ಕಲಬುರಗಿ : ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಯಿಂದ ಹಿರಿಯ ಹಾಗೂ ಯುವ ಚಿತ್ರಕಲಾವಿದರಿಂದ ಇದೇ ಫೆಬ್ರವರಿ 24 ಹಾಗೂ 25 ರಂದು ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದ ಮೊದಲ ಮಹಡಿಯಲ್ಲಿ ಚಿತ್ರಕಲಾ ಶಿಬಿರ ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂದು ಕಲ್ಯಾಣ ಕರ್ನಾಟಕ ಉತ್ಸವದ ಚಿತ್ರಕಲೆ, ನೃತ್ಯ, ಪ್ರಬಂಧ, ಶಿಬಿರ/ ಪ್ರದರ್ಶನ ಸಮಿತಿಯ ಅಧ್ಯಕ್ಷರಾಗಿರುವ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ …
Read More »Monthly Archives: ಫೆಬ್ರವರಿ 2023
ಸರ್ಕಾರಿ ನೌಕರರು ಯೂಟ್ಯೂಬ್ ಚಾನಲ್ ಆರಂಭಿಸುವಂತಿಲ್ಲ: ಸರ್ಕಾರ ಆದೇಶ
ತಿರುವನಂತಪುರಂ: ಸರ್ಕಾರಿ ನೌಕರರು ಯೂಟ್ಯೂಬ್ ಚಾನೆಲ್ ಆರಂಭಿಸುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ಸರ್ಕಾರಿ ನೌಕರರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಮಯ ಕಳೆಯುವುದನ್ನು ಮೊಟಕುಗೊಳಿಸುವ ಗುರಿಯನ್ನು ಹೊಂದಿದೆ. ಚಂದಾದಾರರ ಸಂಖ್ಯೆಯು ನಿರ್ದಿಷ್ಟ ಮಿತಿಯನ್ನು ದಾಟಿದರೆ, ಚಾನಲ್ ಅನ್ನು ಹೊಂದಿರುವ ವ್ಯಕ್ತಿಯು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಆದಾಯವನ್ನು ಗಳಿಸಬಹುದು. ಸರ್ಕಾರಿ ನೌಕರರು ಸೇರಿದಂತೆ ಅನೇಕರಿಗೆ ಇದು ಹೆಚ್ಚುವರಿ ಆದಾಯದ ಮೂಲವಾಗಿದೆ. ಆದರೆ, ಇದು ಕೇರಳ ಸರ್ಕಾರಿ …
Read More »ಮದ್ಯದ ಅಮಲಿನಲ್ಲಿ ಯುವಕ ‘ಮಚ್ಚು’ ಹಿಡಿದು ಯುವಕನ ರಂಪಾಟ
ಯಾದಗಿರಿ : ಯಾದಗಿರಿಯಲ್ಲಿ ಮದ್ಯದ ಅಮಲಿನಲ್ಲಿ ಯುವಕ ‘ಮಚ್ಚು’ ಹಿಡಿದು ರಂಪಾಟ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪಾನಮತ್ತನಾದ ಯುವಕ ಮಚ್ಚು ಹಿಡಿದು ಸಿಕ್ಕ ಸಿಕ್ಕವರ ಮೇಲೆ ಮಚ್ಚು ಬೀಸಲು ಹೋಗಿದ್ದಾನೆ. ಅಲ್ಲದೇ ಚಲಿಸುತ್ತಿದ್ದ ಲಾರಿಯ ಚಾಲಕ, ಬೈಕ್ ಸವಾರರು ಹಾಗೂ ರಸ್ತೆಯಲ್ಲಿ ನಿಂತವರ ಮೇಲೆ ಮಚ್ಚು ಬೀಸಿದ್ದಾನೆ, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಪರಿಣಾಮ ಕಾರೊಂದರ ಗಾಜು ಪುಡಿ ಪುಡಿಯಾಗಿದೆ ಎನ್ನಲಾಗಿದೆ. ನಂತರ ಪಾನಮತ್ತನಾದ ಯುವಕನನ್ನು ಹಿಡಿದು ಜನರು …
Read More »ರೂಪಾ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ ‘ರೋಹಿಣಿ ಸಿಂಧೂರಿ’..!
ಬೆಂಗಳೂರು: ರಾಜ್ಯದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಸಮರ ತಾರಕಕ್ಕೇರಿದೆ. ರೋಹಿಣಿ ಸಿಂಧೂರಿಯವರು ಶಾಸಕ ಸಾರಾ ಮಹೇಶ್ ಬಳಿಯಲ್ಲಿ ಸಂಧಾನಕ್ಕೆ ತೆರಳಿದ ವಿಷಯ ಇದೇ ಮೊದಲು ಎಂದಿರುವಂತ ಐಪಿಎಸ್ ಅಧಿಕಾರಿ ರೂಪಾ ಡಿ ಅವರು, ನಾನು ಹಾಕಿರೋ ಪೋಟೋಗಳು ಕೇವಲ ಸ್ಯಾಂಪಲ್ ಅಷ್ಟೇ. ಇದರಲ್ಲಿ ನನ್ನ ಯಾವುದೇ ವೈಯಕ್ತಿಕ ವಿಚಾರ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಡಿ. ರೂಪಾ ಆರೋಪಕ್ಕೆ ತಿರುಗೇಟು ನೀಡಿರುವ ರೋಹಿಣಿ ಸಿಂಧೂರಿ ವಾಟ್ಸಪ್ ಸ್ಟೇಟಸ್ ಗಳಲ್ಲಿ …
Read More »ರಾಜ್ಯದಲ್ಲಿ ಮುಂದುವರೆದ IAS V/S IPS ಸಮರ : ‘ರೋಹಿಣಿ ಸಿಂಧೂರಿ’ ವಿರುದ್ಧವೇ ಕೇಸ್ ಹಾಕ್ತೀನಿ ಎಂದ ಡಿ.ರೂಪ
ಬೆಂಗಳೂರು : ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ಜಟಾಪಟಿ ಮುಂದುವರೆದಿದೆ. ಡಿ. ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬ ರೋಹಿಣಿ ಸಿಂಧೂರಿ ಹೇಳಿಕೆಗೆ ರೂಪಾ ಪ್ರತಿಕ್ರಿಯೆ ನೀಡಿದ್ದು,, ನಾನು ಬಿಡಲ್ಲ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ. ನಿಮ್ಮ ಬಣ್ಣ ಬಯಲಾಯಿತು ಎಂದು ಬೇಸರಗೊಂಡಿದ್ದೀರಾ..? ಹತಾಶೆ ಯಾರಿಗೆ ಆಗಿದ್ದು ನನಗಾ ನಿಮಗಾ..? ನಾನು ನಿಮ್ಮನ್ನು ಎಕ್ಸ್ ಪೋಸ್ ಮಾಡಿದ್ದೇನೆ …
Read More »ಯಾರ ಚಡ್ಡಿ ಗಟ್ಟಿ ಇದೆಯೋ ಅವರಿಗೆ ಟಿಕೆಟ್, ಟಿಕೆಟ್ ಘೋಷಣೆ ಆದ್ಮೇಲೆ ಎಲ್ಲವೂ ತಣ್ಣಗಾಗಲಿದೆ.:ಸತೀಶ ಜಾರಕಿಹೋಳಿ
ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಟಿಕೆಟ್ ಬಗ್ಗೆ ಘೋಷಣೆ ಮಾಡಬಹುದು ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯೋಣ. ಯಾರ ಚಡ್ಡಿ ಗಟ್ಟಿ ಇದೆಯೋ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು ಟಿಕೆಟ್ ಘೋಷಣೆ ಆಗದೇ ಇರೋದ್ರಿಂದ ಭಿನ್ನಮತ ಇರೋದು ಸಹಜ. ಟಿಕೆಟ್ ಘೋಷಣೆ ಆದ್ಮೇಲೆ ಎಲ್ಲವೂ ತಣ್ಣಗಾಗಲಿದೆ. ಎಲ್ಲರೂ ಸೇರಿ ಟಿಕೆಟ್ …
Read More »ಯಲಬುರ್ಗಾ: ವೇದಿಕೆ ಮೇಲೆ ಬಿಜೆಪಿ, ಕಾಂಗ್ರೆಸ್ ನಾಯಕರ ಜಟಾಪಟಿ, ಹೊಯ್ ಕೈ
ಯಲಬುರ್ಗಾ (ಕೊಪ್ಪಳ ಜಿಲ್ಲೆ): ಯಲಬುರ್ಗಾ ಪಟ್ಟಣದಲ್ಲಿ ಶನಿವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಅನಾವರಣ ಹಾಗೂ ಶಿಲಾ ಮಂಟಪ ಉದ್ಘಾಟನಾ ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಜಟಾಪಟಿ ನಡೆಯಿತು. ಶಾಸಕ ಬೈರತಿ ಸುರೇಶ ಮಾತನಾಡುವಾಗ ಮುಂದಿನ ಸಿಎಂ ಸಿದ್ದರಾಮಯ್ಯ ಅಗಬೇಕು. ಯಲಬುರ್ಗಾ ಕ್ಷೇತ್ರದಲ್ಲಿ ರಾಯರಡ್ಡಿ ಅಧಿಕಾರಕ್ಕೆ ಬರಲು ನೀವೆಲ್ಲ ಆರ್ಶೀವಾದ ಮಾಡಬೇಕು. ಹೆಸರು ಬಳಸದೇ ಈಗಿನ ಶಾಸಕರು (ಹಾಲಪ್ಪ ಆಚಾರ್) ಎನಾದರೂ …
Read More »ಮೂಡಲಗಿ: ವಿದ್ಯುತ್ ಇಲ್ಲದೆ ನೀರೆತ್ತುವ ವಿಧಾನ..!
ಮೂಡಲಗಿ: ವಿದ್ಯುತ್ ಇಲ್ಲದೇ ಬಾವಿ ಮತ್ತು ಬೋರ್‌ವೆಲ್‌ಗಳಿಂದ ನೀರೆತ್ತುವುದು ಸಾಧ್ಯವೇ? ಈ ಪ್ರಶ್ನೆಗೆ ಹೌದು ಎಂದು ಉತ್ತರಿಸುತ್ತಾರೆ ತಾಲ್ಲೂಕಿನ ಅವರಾದಿ ಗ್ರಾಮದ ಬಿ.ವಿ. ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯ ಬಾಲ ವಿಜ್ಞಾನಿಗಳಾದ ಮಹೇಶ ಗುರ್ಲಾಪುರ ಮತ್ತು ವರುಣ ನಾಯ್ಕ. ಕೃಷಿ ಭೂಮಿಗೆ ನೀರುಣಿಸಲು ರೈತರು ಸಾಕಷ್ಟು ಪರದಾಡುವಂತಾಗಿದೆ. ಬಾವಿ, ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆದು ಹೈರಾಣಾಗಿದ್ದಾರೆ. ಒಂದೆಡೆ ಕೈಕೊಡುವ ವಿದ್ಯುತ್, ಇನ್ನೊಂದೆಡೆ ಹೊರೆಯಾಗುವ ಬಿಲ್. ಎರಡರ ಮಧ್ಯೆ ಸಿಕ್ಕು ನಲುಗಿದ್ದಾರೆ. …
Read More »ಏಕಾಏಕಿ ಹೊತ್ತಿಕೊಂಡ ಬೆಂಕಿ
ಬೆಳಗಾವಿ: ಏಕಾಏಕಿ ಹೊತ್ತಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಭಾರೀ ಜ್ವಾಲೆಯಾಗಿ ಹಬ್ಬಿಕೊಂಡು ಇಡೀ ಅಂಗಡಿಯನ್ನು ಆವರಿಸಿಕೊಂಡಿತು. ಸ್ಥಳದಲ್ಲಿರುವವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಫಲ ನೀಡಲಿಲ್ಲ. ಸ್ಥಳೀಯರ ಕರೆಗೆ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಈ ಘಟನೆಯಿಂದ ಸುಮಾರು 10 ಲಕ್ಷರೂ.ಗೂ ಹೆಚ್ಚು ಮೌಲ್ಯದ ಸ್ವತ್ತು ಸುಟ್ಟು ಹೋಗಿರುವುದಾಗಿ ಅಂದಾಜಿಸಲಾಗಿದೆ. ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಶನಿವಾರ ಬೆಳಗ್ಗೆ ಅಂಗಡಿಯೊಂದರಲ್ಲಿ ಗೀಜರ್ ನ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ …
Read More »ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೋಗಳನ್ನು ವೈರಲ್ ಮಾಡಿರುವ ಡಿ.ರೂಪಾ
ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವೆ ಸಮರ ಆರಂಭವಾಗಿದೆ. ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೋಗಳನ್ನು ವೈರಲ್ ಮಾಡಿರುವ ಡಿ.ರೂಪಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರೋಹಿಣಿ ಸಿಂಧೂರಿ ತಮ್ಮ ಕೆಲ ಖಾಸಗಿ ಫೋಟೋಗಳನ್ನು ಪುರುಷ ಐಎ ಎಸ್ ಅಧಿಕಾರಿಗಳಿಗೆ ಪದೇ ಪದೇ ಕಳುಹಿಸುತ್ತಿದ್ದಾರೆ. ಮಹಿಳಾ ಐಎ ಎಸ್ ಅಧಿಕಾರಿ ಪುರುಷ ಅಧಿಕಾರಿಗಳಿಗೆ ಇಂತಹ ಫೋಟೋ ಕೌಹಿಸುವುದರ ಅರ್ಥವೇನು? ಎಂದು …
Read More »