Breaking News

Daily Archives: ಮಾರ್ಚ್ 6, 2023

ಚಿನ್ನಾಭರಣಗಳ ಮೇಲೆ ಎಚ್‌ಯುಐಡಿ ಹಾಲ್‌ಮಾರ್ಕ್‌ ಕಡ್ಡಾಯ

ಏ.1ರಿಂದ ಆರು ಸಂಖ್ಯೆಯ ಹಾಲ್‌ಮಾರ್ಕ್‌ ಯೂನಿಕ್‌ ಐಡೆಂಟಿಫಿಕೇಶನ್‌ ನಂಬರ್‌ (ಎಚ್‌ಯುಐಡಿ) ಇರುವ ಚಿನ್ನಾಭರಣ ಮಾರಾಟಕ್ಕೆ ಮಾತ್ರ ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಅದರ ಪ್ರಕಾರ, ಎಚ್‌ಯುಐಡಿ ನಂಬರ್‌ ಇಲ್ಲದ ಹಳೆಯ ಹಾಲ್‌ಮಾರ್ಕ್‌ ಚಿನ್ನಾಭರಣ ಮಾರಾಟಕ್ಕೆ ಮಾ.31ರ ನಂತರ ಅವಕಾಶವಿರುವುದಿಲ್ಲ.   ಏತಕ್ಕಾಗಿ ಈ ನಿರ್ಧಾರ? ಗ್ರಾಹಕರ ಹಿತರಕ್ಷಣೆಯ ದೃಷ್ಟಿಯಿಂದ ಈ ಕ್ಷೇತ್ರದ ಪಾಲುದಾರರ ಸಭೆಯ ಬಳಿಕ ಗ್ರಾಹಕರ ವ್ಯವಹಾರಗಳ ಸಚಿವಾಲಯವು ಜ.18ರಂದು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿತು. …

Read More »

ಮೂರೂ ಪಕ್ಷಗಳಲ್ಲಿ ಎಪತ್ತು ವರ್ಷ ದಾಟಿದವರಿಗೆ ಟಿಕೆಟ್‌ “ಆಪತ್ತು’ ? ಹೊಸ ಮುಖಗಳಿಗೆ ಅವಕಾಶ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮೂರೂ ಪಕ್ಷಗಳಲ್ಲಿ ಎಪತ್ತು ವರ್ಷ ದಾಟಿದವರಿಗೆ ಟಿಕೆಟ್‌ “ಆಪತ್ತು’ ಎದುರಾಗಿದೆ. ಹೊಸ ಮುಖಗಳಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ 70 ವರ್ಷ ದಾಟಿದವರನ್ನು “ಮಾರ್ಗದರ್ಶಿ’ ಮಂಡಳಿಗೆ ಸೇರಿಸುವ ಆತಂಕವೂ ಕಾಡುತ್ತಿದೆ. ಟಿಕೆಟ್‌ ಕೈ ತಪ್ಪುವ ಭೀತಿಯಿಂದ ಕೆಲವರು ಮೊದಲೇ ಶಸ್ತ್ರತ್ಯಾಗ ಮಾಡಿ ಪುತ್ರರಿಗೆ ಪಟ್ಟ ಕಟ್ಟುವ ಘೋಷಣೆ ಮಾಡಿ ಬಚಾವ್‌ ಆಗಿದ್ದರೆ ಮತ್ತೆ ಕೆಲವರಿಗೆ ಟಿಕೆಟ್‌ “ಅರ್ಧಚಂದ್ರ’ ಎಂಬಂತಾಗಿದೆ. 90 ವರ್ಷದ …

Read More »

ಮೊಬೈಲ್‌ಗೆ ಬಂದ ಲಿಂಕ್‌ ಕ್ಲಿಕ್ಕಿಸಿ 1 ಲಕ್ಷ ರೂ. ಕಳೆದುಕೊಂಡರು!

ಮೊಬೈಲ್‌ಗೆ ಆಗಂತುಕನೊಬ್ಬ ಕಳುಹಿಸಿದ್ದ ಲಿಂಕ್‌ ಕ್ಲಿಕ್‌ ಮಾಡಿದ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ 1 ಲ.ರೂ.ಕಡಿತಗೊಂಡ ಘಟನೆ ನಡೆದಿದೆ. ಎಚ್‌ಡಿಎಫ್ಸಿ ಬ್ಯಾಂಕ್‌ನ ಕುಂದಾಪುರ ಶಾಖೆಯಲ್ಲಿ ಖಾತೆ ಹೊಂದಿರುವ ಸುಧಾಕರ ಕಾಂಚನ್‌ ಅವರಿಗೆ ಮಾ.4ರಂದು ಅಪರಿಚಿತನೊಬ್ಬ ಪಾನ್‌ಕಾರ್ಡ್‌ ಅಪ್‌ಡೇಟ್‌ ಮಾಡಲು ಲಿಂಕ್‌ ಕಳುಹಿಸಿದ್ದ. ಅದನ್ನು ಬ್ಯಾಂಕ್‌ನಿಂದ ಕಳುಹಿಸಲಾಗಿದೆ ಎಂದು ನಂಬಿಸಿದ್ದಾನೆ. ಅದನ್ನು ಕ್ಲಿಕ್‌ ಮಾಡಿದ ಪರಿಣಾಮ ಖಾತೆಯಿಂದ ಹಣ ಕಡಿತವಾಗಿದ್ದು, ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಾರ್ಚ್‌ 12ರಂದು ಮದ್ದೂರು, ಧಾರವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಹುಬ್ಬಳ್ಳಿ: ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ನೆರವೇರಿಸಿದ ಬಳಿಕ ಅಲ್ಲಿಯೇ ಸಮೀಪದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವರು.   ನಂತರ 2.40ಕ್ಕೆ ಮೋದಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 3.15ಕ್ಕೆ ಧಾರವಾಡದ ಐಐಟಿ ಪಕ್ಕದಲ್ಲಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಪ್ರಧಾನಿ ಆಗಮನವನ್ನು ಅವರ ಕಚೇರಿ ಖಚಿತಪಡಿಸಿದೆ’ ಎಂದು ಭಾನುವಾರ …

Read More »

70 ಕ್ಷೇತ್ರಗಳಲ್ಲಿ ವೀರಶೈವರಿಗೆ ಟಿಕೆಟ್‌: ಡಿಕೆಶಿಗೆ ಶಾಮನೂರು ಶಿವಶಂಕರಪ್ಪ ಮನವಿ

ಬೆಂಗಳೂರು: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲೇಬೇಕೆಂದರೆ ವೀರಶೈವ ಲಿಂಗಾಯತ ಸಮುದಾಯದ ಬೆಂಬಲ ಅತ್ಯಗತ್ಯ. ಹೀಗಾಗಿ, ರಾಜ್ಯದ 224 ಕ್ಷೇತ್ರಗಳ ಪೈಕಿ 70ರಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮನವಿ ಸಲ್ಲಿಸಿದ್ದಾರೆ.   ‘ಲಿಂಗಾಯತ-ವೀರಶೈವ ಸಮುದಾಯ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಪಕ್ಷ ಅಧಿಕಾರಕ್ಕೆ ಬರಲು ಈ ಸಮುದಾಯದ ಸಹಾಯ ಅವಶ್ಯಕ. ಲಿಂಗಾಯತರ …

Read More »