ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಬಬಲೇಶ್ವರ ಬಿಟ್ಟು ನಾನು ಪ್ರತಿನಿಧಿಸುತ್ತಿರುವ ಬಸವನಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನಗಿರಲಿ ಎಂದು ಸ್ವಪಕ್ಷೀಯ ಬಸವನಬಾಗೇವಾಡಿ ಹಾಲಿ ಶಾಸಕ ಶಿವಾನಂದ ಪಾಟೀಲ ಆಹ್ವಾನಿಸಿದ್ದಾರೆ. ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ನನ್ನ ಮೂಲ ಕ್ಷೇತ್ರವಾಗಿದ್ದು, ಅಲ್ಲಿಂದ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ಧೇನೆ. ರಾಜಕೀಯ ಕಾರಣದಿಂದ ಬಬಲೇಶ್ವರ ಕ್ಷೇತ್ರದ ಜನರಿಗೆ ಹೇಳದೇ ನಾನು …
Read More »Daily Archives: ಫೆಬ್ರವರಿ 26, 2023
ಕೇಂದ್ರ ಸರ್ಕಾರದ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್
ಕೇಂದ್ರ ಸರ್ಕಾರದ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ದೇಶಾದ್ಯಂತ ಹೊಸ ನಿಯಮ ಜಾರಿಯಾಗ್ತಿದೆ. ಈ ಮೂಲಕ ಪಡಿತರ ಚೀಟಿಯಿಂದ ಆಹಾರ ಧಾನ್ಯ ಪಡೆಯುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗಿದ್ದು, ಇದರ ನಂತರ ಎಲ್ಲಾ ಅಂಗಡಿಗಳಲ್ಲಿ ಆನ್‌ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್(ಪಿಒಎಸ್) ಸಾಧನಗಳನ್ನು ಕಡ್ಡಾಯಗೊಳಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ …
Read More »ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ
ಬೆಂಗಳೂರು: ಮೈಸೂರು – ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದಾಗಿ ಕೋಚ್‌ನ ಎರಡು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನ ಕೆ.ಆರ್‌ಪುರಂ ಬಳಿ ಶನಿವಾರ ಈ ಘಟನೆ ಸಂಭವಿಸಿದೆ. ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈನಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಬೆಂಗಳೂರಿನಲ್ಲಿ ಇಲ್ಲಿವರೆಗೆ …
Read More »ಮೋದಿಯವರ ರೋಡ್ ಶೋ ಗೆ ಐತಿಹಾಸಿಕ ನಗರ ಬೆಳಗಾವಿ ಸಾಕ್ಷಿಯಾಗಲಿದೆ; ಪ್ರಧಾನಿ ನರೇಂದ್ರ ಮೋದಿ ಅವರ ಬೆಳಗಾವಿ
ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಮೋದಿಯವರ ರೋಡ್ ಶೋ ಗೆ ಐತಿಹಾಸಿಕ ನಗರ ಬೆಳಗಾವಿ ಸಾಕ್ಷಿಯಾಗಲಿದೆ. ಬೆಳಗ್ಗೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ನೆರವೇರಿಸುವ ಮೋದಿ ಅಲ್ಲಿಂದ 2.30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಎಪಿಎಂಸಿ ಮೈದಾನಕ್ಕೆ ಆಗಮಿಸುವರು. ಅಲ್ಲಿಂದ ಕಾರ್ಯಕ್ರಮ ನಡೆಯಲಿರುವ ಮಾಲಿನಿ ಸಿಟಿವರೆಗೆ 10 ಕಿಮೀ ರೋಡ್ ಶೋ ನಡೆಯಲಿದೆ. ಎಂಪಿಎಂಸಿ …
Read More »ಯಮಕನಮರಡಿ ಮತಕ್ಷೇತ್ರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆ: ಸತೀಶ್ ಜಾರಕಿಹೊಳಿ
ಗೋಕಾಕ: 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಯಮಕನಮರಡಿ ಮತಕ್ಷೇತ್ರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಖುಷಿ ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಕುರಣಿ, ಖಲಕಂಬಾ ಗ್ರಾಮದ 200ಕ್ಕೂ ಹೆಚ್ಚು ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮಾತ್ರ ಸರ್ವರ ಸರ್ವತೋಮುಖ ಪ್ರಗತಿ ಸಾಧ್ಯವಿದೆ ಎಂದು ತಿಳಿಸಿದರು. 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು …
Read More »ಪ್ರಹ್ಲಾದ್ ಜೋಶಿ ದಳಪತಿಗಳಿಗೆ ವ್ಯಂಗ್ಯವಾಡಿದ್ದು, ಮನೆಯನ್ನೇ ನಿರ್ವಹಣೆ ಮಾಡಲು ಆಗದವರು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದರು
ಹುಬ್ಬಳ್ಳಿ: ಹಾಸನ ಕ್ಷೇತ್ರದ ಟಿಕೆಟ್ ಕಿತ್ತಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಳಪತಿಗಳಿಗೆ ವ್ಯಂಗ್ಯವಾಡಿದ್ದು, ಮನೆಯನ್ನೇ ನಿರ್ವಹಣೆ ಮಾಡಲು ಆಗದವರು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರು ಮೊದಲು ಮನೆ ಸರಿ ಮಾಡಿಕೊಳ್ಳಲಿ ಅನಂತರ ರಾಜ್ಯ ಆಳೋಕೆ ಬರಲಿ ಎಂದು ಹೇಳಿದ್ದಾರೆ. ದಳಪತಿಗಳಿಗೆ ಮನೆಯವರೆಲ್ಲ ಎಲೆಕ್ಷನ್ ಗೆ ನಿಂತರೂ ಸಮಾಧಾನವಾಗಿಲ್ಲ. ಕುಟುಂಬದಲ್ಲಿ 12 ಜನವಿದ್ದರೂ 12 ಜನ ಚುನಾವಣೆಗೆ …
Read More »ಮಕ್ಕಳೆ ರಾಜಕಾರಣಿ ಮಾತ್ರ ಆಗಬೇಡಿ: ಶಾಸಕ ಎಂ.ವೈ.ಪಾಟೀಲ್ ಕರೆ
ಕಲಬುರಗಿ: ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಗುರಿಯೊಂದಿಗೆ ಸಾಧನೆ ಮಾಡಬೇಕು ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಮಕ್ಕಳಿಗೆ ಸಲಹೆ ನೀಡಿದರು. ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಕಲಬುರಗಿ ವಿವಿಯ ಬಯಲು ರಂಗಮಂದಿರ ಶನಿವಾರ ಆಯೋಜಿಸಿದ ಮಕ್ಕಳ ಉತ್ಸವ ಉದ್ಘಾಟಿಸಿ ಮಾತನಾಡಿ, ಇದು ಕೇವಲ ಉತ್ಸವ ಅಲ್ಲ, ನಮ್ಮ ಭಾಗದ ದೊಡ್ಡ ಹಬ್ಬವಾಗಿದೆ. ಭಾರತ ಸ್ವಾತಂತ್ರ್ಯ ಮತ್ತು ನಿಜಾಮ ಶಾಹಿಯಿಂದ ಮುಕ್ತಿ ಪಡೆದ ಬಳಿಕ ಸ್ವಾತಂತ್ರೋತ್ಸವವನ್ನು ಮಾರ್ಪಾಟಾಗಿ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸಲಾಗುತ್ತಿದೆ. …
Read More »ಮಿಸ್ಟರ್ ಸವದಿ ಕಾಂಗ್ರೆಸ್ ಕಾರ್ಯಕರ್ತರ ಸುದ್ದಿಗೆ ಬರಬೇಡಿ: ಮಾಜಿ ಸಚಿವೆ ಉಮಾಶ್ರೀ ಕಿಡಿ
ರಬಕವಿ-ಬನಹಟ್ಟಿ: ಮಿಸ್ಟರ್ ಸಿದ್ದು ಸವದಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ನಾಯಕರ ಸುದ್ದಿಗೆ ಬಂದರೆ, ಪ್ರಕರಣ ದಾಖಲೆ ಮಾಡಿದರೆ ಅವರ ಭಾವನೆಗಳಿಗೆ ಉರಿ ಹಚ್ಚಿದರೆ ಇಡೀ ತೇರದಾಳ ಕಾಂಗ್ರೆಸ್ ಹೊತ್ತಿ ಉರಿಯುತ್ತಿದೆ ಎಚ್ಚರವಿರಲಿ ಎಂದು ಮಾಜಿ ಸಚಿವೆ ಉಮಾಶ್ರೀ ಬಿಜೆಪಿ ಶಾಸಕ ಸಿದ್ದು ಸವದಿಯವರಿಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ. ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಶಾಸಕ ಸಿದ್ದು ಸವದಿಯವರು ಧಾರವಾಡ, ಬೆಳಗಾವಿ, ರಾಮದುರ್ಗ ಸೇರಿದಂತೆ …
Read More »ಸನ್ಯಾಸಿಗಳೂ ಬಿಜೆಪಿ ಸೇರಬಹುದು: ಸಚಿವ ಡಾ|ಅಶ್ವತ್ಥನಾರಾಯಣ
ದಾವಣಗೆರೆ: ಭಾರತೀಯ ಜನತಾ ಪಾರ್ಟಿಗೆ ಸನ್ಯಾಸಿಗಳೂ ಸೇರಿದಂತೆ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ|ಅಶ್ವತ್ಥನಾರಾಯಣ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ದಲ್ಲಿ ಎಲ್ಲರೂ ಭಾಗವಹಿಸಬೇಕಾಗುತ್ತೆ. ಅಂತಹ ಆಲೋಚನೆ-ವಿಚಾರ ಇರೋರು ಬಿಜೆಪಿ ಸೇರಬಹುದು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸನ್ಯಾಸಿ ಆಗಿದ್ದವರು. ಸನ್ಯಾಸಿಗಳಾಗಿದ್ದವರು ಶಾಸಕ-ಮಂತ್ರಿಯಾಗಿದ್ದಾರೆ. ಲೋಕಸಭೆಗೂ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಇದ್ದಾರೆ. ಹೀಗಾಗಿ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದರು. ಅರ್ಕಾವತಿ ಬಡಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ …
Read More »ಸ್ವಾಮೀಜಿಗಳು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ: ಹೊರಟ್ಟಿ
ಧಾರವಾಡ: ಸ್ವಾಮೀಜಿಗಳು ಸಮಾಜಕ್ಕೆ ಮಾದರಿ. ಅವರು ಮಠ ಬಿಟ್ಟು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಾನು ನೋಡಿದಂತೆ ಬಹುತೇಕ ಸ್ವಾಮೀಜಿಗಳು ವಿಧಾನಸೌಧದಲ್ಲಿಯೇ ಇರುತ್ತಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸ್ವಾಮೀಜಿಗಳು ರಾಜಕಾರಣಕ್ಕೆ ಬರಲಿ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಚುನಾವಣೆಯಲ್ಲಿ ಮತ ಚಲಾವಣೆ ಮಾಡುವವರು ಬುದ್ಧಿವಂತರಾಗುವವರೆಗೂ ಒಳ್ಳೆಯ ಸರಕಾರ …
Read More »