ಲಿಂಗಸೂಗುರು: ಅರ್ಕಾವತಿ ಪ್ರಕರಣದ ತನಿಖೆ ಲೋಕಾಯುಕ್ತಕ್ಕೆ ವಹಿಸಿದ್ದು, ತನಿಖೆ ಬಳಿಕ ತಪ್ಪಿತಸ್ಥರು ಜೈಲು ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದರು. ಶನಿವಾರ ವಿಜಯ ಸಂಕಲ್ಪ ಯಾತ್ರೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆಂದು ನಾನು ಹೇಳಿದ್ದೆ. ನ್ಯಾ| ಕೆಂಪಣ್ಣ ಕೊಟ್ಟ ವರದಿ ಲೋಕಾಯುಕ್ತಕ್ಕೆ ಕೊಟ್ಟು ಸಂಪೂರ್ಣ ತನಿಖೆ ಮಾಡಿಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದ ನಾಯಕರ ವಿರುದ್ಧ ಕ್ರಮ ಜರಗಲಿದೆ. ತಪ್ಪಿತಸ್ಥರು ಜೈಲಿಗೆ ಹೋಗುತ್ತಾರೆ …
Read More »Daily Archives: ಫೆಬ್ರವರಿ 26, 2023
ದೊಡ್ಡಗೌಡರ ಮಧ್ಯಪ್ರವೇಶ; ಇಂದಿನ ಸಭೆ ರದ್ದು
ಬೆಂಗಳೂರು:ಹಾಸನ ವಿಧಾನಸಭೆ ಕ್ಷೇತ್ರದ ಟಿಕೆಟ್ ವಿಚಾರ ಕಗ್ಗಂಟಾಗಿರುವ ನಡುವೆಯೇ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಬೇಕಾಗಿದ್ದ ಜೆಡಿಎಸ್ ಸಭೆಯೇ ರದ್ದಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎಚ್.ಡಿ.ರೇವಣ್ಣ ಅವರು ದೇವೇಗೌಡರ ಮೇಲೆ ಒತ್ತಡ ಹಾಕಿ ಸಭೆಯನ್ನು ಮುಂದೂಡುವಂತೆ ಮಾಡಿದ್ದು, ಈ ತಿಕ್ಕಾಟದಲ್ಲಿ ಎಚ್.ಡಿ ರೇವಣ್ಣ ಅವರೇ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗಿದೆ. ತೀವ್ರ ಜಿದ್ದಾಜಿದ್ದಿ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಹಾಸನ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿ ಶನಿವಾರ ಶೃಂಗೇರಿಯಲ್ಲಿ …
Read More »7ನೇ ವೇತನ ಆಯೋಗ: ಲಿಖಿತ ಭರವಸೆ ಸಿಕ್ಕರೆ ಮುಷ್ಕರ ವಾಪಸ್: ಸಿ.ಎಸ್.ಷಡಾಕ್ಷರಿ
ಶಿವಮೊಗ್ಗ: ‘7ನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನದ ಬಗ್ಗೆ ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಈಗ ಕರೆ ನೀಡಿರುವ ಮಾರ್ಚ್ 1ರಂದು ನಡೆಯುವ ಮುಷ್ಕರ ವಾಪಸ್ ಪಡೆಯಲಾಗುವುದು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘7 ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಈ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಬಜೆಟ್‌ನಲ್ಲಿ ಈ …
Read More »47 ವರ್ಷದ ನಟಿಯ ಸೌಂದರ್ಯ ನೋಡಿದ ನೆಟ್ಟಿಗರು ಶಾಕ್
ರಾತ್ರಿ ಮುಂಬೈನಲ್ಲಿ ನಡೆದ ʼಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್ʼನಲ್ಲಿ ಮಲೈಕಾ ಅರೋರಾ, ರೋಹಿಣಿ ಅಯ್ಯರ್, ಹಿನಾ ಖಾನ್ ಮತ್ತು ಸೇರಿದಂತೆ ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದರು. ತಾರೆಗಳು ಈವೆಂಟ್‌ನಲ್ಲಿ ಭಾಗವಹಿಸಿದ್ದ ನಟಿಯರ ಗ್ಲಾಮರ್ ಲುಕ್ ಹೆಚ್ಚಾಗಿ ಟಾಕ್ ಆಗುತ್ತಿದೆ. ತುಂಡು ತುಂಡು ಬಟ್ಟೆ ತೊಟ್ಟಿದ್ದ ನಟಿಯರ ಸೊಬಗಿಗೆ ಜನ ಫಿದಾ ಆಗಿದ್ದರು. ಇನ್ನು ಶಿಲ್ಪಾ ಶೆಟ್ಟಿ ಕೂಡಾ ತಮ್ಮದೇ ಸ್ಟೈಲ್‌ನಲ್ಲಿ ಮಿಂಚಿದರು. ಬಿಳಿ ಜಂಪ್‌ಸೂಟ್‌ನಲ್ಲಿ ಜಾಕೆಟ್ ಮತ್ತು ಶೀರ್ ಪ್ಯಾನೆಲಿಂಗ್‌ನೊಂದಿಗೆಶಿಲ್ಪಾ ಶೆಟ್ಟಿಕಾರ್ಯಕ್ರಮಕ್ಕೆ …
Read More »ಮರ್ಯಾದೆಗೆ ಅಂಜಿ ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!
ಆಂಧ್ರಪ್ರದೇಶ : ತಂದೆಯೊಬ್ಬ, ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳ ರುಂಡ-ಮುಂಡವನ್ನು ಕತ್ತರಿಸಿ ಕೊಲೆ ಮಾಡಿ ಕಾಡಿನಲ್ಲಿ ಎಸೆದಿದ್ದಾನೆ. ಈ ಮರ್ಯಾದಾ ಹತ್ಯೆ ಪ್ರಕರಣ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಸನ್ನ (21) ಮೃತ ದುರ್ದೈವಿ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಮಗಳನ್ನು ಕೊಂದ ಆರೋಪಿ. ರೆಡ್ಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಾದ ಪ್ರಸನ್ನಗೆ ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ …
Read More »