Breaking News

Daily Archives: ಮಾರ್ಚ್ 13, 2023

ಕೊಪ್ಪಳದ ಗವಿಮಠ ದರ್ಶನ ಪಡೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ

ಕೊಪ್ಪಳ: ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಸೋಮವಾರ ಕೊಪ್ಪಳಕ್ಕೆ ಭೇಟಿ ನೀಡಿದರು‌. ಇಲ್ಲಿನ ಪ್ರಸಿದ್ಧ ಗವಿಮಠಕ್ಕೆ ಬಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರೊಂದಿಗೆ ಕೆಲ ಹೊತ್ತು ಚರ್ಚಿಸಿ ಮಠದ ಪರಂಪರೆ, ಇತಿಹಾಸ, ಜಾತ್ರೆಯ ವಿಶೇಷತೆ, ಜಾತ್ರೆಗೆ ಬರುವ ಭಕ್ತರಿಗೆ ಊಟದ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಹೀಗೆ ಹಲವು ಮಾಹಿತಿಗಳನ್ನು ಪಡೆದುಕೊಂಡರು.   ಅಸ್ಸಾಂನಲ್ಲಿರುವ ವಾತಾವರಣ, ಅಲ್ಲಿನ ಜನರ ಬಗ್ಗೆ ಸ್ವಾಮೀಜಿ‌ ಮಾಹಿತಿ ಪಡೆದರು. …

Read More »

ಇತಿಹಾಸ ಬರೆದ ಆರ್ ಆರ್ ಆರ್; ಆಸ್ಕರ್ ಪ್ರಶಸ್ತಿ ಗೆದ್ದ ‘ನಾಟು ನಾಟು’

ಲಾಸ್ ಏಂಜಲೀಸ್: ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಲಭ್ಯವಾಗಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದಾರೆ. ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ …

Read More »

ಗೋವಾ: ದೆಹಲಿ ಪ್ರವಾಸಿಗರ ಮೇಲೆ ಮಾರಕಾಯುಧಗಳಿಂದ ದಾಳಿ

ಪಣಜಿ : ಪ್ರವಾಸಿ ತಾಣ ಗೋವಾಕ್ಕೆ ಭೇಟಿ ನೀಡಿದ್ದ ದೆಹಲಿಯ ಕುಟುಂಬದ ಮೇಲೆ ಅಂಜುನಾ ಪ್ರದೇಶದಲ್ಲಿ ಸ್ಥಳೀಯರು ಕತ್ತಿಗಳು ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಗೋವಾ ಪೊಲೀಸರು ಮೂವರನ್ನು ಬಂಧಿಸಿದ್ದು, ಕೊಲೆ ಯತ್ನ ಆರೋಪ ಹೊರಿಸಿದ್ದಾರೆ. ದಾಳಿಕೋರರ ಬಗ್ಗೆ ಪೊಲೀಸರು ಮೃದು ಧೋರಣೆ ತೋರಿದ್ದಾರೆ ಎಂದು ಸಂತ್ರಸ್ತರಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ವಿರುದ್ಧ ಪ್ರಾಥಮಿಕ ತನಿಖೆಯನ್ನೂ ಆರಂಭಿಸಲಾಗಿದೆ. ದೆಹಲಿ ನಿವಾಸಿ …

Read More »

ಮಾ.16ರಂದು ಶಿವಚರಿತ್ರ’ ಉದ್ಘಾಟನಾ ಸಮಾರಂಭ

ಬೆಳಗಾವಿ: ಇಲ್ಲಿನ ಶಹಾಪುರದ ಛತ್ರಪತಿ ಶಿವಾಜಿ ಉದ್ಯಾನವನ ಬಳಿ ಮಾ.16ರಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಕನಸಿನ ಕೂಸಾದ ‘ಶಿವಚರಿತ್ರ’ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ 5.30ಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಲಿದ್ದಾರೆ. ಇನ್ನೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Read More »

ರೌಡಿಗೆ ಕೈಮುಗಿದ ಪ್ರಧಾನಿಬಿಜೆಪಿ ನಾಯಕರನ್ನು ಅಣಕಿಸಿದಕಾಂಗ್ರೆಸ್

ಬೆಂಗಳೂರು: ಭ್ರಷ್ಟಾಚಾರವನ್ನೆ ಉಸಿರಾಗಿಸಿಕೊಂಡಿರುವ 40% ಸರ್ಕಾರದಲ್ಲಿ ಭ್ರಷ್ಟರಿಗೆ ರಾಜಮರ್ಯಾದೆ! ಕಳ್ಳರ ಬೆಂಬಲ ಕಳ್ಳರಿಗಷ್ಟೆ ಅಲ್ವೇ ಸಿಎಂ ಬೊಮ್ಮಾಯಿ ಅವರೇ ಎಂದು ರಾಜ್ಯ   ಬಿಜೆಪಿ ನಾಯಕರನ್ನು ಅಣಕಿಸಿದೆ. ಪ್ರಧಾನಿಯೇ ರೌಡಿಗೆ ಕೈಮುಗಿಯುವಾಗ ಇವರು ಭ್ರಷ್ಟರಿಗೆ ಬಡ್ತಿ ನೀಡದೆ ಇರುತ್ತಾರ? ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಭ್ರಷ್ಟೋತ್ಸವ ನಡೆಸುತ್ತಿರುವ ಭ್ರಷ್ಟ ಜನತಾ ಪಾರ್ಟಿ! ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ. ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ! ಖಾಲಿ ಕುರ್ಚಿಗಳು ಬಿಜೆಪಿ ನಿರ್ನಾಮದ …

Read More »

ಕಾಂಗ್ರೆಸ್ಸಿಗೆ ಹೇಳಿಕೊಳ್ಳುವ ನೇತೃತ್ವವೇ ಇಲ್ಲ, ಬಾಯಿ ಬಿಟ್ಟರೆ ಬಣ್ಣಗೇಡು: ಸಿ.ಟಿ. ರವಿ

ಕುಷ್ಟಗಿ:ಕಾಂಗ್ರೆಸ್ಸಿಗೆ ಹೇಳಿಕೊಳ್ಳುವ ನೇತೃತ್ವವೇ ಇಲ್ಲ, ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಆಕ್ಸಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವದ ಅವಹೇಳನವನ್ನು ರಾಹುಲ್‌ಗಾಂಧಿ ಮಾಡಿದರು. ಯಾರು ನಮ್ಮ ದೇಶವನ್ನುಇನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದರೋ ಅವರನ್ನು ಮಧ್ಯ ಪ್ರವೇಶ ಮಾಡಿ ಎಂದು ದೇಶದ ಸಾರ್ವಭೌಮಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪರಕೀಯರ …

Read More »

ನಮ್ಮ ಪಕ್ಷಕ್ಕೆ ಬರ್ತಿಯೋ ಇಲ್ಲ ಸಿಡಿ ಬಿಡಲೋ ಎಂದು ಡಿ.ಕೆ.ಶಿ. ಸಚಿವರೊಬ್ಬರನ್ನು ಬೆದರಿಸುತ್ತಿದ್ದಾರೆ:. ರಮೇಶ್ ಜಾರಕಿಹೊಳಿ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಮಂತ್ರಿಯೋರ್ವರಿಗೆ ಡಿ.ಕೆ.ಶಿ ಕಾಂಗ್ರೆಸ್ ಸೇರ್ತಿಯಾ ಇಲ್ಲ ಸಿಡಿ ಬಿಡುಗಡೆ ಮಾಡ್ಲಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಡಿ.ಕೆ.ಶಿವಕುಮಾರ್ ಸಚಿವರೊಬ್ಬರನ್ನು ಬೆದರಿಸುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಬರ್ತಿಯೋ ಇಲ್ಲ ಸಿಡಿ ಬಿಡಲೋ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಸಿಡಿ ರಾಜಕಾರಣ ಪ್ರಸ್ತಾಪಿಸಿದ್ದಾರೆ. ನಾವು ಯುದ್ಧ ಮಾಡುವವರು ಹೊರತು ಷಡ್ಯಂತ್ರ ಮಾಡುವವರಲ್ಲ. …

Read More »

ಸೋಮಣ್ಣ ನಮ್ಮ ಜೊತೆಯೇ ಇರುತ್ತಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ‘ಸಚಿವ ವಿ. ಸೋಮಣ್ಣ ನಮ್ಮ ಜೊತೆನೆ ಇದ್ದಾರೆ. ಮುಂದೆಯೂ ಜೊತೆಗೇ ಇರುತ್ತಾರೆ. ಯಾವುದೇ ಊಹಾಪೋಹ ಬೇಡ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಿ. ಸೋಮಣ್ಣ ಅವರ ಜೊತೆ ನಿನ್ನೆ ಹುಬ್ಬಳ್ಳಿಯಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ನಮ್ಮ ಭೇಟಿ ಕೇವಲ ಔಪಚಾರಿಕ’ ಎಂದರು. ‘ಒಂದಿಷ್ಟು ಯೋಜನೆಗಳ ಕ್ರೆಡಿಟ್ ಪಡೆಯಲು ಕೆಲವರು ಮುಂದಾಗಿದ್ದಾರೆ. ಕ್ರೆಡಿಟ್ ವಾರ್ ಸಹಜ. ಪಕ್ಕದ ಮನೆಯವರು ಗಂಡು ಹಡೆದರೆ, ಇವರು …

Read More »

ಗಾಜಿನ ಪೆಟ್ಟಿಗೆಯೊಳಗಿನ ಪೇಢಾ: ನಗೆ ಚಟಾಕಿ ಹಾರಿಸಿದ ಪ್ರಧಾನಿ ಮೋದಿ

ಧಾರವಾಡ: ‘ಧಾರವಾಡದ ಪೇಢಾ ಒಮ್ಮೆ ಸವಿದರೆ ಮತ್ತೊಮ್ಮೆ ತಿನ್ನಬೇಕೆನಿಸುತ್ತದೆ. ಸಿಹಿ ತಿನ್ನುವ ಆಸೆಗೆ ಮಿತಿ ಹೇರಲು, ನನ್ನ ಆರೋಗ್ಯದ ಕಾಳಜಿ ಮಾಡಲೆಂದೇ ಮಿತ್ರ ಪ್ರಲ್ಹಾದ ಜೋಶಿ, ಗಾಜಿನ ಪೆಟ್ಟಿಗೆಯಲ್ಲಿ ಇಟ್ಟು ಕೊಟ್ಟಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪೇಡೆ ಸ್ವೀಕರಿಸಿ, ನಗೆ ಚಟಾಕಿ ಹಾರಿಸಿದರು.   ಧಾರವಾಡದ ಕರಕುಶಲ ವಸ್ತುಗಳ ಉಡುಗೊರೆಯನ್ನೇ ಪ್ರಧಾನಿಗಳಿಗೆ ನೀಡಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಖಿ ಸಾಫಲ್ಯದ ಕಸೂತಿ ಶಾಲನ್ನು ಹೊದಿಸಿ, ಧಾರವಾಡದ …

Read More »

ಫೈಟರ್ ರವಿಗೆ ಕೈಮುಗಿದು ನಿಂತ ಮೋದಿ: ಪ್ರಧಾನಿ ಹುದ್ದೆಗೆ ಕಳಂಕ ಎಂದ ಕಾಂಗ್ರೆಸ್

ಬೆಂಗಳೂರು: ಮಲ್ಲಿಕಾರ್ಜುನ್‌ (ಫೈಟರ್‌ ರವಿ) ಎಂಬುವವರ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಫೈಟರ್‌ ರವಿ ಅವರನ್ನು ರೌಡಿ ಶೀಟರ್‌ ಎಂದು ಕಾಂಗ್ರೆಸ್‌ ಆರೋಪಿಸಿದೆ.       ಕಾಂಗ್ರೆಸ್‌ ಮಾಡಿರುವ ಟ್ವೀಟ್‌ ಮಂಡ್ಯ ಮತ್ತು ಧಾರವಾಡದ ಕಾರ್ಯಕ್ರಮಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರ್ನಾಟಕಕ್ಕೆ ಆಗಮಿಸಿದ್ದರು. ಮಂಡ್ಯದಲ್ಲಿ ಆಯೋಜಿಸಿದ್ದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆಂದು ಮೈಸೂರಿಗೆ ಬಂದಿಳಿದಿದ್ದ …

Read More »