Breaking News

Daily Archives: ಫೆಬ್ರವರಿ 15, 2023

B,S,Y,ಗೆ ಅರಳುಮರಳು ಎಂದ ಸಿದ್ದರಾಮಯ್ಯ,ಕಾಂಗ್ರೆಸ್ಸಿಗರು ತಲೆ ತಿರುಕರು ಎಂದ B,S,Y,

ಬೆಂಗಳೂರು: ಸರ್ಕಾರದ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ಎಂಬ ಕಾಂಗ್ರೆಸ್ ಆರೋಪಕ್ಕೆ, ಕಿಡಿಕಾರಿರುವ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರು ತಲೆ ತಿರುಕರು, ಅವರು ಇಲ್ಲಸಲ್ಲದ ಅರೋಪ ಮಾಡುತ್ತಿದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಟೆಂಡರ್ ರದ್ದುಗೊಳಿಸುವುದಾಗಿ ಡಿ.ಕೆ.ಶಿವಕುಮಾರ್ ಹಾಗು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಅದಕ್ಕೆ …

Read More »

ಸರಕಾರದ ವಿರುದ್ಧ ಮಠಾಧೀಶರ ಆರೋಪ ಪಟ್ಟಿ

ಬೆಳಗಾವಿ :  ಉತ್ತರ ಕರ್ನಾಟಕ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಬರದಂತೆ ಈಬಾರಿಯ ಬಜೆಟ್ ಮಂಡಿಸಬೇಕು ಎಂದು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಬುಧವಾರ ವಿವಿಧ ಮಠಾಧೀಶರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ನಾವು ಬೇಡಿಕೆ ಇಡುತ್ತ ಬಂದಿದ್ದೇವೆ. ಆದರೂ ಬೇಡಿಕೆಗಳು ಈಡೇರದೆ ಇರುವುದು ಬೇಸರ ತಂದಿದೆ. 400 ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿರುವ ಸುವ್ರಣ ವಿಧಾನಸೌಧ ಏನೇನಬ ಉಪಯೋಗವಿಲ್ಲವಾಗಿದೆ. ಪೂರ್ಣಪ್ರಮಾಣದಲ್ಲಿ ಕಚೇರಿಗಳನ್ನು …

Read More »

ಬಾದಾಮಿಯಿಂದಲೇ ಕಣಕ್ಕಿಳಿಯುವಂತೆ ಸಿದ್ದರಾಮಯ್ಯಗೆ ಒತ್ತಾಯ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವ ರನ್ನು ಮಂಗಳವಾರ ಭೇಟಿ ಮಾಡಿದ ಬಾದಾಮಿಯ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ತಮ್ಮ ಕ್ಷೇತ್ರದಿಂದಲೇ ಕಣಕ್ಕಿಳಿಯುವಂತೆ ಒತ್ತಾಯಿಸಿದರು.   ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಂದ ಮುಖಂಡರು, ಕಾರ್ಯಕರ್ತರು, ಅವರು ಮನೆಯಿಂದ ಹೊರಬರುವುದಕ್ಕಾಗಿ ಸುಮಾರು 2 ಗಂಟೆ ಕಾದರು. ಅವರು ಮನೆಯಿಂದ ಹೊರಡುತ್ತಿದ್ದಂತೆ ಮುತ್ತಿಗೆ ಹಾಕಿ ಒತ್ತಡ ಹೇರುವ ಪ್ರಯತ್ನ ಮಾಡಿದರು. ಅಲ್ಲದೆ, ಮಾತನಾಡಿಸಲು ಮುಂದಾದರು. …

Read More »

ರಾಜ್ಯ ಸರ್ಕಾರದ ಟೆಂಡರ್ ನಲ್ಲಿ ಭಾರಿ ಗೋಲ್ ಮಾಲ್; ಶಾಸಕರಿಂದಲೇ ಮಾಹಿತಿ ಬಹಿರಂಗ

ಬೆಂಗಳೂರು: ರಾಜ್ಯ ಸರ್ಕಾರ ಇಲಾಖಾವಾರು ಟೆಂಡರ್ ಕರೆದಿದ್ದು, ತರಾತುರಿಯಲ್ಲಿ ಟೆಂಡರ್ ಹಂಚಿಕೆ ಮಾಡಿ ಗೋಲ್ ಮಾಲ್ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಹಾಗೂ ಸಿದ್ದರಾಮಯ್ಯ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದು, ಈ ಸರ್ಕಾರದ ಅವಧಿ ಇನ್ನು ಒಂದು ತಿಂಗಳು ಮಾತ್ರ. ಬಜೆಟ್ ಅಧಿವೇಶನದ ನಂತರ ಮುಂದಿನ ತಿಂಗಳು 7-10 ರ ಒಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಬಿಜೆಪಿ ಸರ್ಕಾರ …

Read More »

65 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಎಫ್​ಡಿಎ

ವಿಜಯನಗರ: ಎಫ್​ಡಿಎ(FDA) ಅಧಿಕಾರಿಯೊಬ್ಬರು 65 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೂವಿನ ಹಡಗಲಿಯ ತಹಶಿಲ್ದಾರರ ಕಚೇರಿಯ ಎಫ್​ಡಿಎ ವೆಂಕಟಸ್ವಾಮಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ನೌಕರ. ಹಗರನೂರು ಗ್ರಾಮದ ನಿವೃತ್ತ ಶಿಕ್ಷಕ ಲಕ್ಕಪ್ಪ ಎಂಬುವವರು ನಾಲ್ಕು ಎಕರೆ ಜಮೀನಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ಕಲಂ 11 ತೆಗೆದು ಹಾಕಲು ಅರ್ಜಿ ಸಲ್ಲಿಕೆ ಮಾಡಿದ್ದರು. ಈ ವೇಳೆ ವೆಂಕಟಸ್ವಾಮಿ 70 ಸಾವಿರ ರೂ. ಹಣ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ …

Read More »

ಮೈಸೂರಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ

ಮೈಸೂರು: ಆರ್.ಟಿ.ನಗರದಲ್ಲಿ ಮಂಗಳೂರಿನ ದೈವಗಳು ಗುಡಿಗಳು ತಲೆ ಎತ್ತಿದ್ದು, ಜನರ ನಂಬಿಕೆಯಾದ ಕೊರಗಜ್ಜ ದೈವದ ಹೆಸರಿನಲ್ಲಿ ದಂಧೆ ನಡೆಯುತ್ತಿದ್ದೆಯಾ ಎಂಬ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವ ಕೊರಗಜ್ಜನ ದೈವಸ್ಥಾನದ ಪಕ್ಕದಲ್ಲಿಯೇ, ಇದೀಗ ದೈವ ರಾಜ ಗುಳಿಗ ಹೆಸರಿನಲ್ಲಿ ಮತ್ತೊಂದು ದೈವಸ್ಥಾನ ನಿರ್ಮಾಣವಾಗಿದೆ.   ಇದಲ್ಲದೆ ದೈವಸ್ಥಾನದ ಟ್ರಸ್ಟ್​ ಸದಸ್ಯರಲ್ಲಿಯೇ ಹಣಕ್ಕಾಗಿ ಕಿತ್ತಾಟ ಆರಂಭವಾಗಿದ್ದು, ದೈವಸ್ಥಾನದ ಅರ್ಚಕ ಹುಂಡಿಯನ್ನು ತನ್ನ ಮನೆಗೆ ಕೊಂಡೊಯ್ದಿರುವ ಘಟನೆ ನಡೆದಿದೆ. …

Read More »

ಅಚ್ಚರಿ ತಂದ ಅಪರೂಪದ ನಾಗರಹಾವು

ಕಾರವಾರ: ನಾಗರ ಹಾವಿನ ತಲೆಯ ಹಿಂದೆ ಹೆಡ್ ಫೋನ್ ಮಾದರಿಯ ಚಿನ್ಹೆಯಿರುವುದು ಸಾಮಾನ್ಯ. ಆದರೆ, ಅಂಕೋಲಾದಲ್ಲಿ ಸೋಮವಾರ ಹಿಡಿದ ಹಾವಿನ ತಲೆಯ ಮೇಲೆ ವಿಭಿನ್ನ ರೀತಿಯ ಚಿನ್ಹೆ ಗಮನ ಸೆಳೆದಿದೆ. ಉರಗ ತಜ್ಞ ಮಹೇಶ ನಾಯ್ಕ ಹಿಡಿದ ಹಾವಿನ ತಲೆಯ ಮೇಲೆ ಮನುಷ್ಯನ ಕಣ್ಣು, ಹುಬ್ಬು, ಕೆಳಗೆ ಬಾಯಿ, ಮೂಗು ಮುಂತಾದ ಚಿತ್ರ ಬಿಡಿಸಿದಂತೆ ಇದೆ. ಕೆಲವು ಹಾವುಗಳಲ್ಲಿ ಮಾತ್ರ ಇಂಥ ಚಿತ್ರ ಕಂಡುಬರುತ್ತದೆ ಎನ್ನುತ್ತಾರೆ ಮಹೇಶ ನಾಯ್ಕ.

Read More »

ಪಾಲಕರಿಗೆ ಹೇಳದೆ ಪ್ರೇಮಿಗಳ ದಿನ ಆಚರಿಸಲು ಗೋವಾಗೆ ತೆರಳಿದ್ದ ಜೋಡಿ ಮರಳಿದ್ದು ಶವಗಳಾಗಿ

ಪಣಜಿ: ಮನೆಯವರಿಗೆ ತಿಳಿಸದೆ ಪ್ರೇಮಿಗಳ ದಿನ ಆಚರಿಸಲು ಗೋವಾಗೆ ತೆರಳಿದ್ದ ಪ್ರೇಮಿಗಳಿಬ್ಬರು ಸಮುದ್ರದಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಸೋಮವಾರ ಸಂಜೆ ಪಾಲೊಲೇಮ್​ ಬೀಚ್​ನಲ್ಲಿ ನಡೆದಿದೆ. ಮೃತ ಪ್ರೇಮಿಗಳನ್ನು ಸುಪ್ರಿಯಾ ದುಬೇ (26) ಮತ್ತು ವಿಭು ಶರ್ಮಾ (27) ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಉತ್ತರ ಪ್ರದೇಶ ಮೂಲದವರು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಗೋವಾ ಪೊಲೀಸರು ಜೀವ ರಕ್ಷಕರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಸಿದರು. ಬಳಿಕ ಅವರನ್ನು …

Read More »

ಪತ್ನಿಯ ಆಸೆಯಂತೆ ಆಕೆಯ ಸ್ನೇಹಿತೆಯನ್ನು ಮದ್ವೆಯಾದ ಗಂಡ

ನವದೆಹಲಿ: ಮೊದಲ ಪತ್ನಿ ಬದುಕಿರುವಾಗಲೇ ಇನ್ನೊಂದು ಮದುವೆಯಾದರೆ ಗಂಡನ ಕತೆ ಮುಗಿಯಿತು ಅಂತಾನೇ ಅರ್ಥ. ಇಬ್ಬರು ಹೆಂಡಿರ ಮಧ್ಯೆ ಸಿಲುಕಿ ನಲುಗಬೇಕಾಗುತ್ತದೆ. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೆ ತಾನೇ ಮುಂದೆ ನಿಂತು ಎರಡನೇ ಮದುವೆ ಮಾಡಿಸಿದ್ದಾಳೆ. ಅಚ್ಚರಿ ಎನಿಸಿದರೂ ಇದು ಸತ್ಯ.   ಹೌದು, ಮಹಿಳೆಯೊಬ್ಬಳು ತನ್ನ ಗಂಡನಿಗೆ ತನ್ನ ಸ್ನೇಹಿತೆಯ ಜೊತೆ ಎರಡನೇ ಮದುವೆ ಮಾಡಿಸಿದ್ದಾಳೆ. ಅಷ್ಟಕ್ಕೂ ಆಕೆ ತೆಗೆದುಕೊಂಡ ನಿರ್ಧಾರ ಅವಳ ಬಯಕೆಯಂತೆ. ಇನ್ನೊಂದೆಡೆ ಪತ್ನಿಯನ್ನು …

Read More »

ಬಿಜೆಪಿಯಂತೆ ನರಹತ್ಯೆಯ ರಾಜಕೀಯ ಮಾಡಿಲ್ಲ: ಎಚ್.ಡಿ.ಕುಮಾರಸ್ವಾಮಿ

ಧಾರವಾಡ: ‘ಅಧಿಕಾರ ಸಿಕ್ಕಾಗ ರಾಜ್ಯದ ಜನರು ಮತ್ತು ರೈತರ ಪರವಾಗಿ ಜೆಡಿಎಸ್‌ ಧ್ವನಿ ಎತ್ತಿದೆ. ಆದರೆ ಎಂದಿಗೂ ಬಿಜೆಪಿಯವರಂತೆ ಎಂದೂ ನರಹತ್ಯೆಯ ರಾಜಕೀಯ ಮಾಡಿಲ್ಲ’ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೆ ಅಧಿಕಾರ ಸಿಕ್ಕಾಗ ರೈತರ ಸಾಲ ಮನ್ನಾ ಮಾಡಿದ್ದೇವೆ. ಪ್ರಾಮಾಣಿಕವಾಗಿ ಜನಗಳ ನೋವಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆದರೆ ಬಿಜೆಪಿ ನಾಯಕರಂತೆ ಅಮಾಯಕರನ್ನು ಬಲಿ …

Read More »