Breaking News

Daily Archives: ಫೆಬ್ರವರಿ 22, 2023

ಹ್ಯಾಪಿ ಎಂಡಿಂಗ್ʼ ಬೇಕು ಅಂತ ಯುವತಿ ಮೇಲೆ ʼಅತ್ಯಾಚಾʼರವೆಸಗಿದ ಕಾಮುಕ..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಸಾಜ್ ಪಾರ್ಲರ್‌ಗಳ ಹಾವಳಿ ಹೆಚ್ಚಾಗಿದೆ. ಸಾವಿರಾರು ಪಾರ್ಲರ್ ಗಳು ತಲೆ ಎತ್ತಿವೆ. ಇಂತಹ ಪಾರ್ಲರ್ ಗಳಲ್ಲಿ ‌ಕೆಲಸ ಮಾಡುವ ಯುವತಿಯರು ಎಷ್ಟರ ಮಟ್ಟಿಗೆ‌ ಸೇಫ್ ಅನ್ನೋದೆ ಈಗಿನ ಪ್ರಶ್ನೆಯಾಗಿದೆ. ಜಯನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿನ ಮ್ಯಾಜಿಕ್ ಟೆಚ್ ಯೂನಿಸೆಕ್ಸ್ ಸೆಲೂನ್ ಪಾರ್ಲರ್ ಒಂದರಲ್ಲಿ ಇದೀಗ ಅತ್ಯಾಚಾರದ ಆರೋಪವೊಂದು ಕೇಳಿ ಬಂದಿದೆ.‌ಕಾಮಕ ರವೀಂದ್ರ ಶೆಟ್ಟಿ ಎಂಬಾತ ಯುವತಿಯ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.   ಮಸಾಜ್ ಪಾರ್ಲರ್‌ನಲ್ಲಿ …

Read More »

ಭಾರತದಲ್ಲೂ ಶೀಘ್ರದಲ್ಲೇ ಭಾರಿ ಭೂಕಂಪ ಸಾಧ್ಯತೆ!; ತಜ್ಞರ ಎಚ್ಚರಿಕೆ

ನವದೆಹಲಿ: ಕಳೆದ ಎರಡು ಮೂರು ವಾರಗಳಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ ಭೀಕರ ಸರಣಿ ಭೂಕಂಪದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಅಲ್ಲದೆ ಭಾರಿ ಆಸ್ತಿ-ಪಾಸ್ತಿ ಹಾನಿಗೀಡಾಗಿದ್ದು, ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ಭಾರತದಲ್ಲೂ ಸದ್ಯದಲ್ಲೇ ಭಾರಿ ಭೂಕಂಪ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನ್ಯಾಷನಲ್​ ಜಿಯೋಫಿಸಿಕಲ್ ರಿಸರ್ಚ್​ ಇನ್​ಸ್ಟಿಟ್ಯೂಟ್​(ಎನ್​ಜಿಆರ್​​ಐ) ತಜ್ಞರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಹಿಮಾಲಯ ಭಾಗದಲ್ಲಿ ಭೂಕಂಪ ಆಗುವ ಸಾಧ್ಯತೆಗಳಿದ್ದು, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ …

Read More »

ರಾಜಕೀಯ ರಿ ಎಂಟ್ರಿ’ ಮುಂದೂಡಿದ ನಟ ಅನಂತ್ ನಾಗ್ : ‘ಬಿಜೆಪಿ’ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು

ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತ್ ನಾಗ್ ಅವರು ಇಂದು ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಕಾರಣಾಂತರದಿಂದ ಬಿಜೆಪಿ ಸೇರ್ಪಡೆಯನ್ನು ಸದ್ಯಕ್ಕೆ ಮುಂದೂಡಿದ್ದಾರೆ. ಹೌದು. ಸ್ಯಾಂಡಲ್ ವುಡ್ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತ್ ನಾಗ್ ಅವರು ಇಂದು ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ …

Read More »

ದೇಶದಲ್ಲಿ ಭೂಕಂಪನ , ಜಲ ಪ್ರಳಯ ಸಂಭವಿಸುತ್ತೆ’ : ಬಬಲಾದಿ ಸದಾಶಿವ ಮಠದ ಸ್ವಾಮೀಜಿ ಭವಿಷ್ಯ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2023 ರ ಕಾಲಜ್ಞಾನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಭೂಕಂಪನ ಹಾಗೂ ಜಲಪ್ರಳಯ ಉಂಟಾಗಲಿದೆ ಎಂದು ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಇದೀಗ ಭವಿಷ್ಯ ನುಡಿದಿದ್ದಾರೆ. ಸಜ್ಜನರು ಕೂಡ ದುರ್ಜನರಾಗುತ್ತಾರೆ, ಹಿಂಗಾರು ಮುಂಗಾರು ಮಳೆ ಉತ್ತಮವಾಗಲಿದೆ.ನಮ್ಮ ನಮ್ಮಲ್ಲಿ …

Read More »

2024ರ ಲೋಕಸಭೆ ಚುನಾವಣೆ: ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ- ಖರ್ಗೆ

ಕೊಹಿಮಾ: ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರಂತಹ ನೂರು ಮಂದಿ ಬಂದರೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಚುನಾವಣೆ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.   ದೇಶವನ್ನು ಉತ್ತಮವಾಗಿ ಮುನ್ನಡೆಸುವ ವ್ಯಕ್ತಿ ತಾನೊಬ್ಬನೇ, ಬೇರೆ ಯಾರು ಇಲ್ಲ ಎಂದುಕೊಂಡಿದ್ದಾರೆ. ನಿಮ್ಮ ಈ ಎಲ್ಲಾ ನಂಬಿಕೆಗಳು ಮುಂದಿನ ಚುನಾವಣೆಯಲ್ಲಿ ಹುಸಿಯಾಗಲಿವೆ ಎಂದರು. ನೀವು ಸರ್ವಾಧಿಕಾರಿ ಅಲ್ಲ, ಜನರಿಂದ ಆಯ್ಕೆಯಾದ ನಿಮಗೆ …

Read More »

ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠಿ ಮತದಾರರೇ ನಿರ್ಣಾಯಕ.

ಬೆಳಗಾವಿ: ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠಿ ಮತದಾರರೇ ನಿರ್ಣಾಯಕ. ಹೀಗಾಗಿ, ಮರಾಠಿ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತುಗಳು ನಡೆದಿವೆ. ಕೆಲವೇ ವರ್ಷಗಳ ಹಿಂದೆ 4ರಿಂದ 6 ಶಾಸಕರನ್ನು ಹೊಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಈಗ ದೂಳೀಪಟವಾಗಿದೆ. ಆ ಎಲ್ಲ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು, ಟಿಕೆಟ್‌ ಆಕಾಂಕ್ಷಿಗಳೂ ಓಲೈಕೆ ಆರಂಭಿಸಿದ್ದಾರೆ. ಶಿವಾಜಿ ಮೂರ್ತಿ ಪ್ರತಿಷ್ಠಾಪನೆ, ಮರಾಠಿ ಸಾಹಿತ್ಯ ಸಮ್ಮೇಳನ, ಮರಾಠಿಗರೇ ಹೆಚ್ಚಿರುವ ಹಳ್ಳಿಗಳಲ್ಲಿ ಭೂಮಿಪೂಜೆ, ಮಹಾರಾಷ್ಟ್ರ …

Read More »

ವರ್ತುಲ ರಸ್ತೆ: ಟೆಂಡರ್‌ಗೆ ಸರ್ಕಾರ ಅನುಮತಿ

ಬೆಳಗಾವಿ: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ರಿಂಗ್‌ ರಸ್ತೆ ನಿರ್ಮಿಸಲು ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿದೆ. ಅಲ್ಲದೇ, ಕಳೆದ ಜನವರಿ 1ರಂದು ಟೆಂಡರ್‌ ಪ್ರಕ್ರಿಯೆಗೂ ಅನುಮತಿ ನೀಡಿದೆ. ತಮ್ಮ ಫಲವತ್ತಾದ ಭೂಮಿ ಹಾಳಾಗುತ್ತದೆ ಎಂದು 31 ಹಳ್ಳಿಗಳ ರೈತರು ಈ ರಿಂಗ್ ರಸ್ತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಎರಡು ವರ್ಷಗಳಿಂದ ಇದರ ಕೆಲಸಗಳು ಆಮೆಗತಿಯಲ್ಲಿ ಸಾಗಿವೆ. ಮತ್ತೆ ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೂ ಹತ್ತಿದ್ದಾರೆ. ಇದೆಲ್ಲರ ಆಚೆಗೂ ಸರ್ಕಾರದ …

Read More »

ನಿವೃತ್ತಿ ವೇಳೆ ಇಡಗಂಟು ನೀಡಿ’

ಬೆಳಗಾವಿ: ನಿವೃತ್ತಿ ವೇಳೆ ಬಿಸಿಯೂಟ ತಯಾರಕ ಸಿಬ್ಬಂದಿಗೆ ಇಡಗಂಟು ಅಥವಾ ನಿವೃತ್ತಿ ವೇತನ ನೀಡಬೇಕೆಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೌಕರರು ಇಲ್ಲಿನ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.   ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅವರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ಈಗಾಗಲೇ ಸೇವೆಯಿಂದ ಬಿಡುಗಡೆಗೊಳಿಸಿದ 6 ಸಾವಿರ ನೌಕರರಿಗೆ ₹1 ಲಕ್ಷ ಇಡಗಂಟು ನೀಡಬೇಕು. …

Read More »

ಮುಗಳಖೋಡ: ‘ವಿವಿಧ ಸಮಾಜಗಳ ಏಳಿಗೆಗಾಗಿ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ’ ಎಂದ ಬಿಜೆಪಿ

ಮುಗಳಖೋಡ: ‘ವಿವಿಧ ಸಮಾಜಗಳ ಏಳಿಗೆಗಾಗಿ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ’ ಎಂದು ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಹೇಳಿದರು. ‘ಮಾಳಿ-ಮಾಲಗಾರ, ಹಡಪದ, ಹೂಗಾರ, ಗಾಣಿಗೆ ಸಮಾಜದ ನಿಗಮ ಘೋಷಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ಡಾ.ಸಿ.ಬಿ. ಕುಲಿಗೋಡ ಮಾತನಾಡಿ, ‘ನಿಗಮ ಘೋಷಿಸಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಶಾಸಕರಾದ ಪಿ. ರಾಜೀವ್, ಬಾಲಚಂದ್ರ …

Read More »

ಫೆ. 27ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ

ಬೆಳಗಾವಿ: ಇಲ್ಲಿನ 110 ಕೆವಿ  ವಡಗಾಂವ ಉಪಕೇಂದ್ರ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ವಿವಿಧ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಫೆ. 27ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಎಫ್-04 ಬಜಾರ ಗಲ್ಲಿ ವ್ಯಾಪ್ತಿಯ ಭಾರತ ನಗರ,ಲಕ್ಷ್ಮೀ ನಗರ, ಗಣೇಶಪುರಗಲ್ಲಿ, ಜೇಡಗಲ್ಲಿ, ಅಳ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, …

Read More »