Breaking News

Daily Archives: ಫೆಬ್ರವರಿ 17, 2023

ಎಂ. ಕೆ. ಹುಬ್ಬಳ್ಳಿ| ಅನುಮಾನಾಸ್ಪದವಾಗಿ ಸಾವಿಗೀಡಾದ ಹಸುವಿನ ಮೇಲೆ ‘A’ ಗುರುತು

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕ, ಮಲಪ್ರಭಾ ನದಿಗೆ ತೆರಳುವ ಮಾರ್ಗದಲ್ಲಿ ಗುರುವಾರ ನಸುಕಿನಲ್ಲಿ ಹಸುವೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ. ಹಸುವಿನ ಕತ್ತಿನ ಕೆಳಭಾಗವನ್ನು ಕತ್ತರಿಸಿದ್ದು, ರಸ್ತೆ ಪಕ್ಕದಲ್ಲಿ ಎಸೆಯಲಾಗಿದೆ.   ಗುರುವಾರ ಬೆಳಿಗ್ಗೆ ವಾಯು ವಿಹಾರಿಗಳು ಇತ್ತ ಬಂದಾಗ ಹಸುವಿನ ಶವ ಪತ್ತೆಯಾಗಿದೆ. ಕೆಲವು ಜನ ಸೇರಿಕೊಂಡು ಹೆದ್ದಾರಿ ಪಕ್ಕದಲ್ಲೇ ತಗ್ಗು ತೆಗೆದು ಹೂತಿದ್ದಾರೆ. ಆದರೆ, ಗುರುವಾರ ಸಂಜೆಯವರೆಗೂ ಹಸುವಿನ ಮಾಲೀಕರು ಯಾರು ಎಂಬುದು ಗೊತ್ತಾಗಿಲ್ಲ. ಯಾರೂ ಪೊಲೀಸರಿಗೆ ದೂರು …

Read More »

ಇಂದು ಕರ್ನಾಟಕ ರಾಜ್ಯ ಬಜೆಟ್‌: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹5 ಲಕ್ಷ ಸಾಲ?

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲೇಬೇಕು ಎಂಬ ಛಲತೊಟ್ಟಂತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಾವು ಮಂಡಿಸಲಿರುವ ಎರಡನೇ ಬಜೆಟ್‌ನಲ್ಲಿ ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವತ್ತ ಲಕ್ಷ್ಯ ನೆಟ್ಟಿದ್ದಾರೆ.   ಸರ್ಕಾರಿ ನೌಕರರು, ವಿವಿಧ ಜಾತಿ ಸಮುದಾಯಗಳು, ನಗರವಾಸಿಗಳು, ಮಹಿಳೆಯರು, ರೈತರನ್ನು ಕೇಂದ್ರೀಕರಿಸಿ ಬಜೆಟ್‌ ತಯಾರಿಗೆ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಲಾಗಿರುವ ಏಳನೇ ವೇತನ ಆಯೋಗದ ಅನುಷ್ಠಾನದತ್ತ ಇಡೀ ನೌಕರರ ವರ್ಗ …

Read More »

ವಿದ್ಯುತ್ ಸಮಸ್ಯೆ ಪರಿಹಾರ ಸಭೆ ರೈತರ ಕುಂದುಕೊರತೆಗಳಿಗೆ ಪರಿಹಾರ

ಬೆಳಗಾವಿ: ಹೆಸ್ಕಾಂ ನಗರ ಉಪವಿಭಾಗ-3 ರ ನೆಹರೂ ನಗರ ಬೆಳಗಾವಿ ಕಚೇರಿಯಲ್ಲಿ ರೈತ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಫೆ. ಇಂದು ಬೆಳಿಗ್ಗೆ 10.30ಕ್ಕೆ ಸಭೆ ನಡೆಸಲಾಗುವುದು. ರೈತ ಗ್ರಾಹಕರು ತಮ್ಮ ಸಮಸ್ಯೆ ಹಾಗೂ ಕುಂದು ಕೊರತೆಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಕೊನೆಯದಾಗಿ ಸ್ವೀಕರಿಸಿದ್ದ ಕರೆ ಆಧರಿಸಿ ಆರೋಪಿತರನ್ನುಬಂಧಿಸಿದ್ ಪೊಲೀಸರು

ಗೋಕಾಕ: ಇಲ್ಲಿನ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸೇರಿದಂತೆ ಮೂವರು ಆರೋಪಿತರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಪ್ರಥಮ ಆರೋಪಿ ಗೋಕಾಕ ಚನ್ನಮ್ಮನಗರ ನಿವಾಸಿ ಸಚಿನ್ ಶಂಕರ್ ಶಿರಗಾವೆ(36), ಎರಡನೇ ಆರೋಪಿ ಸಿಟಿ ಆಸ್ಪತ್ರೆ ವೈದ್ಯ, ಹುಕ್ಕೇರಿ ತಾಲೂಕು ಶಿರಢಾಣ ಸಮೂಲದ  ಡಾ. ಶಿವಾನಂದ ಕಾಡಗೌಡ ಪಾಟೀಲ (28) ಹಾಗೂ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಶಾಪಥ್ ಇರ್ಷಾದ್ ತ್ರಾಸಗರ(25) ಬಂಧಿತರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿಂತೆ ಉಂಟಾಗಿದ್ದ …

Read More »

ಮಲಪ್ರಭಾ ನದಿ ಕಲುಷಿತ; ಪರಿಶೀಲನೆಗೆ ಸೂಚನೆ:

ಬೆಳಗಾವಿ  : ಮಲಪ್ರಭಾ ಮತ್ತು ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲು ಮೊದಲ ಹಂತವಾಗಿ ಹಳೆಯ ಉಪಯೋಗದಲ್ಲಿ ಇಲ್ಲದಿರುವ ಬ್ರಿಡ್ಜ್, ಬ್ಯಾರೇಜ್ ತೆರವುಗೊಳಿಸಲು ಹಾಗೂ ಅತಿಕ್ರಮಣಗೊಂಡಿರುವ ಜಮೀನುಗಳ ಗಡಿಗಳಿಗೆ ಕಲ್ಲುಗಳನ್ನು ಹಾಕಿಸಲು ಅಂದಾಜು ಪತ್ರಿಕೆಯನ್ನು ಆದ್ಯತೆ ಮೇರೆಗೆ 10 ದಿನದೊಳಗಾಗಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ನೀರಾವರಿ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದರು. ಮಲಪ್ರಭಾ ಹಾಗೂ ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವ ಗುರುವಾರ(ಫೆ.16) ನಡೆದ ವಿಭಾಗದ …

Read More »