ನವದೆಹಲಿ: ಆಧಾರ್ ಗೆ ಪ್ಯಾನ್ ಸಂಖ್ಯೆ ಲಿಂಕ್ ಮಾದುವ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಶಾಶ್ವತ ಖಾತೆ ಸಂಖ್ಯೆ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಜೂನ್ 30, 2023ರವರೆಗೆ ವಿಸ್ತರಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಒಂದು ವೇಳೆ ಜೂನ್ 30ರೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ಜುಲೈ1, 2023 ರಿಂದ ಲಿಂಕ್ ಮಾಡದ ಎಲ್ಲಾ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳುತ್ತವೆ …
Read More »Daily Archives: ಮಾರ್ಚ್ 28, 2023
ಅಂಬೇಡ್ಕರ್, ಕಿತ್ತೂರು ಚೆನ್ನಮ್ಮ ಹಾಗೂ ರಾಯಣ್ಣ ಪುತ್ಥಳಿ ಅನಾವರಣಗೊಳಿಸಿದ: ಬಸವರಾಜ ಬೊಮ್ಮಾಯಿ ಅವರು
ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದ ಮುಂಭಾಗದ ಆವರಣದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿದರು. ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ, ಸಚಿವರಾದ ಶಶಿಕಲಾ ಜೊಲ್ಲೆ, ಶಂಕರ್ ಪಾಟೀಲ ಮುನೇನಕೊಪ್ಪ, ಮುರುಗೇಶ್ ನಿರಾಣಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ದುರ್ಯೋಧನ ಐಹೊಳೆ, ತಾಂಡ …
Read More »ಬೆಳಗಾವಿ ಜಿಲ್ಲೆಗೆಬಸವರಾಜ ಬೊಮ್ಮಾಯಿ
ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ ಬೆಂಗಳೂರಿನಿಂದ ಕಲಬುರ್ಗಿಗೆ ತೆರಳುವು ಬೊಮ್ಮಾಯಿ ಅಲ್ಲಿ ಪಿಎಂ ಮಿತ್ರ ಪಾರ್ಕ್ ಗೆ ಚಾಲನೆ ನೀಡುವರು. ನಂತರ ಮಧ್ಯಾಹ್ನ 1.30ಕ್ಕೆ ಬೆಳಗಾವಿಗೆ ಆಗಮಿಸಲಿರುವ ಅವರು, ಸುವರ್ಣ ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆಗಳನ್ನು ಅನಾವರಣಗೊಳಿಸಲಿದ್ದಾರೆ. ನಂತರ ಗೋಕಾಕಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ …
Read More »ಲಂಚದ ಹಣಕ್ಕಾಗಿ ಜೋಡೆತ್ತು ತಂದ ರೈತ!
ಬಸವಕಲ್ಯಾಣ: ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಬಿಲ್ ಪಾವತಿಗೆ 5 ಸಾವಿರ ರೂ. ಲಂಚ ಕೇಳಿದ್ದರಿಂದ ನೊಂದ ರೈತನೊಬ್ಬ ತನ್ನ ಜೋಡೆತ್ತುಗಳನ್ನು ತೆಗೆದುಕೊಂಡು ಬಿಲ್ ಮಂಜೂರು ಮಾಡುವಂತೆ ಮನವಿ ಮಾಡಿದ ಘಟನೆ ತಾ.ಪಂ.ನಲ್ಲಿ ನಡೆದಿದೆ. ಬಗದೂರಿ ಗ್ರಾಮದ ಪ್ರಶಾಂತ ಬಿರಾದಾರ್ ತನ್ನ ಜೋಡೆತ್ತುಗಳ ಸಹಿತ ತಾ.ಪಂ.ಗೆ ಆಗಮಿಸಿ, “ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ನನ್ನ ಜಮೀನಿನಲ್ಲಿರುವ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ 1 ಲಕ್ಷ …
Read More »ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಪುಟ್ಬಾಲ್; ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆ
ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸೋಮವಾರ ಪಕ್ಷದ ಚಿಹ್ನೆ ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗ ನೀಡಿರುವ ಪುಟ್ಬಾಲ್ ಚಿಹ್ನೆಯನ್ನು ಅನಾವರಣ ಮಾಡಿದ ಅವರು, “ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು’ ಘೋಷಣೆಯಡಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು ರೈತರು, ಬಡವರ, ಮಧ್ಯಮವರ್ಗದವರಿಗೆ ಹಲವು ಭರವಸೆಗಳನ್ನು ನೀಡಲಾಗಿದೆ. ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರಿಗೆ ವಾರ್ಷಿಕ 15 ಸಾವಿರ ರೂ.. …
Read More »ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಗಡುವನ್ನು ವಿಸ್ತರಿಸಿಲ್ಲ
ನವದೆಹಲಿ: ಪ್ಯಾನ್ ಕಾರ್ಡ್-ಆಧಾರ್ ಕಾರ್ಡನ್ನು ಲಿಂಕ್ ಮಾಡುವ ಪ್ರಕ್ರಿಯೆಯ ಅಂತಿಮ ಗಡುವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಮಾ.31ರೊಳಕ್ಕೆ ಈ ಪ್ರಕ್ರಿಯೆಯನ್ನು ಪೂರೈಸಲೇಬೇಕು ಎಂಬ ಸಂದೇಶವೇ ಇದೆ. ಹಾಗಾಗಿ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಖಚಿತವಾಗಿದೆ. ಪ್ರಸ್ತುತ ಇದನ್ನು ಲಿಂಕ್ ಮಾಡಲು 1000 ರೂ.ಗಳನ್ನು ಪಾವತಿಸಬೇಕು. ಈ ಪ್ರಕ್ರಿಯೆಯಿಂದ 80 ವರ್ಷ ದಾಟಿದವರು, ಅನಿವಾಸಿ ಭಾರತೀಯರು ಸೇರಿ ಇನ್ನೂ …
Read More »