಂತ ಹಮಾರಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ …

Read More »